ಪಾಪಿ ಪಾಕಿಸ್ತಾನ ಆಟಗಾರರು 127 ರನ್ ಬಾರಿಸಲು ಸುಸ್ತು, ಭಾರತ ಭರ್ಜರಿಯಾಗಿ ಗಳಿಸಿದ್ದು... Asia Cup
ಭಾರತ ಅಂದ್ರೆ ಕ್ರಿಕೆಟ್, ಕ್ರಿಕೆಟ್ ಅಂದ್ರೆ ಭಾರತ... ಆದರೆ ಪಾಕಿಸ್ತಾನ & ಭಾರತದ ನಡುವೆ ಕ್ರಿಕೆಟ್ ಮ್ಯಾಚ್ ಶುರುವಾದರೆ ಅದು ಯುದ್ಧ ಅಂದ್ರೆ ವಾರ್ ರೀತಿ ಭಾಸವಾಗುತ್ತದೆ. ಅದೇ ರೀತಿಯಾಗಿ ಈಗ ಮತ್ತೊಂದು ಮಹಾಯುದ್ಧ ನಡೆದಿದ್ದು, ಭಾರತ ಕ್ರಿಕೆಟ್ ತಂಡ ಇದೀಗ ಪಾಪಿ ಪಾಕಿಸ್ತಾನ ಹೆಡೆಮುರಿ ಕಟ್ಟಿ ಬಿಸಾಡಿದೆ. ಅದರಲ್ಲೂ ಪಾಪಿ ಪಾಕಿಸ್ತಾನ ಆಟಗಾರರು 127 ರನ್ ಬಾರಿಸಲು ಸುಸ್ತು, ಭಾರತ ಭರ್ಜರಿಯಾಗಿ ಗಳಿಸಿದ್ದು...
ಭಾರತ & ಪಾಕಿಸ್ತಾನ ಕ್ರಿಕೆಟ್ ಮ್ಯಾಚ್ ಇಟ್ಟರೆ ಸಾಕು ಅಲ್ಲಿ ಒಂದು ದೊಡ್ಡ ಹವಾ ಕ್ರಿಯೇಟ್ ಆಗಿ, ಇಡೀ ಜಗತ್ತು ಆ ಮ್ಯಾಚ್ ನೋಡುತ್ತದೆ. ಅದರಲ್ಲೂ ಈ ಎರಡೂ ದೇಶಗಳ ನಡುವೆ ನಡೆಯುವ & ಆಡುವ ಪಂದ್ಯ ಥೇಟ್ ಯುದ್ಧದ ರೀತಿಯಲ್ಲೇ ಇರುತ್ತದೆ ಅನ್ನೋದು ಅಭಿಮಾನಿಗಳ ಮಾತು. ಇದೇ ಮಾತು ಮತ್ತೊಮ್ಮೆ ಏಷ್ಯಾ ಕಪ್ ಟೋರ್ನಿಯಲ್ಲಿ ಕೂಡ ನಿಜವಾಗಿ ಹೋಗಿದೆ. ಅದರಲ್ಲೂ, ನಮ್ಮ ಭಾರತದ ಹುಲಿಗಳ ಎದುರು, ಪಾಕಿಸ್ತಾನದ ಆಟಗಾರರು ನರಿಗಳ ರೀತಿ ಓಡಿ ಹೋಗಿ ಪೆವಿಲಿಯನ್ ಸೇರುವಂತೆ ಆಗಿತ್ತು!

ಪಾಪಿ ಪಾಕ್ ತಂಡದ ಒದ್ದಾಟ!
