India vs Pakistan: ಶಾಹೀನ್ ಅಫ್ರಿದಿ ವಿರುದ್ಧ ಅಬ್ಬರಿಸಿದ ಗಿಲ್: ಮೀಮ್ಸ್ ಮೂಲಕ ಫ್ಯಾನ್ಸ್ ಸಂಭ್ರಮ!
ಭಾನುವಾರ ಕೊಲಂಬೋದ ಪ್ರೇಮದಾಸ ಕ್ರೀಡಾಂಗಣದಲ್ಲಿ ನಡೆದ ಏಷ್ಯಾಕಪ್ ಸೂಪರ್ 4 ಹಂತದ ಭಾರತ - ಪಾಕಿಸ್ತಾನ ಪಂದ್ಯಕ್ಕೆ ಮಳೆ ಅಡ್ಡಿಪಡಿಸಿದ್ದು, ಪಂದ್ಯವನ್ನು ಮೀಸಲು ದಿನಕ್ಕೆ ಮುಂದೂಡಲಾಗಿದೆ. ಟಾಸ್ ಸೋತು ಮೊದಲು ಬ್ಯಾಟಿಂಗ್‌ಗೆ ಇಳಿದ ಭಾರತ 24.1 ಓವರ್ ಗಳಲ್ಲಿ 2 ವಿಕೆಟ್ ಕಳೆದುಕೊಂಡು 147 ರನ್ ಗಳಿಸಿದ್ದಾಗ ಮಳೆ ಬಂದ ಕಾರಣ ಪಂದ್ಯವನ್ನು ನಿಲ್ಲಿಸಲಾಯಿತು. ನಂತರ ಮಳೆ ಪಂದ್ಯ ನಡೆಯಲು ಅವಕಾಶ ನೀಡದ ಕಾರಣ ಮೀಸಲು ದಿನಕ್ಕೆ ಮುಂದೂಡಲಾಗಿದೆ.
ಮೊದಲು ಬ್ಯಾಟಿಂಗ್ ಮಾಡಿದ ಭಾರತ ತಂಡಕ್ಕೆ ಆರಂಭಿಕರಾದ ನಾಯಕ ರೋಹಿತ್ ಶರ್ಮಾ ಮತ್ತು ಶುಭಮನ್ ಗಿಲ್ ಅತ್ಯುತ್ತಮ ಆರಂಭ ಒದಗಿಸಿದರು. ಪಾಕ್ ವಿರುದ್ಧದ ಲೀಗ್ ಹಂತದ ಪಂದ್ಯದಲ್ಲಿ ಇಬ್ಬರೂ ಉತ್ತಮ ಪ್ರದರ್ಶನ ನೀಡುವಲ್ಲಿ ವಿಫಲವಾಗಿದ್ದರು. ಆದರೆ ನೇಪಾಳ ವಿರುದ್ಧ ಲಯ ಕಂಡುಕೊಂಡ ಈ ಜೋಡಿ ಭಾನುವಾರ ಕೂಡ ಅದೇ ಆಟ ಮುಂದುವರೆಸಿದರು.

ಪಾಕಿಸ್ತಾನದ ಮಾರಕ ವೇಗಿಗಳಾದ ಶಾಹೀನ್ ಅಫ್ರಿದಿ, ನಸೀಮ್ ಶಾ ಮತ್ತು ಹ್ಯಾರಿಸ್ ರೌಫ್‌ರನ್ನು ವಿಶ್ವಾಸದಿಂದಲೇ ಎದುರಿಸಿದರು. ಅದರಲ್ಲೂ ಶಾಹೀನ್ ಅಫ್ರಿದಿ ವಿರುದ್ಧ ಶುಭಮನ್ ಗಿಲ್ ಅಬ್ಬರಿಸಿದರು. ಮೂರನೇ ಓವರ್ ನಲ್ಲೇ ಗಿಲ್ ಅಫ್ರಿದಿಗೆ ಮೂರು ಬೌಂಡರಿ ಸಿಡಿಸದರು. 5ನೇ ಓವರ್ ನಲ್ಲಿ ಕೂಡ ಮತ್ತೆ ಮೂರು ಬೌಂಡರಿ ಸಿಡಿಸಿ ಮಿಂಚಿದರು. ನಂತರ ನಾಯಕ ಬಾಬರ್ ಅಜಂ ಬೌಲಿಂಗ್‌ನಲ್ಲಿ ಬದಲಾವಣೆ ತಂದರು.
