India vs Australia: ರೋಹಿತ್ ಶರ್ಮಾ ಅಬ್ಬರ; ಆಸ್ಟ್ರೇಲಿಯಾಗೆ 206 ರನ್‌ಗಳ ಬೃಹತ್ ಗುರಿ
ಆಸ್ಟ್ರೇಲಿಯಾ ವಿರುದ್ಧದ ಟಿ20 ವಿಶ್ವಕಪ್ ಪಂದ್ಯದಲ್ಲಿ ಭಾರತ 20 ಓವರ್ ಗಳಲ್ಲಿ 5 ವಿಕೆಟ್ ಕಳೆದುಕೊಂಡು 205 ರನ್ ಗಳಿಸಿದೆ. ಆಸ್ಟ್ರೇಲಿಯಾ ಗೆಲ್ಲಲು 206 ರನ್ ಗಳಿಸಬೇಕಿದೆ. ರೋಹಿತ್ ಶರ್ಮಾ 92 ರನ್ ಗಳಿಸುವ ಮೂಲಕ ಬೃಹತ್ ಮೊತ್ತ ಕಲೆಹಾಕಲು ನೆರವಾದರು.
ಟಾಸ್ ಗೆದ್ದ ಆಸ್ಟ್ರೇಲಿಯಾ ಮೊದಲು ಬೌಲಿಂಗ್ ಮಾಡಲು ನಿರ್ಧರಿಸಿತು. ಮೊದಲು ಬ್ಯಾಟಿಂಗ್ ಮಾಡಿದ ಭಾರತ ಬೇಗನೆ ವಿರಾಟ್ ಕೊಹ್ಲಿ ಅವರ ವಿಕೆಟ್ ಕಳೆದುಕೊಂಡಿತು. 4 ಎಸೆತ ಎದುರಿಸಿದ ಕೊಹ್ಲಿ ಯಾವುದೇ ರನ್ ಗಳಿಸಿದೆ ಔಟಾಗುವ ಮೂಲಕ ನಿರಾಸೆ ಮೂಡಿಸಿದರು.

ನಾಯಕ ರೋಹಿತ್ ಶರ್ಮಾ ಮಾತ್ರ ಆಸ್ಟ್ರೇಲಿಯಾ ಬೌಲರ್ ಗಳ ಚಳಿ ಬಿಡಿಸಿದರು. ಮಿಚೆಲ್ ಸ್ಟಾರ್ಕ್‌ಗೆ ಒಂದೇ ಓವರ್ ನಲ್ಲಿ 29 ರನ್ ಬಾರಿಸುವ ಮೂಲಕ ಆಸ್ಟ್ರೇಲಿಯಾಗೆ ಭಯ ಹುಟ್ಟಿಸಿದರು.
ಕೇವಲ 41 ಎಸೆತಗಳಲ್ಲಿ 7 ಬೌಂಡರಿ 8 ಸಿಕ್ಸರ್ ಸಹಿತ 92 ರನ್ ಗಳಿಸಿ ಮಿಂಚಿದರು. 8 ರನ್‌ಗಳಿಂದ ಶತಕ ವಂಚಿತರಾದರೂ, ತಂಡ ಬೃಹತ್ ಮೊತ್ತ ಗಳಿಸಲು ಭದ್ರ ಬುನಾದಿ ಹಾಕಿಕೊಟ್ಟರು.
ರಿಷಬ್ ಪಂತ್ 14 ಎಸೆತಗಳಲ್ಲಿ 15 ರನ್ ಗಳಿಸಿದರೆ, ಸೂರ್ಯಕುಮಾರ್ ಯಾದವ್ 16 ಎಸೆತಗಳಲ್ಲಿ 31 ರನ್ ಗಳಿಸಿದರು. ಶಿವಂ ದುಬೆ 22 ಎಸೆತಗಳಲ್ಲಿ 28 ರನ್ ಗಳಿಸಿದರು. ಹಾರ್ದಿಕ್ ಪಾಂಡ್ಯ 17 ಎಸೆತಗಳಲ್ಲಿ ಅಜೇಯ 27 ರನ್ ಗಳಿಸಿದರೆ, ಜಡೇಜಾ ಅಜೇಯ 9 ರನ್ ಗಳಿಸಿದರು.
ಮಿಚೆಲ್ ಸ್ಟಾರ್ಕ್ 4 ಓವರ್ ಗಳಲ್ಲಿ 45 ರನ್ ಕೊಟ್ಟು 2 ವಿಕೆಟ್ ಪಡೆದರು. ಜೋಶ್ ಹೇಜಲ್‌ವುಡ್ 4 ಓವರ್ ಗಳಲ್ಲಿ 14 ರನ್ ನೀಡಿ 1 ವಿಕೆಟ್ ಪಡೆದರು. ಮಾರ್ಕಸ್ ಸ್ಟೊಯಿನಿಸ್ 4 ಓವರ್ ಗಳಲ್ಲಿ 56 ರನ್ ನೀಡಿ 2 ವಿಕೆಟ್ ಪಡೆದರು.
ಏಕದಿನ ವಿಶ್ವಕಪ್ ಸೋಲಿಗೆ ಸೇಡು?
ಏಕದಿನ ವಿಶ್ವಕಪ್ ಫೈನಲ್ ಪಂದ್ಯದಲ್ಲಿ ಆಸ್ಟ್ರೇಲಿಯಾ ಭಾರತವನ್ನು ಸೋಲಿಸುವ ಮೂಲಕ ಆಘಾತ ಕೊಟ್ಟಿತ್ತು. ಇಂದಿನ ಪಂದ್ಯದಲ್ಲಿ ಭಾರತ ದೊಡ್ಡ ಅಂತರದಲ್ಲಿ ಆಸ್ಟ್ರೇಲಿಯಾನ್ನು ಮಣಿಸಿದರೆ, ಟಿ20 ವಿಶ್ವಕಪ್‌ನಿಂದಲೇ ಹೊರಬೀಳುವ ಆತಂಕ ಶುರುವಾಗಿದೆ. ಆಸ್ಟ್ರೇಲಿಯಾ ಕಳೆದ ಪಂದ್ಯದಲ್ಲಿ ಅಫ್ಘಾನಿಸ್ತಾನದ ವಿರುದ್ಧ ಸೋತು ಮುಖಭಂಗ ಅನುಭವಿಸಿತ್ತು.












Click it and Unblock the Notifications