ಏಷ್ಯಾ ಕಪ್ ಟೂರ್ನಿಯಲ್ಲಿ ಭಾರತ & ಪಾಕಿಸ್ತಾನ ಮುಖಾಮುಖಿ ಆಗುವ ಸುದ್ದಿ ಕೇಳಿ ಇಡೀ ಜಗತ್ತು ಕುತೂಹಲದಿಂದ ಕಾಯುತ್ತಿತ್ತು. ಅದರಲ್ಲೂ ಕೆಲವು ತಿಂಗಳ ಹಿಂದಷ್ಟೇ ಭಾರತದ ವಿರುದ್ಧ ಯುದ್ಧ ಮಾಡಲು ಬಂದು ಸರಿಯಾಗಿ ಏಟು ತಿಂದು ಓಡಿ ಹೋಗಿದ್ದ ಪಾಪಿ ಪಾಕಿಸ್ತಾನಕ್ಕೆ ಕ್ರಿಕೆಟ್ ಆಟದಲ್ಲಿ ಗೆಲ್ಲುವ ಯೋಗ್ಯತೆ ಇದೆಯಾ? ಅನ್ನೋ ಚರ್ಚೆ ಕೂಡ ಶುರುವಾಗಿತ್ತು. ಇದೀಗ ಅಂತಿಮವಾಗಿ ನಮ್ಮ ಭಾರತೀಯ ತಂಡದ ಎದುರು ಹೀನಾಯ ಸೋಲು ಕಂಡು ಮೂಲೆ ಸೇರಿದೆ ಪಾಕಿಸ್ತಾನ. ಹಾಗಾದರೆ ಪಾಕಿಸ್ತಾನ ಗಳಿಸಿದ್ದು ಎಷ್ಟು ರನ್? ಮುಂದೆ ಓದಿ...
ಗೆದ್ದು ಬೀಗಿದ ಭಾರತ ತಂಡ!
ಭಾರತದ ಬೌಲಿಂಗ್ ಪಡೆ, ಮತ್ತೊಮ್ಮೆ ತನ್ನ ಶಕ್ತಿ ಏನು ಅನ್ನೋದನ್ನು ಇಡೀ ಜಗತ್ತಿಗೇ ತೋರಿಸಿದೆ. ಪಾಕಿಸ್ತಾನ ತಂಡದ ದಾಂಡಿಗರು ಭಾರತದ ಬೌಲಿಂಗ್ ಅಬ್ಬರ ಎದುರಿಸಲು ಆಗದೆ, ಕೇವಲ 97 ರನ್ ತಲುಪುವ ಒಳಗೆ ಭರ್ಜರಿ 8 ವಿಕೆಟ್ ಕಳೆದುಕೊಂಡು ನರಳಾಡಿದ್ದರು. ಹೀಗೆ ಎಲ್ಲಾ ನೋಡ ನೋಡುತ್ತಲೇ ಬದಲಾಗಿ ಹೋಗಿತ್ತು. ಮ್ಯಾಚ್ ಗೆಲ್ಲುವ ಹುಮ್ಮಸ್ಸಿನಲ್ಲಿ ಬಂದಿದ್ದ ಪಾಕಿಸ್ತಾನದ ಆಟಗಾರರು ಕೊನೆಗೆ ಮರ್ಯಾದಿ ಉಳಿಸಿಕೊಳ್ಳಲು ಆಡಿದರು. ಆದರೆ ನಿಗದಿತ 20 ಓವರ್ ಮುಗಿಸಿ, ಬರೋಬ್ಬರಿ 9 ವಿಕೆಟ್ ಕಳೆದುಕೊಂಡು 127 ರನ್ ಮಾತ್ರ ಗಳಿಸಿದರು.
ಇನ್ನು ಈ ಸುಲಭದ ಗುರಿಯನ್ನ ಬೆನ್ನುಹತ್ತಿದ್ದ ಭಾರತ ಕ್ರಿಕೆಟ್ ತಂಡ, ಕೇವಲ 15.5 ಓವರ್ ಮುಗಿಸುವ ಒಳಗೆ 131 ರನ್ ಚಚ್ಚಿ ತನ್ನ ಗುರಿ ತಲುಪಿತ್ತು. ಭಾರತದ ಪರ ಆರಂಭದಲ್ಲೇ 13 ಬಾಲ್‌ಗೆ 31 ರನ್ ಚಚ್ಚಿದ್ದ ಅಭಿಷೇಕ್ ಶರ್ಮಾ ಮಿಂಚಿದರು. ನಂತರ ಬಂದ ಸೂರ್ಯಕುಮಾರ್ ಯಾದವ್ 37 ಬಾಲ್ ಆಡಿ 47 ರನ್ ಬಾರಿಸಿದರು. ಸೂರ್ಯಕುಮಾರ್ ಯಾದವ್ ಅವರಿಗೆ ತಿಲಕ್ ವರ್ಮಾ ಸಾಥ್ ನೀಡಿ 31 ಬಾಲ್ ಆಡಿ 31 ರನ್ ಗಳಿಸಿದರು. ಅಂತಿಮವಾಗಿ ಭಾರತ ತಂಡ 15.5 ಓವರ್ ಗುರಿ ಮುಟ್ಟಿತು...












Click it and Unblock the Notifications