ಶ್ರೀಲಂಕಾ ವಿರುದ್ಧ ಅಬ್ಬರಿಸಿದ್ದ ಟೀಮ್ ಇಂಡಿಯಾ, ಯುವ ಆಟಗಾರರ ಶ್ರೇಯಾಂಕದಲ್ಲಿ ಬಡ್ತಿ
ಶ್ರೀಲಂಕಾ ಪ್ರವಾಸದಲ್ಲಿ ಟೀಮ್ ಇಂಡಿಯಾ ಭರ್ಜರಿ ಪ್ರದರ್ಶನವನ್ನು ನೀಡಿ ಜಯ ಸಾಧಿಸಿದೆ. ಟಿ20 ಸರಣಿಯನ್ನು ಕ್ಲೀನ್ ಸ್ವೀಪ್ ಸಾಧನೆ ಮಾಡಿರುವ ಸೂರ್ಯಕುಮಾರ್ ಯಾದವ್ ಪಡೆ ಅಬ್ಬರಿಸಿದೆ. ಮಂಗಳವಾರ ನಡೆದ ಮೂರನೇ ಟಿ20 ಪಂದ್ಯದಲ್ಲಿ ಸೂರ್ಯ ಪಡೆ ಅಮೋಘ ಪ್ರದರ್ಶನ ನೀಡಿದರೂ ನಂಬರ್ ಸ್ಥಾನವನ್ನು ಪಡೆಯಲು ವಿಫಲರಾಗಿದ್ದಾರೆ.
ಟಿ20 ಕ್ರಿಕೆಟ್‌ನ ಸೂಪರ್ ಸ್ಟಾರ್ ಬ್ಯಾಟರ್ ಸೂರ್ಯಕುಮಾರ್ ಯಾದವ್ ಮತ್ತೆ ನಂಬರ್ 1 ಸ್ಥಾನವನ್ನು ಪಡೆಯುವ ಕನಸಿಗೆ ಪೆಟ್ಟು ಬಿದ್ದಿದೆ.. ಶ್ರೀಲಂಕಾ ವಿರುದ್ಧದ ಸರಣಿಯ ಬಳಿಕ ಸ್ಕೈ ಮತ್ತೆ ಎರಡನೇ ಸ್ಲಾಟ್ ತಮ್ಮದಾಗಿಸಿಕೊಂಡಿದ್ದಾರೆ. ಮೊದಲ ಸ್ಥಾನದಲ್ಲಿ ಆಸೀಸ್‌ನ ಟ್ರಾವಿಸ್ ಹೆಡ್ ಇದ್ದು ಇವರು 844 ಅಂಕ ಕಲೆ ಹಾಕಿದ್ದಾರೆ.

