Ind vs Pak: ಭಾರತ-ಪಾಕಿಸ್ತಾನ ಚಾಂಪಿಯನ್ಸ್ ಟ್ರೋಫಿ ಕ್ರಿಕೆಟ್‌ ಪಂದ್ಯದ ಸಮಯ, ಸ್ಥಳ, ನೇರ ಪ್ರಸಾರ, ತಂಡಗಳ ವಿವರ

India vs Pakistan: ದುಬೈ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ ಇಂದು (ಫೆಬ್ರವರಿ 23) ಭಾರತ ಮತ್ತು ಪಾಕಿಸ್ತಾನದ ನಡುವೆ ಚಾಂಪಿಯನ್ಸ್‌ ಟ್ರೋಫಿ ಕ್ರಿಕೆಟ್‌ ಪಂದ್ಯ ನಡೆಯುತ್ತಿದೆ. ಈ ಹೈವೋಲ್ಟೇಜ್‌ ಪಂದ್ಯ ವೀಕ್ಷಣೆ ಮಾಡಲು ಇಡೀ ವಿಶ್ವವೇ ಕಾತರದಿಂದ ಕಾಯುತ್ತಿದೆ. ಹಾಗಾದರೆ, ಈ ಮ್ಯಾಚ್‌ ಎಷ್ಟು ಗಂಟೆಗೆ ಆರಂಭವಾಗಲಿದೆ ಹಾಗೂ ಎರಡು ತಂಡಗಳಲ್ಲಿ ಯಾರೆಲ್ಲಾ ಇದ್ದಾರೆ ಎನ್ನುವ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ ಗಮನಿಸಿ.

ಇಂಡಿಯಾ-ಪಾಕಿಸ್ತಾನ ನಡುವೆ ಮ್ಯಾಚ್‌ ನಡೆಯುತ್ತದೆ ಅಂದರೆ ಸಾಕು ಇಡೀ ವಿಶ್ವವೇ ಇದನ್ನೂ ವೀಕ್ಷಣೆ ಮಾಡಲು ಕಾತರದಿಂದ ಕಾಯುತ್ತಿರುತ್ತದೆ. ಇನ್ನು ಇಂದು ದುಬೈ ಇಂಟರ್‌ನ್ಯಾಷನಲ್‌ ಸ್ಟೇಡಿಯಂನಲ್ಲಿ ಈ ಎರಡು ತಂಡಗಳು ಚಾಂಪಿಯನ್ಸ್‌ ಟ್ರೋಫಿ ಕ್ರಿಕೆಟ್‌ ಪಂದ್ಯದಲ್ಲಿ ಮುಖಾಮುಖಿಯಾಗಲಿದ್ದು, ವೀಕ್ಷಣೆ ಮಾಡಲು ಭಾರತದ ಅಷ್ಟೇ ಅಲ್ಲದೆ ಜಗತ್ತಿನಾದ್ಯಂತ ಅಭಿಮಾನಿಗಳು ತುದಿಗಾಲಲ್ಲಿ ನಿಂತಿದ್ದಾರೆ.

India vs Pakistan Champions Trophy Cricket Match Time Venue Live Broadcast and squads Details

ಇಂದು ಬಸ್ಟಾಂಡ್‌ಗಳಲ್ಲಿ ಎಲಿಇಡಿ ಪರದೆಗಳಲ್ಲಿ ಈ ಮ್ಯಾಚ್‌ ವೀಕ್ಷಣೆ ಮಾಡಲು ಹಲವೆಡೆ ಭರ್ಜರಿ ಸಿದ್ಧತೆ ಮಾಡಿಕೊಂಡಿದ್ದಾರೆ. ಅಷ್ಟೇ ಅಲ್ಲದೆ, ಪ್ರತಿ ಮನೆ, ಅಂಗಡಿಗಳಲ್ಲೂ ಯಾವುದೇ ಸಿನಿಮಾಗಳನ್ನು ಹಾಕದೇ ಇಂಡಿಯಾ-ಪಾಕಿಸ್ತಾನ ನಡೆಯುವ ಮ್ಯಾಚ್‌ ಹಾಕಿಕೊಂಡು ಕುಳಿತುಕೊಂಡಿರುತ್ತಾರೆ. ಪ್ರತಿ ಬಾರಿಯೂ ಸಹ ಈ ಎರಡು ತಂಡಗಳ ನಡುವೆ ಮ್ಯಾಚ್‌ ಇರುವಾಗ ಇಂತಹ ಘಟನೆಗಳು ನಡೆದಿರುವ ಉದಾಹರಣೆಗಳಿವೆ.

