ಭಾರತದ ಎದುರು ಹೀನಾಯವಾಗಿ ಸೋಲು ಕಂಡ ಪಾಕಿಸ್ತಾನ! India VS Pakistan
ಪಾಕಿಸ್ತಾನ ತಂಡಕ್ಕೆ ಮತ್ತೊಮ್ಮೆ ಭಾರತ ತಂಡ ಭಾರಿ ದೊಡ್ಡ ಪಾಠ ಕಲಿಸಿದೆ, ಭಾರತದ ಎದುರು ತನ್ನ ಆಟ ನಡೆಯಲ್ಲ ಅನ್ನೋದನ್ನ ಮತ್ತೊಮ್ಮೆ ಒಪ್ಪಿಕೊಂಡಿದೆ ಪಾಪಿ ಪಾಕಿಸ್ತಾನ. ಅದರಲ್ಲೂ ಈ ತಂಡ ಕ್ರಿಕೆಟ್ ಆಟದಲ್ಲಿ ಭಾರತದ ಎದುರು ಗೆದ್ದ ಇತಿಹಾಸಕ್ಕಿಂತ ಸೋತ ನೋವೇ ಹೆಚ್ಚು. ಪಾಕ್ ಈ ರೀತಿ ಸಾಲು ಸಾಲು ಸೋಲು ಕಂಡು ಒದ್ದಾಡುತ್ತಿರುವ ಸಮಯದಲ್ಲೇ ಮತ್ತೊಮ್ಮೆ ಸರಿಯಾಗೇ ರುಚಿ ತೋರಿಸಿದೆ ಭಾರತ. ಅದರಲ್ಲೂ ಕೆಲವೇ ದಿನಗಳ ಅಂತರದಲ್ಲಿ ಏಷ್ಯಾ ಕಪ್ ಅಖಾಡದಲ್ಲಿ ಭಾರತದ ಎದುರು 2ನೇ ಬಾರಿಗೆ ಹೀನಾಯವಾಗಿ ಸೋಲು ಕಂಡಿದೆ ಪಾಕಿಸ್ತಾನ!
ಕೆಲ ದಿನಗಳ ಹಿಂದಷ್ಟೇ ಪಾಪಿ ಪಾಕಿಸ್ತಾನದ ಹೆಡೆಮುರಿ ಕಟ್ಟಿರುವ ಭಾರತದ ವೀರ ಯೋಧರು, ಯುದ್ಧ ಗೆದ್ದು ಬೀಗಿದ್ರು. ಹೀಗೆ ಯುದ್ಧ ಮುಗಿದು ಹೋದ ಕೆಲವೇ ದಿನಗಳಲ್ಲಿ ಭಾರತ, ಪಾಪಿ ಪಾಕಿಸ್ತಾನ ನಡುವೆ ಕ್ರಿಕೆಟ್ ಯುದ್ಧವೇ ಶುರು ಆಗಿತ್ತು. ಪ್ರಪಂಚದ 800 ಕೋಟಿ ಜನರು ಉಸಿರು ಬಿಗಿಹಿಡಿದು ಭಾರತ & ಪಾಪಿ ಪಾಕಿಸ್ತಾನ ನಡುವಿನ ಕ್ರಿಕೆಟ್ ಮ್ಯಾಚ್ ನೋಡುತ್ತಾ ಕೂತಿದ್ದರು. ಹೀಗೆ ಮ್ಯಾಚ್ ನೋಡಲು ಕೂತಿದ್ದ, ಕೋಟಿ ಕೋಟಿ ಜನರಿಗೆ ಭಾರತ ತಂಡ ನಿರಾಶೆ ಮಾಡಿಲ್ಲ. ಹಾಗೇ ಪಾಕಿಸ್ತಾನ ತಂಡಕ್ಕೆ ಮತ್ತೊಮ್ಮೆ ಸೋಲಿನ ರುಚಿ ತೋರಿಸದೆ ಬಿಟ್ಟಿಲ್ಲ.

