52, 52, 45.. ಟೀಮ್ ಇಂಡಿಯಾ ವೆಸ್ಟ್‌ ಇಂಡೀಸ್ ವಿರುದ್ಧ ಕೊದಲೆಳೆ ಅಂತರದಲ್ಲಿ ಸೋಲು; ಕಾರಣ ಏನು?

India vs West Indies 4th T20I: ಹೈದರಾಬಾದ್‌ನ ರಾಜೀವ್ ಗಾಂಧಿ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ ಬುಧವಾರ (ಅಕ್ಟೋಬರ್ 15) ನಡೆದ ವೆಸ್ಟ್‌ ಇಂಡೀಸ್‌ ವಿರುದ್ಧದ ಐದು ಟಿ20 ಸರಣಿಯ ನಾಲ್ಕನೇ ಪಂದ್ಯದಲ್ಲಿ ಟೀಮ್ ಇಂಡಿಯಾ ಕೂದಲೆಳೆ ಅಂತರದಲ್ಲಿ ಸೋಲನುಭವಿಸಿತು. ಈ ಮೂಲಕ ಎರಡೂ ತಂಡಗಳು ಸಮಬಲ ಕಾಯ್ದುಕೊಂಡಿವೆ. ಹಾಗಾದ್ರೆ ಈ ಸೋಲಿಗೆ ಕಾರಣ ಏನು ಎನ್ನುವ ಸಂಪೂರ್ಣ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ ತಿಳಿಯಿರಿ.

ಟಾಸ್ ಗೆದ್ದ ಟೀಮ್ ಇಂಡಿಯಾ ನಾಯಕ ಶ್ರೇಯಸ್ ಅಯ್ಯರ್ ಅವರು ಬೌಲಿಂಗ್ ಆಯ್ಕೆ ಮಾಡಿಕೊಂಡರು. ಅದರಂತೆಯೇ ಮೊದಲು ಬ್ಯಾಸ್ ಬೀಸಿದ ವೆಸ್ಟ್‌ ಇಂಡೀಸ್ ತಂಡವು ನಿಗದಿತ 20 ಓವರ್‌ಗಳಲ್ಲಿ 3 ವಿಕೆಟ್ ನಷ್ಟಕ್ಕೆ 247 ರನ್‌ಗಳ ಬೃಹತ್ ರನ್‌ ಕಲೆಹಾಕಿತು. ಬಳಿಕ ಬ್ಯಾಟಿಂಗ್‌ಗಿಳಿದ ಭಾರತವು ಈ ಬೃಹತ್ ಮೊತ್ತವನ್ನು ಭೇದಿಸುವಲ್ಲಿ ಕೂದಲೆಳೆ ಅಂತರದಲ್ಲಿ ಮಿಸ್ ಮಾಡಿಕೊಂಡಿತು.

India vs West Indies 4th T20I 5 Reasons Behind India s 24-Run Defeat on October 15 in Hyderabad

ವೆಸ್ಟ್ ಇಂಡೀಸ್ ಪರ ಯಾರು ಎಷ್ಟು ರನ್ ಸಿಡಿಸಿದರು?

ವೆಸ್ಟ್ ಇಂಡೀಸ್ ತಂಡವು ಬುಧವಾರ ನಡೆದ ನಾಲ್ಕನೇ ಟಿ20 ಪಂದ್ಯದಲ್ಲಿ ಆಲ್‌ರೌಂಡ್ ಪ್ರದರ್ಶನದ ಮೂಲಕ ಭಾರತ ತಂಡವನ್ನು 24 ರನ್‌ಗಳಿಂದ ಸೋಲಿಸಿ, ಐದು ಪಂದ್ಯಗಳ ಸರಣಿಯನ್ನು ನಿರ್ಣಾಯಕ ಹಂತಕ್ಕೆ ಕೊಂಡೊಯ್ದಿದೆ. ಮೊದಲು ಬ್ಯಾಟಿಂಗ್ ಆಹ್ವಾನ ಪಡೆದ ಪ್ರವಾಸಿ ಪಡೆ, ಶಾಯ್ ಹೋಪ್ ಅವರ ಸ್ಪೋಟಕ ಶತಕದ (50 ಎಸೆತಗಳಲ್ಲಿ 4 ಬೌಂಡರಿ, 9 ಸಿಕ್ಸರ್ ಸಹಿತ ಅಜೇಯ 102 ರನ್) ನೆರವಿನಿಂದ 3 ವಿಕೆಟ್ ನಷ್ಟಕ್ಕೆ 247 ರನ್ ಗಳಿಸಿತು. ಶೆರ್ಫೇನ್ ರುದರ್‌ಫೋರ್ಡ್ (26 ಎಸೆತಗಳಲ್ಲಿ ಅಜೇಯ 49) ಮತ್ತು ಶಿಮ್ರಾನ್ ಹೆಟ್ಮೆಯರ್ (12 ಎಸೆತಗಳಲ್ಲಿ 33) ತಂಡದ ಬೃಹತ್ ಮೊತ್ತಕ್ಕೆ ಪ್ರಮುಖಪಾತ್ರವಹಿಸಿದರು.

