ಭಾರತ ಆಯೋಜಿಸಲಿದೆ ಏಷ್ಯಾ ಕಪ್ 2025: ಸ್ವರೂಪ ಯಾವುದು?
ಹಾಲಿ ಏಕದಿನ ಏಷ್ಯಾಕಪ್ ಚಾಂಪಿಯನ್ ಭಾರತಕ್ಕೆ ಮತ್ತೊಂದು ಗುಡ್ ನ್ಯೂಸ್ ಸಿಕ್ಕಿದೆ. ಭಾರತದಲ್ಲಿ ನಡೆಯಲಿರುವ 2026 ಟಿ20 ವಿಶ್ವಕಪ್‌ಗೂ ಮುನ್ನ 2025ರಲ್ಲಿ ಟಿ20 ಫಾರ್ಮೆಟ್‌ನ ಏಷ್ಯಾ ಕಪ್ ಕ್ರಿಕೆಟ್ ಟೂರ್ನಿಯನ್ನು ಆಯೋಜಿಸಲಿದೆ. ಏಷ್ಯನ್ ಕ್ರಿಕೆಟ್ ಕೌನ್ಸಿಲ್ ಈ ವಿಷಯವನ್ನು ತಿಳಿಸಿದೆ. 34 ವರ್ಷಗಳ ಬಳಿಕ ಭಾರತದಲ್ಲಿ ಏಷ್ಯಾಕಪ್ ಆಯೋಜನೆಯಾಗುತ್ತಿದೆ.
ಇದಕ್ಕೂ ಮೊದಲು 1991ರ ಪುರುಷರ ಏಷ್ಯಾ ಕಪ್ ಅನ್ನು ಭಾರತದಲ್ಲಿ ಆಯೋಜಿಸಲಾಗಿತ್ತು. ಭಾರತದಲ್ಲಿ ನಡೆಯಲಿರುವ ಏಷ್ಯಾಕಪ್‌ಗೆ ಪಾಕಿಸ್ತಾನ ತಂಡ ಬರುವ ಎಲ್ಲಾ ಸಾಧ್ಯತೆಗಳಿವೆ. ಏಕದಿನ ವಿಶ್ವಕಪ್ 2023 ಅನ್ನು ಭಾರತದಲ್ಲಿ ಆಯೋಜಿಸಲಾಗಿತ್ತು. ಆಗಲೂ ಪಾಕಿಸ್ತಾನ ತಂಡ ಕ್ರಿಕೆಟ್ ಆಡಲು ಪಾಕಿಸ್ತಾನಕ್ಕೆ ಬಂದಿತ್ತು.

ಬಾಂಗ್ಲಾದಲ್ಲಿ ಏಕದಿನ ಏಷ್ಯಾ ಕಪ್
2027 ರಲ್ಲಿ ದಕ್ಷಿಣ ಆಫ್ರಿಕಾದಲ್ಲಿ ODI ವಿಶ್ವಕಪ್ ನಡೆಯಲಿದೆ. ಇದಕ್ಕೆ ಪೂರಕವಾಗಿ ಏಷ್ಯಾಕಪ್ ಆಯೋಜಿಸಲು ಎಸಿಸಿ ನಿರ್ಧರಿಸಿದೆ. ಬಾಂಗ್ಲಾದೇಶ ODI ಮಾದರಿಯಲ್ಲಿ ಪಂದ್ಯಾವಳಿಯನ್ನು ಆಯೋಜಿಸಲು ಎಸಿಸಿ ತೀರ್ಮಾನಿಸಿದೆ. 2023ರಲ್ಲಿ ಪಾಕಿಸ್ತಾನ ಕ್ರಿಕೆಟ್ ಮಂಡಳಿಯು 'ಹೈಬ್ರಿಡ್ ಮಾದರಿಯಲ್ಲಿ' ಆಯೋಜಿಸಿತ್ತು.