ಸಾಲು ಸಾಲು ಹೀನಾಯ ಸೋಲು!
ಹೌದು, ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡ ಭಾರತ ತಂಡ ಭರ್ಜರಿ ಬೌಲಿಂಗ್ ಪ್ರದರ್ಶನ ಮಾಡುವ ನಿರೀಕ್ಷೆಯಲ್ಲಿ ಇತ್ತು. ಆದರೆ ಪಾಕಿಸ್ತಾನ ಆಟಗಾರರು ಕಳೆದ ಪಂದ್ಯದಲ್ಲಿ ಭಾರಿ ಹೀನಾಯವಾಗಿ ಸೋಲು ಕಂಡಿದ್ದ ಕಾರಣಕ್ಕೆ ಅಲರ್ಟ್ ಆಗಿ ಆಟವಾಡಿದರು. ಸೋತರೂ ಪರವಾಗಿಲ್ಲ ಮಾನ ಉಳಿಸಿಕೊಳ್ಳಬೇಕು ಎಂಬ ಒನ್‌ಲೈನ್ ಅಜೆಂಡಾ ಮೂಲಕ ಆಟ ಶುರು ಮಾಡಿದ್ದ ಪಾಕಿಸ್ತಾನ ತಂಡ ಹಂಗೋ ಹಿಂಗೋ ಒದ್ದಾಡಿ ಕೊನೆಗೆ 20 ಓವರ್ ಆಟವಾಡಿ 171 ರನ್ ಗಳಿಸಿತ್ತು. ಕೊನೆಗೆ ಈ ಸ್ಕೋರ್ ಬೆನ್ನುಹತ್ತಿದ್ದ ನಮ್ಮ ಭಾರತ ತಂಡ 18.5 ಓವರ್‌ಗಳಲ್ಲಿ ಚಚ್ಚಿ ಬಿಸಾಡಿದೆ. ಭಾರತ ತಂಡ 4 ವಿಕೆಟ್ ಕಳೆದುಕೊಂಡು 18.5 ಓವರ್‌ಗಳಲ್ಲಿ 174 ರನ್ ಬಾರಿಸಿತ್ತು.
ರೊಚ್ಚಿಗೆದ್ದ ಪಾಕಿಸ್ತಾನದ ಅಭಿಮಾನಿಗಳು!
ಒಟ್ನಲ್ಲಿ ಭಾರತದ ಎದುರು ಎಲ್ಲೂ ಪಾಕಿಸ್ತಾನದ ಆಟ ನಡೆಯಲ್ಲ ಅನ್ನೋದು ಈಗ ಮತ್ತೊಮ್ಮೆ ಇಡೀ ಜಗತ್ತಿಗೆ ಗೊತ್ತಾಗಿದೆ. ಅದರಲ್ಲೂ ಪಾಕಿಸ್ತಾನ ತಂಡವು ಹೀನಾಯ ಸೋಲನ್ನು ಕಂಡಿದ್ದು ಅಲ್ಲಿನ ಭಾರಿ ದೊಡ್ಡ ಸಂಖ್ಯೆಯ ಅಭಿಮಾನಿಗಳಿಗೆ ರೊಚ್ಚಿಗೆದ್ದು ಕೂರುವಂತೆ ಮಾಡಿದೆ. ಅಲ್ಲದೆ ಪಾಕಿಸ್ತಾನಕ್ಕೆ ಬನ್ನಿ ನಿಮಗೆ ಸರಿಯಾಗಿ ಮಾಡ್ತೀವಿ ಅಂತಿದ್ದಾರೆ! ಹೀಗಾಗಿ ಪಾಕಿಸ್ತಾನ ತಂಡದ ಆಟಗಾರರು ಈಗ ತಮ್ಮದೇ ಸ್ವಂತ ದೇಶಕ್ಕೆ ಹೋಗಲು ಯೋಚಿಸುವಂತೆ ಆಗಿದೆ.












Click it and Unblock the Notifications