India VS Pakistan: ಪಾಕಿಸ್ತಾನಕ್ಕೆ ಹೀನಾಯ ಹಿನ್ನಡೆ, ಭಾರತಕ್ಕೆ ಭರ್ಜರಿ ಗೆಲುವು...
ಜನಗಣಮನ ಅಧಿನಾಯಕ ಜಯ ಹೇ ಭಾರತ ಭಾಗ್ಯ ವಿಧಾತ... ಹೀಗೆ ಭಾರತದ ರಾಷ್ಟ್ರಗೀತೆ ಹಾಡುವ ಭಾರತೀಯರ ಪಾಲಿಗೆ ಪರಮ ಶತ್ರು ಪಾಪಿ ಪಾಕಿಸ್ತಾನ. ಕೆಲವು ದಿನಗಳ ಹಿಂದಷ್ಟೇ ಪಾಪಿ ಪಾಕಿಸ್ತಾನದ ಹೆಡೆಮುರಿ ಕಟ್ಟಿರುವ ಭಾರತದ ವೀರ ಯೋಧರು, ಯುದ್ಧ ಗೆದ್ದು ಬೀಗಿದ್ದಾರೆ. ಹೀಗೆ ಯುದ್ಧ ಮುಗಿದು ಹೋದ ಕೆಲವೇ ದಿನಗಳಲ್ಲಿ ಭಾರತ & ಪಾಪಿ ಪಾಕಿಸ್ತಾನ ನಡುವೆ ಇಂದು ಕ್ರಿಕೆಟ್ ಯುದ್ಧವೇ ಶುರು ಆಗಿತ್ತು. ಪ್ರಪಂಚದ 800 ಕೋಟಿ ಜನರು ಉಸಿರು ಬಿಗಿಹಿಡಿದು ಭಾರತ & ಪಾಪಿ ಪಾಕಿಸ್ತಾನ ನಡುವಿನ ಕ್ರಿಕೆಟ್ ಮ್ಯಾಚ್ ನೋಡುತ್ತಾ ಕೂತಿದ್ದರು. ಹೀಗಿದ್ದಾಗಲೇ, ಪಾಕಿಸ್ತಾನಕ್ಕೆ ಹೀನಾಯ ಹಿನ್ನಡೆ, ಭಾರತಕ್ಕೆ ಭರ್ಜರಿ ಗೆಲುವು...
ಕೆಲವು ತಿಂಗಳ ಹಿಂದಷ್ಟೇ ಭಾರತ & ಪಾಕಿಸ್ತಾನ ನಡುವೆ ಘೋರವಾಗಿ ಯುದ್ಧ ನಡೆದಿತ್ತು. ಹೀಗಾಗಿ ಮತ್ತೊಂದು ಪರಮಾಣು ಯುದ್ಧ ಶುರುವಾಗುತ್ತಾ? ಅನ್ನೋ ಟೆನ್ಷನ್ ಇಡೀ ಜಗತ್ತಿನಾದ್ಯಂತ ಆವರಿಸಿ ದೊಡ್ಡ ಚರ್ಚೆ ಕೂಡ ಆಗಿತ್ತು. ಆದರೆ ಕೊನೆಗೂ ಭಾರತದ ಎದುರು ಸೋತು ಹೋಗಿದ್ದ ಪಾಪಿಗಳ ಅಡ್ಡೆ ಪಾಕಿಸ್ತಾನ ಇದೀಗ ಕ್ರಿಕೆಟ್ ಪಂದ್ಯದಲ್ಲೂ ಭಾರಿ ಹೀನಾಯವಾಗಿ ಸೋಲು ಕಂಡಿದೆ. ಹಾಗಾದ್ರೆ ಎಷ್ಟು ವಿಕೆಟ್ ಅಂತರದಲ್ಲಿ ಪಾಪಿ ಪಾಕಿಸ್ತಾನ ಸೋತು ಹೋಯ್ತು? ಭಾರತದ ಕ್ರಿಕೆಟ್ ಪಡೆಯಲ್ಲಿ ಹೇಗಿತ್ತು ಆಟದ ಖದರ್? ಬನ್ನಿ ತಿಳಿಯೋಣ...

ಪಾಪಿ ಪಾಕಿಸ್ತಾನಕ್ಕೆ ಆರಂಭದಲ್ಲೇ ಹಿನ್ನಡೆ!