ಭಾರತವು ನಂತರ ಪಾಕಿಸ್ತಾನಕ್ಕೆ ಪ್ರವಾಸ ಮಾಡಲು ನಿರಾಕರಿಸಿತು ಮತ್ತು ಇದರ ನಂತರ ಭಾರತದ ಎಲ್ಲಾ ಪಂದ್ಯಗಳನ್ನು ಶ್ರೀಲಂಕಾದಲ್ಲಿ ಆಡಲಾಯಿತು. ಭಾರತದಲ್ಲಿ ಟಿ20 ಮಾದರಿಯಲ್ಲಿ ಮತ್ತು ಬಾಂಗ್ಲಾದೇಶದಲ್ಲಿ 50 ಓವರ್ ಮಾದರಿಯಲ್ಲಿ ಏಷ್ಯಾಕಪ್‌ನಲ್ಲಿ ತಲಾ 13 ಪಂದ್ಯಗಳು ನಡೆಯಲಿವೆ.
ಪುರುಷರ ಏಷ್ಯಾ ಕಪ್ ಟೂರ್ನಮೆಂಟ್' ಎಸಿಸಿ ನಾಮ ನಿರ್ದೇಶಿತ ಸದಸ್ಯರ ನಡುವೆ ನಡೆಯಲಿದೆ. ಈ ಟೂರ್ನಿಯಲ್ಲಿ ಅಫ್ಘಾನಿಸ್ತಾನ, ಭಾರತ, ಪಾಕಿಸ್ತಾನ, ಶ್ರೀಲಂಕಾ, ಬಾಂಗ್ಲಾದೇಶದ ತಂಡಗಳ ಭಾಗವಹಿಸುತ್ತವೆ. ಅರ್ಹತಾ ಪಂದ್ಯಾವಳಿಗಳ ಮೂಲಕ ಟೆಸ್ಟ್ ಅಲ್ಲದ ದೇಶಗಳು ಅದರಲ್ಲಿ ತಮ್ಮ ಸ್ಥಾನವನ್ನು ಗಳಿಸುತ್ತವೆ.
ಭಾರತ ಟೂರ್ನಿಯ ಯಶಸ್ವಿ ತಂಡ
ಏಷ್ಯಾಕಪ್ ಕ್ರಿಕೆಟ್ ಟೂರ್ನಿಯನ್ನು 1984ರಲ್ಲಿ ಪ್ರಾರಂಭಿಸಿತು. ಈಗಾಗಲೇ ಈ ಟೂರ್ನಿಯನ್ನು 16 ಸೀಜನ್‌ಗಳನ್ನು ಕಂಡಿದ್ದು, ಈ ಮಹತ್ವದ ಟೂರ್ನಿಯನ್ನು ಭಾರತ ಒಮ್ಮೆ ಮಾತ್ರ ಆಯೋಜಿಸಿದೆ. ಭಾರತ ಕಳೆದ ಬಾರಿ ಟೂರ್ನಿಯನ್ನು ಆಯೋಜಿಸಿದ್ದಾಗ ಚಾಂಪಿಯನ್ ಪಟ್ಟವನ್ನು ಅಲಂಕರಿಸಿತ್ತು.
ಈಗ ಮತ್ತೆ ಭಾರತ 34 ವರ್ಷದ ಬಳಿಕ ಆಯೋಜಿಸಲಾಗಲು ಸಿದ್ಧತೆ ನಡೆಸಿದೆ. ಟೂರ್ನಿಯಲ್ಲಿ ಭಾರತ 8 ಬಾರಿ ಚಾಂಪಿಯನ್ ಪಟ್ಟವನ್ನು ಅಲಂಕರಿಸಿದ್ದು, ಅತ್ಯಂತ ಯಶಸ್ವಿ ತಂಡಗಳಲ್ಲಿ ಒಂದಾಗಿದೆ. ಭಾರತ ಹಾಗೂ ಬಾಂಗ್ಲಾದೇಶದಲ್ಲಿ ನಡೆಯಲಿರುವ ಟಿ20 ಹಾಗೂ ಏಕದಿನ ಏಷ್ಯಾ ಕಪ್‌ಗಾಗಿ 13 ಲೀಗ್ ಪಂದ್ಯಗಳನ್ನು ಆಡಲಿದೆ.












Click it and Unblock the Notifications