Ind vs Eng: 4ನೇ ಪಂದ್ಯದಲ್ಲಿ ಭಾರತ ತಂಡದಲ್ಲಿ ಎರಡು ಬದಲಾವಣೆ!

ಭಾರತ ಮತ್ತು ಇಂಗ್ಲೆಂಡ್ ನಡುವಿನ 5 ಪಂದ್ಯಗಳ ಟಿ20 ಸರಣಿ ರೋಚಕ ಘಟ್ಟದಲ್ಲಿದೆ. ಮೊದಲ ಎರಡು ಪಂದ್ಯಗಳಲ್ಲಿ ಭಾರತ ಭರ್ಜರಿ ಗೆಲುವು ಸಾಧಿಸಿದರೂ, ಮೂರನೇ ಪಂದ್ಯದಲ್ಲಿ ದಿಟ್ಟ ಹೋರಾಟ ಕೊಟ್ಟ ಇಂಗ್ಲೆಂಡ್ ಸರಣಿ ಮುನ್ನಡೆಯನ್ನು 1-2 ಕ್ಕೆ ಕಡಿಮಾ ಮಾಡಿದೆ. 4ನೇ ಟಿ 20 ಪಂದ್ಯವನ್ನು ಗೆದ್ದು ಸರಣಿ ಸಮಬಲಗೊಳಿಸಲುವ ವಿಶ್ವಾಸದಲ್ಲಿ ಆಂಗ್ಲರ ಪಡೆ ಇದ್ದರೆ, ಈ ಪಂದ್ಯ ಗೆದ್ದು ಸರಣಿಯನ್ನು ಗೆಲ್ಲುವ ವಿಶ್ವಾಸದಲ್ಲಿದೆ ಸೂರ್ಯಕುಮಾರ್ ಯಾದವ್ ತಂಡ.

ನಾಲ್ಕನೇ ಟಿ20 ಪಂದ್ಯ ಜನವರಿ 31ರಂದು ಪುಣೆಯ ಎಂಸಿಎ ಕ್ರೀಡಾಂಗಣದಲ್ಲಿ ನಡೆಯಲಿದೆ. ಎರಡೂ ತಂಡಗಳು ಈಗಾಗಲೇ ಕಠಿಣ ಅಭ್ಯಾಸ ಮಾಡುತ್ತಿದ್ದು, ಪುಣೆ ಪಂದ್ಯಕ್ಕೆ ಸಜ್ಜಾಗಿವೆ. ಮೂರನೇ ಟಿ20 ಪಂದ್ಯದಲ್ಲಿ ಗೆಲುವು ಸಾಧಿಸಿರುವ ಇಂಗ್ಲೆಂಡ್ ಪ್ಲೇಯಿಂಗ್ ಇಲೆವೆನ್ ಬದಲಾವಣೆ ಮಾಡುವ ಸಾಧ್ಯತೆ ಕಡಿಮೆ ಇದ್ದು, ಭಾರತ ತಂಡದಲ್ಲಿ ಎರಡು ಪ್ರಮುಖ ಬದಲಾವಣೆಗಳನ್ನು ನಿರೀಕ್ಷೆ ಮಾಡಬಹುದಾಗಿದೆ.

india vs england 4th t20 playing xi venue and time

ಭಾರತ ತಂಡದಲ್ಲಿ ಬದಲಾವಣೆ

ಮೂರನೇ ಟಿ20 ಪಂದ್ಯದಲ್ಲಿ ಉತ್ತಮ ಪ್ರದರ್ಶನ ನೀಡಲು ವಿಫಲವಾಗಿರುವ ಧ್ರುವ್ ಜುರೆಲ್ ನಾಲ್ಕನೇ ಪಂದ್ಯದಲ್ಲಿ ಬೆಂಚ್ ಕಾಯುವ ಸಾಧ್ಯತೆ ಇದೆ. ರಮಣದೀಪ್ ಸಿಂಗ್ ಅಥವಾ ಆಲ್‌ರೌಂಡರ್ ಶಿವಂ ದುಬೆಗೆ ಅವಕಾಶ ಸಿಗಲಿದೆ ಎಂದು ನಿರೀಕ್ಷೆ ಮಾಡಲಾಗಿದೆ.