ಅಂದಹಾಗೆ ಆರಂಭದಲ್ಲಿ ಟಾಸ್ ಸೋತ ನಮ್ಮ ಭಾರತೀಯ ತಂಡ ಮೊದಲು ಬೌಲಿಂಗ್ ಮಾಡಿತ್ತು. ಮತ್ತೊಂದು ಕಡೆ ಟಾಸ್ ಗೆದ್ದು ಸಿಕ್ಕಾಪಟ್ಟೆ ಹುಮ್ಮಸ್ಸಿನಲ್ಲಿ ಮೈದಾನಕ್ಕೆ ಎಂಟ್ರಿ ಕೊಟ್ಟಿದ್ದ ಪಾಕ್‌ನ ಆಟಗಾರರು, ಭಾರತದ ಬೌಲಿಂಗ್ ಪಡೆಯನ್ನ ಸೋಲಿಸುವ ಹುಮ್ಮಸ್ಸು ಹೊಂದಿದ್ದರು. ಆದರೆ ಪಾಪಿ ಪಾಕ್ ಕ್ರಿಕೆಟ್ ತಂಡದ ಆಟಗಾರರು ಭಾರತದ ಬೌಲಿಂಗ್ ಅಬ್ಬರದ ಎದುರು ತರಗೆಲೆಯ ರೀತಿ ಹಾರಿ ಹೋದರು. ಅದರಲ್ಲೂ 1 ರನ್ ಗಳಿಸುವ ಹೊತ್ತಿಗೆ ಪಾಕಿಸ್ತಾನ ತಂಡದ ಒಂದು ವಿಕೆಟ್ ಕಿತ್ಕೊಂಡು ಹೋಗಿತ್ತು....
ಭಾರತ ತಂಡಕ್ಕೆ ಭರ್ಜರಿ ಗೆಲುವು!
ಹೀಗೆ ಪಾಕಿಸ್ತಾನ ತಂಡದ ದಾಂಡಿಗರು ಭಾರತದ ಬೌಲಿಂಗ್ ಅಬ್ಬರ ಎದುರಿಸಲು ಆಗದೆ, ಕೇವಲ 97 ರನ್ ತಲುಪುವ ಒಳಗೆ ಭರ್ಜರಿ 8 ವಿಕೆಟ್ ಕಳೆದುಕೊಂಡು ನರಳಾಡಿದ್ದರು. ಎಲ್ಲವೂ ನೋಡ ನೋಡುತ್ತಾ ಬದಲಾಗಿ ಹೋಗಿತ್ತು. ಮ್ಯಾಚ್ ಗೆಲ್ಲುವ ಹುಮ್ಮಸ್ಸಿನಲ್ಲಿ ಬಂದಿದ್ದ ಪಾಕಿಸ್ತಾನದ ಆಟಗಾರರು ಕೊನೆಗೆ ಮರ್ಯಾದಿ ಉಳಿಸಿಕೊಳ್ಳಲು ಆಡಿದರು. ಆದರೆ ನಿಗದಿತ 20 ಓವರ್ ಮುಗಿಸಿ, ಬರೋಬ್ಬರಿ 9 ವಿಕೆಟ್ ಕಳೆದುಕೊಂಡು 127 ರನ್ ಮಾತ್ರ ಗಳಿಸಿದರು.
ಇನ್ನು ಈ ಸುಲಭದ ಗುರಿಯನ್ನ ಬೆನ್ನುಹತ್ತಿದ್ದ ಭಾರತ ಕ್ರಿಕೆಟ್ ತಂಡ, ಕೇವಲ 15.5 ಓವರ್ ಮುಗಿಸುವ ಒಳಗೆ 131 ರನ್ ಚಚ್ಚಿ ತನ್ನ ಗುರಿ ತಲುಪಿತ್ತು. ಭಾರತದ ಪರ ಆರಂಭದಲ್ಲೇ 13 ಬಾಲ್‌ಗೆ 31 ರನ್ ಚಚ್ಚಿದ್ದ ಅಭಿಷೇಕ್ ಶರ್ಮಾ ಮಿಂಚಿದರು. ನಂತರ ಬಂದ ಸೂರ್ಯಕುಮಾರ್ ಯಾದವ್ 37 ಬಾಲ್ ಆಡಿ 47 ರನ್ ಬಾರಿಸಿದರು. ಸೂರ್ಯಕುಮಾರ್ ಯಾದವ್ ಅವರಿಗೆ ತಿಲಕ್ ವರ್ಮಾ ಸಾಥ್ ನೀಡಿ 31 ಬಾಲ್ ಆಡಿ 31 ರನ್ ಗಳಿಸಿದರು. ಅಂತಿಮವಾಗಿ ಭಾರತ ತಂಡ 15.5 ಓವರ್ ಗುರಿ ಮುಟ್ಟಿತು...












Click it and Unblock the Notifications