ಈ ವಾರದ ಆರಂಭದಲ್ಲಿ ಕರಾಚಿಯಲ್ಲಿ ನಡೆದ ಉದ್ಘಾಟನಾ ಪಂದ್ಯದಲ್ಲಿ ಆತಿಥೇಯ ಪಾಕಿಸ್ತಾನ ತಂಡವು ನ್ಯೂಜಿಲೆಂಡ್ ವಿರುದ್ಧ 60 ರನ್‌ಗಳಿಂದ ಸೋಲನುಭವಿಸಿತ್ತು. ಇಂದಿನ ಪಂದ್ಯದಲ್ಲಿ ಗೆದ್ದರೆ ಮಾತ್ರ ಪಾಕಿಸ್ತಾನಕ್ಕೆ ಸೆಮಿಫೈನಲ್‌ ಪ್ರವೇಶಿಸಲು ಅವಕಾಶ ಇರುತ್ತದೆ. ಆದ್ದರಿಂದ ಇಂದಿನ ಪಂದ್ಯವನ್ನು ಗೆಲ್ಲಲೇಬೇಕಾದ ಪರಿಸ್ಥಿತಿ ಪಾಕಿಸ್ತಾನಕ್ಕಿದೆ. ಇನ್ನು ಭಾರತ ಎಲ್ಲಾ ಆಟಗಾರರು ಉತ್ತಮ ಲಯದಲ್ಲಿದ್ದು, ಗೆಲುವು ಸಾಧಿಸುವುದು ಖಚಿತ ಎಂದು ನೆಟ್ಟಿಗರು ಹೇಳುತ್ತಿದ್ದಾರೆ.

2023ರಲ್ಲಿ ಏಕದಿನ ವಿಶ್ವಕಪ್‌ನಲ್ಲಿ ಪಾಕಿಸ್ತಾನ ವಿರುದ್ಧ 7 ವಿಕೆಟ್‌ ಅಂತರದಿಂದ ಭಾರತ ಗೆದ್ದು ಬೀಗಿತ್ತು. ಇಂದು ಮತ್ತೆ ಚಾಂಪಿಯನ್ಸ್‌ ಟ್ರೋಪಿ ಕ್ರಿಕೆಟ್‌ ಪಂದ್ಯದಲ್ಲಿ ಪಾಕಿಸ್ತಾನದ ವಿರುದ್ಧ ಗೆಲುವಿನ ವಿಶ್ವಾಸದಲ್ಲಿದೆ. ಈಗಾಗಲೇ ಮೊದಲ ಪಂದ್ಯದಲ್ಲೇ ನ್ಯೂಜಿಲೆಂಡ್‌ ವಿರುದ್ಧ ತಲೆಬಾಗಿದ ಪಾಕಿಸ್ತಾನಕ್ಕೆ ಗೆಲುವು ಅನಿವಾರ್ಯ ಆಗಿದೆ.

2017ರಲ್ಲಿ ಓವಲ್‌ನಲ್ಲಿ ನಡೆದ ಚಾಂಪಿಯನ್ಸ್ ಟ್ರೋಫಿಯ ಫೈನಲ್ ಪಂದ್ಯದಲ್ಲಿ ಪಾಕಿಸ್ತಾನ ವಿರುದ್ಧ ಭಾರತ ಸೋಲನುಭವಿಸಿತ್ತು. ಬಳಿಕ 2018ರಿಂದಲೂ 2023ರ ಏಷ್ಯ ಕಪ್ ಸೇರಿದಂತೆ ಭಾರತ ಪಾಕಿಸ್ತಾನ ವಿರುದ್ಧ 6 ಏಕದಿನ ಪಂದ್ಯಗಳನ್ನ ಗೆದ್ದುಕೊಂಡು ಬಂದಿದೆ. ಹಾಗೆಯೇ ಇಂದಿನ ಪಂದ್ಯವನ್ನು ಸಹ ಗೆಲ್ಲುವ ವಶ್ವಾಸದಲ್ಲಿದೆ.