ವೆಸ್ಟ್‌ ಇಂಡೀಸ್ ನೀಡಿದ ಬೃಹತ್ ಗುರಿ ಬೆನ್ನಟ್ಟಿದ ಭಾರತ, 19.3 ಓವರ್‌ಗಳಲ್ಲಿ 223 ರನ್‌ಗಳಿಗೆ ಆಲ್ ಔಟ್ ಆಯಿತು. ಭಾರತದ ಪರ ಸಂಜು ಸ್ಯಾಮ್ಸನ್ 23 ಎಸೆತಗಳಲ್ಲಿ 6 ಬೌಂಡರಿ, 4 ಸಿಕ್ಸರ್‌ಗಳ ಸಹಿತ 56 ರನ್ ಬಾರಿಸಿ ಗರಿಷ್ಠ ಸ್ಕೋರರ್ ಎನಿಸಿಕೊಂಡರು. ವೆಸ್ಟ್‌ ಇಂಡೀಸ್ ಪರ ವೇಗಿ ಕೀಮೊ ಪೌಲ್ 41 ರನ್ ನೀಡಿ 5 ವಿಕೆಟ್ ಪಡೆದು ಮಿಂಚಿದರು.

ಟೀಮ್ ಇಂಡಿಯಾ ಸೋಲಿಗೆ ಕಾರಣ ಏನು?

ಮೊದಲು ಬೌಲಿಂಗ್ ಮಾಡಿದ ಟೀಮ್ ಇಂಡಿಯಾ ಪರ ಬೌಲರ್‌ಗಳು ಎದುರಾಳಿ ತಂಡಕ್ಕೆ ಹೆಚ್ಚು ರನ್ ಬಿಟ್ಟುಕೊಡುವ ಮೂಲಕ ದುಬಾರಿಯಾದರು. ಇದು ಸೋಲಿಗೆ ಪ್ರಮುಖ ಕಾರಣವಾಗಿದೆ. ಮಯಾಂಕ್ ಯಾದವ್ ಯಾವುದೇ ವಿಕೆಟ್ ಇಲ್ಲದೆ 52 ರನ್‌, ಅರ್ಷದೀಪ್ ಸಿಂಗ್ 52, ಅಕ್ಷರ್ ಪಟೇಲ್ 45 ರನ್‌ ಬಿಟ್ಟುಕೊಡುವ ಮೂಲಕ ವೆಸ್ಟ್‌ ಇಂಡೀಸ್‌ ಬೃಹತ್ ಮೊತ್ತ ಕಲೆಹಾಕಲು ನೆರವಾದರು.

ಬ್ಯಾಟಿಂಗ್‌ನಲ್ಲಿ ವೈಫಲ್ಯ

ಮತ್ತೊಂದೆಡೆ ಬ್ಯಾಟಿಂಗ್‌ನಲ್ಲೂ ಸಹ ಸಂಜು ಸ್ಯಾಮ್ಸನ್‌, ಉಪನಾಯಕ ತಿಲಕ್ ವರ್ಮಾ, ನಿತೀಶ್ ಕುಮಾರ್ ರೆಡ್ಡಿ ಬಿಟ್ಟರೆ ಬಿಟ್ಟರೆ ಉಳಿದವರು 30 ರನ್‌ ಕಲೆಹಾಕಲು ಪರದಾಡಿದರು. ಸಂಜು ಸ್ಯಾಮ್ಸನ್ 56(23), ತಿಲಕ್ ವರ್ಮಾ 43(25), ನಿತೀಶ್ ಕುಮಾರ್ ರೆಡ್ಡಿ 41(20), ಅಭಿಷೇಕ್ ಶರ್ಮಾ 29(24) ರನ್‌ಗಳ ಕೊಡುಗೆ ನೀಡಿದರು. ಒಟ್ಟಿನಲ್ಲಿ ಹೇಳುವುದಾದರೆ ಬ್ಯಾಟಿಂಗ್‌, ಬೌಲಿಂಗ್ ಎರಡೂ ವಿಭಾಗದಲ್ಲೂ ಎಡವಿದ್ದೇ ಭಾರತದ ಸೋಲಿಗೆ ಕಾರಣವಾಯಿತು. ಇನ್ನೂ ಇಂಡಿಯಾವು ಸರಣಿ ತನ್ನದಾಗಿಸಿಕೊಳ್ಳಬೇಕಾದರೆ ಮುಂದಿನ ಅಂದರೆ ಕೊನೆಯ ಪಂದ್ಯದಲ್ಲೆ ಗೆಲ್ಲಲೇಬೇಕಾದ ಅನಿರ್ವಾಯತೆ ಎದುರಾಗಿದೆ.

ಇನ್ನೂ ಪಂದ್ಯದಲ್ಲಿ ಅಭಿಷೇಕ್ ಶರ್ಮಾ ಅವರಿಗೆ ನಿರೀಕ್ಷಿತ ಪ್ರದರ್ಶನ ಹಾಗೂ ಸತತ ಚಾನ್ಸ್‌ ನೀಡಿರುವ ಕಾರಣ ಮುಂಬರುವ ಪಂದ್ಯದಲ್ಲಿ ವಿಶ್ರಾಂತಿ ನೀಡಿ, ಅವರ ಬದಲಾಗಿ ಯುವ ಪ್ರತಿಭೆ ವೈಭವ್ ಸೂರ್ಯವಂಶಿಗೆ ಅವಕಾಶ ಕಲ್ಪಿಸಿ ಎನ್ನುವ ಮಾತುಗಳು ಜೀರಾಗಿ ಕೇಳಿಬರುತ್ತಿವೆ. ಅವರ ಆಟಕ್ಕಾಗಿಯೇ ಅಭಿಮಾನಿಗಳು ಕಾತರದಿಂದ ಕಾಯುತ್ತಿರುದಂತೂ ನಿಜ. ಹಾಗಾದ್ರೆ ಅವರಿಗೆ ಪ್ಲೇಯಿಂಗ್‌ 11ನಲ್ಲಿ ಸ್ಥಾನ ಸಿಗುತ್ತದೆಯಾ ಎಂದು ಕಾದುನೋಡಬೇಕಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+