ಅರ್ಧಶತಕ ಗಳಿಸಿ ಮಿಂಚಿದ ಗಿಲ್
ಗಿಲ್ ಕೇವಲ 37 ಎಸೆತಗಳಲ್ಲಿ ಅರ್ಧಶತಕ ಗಳಿಸಿದರು. ಏಕದಿನ ಮಾದರಿಯಲ್ಲಿ ತಮ್ಮ 8ನೇ ಅರ್ಧಶತಕ ಗಳಿಸಿದರು. ಶುಭಮನ್ ಗಿಲ್ 52 ಎಸೆತಗಳಲ್ಲಿ 10 ಬೌಂಡರಿ ಸಹಿತ 58 ರನ್ ಗಳಿಸಿ ಶಾಹೀನ್ ಅಫ್ರಿದಿಗೆ ವಿಕೆಟ್ ಒಪ್ಪಿಸಿದರು. ರೋಹಿತ್ ಶರ್ಮಾ 49 ಎಸೆತಗಳಲ್ಲಿ 4 ಬೌಂಡರಿ 4 ಸಿಕ್ಸರ್ ನೆರವಿನಿಂದ 56 ರನ್ ಗಳಿಸಿ ಔಟಾದರು.
ವಿರಾಟ್ ಕೊಹ್ಲಿ ಅಜೇಯ 8, ಕೆಎಲ್ ರಾಹುಲ್ ಅಜೇಯ 17 ರನ್ ಗಳಿಸಿದ್ದು, ಸೋಮವಾರ ಭಾರತದ ಇನ್ನಿಂಗ್ಸ್ ಮುಂದುವರೆಸಲಿದ್ದಾರೆ. ಸೋಮವಾರ ಮಧ್ಯಾಹ್ನ 3 ಗಂಟೆಗೆ ಪಂದ್ಯ ಆರಂಭವಾಗಲಿದೆ.
ಶಾಹೀನ್ ಅಫ್ರಿದಿ ವಿರುದ್ಧ ಗಿಲ್ ಪ್ರದರ್ಶನದ ನಂತರ, ಅಭಿಮಾನಿಗಳು ಎಡಗೈ ಪಾಕಿಸ್ತಾನದ ವೇಗಿ ಶಾಹೀನ್ ಅವರನ್ನು ಟ್ರೋಲ್ ಮಾಡುವ ಬಹಳಷ್ಟು ಮೀಮ್‌ಗಳನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಂಡರು.
ಅಂತಹ ಕೆಲವು ಮೀಮ್‌ಗಳನ್ನು ಇಲ್ಲಿ ನೋಡಬಹುದು
Shubman Gill owns Shaheen Afridi😎 pic.twitter.com/jGofbxUT8j
— Arun Singh (@ArunTuThikHoGya) September 10, 2023
Shubman Gill did to Shaheen Afridi today. #INDvsPAKpic.twitter.com/wkCZ6Okrkr
— Priyanshu (@PriyanshuVK18K) September 10, 2023
For those who don't know , Gill used to bash Shaheen Afridi in Under 19 too.#INDvPAK #PAKvIND #IndiavsPak pic.twitter.com/fb8suNAEmQ
— Irfan Pathan (@IrfonPathan) September 10, 2023
Shubman Gill owns Shaheen Afridi😎 pic.twitter.com/jGofbxUT8j
— Arun Singh (@ArunTuThikHoGya) September 10, 2023
Shaheen Afridi : I'm No.1 bowler
— ಭಲೇ ಬಸವ (@Basavachethanah) September 10, 2023
Shubman Gill : pic.twitter.com/Ck7xVr7D8d












Click it and Unblock the Notifications