ಇಂದಿನ ಎ ಗ್ರೂಪ್‌ನ ಇಂಡಿಯಾ-ಪಾಕಿಸ್ತಾನ ನಡುವೆ ನಡೆಯುವ ಚಾಂಪಿಯನ್‌ ಟ್ರೋಫಿ ಕ್ರಿಕೆಟ್‌ ಪಂದ್ಯ ಮಧ್ಯಾಹ್ನ 2:30ರಿಂದ ಆರಂಭವಾಗಲಿದೆ. ದುಬೈ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ ಮಧ್ಯಾಹ್ನ 2 ಗಂಟೆಗೆ ಟಾಸ್‌ ನಡೆಯಲಿದ್ದು, 2:30ಕ್ಕೆ ಪಂದ್ಯ ಆರಂಭವಾಗಲಿದೆ. ಸ್ಟಾರ್‌ ಸ್ಪೋರ್ಟ್ಸ್‌, ಜಿಯೋ ಹಾಟ್‌ಸ್ಟಾರ್‌ನಲ್ಲಿ ನಲ್ಲಿ ನೇರ ಪ್ರಸಾರ ಆಗಲಿದೆ.

ತಂಡಗಳ ವಿವರ

ಟೀಂ ಇಂಡಿಯಾ: ರೋಹಿತ್ ಶರ್ಮಾ (ನಾಯಕ), ಶುಭ್‌ಮನ್ ಗಿಲ್‌, ವಿರಾಟ್‌ ಕೊಹ್ಲಿ, ಕೆಎಲ್‌ ರಾಹುಲ್‌ (ವಿಕೆಟ್‌ ಕೀಪರ್‌), ಹಾರ್ದಿಕ್‌ ಪಾಂಡ್ಯ, ಅಕ್ಸರ್ ಪಟೇಲ್‌, ವಾಷಿಂಗ್ಟನ್‌ ಸುಂದರ್, ಕುಲದೀಪ್‌ ಯಾದವ್‌, ಜಸ್ಪ್ರೀತ್‌ ಬುಮ್ರಾ, ಮೊಹ್ಮದ್‌ ಶಮಿ, ಅರ್ಷ್‌ದೀಪ್‌ ಸಿಂಗ್‌, ಹರ್ಷಿತ್‌ ರಾಣ, ರಿಷಭ್‌ ಪಂಥ್‌, ರವೀಂದ್ರ ಜಡೇಜಾ, ವರುಣ್ ಚಕ್ರವರ್ತಿ.

ಪಾಕಿಸ್ಥಾನ ತಂಡ: ಮೊಹಮ್ಮದ್ ರಿಜ್ವಾನ್ (ನಾಯಕ, ವಿಕೆಟ್ ಕೀಪರ್) ಸಲ್ಮಾನ್ ಅಲಿ ಅಘಾ, ಬಾಬರ್ ಅಜಮ್, ಫಖರ್ ಜಮಾನ್, ಕಮ್ರಾನ್ ಗುಲಾಮ್, ಸೌದ್ ಶಕೀಲ್, ತಯ್ಯಬ್ ತಾಹಿರ್, ಫಹೀಮ್ ಅಶ್ರಫ್, ಖುಷ್ದಿಲ್ ಷಾ, ಉಸ್ಮಾನ್ ಖಾನ್, ಅಬ್ರಾರ್ ಅಹ್ಮದ್, ಹರಿಸ್ ರೌಫ್, ಮೊಹಮ್ಮದ್ ಶಾಹ್ರಿ ಹಸ್ನೇನ್, ನಸೀಮ್ ಶಾ, ಶಾಹೀನ್ ಶಾ ಅಫ್ರಿದಿ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+