Asian Champions Trophy: ಜಪಾನ್ ವಿರುದ್ಧ ಭಾರತಕ್ಕೆ ಭರ್ಜರಿ ಗೆಲುವು

ಏಷ್ಯನ್ ಚಾಂಪಿಯನ್ಸ್ ಟ್ರೋಫಿ 2024ರ ಪಂದ್ಯಾವಳಿಯಲ್ಲಿ ಭಾರತದ ಭರ್ಜರಿ ಪ್ರದರ್ಶನ ಮುಂದುವರೆದಿದೆ. ಮೊದಲ ಪಂದ್ಯದಲ್ಲಿ ಚೀನಾ ವಿರುದ್ಧ 3-0 ಗೋಲುಗಳ ಅಂತರದಲ್ಲಿ ಗೆಲುವು ಸಾಧಿಸಿದ್ದ ಭಾರತ ಇದೀಗ ಎರಡನೇ ಪಂದ್ಯದಲ್ಲಿ ಜಪಾನ್ ವಿರುದ್ಧ 5-1 ಗೋಲುಗಳ ಅಂತರದಲ್ಲಿ ಗೆದ್ದು ಬೀಗಿದೆ. ಚೀನಾದ ಹುಲುನ್‌ಬುಯಿರ್‌ನಲ್ಲಿರುವ ಮೋಕಿ ಹಾಕಿ ತರಬೇತಿ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಭಾರತ ಜಪಾನ್‌ ತಂಡವನ್ನು ಮಣಿಸಿದೆ.

ಭಾರತ ತಂಡದ ಅಜೇಯ ಓಟ ಮುಂದುವರೆದಿದೆ. ಆಕ್ರಮಣಕಾರಿ ಮತ್ತು ಕೌಶಲ್ಯಭರಿತ ಪ್ರದರ್ಶನ ನೀಡುವ ಮೂಲಕ ಜಪಾನ್ ವಿರುದ್ಧ ಗೆಲುವು ಸಾಧಿಸಿತು. ಆರಂಭದಿಂದಲೇ ಭಾರತ ಆಕ್ರಮಣಕಾರಿ ಆಟಕ್ಕೆ ಮುಂದಾಯಿತು. ಮೊದಲ ಕ್ವಾರ್ಟರ್‌ನಲ್ಲಿ ಸುಖ್‌ಜೀತ್ ಸಿಂಗ್ ಮತ್ತು ಅಭಿಷೇಕ್ ಗೋಲು ಬಾರಿಸುವ ಮೂಲಕ ಭಾರತ ಮುನ್ನಡೆ ಪಡೆದುಕೊಂಡಿತು.

India Triumphs Over Japan in Asian Champions Trophy 2024 Match

ಭಾರತದ ಆಕ್ರಮಣಕಾರಿ ಆಟಕ್ಕೆ ಜಪಾನ್ ದಂಗಾಯಿತು. ಆರಂಭದಲ್ಲೇ ಭಾರತ 2 ಗೋಲು ಗಳಿಸುವ ಮೂಲಕ ಜಪಾನ್‌ಗೆ ಭಾರಿ ಹಿನ್ನಡೆಯಾಯಿತು. ಎರಡನೇ ಕ್ವಾರ್ಟರ್‌ನಲ್ಲಿ, ಹರ್ಮನ್‌ಪ್ರೀತ್ ಸಿಂಗ್ ಪೆನಾಲ್ಟಿ ಕಾರ್ನರ್ ಪಡೆದರು, ಮತ್ತು ಸಂಜಯ್ ಪರಿಪೂರ್ಣ ಡ್ರ್ಯಾಗ್ ಫ್ಲಿಕ್ ಹೊಡೆಯುವ ಮೂಲಕ ಭಾರತ 3ನೇ ಗೋಲು ಗಳಿಸಿತು. ಪಂದ್ಯದ ಮೊದಲಾರ್ಧದ ವೇಳೆಗೆ ಭಾರತ 3-0 ಅಂತರದಲ್ಲಿ ಮುನ್ನಡೆ ಸಾಧಿಸಿತು.