ಟೀಮ್ ಇಂಡಿಯಾದ ಯುವ ಆಟಗಾರರು ಸಹ ಸೊಗಸಾದ ಪ್ರದರ್ಶನ ನೀಡಿ ಶ್ರೇಯಾಂಕದಲ್ಲಿ ಬಡ್ತಿ ಪಡೆದಿದ್ದಾರೆ. ಅಲ್ಲದೆ ಟೀಮ್ ಇಂಡಿಯಾದ ನೂತನ ಕೋಚ್ ಗೌತಮ್ ಗಂಭೀರ್ ಅವರು ಗೆಲುವಿನ ಮೂಲಕ ಆರಂಭ ಮಾಡಿದ್ದಾರೆ.
ಶ್ರೀಲಂಕಾ ವಿರುದ್ಧದ ಸರಣಿಯಲ್ಲಿ ಅಮೋಘ ಪ್ರದರ್ಶನ ನೀಡಿದ್ದ ಯಂಗ್ ಇಂಡಿಯಾ ಎಲ್ಲರ ಚಿತ್ತ ಕದ್ದಿತ್ತು. ಕೊನೆಯ ಟಿ20 ಪಂದ್ಯದಲ್ಲಿ ಸ್ಕೈ ಒಂದು ಓವರ್ ಬೌಲ್ ಮಾಡಲು ಬಂದು ಪಂದ್ಯಕ್ಕೆ ತಿರುವು ನೀಡಿತ್ತು. ಸತತ 2 ವಿಕೆಟ್ ಪಡೆದು ಪಂದ್ಯ ಡ್ರಾ ಮಾಡಿಕೊಳ್ಳುವಲ್ಲಿ ಸಫಲರಾಗಿದ್ದರು. ಮೊದಲ ಟಿ20 ಪಂದ್ಯದಲ್ಲಿ 58 ರನ್‌ಗಳ ಅತ್ಯುತ್ತಮ ಇನ್ನಿಂಗ್ಸ್ ಆಡಿದ ಅವರು ಎರಡನೇ ಪಂದ್ಯದಲ್ಲಿ 26 ರನ್ ಗಳಿಸಿದ್ದರು. ಆದರೆ, ಕಳೆದ ಪಂದ್ಯದಲ್ಲಿ ಅವರ ಬ್ಯಾಟ್ ಕೆಲಸ ಮಾಡದೇ 8 ರನ್ ಗಳಿಸಿ ಪೆವಿಲಿಯನ್ ಗೆ ಮರಳಿದರು.
ಈ ಪ್ರದರ್ಶನದ ಫಲವಾಗಿ ಸೂರ್ಯ ಶ್ರೇಯಾಂಕದಲ್ಲಿ ಬಡ್ತಿ ಪಡೆದಿದ್ದಾರೆ. ಯುವ ಆಟಗಾರ ಯಶಸ್ವಿ ಜೈಸ್ವಾಲ್ ಟಿ20 ಬ್ಯಾಟ್ಸ್‌ಮನ್‌ಗಳ ಶ್ರೇಯಾಂಕದಲ್ಲಿ ಏರಿಕೆ ಕಂಡಿದ್ದಾರೆ. 2024 ರ ಟಿ 20 ವಿಶ್ವಕಪ್‌ನಲ್ಲಿ ಜೈಸ್ವಾಲ್‌ಗೆ ಅವಕಾಶ ಸಿಗದಿದ್ದರೂ, ಜೈಸ್ವಾಲ್ ಅವರ ಬ್ಯಾಟ್ ಜಿಂಬಾಬ್ವೆ ಮತ್ತು ಶ್ರೀಲಂಕಾ ವಿರುದ್ಧ ಅಬ್ಬರಿಸಿತ್ತು. ಇದರಿಂದಾಗಿ ಯಶಸ್ವಿ ಐಸಿಸಿ ಟಿ20 ರ್ಯಾಂಕಿಂಗ್‌ನಲ್ಲಿ ಟಾಪ್-5ರಲ್ಲಿ ಸ್ಥಾನ ಪಡೆದಿದ್ದಾರೆ.

ಯಶಸ್ವಿ 2 ಸ್ಥಾನ ಏರಿಕೆ ಕಂಡಿದ್ದಾರೆ. ಜೈಸ್ವಾಲ್ ಶ್ರೀಲಂಕಾ ವಿರುದ್ಧ 40, 30 ಮತ್ತು 10 ರನ್‌ಗಳ ಸ್ಥಿರ ಇನ್ನಿಂಗ್ಸ್ ಕಟ್ಟಿದ್ದರು. ಇದಕ್ಕೂ ಮುನ್ನ ಜಿಂಬಾಬ್ವೆ ವಿರುದ್ಧ 93 ರನ್‌ಗಳ ಅಜೇಯ ಇನ್ನಿಂಗ್ಸ್ ಇವರ ಶ್ರೇಯಾಂಕ ಬಡ್ತಿಗೆ ಸಹಾಯ ಮಾಡಿದೆ.
ರವಿ ಬಿಷ್ಣೋಯ್ ಮಿಂಚು
ಟೀಮ್ ಇಂಡಿಯಾ ಯುವ ಸ್ಪಿನ್ ಬೌಲರ್ ರವಿ ಬಿಷ್ಣೋಯಿ, ಶ್ರೀಲಂಕಾ ವಿರುದ್ಧದ ಸರಣಿಯಲ್ಲಿ ಐದು ವಿಕೆಟ್ ಕಬಳಿಸಿದ್ದರು. ಆದರೆ ಹಿಂದಿನ ಪ್ರವಾಸದಲ್ಲಿ ಬಿಷ್ಣೋಯಿ ಸ್ಥಿರ ಪ್ರದರ್ಶನ ನೀಡಿರಲಿಲ್ಲ. ಬಿಷ್ಣೋಯ್ ಐಸಿಸಿ ಟಿ20 ಶ್ರೇಯಾಂಕದಲ್ಲಿ 8 ಸ್ಥಾನ ಮೇಲಕ್ಕೇರಿದ್ದಾರೆ. ಇದೀಗ ಅವರು ಟಾಪ್-10ರೊಳಗೆ ಬಂದಿದ್ದಾರೆ.
ಶ್ರೀಲಂಕಾ ಸರಣಿಯಲ್ಲಿ ಆಡದ ಅಕ್ಷರ್ ಪಟೇಲ್ ಶ್ರೇಯಾಂಕದಲ್ಲಿ 13ನೇ ಸ್ಥಾನದಲ್ಲಿ ಮುಂದುವರೆದಿದ್ದಾರೆ.












Click it and Unblock the Notifications