ಮೂರನೇ ಟಿ20 ಪಂದ್ಯದಲ್ಲಿ ಅರ್ಷದೀಪ್ ಸಿಂಗ್ ಬದಲಾಗಿ ಮೊಹಮ್ಮದ್ ಶಮಿ ಅವಕಾಶ ಪಡೆದಿದ್ದರು. ಅವರು ಉತ್ತಮವಾಗಿ ಬೌಲಿಂಗ್ ಮಾಡಿದರೂ ವಿಕೆಟ್ ಪಡೆಯುವಲ್ಲಿ ವಿಫಲವಾದರು. ನಾಲ್ಕನೇ ಪಂದ್ಯದಲ್ಲಿ ಕೂಡ ಶಮಿ ಮುಂದುವರೆಯುವ ಸಾಧ್ಯತೆ ಇದ್ದು, ಅರ್ಷದೀಪ್ ಸಿಂಗ್‌ಗೆ ಜಾಗ ಬಿಟ್ಟುಕೊಡೋದ್ಯಾರು ಎನ್ನುವ ಪ್ರಶ್ನೆ ಎದುರಾಗಿದೆ.

ಸಂಜು ಸ್ಯಾಮ್ಸನ್‌ ಉತ್ತಮ ಪ್ರದರ್ಶನ ನೀಡುವಲ್ಲಿ ವಿಫಲವಾಗಿದ್ದು ನಾಲ್ಕನೇ ಪಂದ್ಯದಲ್ಲಿ ಫಾರ್ಮ್‌ಗೆ ಮರಳುವ ವಿಶ್ವಾಸದಲ್ಲಿದ್ದಾರೆ. ವರುಣ್ ಚಕ್ರವರ್ತಿ ಇಂಗ್ಲೆಂಡ್‌ಗೆ ತಲೆನೋವಾಗಿದ್ದು ಭಾರತದ ಪ್ರಮುಖ ಸ್ಪಿನ್ ಅಸ್ತ್ರವಾಗಿದ್ದಾರೆ.

ಪಂದ್ಯದ ಸಮಯ, ಸ್ಥಳ, ಪಿಚ್ ವರದಿ

ಜನವರಿ 31ರಂದು ಶುಕ್ರವಾರ ಸಂಜೆ 7 ಗಂಟೆಗೆ ಪಂದ್ಯ ಆರಂಭವಾಗಲಿದೆ. ಪುಣೆಯ ಎಂಸಿಎ ಕ್ರೀಡಾಂಗಣದಲ್ಲಿ ಪಂದ್ಯ ನಡೆಯಲಿದೆ. ಇಲ್ಲಿ ನಾಲ್ಕು ಅಂತಾರಾಷ್ಟ್ರೀಯ ಟಿ20 ಪಂದ್ಯಗಳು ನಡೆದಿದ್ದು 206 ಇಲ್ಲಿ ದಾಖಲಾಗಿರುವ ಅತ್ಯಧಿಕ ಮೊತ್ತವಾಗಿದೆ. 158 ರನ್‌ ಇಲ್ಲಿ ಚೇಸ್ ಮಾಡಿರುವ ದೊಡ್ಡ ಮೊತ್ತವಾಗಿದೆ. ಮೊದಲು ಬ್ಯಾಟಿಂಗ್ ಮಾಡಿದ ತಂಡ 2 ಬಾರಿ ಗೆಲುವು ಸಾಧಿಸಿದ್ದರೆ, ಚೇಸಿಂಗ್ ಮಾಡುವ ತಂಡ 2 ಬಾರಿ ಗೆಲುವು ಸಾಧಿಸಿದೆ.

ಭಾರತದ ಸಂಭಾವ್ಯ ಆಡುವ ಬಳಗ

ಸಂಜು ಸ್ಯಾಮ್ಸನ್‌, ಅಭಿಷೇಕ್ ಶರ್ಮಾ, ಸೂರ್ಯಕುಮಾರ್ ಯಾದವ್, ತಿಲಕ್ ವರ್ಮಾ, ಹಾರ್ದಿಕ್ ಪಾಂಡ್ಯ, ಅಕ್ಷರ್ ಪಟೇಲ್, ಧ್ರುವ್ ಜುರೆಲ್/ ಶಿವಂ ದುಬೆ, ವಾಷಿಂಗ್ಟನ್ ಸುಂದರ್/ರಿಂಕು ಸಿಂಗ್, ಮೊಹಮ್ಮದ್ ಶಮಿ, ವರುಣ್ ಚಕ್ರವರ್ತಿ, ಅರ್ಷದೀಪ್ ಸಿಂಗ್.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+