ಮೂರನೇ ಕ್ವಾರ್ಟರ್ ನಲ್ಲಿ ಜಪಾನ್ ಉತ್ತರ ಪ್ರದರ್ಶನ ನೀಡಿತು ಪ್ರದರ್ಶಿಸಿತು, ಮಾಟ್ಸುಮೊಟೊ ಭಾರತ ಆಟಗಾರರ ರಕ್ಷಣೆಯನ್ನು ಯಶಸ್ವಿಯಾಗಿ ಮೀರಿ ಗೋಲು ಗಳಿಸಿ ಮುನ್ನಡೆಯನ್ನು 1-3ಕ್ಕೆ ಕಡಿಮೆ ಮಾಡಿದರು. ಬಳಿಕ ಭಾರತ ಮತ್ತಷ್ಟು ಎಚ್ಚರಿಕೆಯಿಂದ ಪ್ರದರ್ಶನ ನೀಡಿತು. ಜಪಾನ್‌ಗೆ ಮತ್ತೆ ಗೋಲು ಗಳಿಸಲು ಅವಕಾಶ ನೀಡಲಿಲ್ಲ.

ನಾಲ್ಕನೇ ಕ್ವಾರ್ಟರ್ ನಲ್ಲಿ ಜಪಾನ್‌ನ ರಕ್ಷಣೆಯನ್ನು ಭೇದಿಸಲು ಭಾರತದ ಆಟಗಾರರು ವಿಫಲವಾದರೂ ಒತ್ತಡ ಹಾಕುವುದನ್ನು ಮುಂದುವರೆಸಿದರು. ಅಂತಿಮವಾಗಿ ಪಂದ್ಯ ಮುಗಿಯಲು ಆರು ನಿಮಿಷ ಇದ್ದಾಗ ಉತ್ತಮ್ ಸಿಂಗ್ ಗೋಲು ಬಾರಿಸುವ ಮೂಲಕ ಭಾರತ 4-1 ಗೋಲುಗಳಿಂದ ಮುನ್ನಡೆ ಸಾಧಿಸಿತು.

ಪಂದ್ಯದ ಕೊನೆಯ ನಿಮಿಷದಲ್ಲಿ ರಾಜ್‌ಕುಮಾರ್ ಸಿಂಗ್ ನೀಡಿದ ಪಾಸ್ ಅನ್ನು ಸುಖಜೀತ್ ಸಿಂಗ್ ಗೋಲು ಪೆಟ್ಟಿಗೆಗೆ ಸೇರಿಸುವ ಮೂಲಕ ಭಾರತಕ್ಕೆ 5-1 ಗೋಲುಗಳ ಗೆಲುವು ತಂದುಕೊಟ್ಟರು.

ಭಾರತ ಚೀನಾ ಮತ್ತು ಜಪಾನ್ ತಂಡಗಳನ್ನು ಮಣಿಸಿದ್ದು ಮುಂದಿನ ಪಂದ್ಯದಲ್ಲಿ ದಕ್ಷಿಣ ಕೊರಿಯಾ ತಂಡವನ್ನು ಎದುರಿಸಲಿದೆ. ಸೆಪ್ಟೆಂಬರ್ 11 ರಂದು ಈ ಪಂದ್ಯ ನಡೆಯಲಿದೆ.

ಏಷ್ಯನ್ ಚಾಂಪಿಯನ್ಸ್ ಟ್ರೋಫಿಯ ಮತ್ತೊಂದು ಪಂದ್ಯದಲ್ಲಿ ಕೊರಿಯಾ ಮತ್ತು ಪಾಕಿಸ್ತಾನ ತಂಡಗಳು ಮುಖಾಮುಖಿಯಾಗಿದ್ದವು. ಈ ಪಂದ್ಯ 2-2 ಗೋಲುಗಳಿಂದ ಡ್ರಾದಲ್ಲಿ ಮುಕ್ತಾಯವಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+