ಬಿಸಿಸಿಐ ಕೊಟ್ಟ ಶಾಕ್‌ಗೆ ಚಾಂಪಿಯನ್ಸ್ ಟ್ರೋಫಿ ಉದ್ಘಾಟನಾ ಸಮಾರಂಭ ರದ್ದು

ಚಾಂಪಿಯನ್ಸ್ ಟ್ರೋಫಿ 2025 ಪಂದ್ಯಾವಳಿಗೆ ದಿನಗಣನೆ ಶುರುವಾಗಿದೆ. ಹಠ ಹಿಡಿದ ಬಿಸಿಸಿಐ ಭಾರತದ ಪಂದ್ಯಗಳು ತಟಸ್ಥ ಸ್ಥಳಗಳಲ್ಲಿ ನಡೆಯುವಂತೆ ಮಾಡಿದೆ. ಭಾರತದ ಪಂದ್ಯಗಳು ದುಬೈನಲ್ಲಿ ನಡೆಯಲಿದ್ದು ಉಳಿದ ತಂಡಗಳ ಪಂದ್ಯಗಳು ಪಾಕಿಸ್ತಾನದಲ್ಲಿ ನಡೆಯಲಿವೆ. ಈ ಬೆನ್ನಲ್ಲೇ ಬಿಸಿಸಿಐ ಪಾಕಿಸ್ತಾನ ಕ್ರಿಕೆಟ್‌ ಮಂಡಳಿಗೆ ಮತ್ತೊಂದು ಶಾಕ್ ಕೊಟ್ಟಿದ್ದು ಚಾಂಪಿಯನ್ಸ್ ಟ್ರೋಫಿ ಉದ್ಘಾಟನಾ ಸಮಾರಂಭವೇ ರದ್ದಾಗಿದೆ.

ಚಾಂಪಿಯನ್ಸ್ ಟ್ರೋಫಿ 2025ರ ಪಂದ್ಯಾವಳಿ ಆರಂಭಕ್ಕೆ ಮುನ್ನ ಪಂದ್ಯಾವಳಿಯಲ್ಲಿ ಆಡುವ ಎಲ್ಲಾ ತಂಡಗಳ ನಾಯಕರು ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸಬೇಕಿತ್ತು. ಭಾರತ ತಂಡದ ನಾಯಕ ರೋಹಿತ್ ಶರ್ಮಾರನ್ನು ಪಾಕಿಸ್ತಾನಕ್ಕೆ ಕಳಿಸಲು ಬಿಸಿಸಿಐ ಒಪ್ಪಿಗೆ ನೀಡದ ಕಾರಣ ಚಾಂಪಿಯನ್ಸ್ ಟ್ರೋಫಿಯ ಉದ್ಘಾಟನಾ ಸಮಾರಂಭ ರದ್ದಾಗಲಿದೆ ಎಂದು ವರದಿಯಾಗಿದೆ.

india captain rohit sharma unlikely travel pakistan champions trophy 2025

ಪಾಕಿಸ್ತಾನ ಕ್ರಿಕೆಟ್ ಮಂಡಳಿ ಉದ್ಘಾಟನಾ ಸಮಾರಂಭದ ಯೋಜನೆಗಳನ್ನು ಬಹಿರಂಗಪಡಿಸಿದರೂ ಅಂತರರಾಷ್ಟ್ರೀಯ ಕ್ರಿಕೆಟ್ ಮಂಡಳಿ (ಐಸಿಸಿ) ಈ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಐಸಿಸಿ ಕಾರ್ಯಕ್ರಮ ಪ್ರಾರಂಭವಾಗುವ ಮೊದಲು ಭಾಗವಹಿಸುವ ಎಲ್ಲಾ ತಂಡಗಳ ನಾಯಕರು ಪಂದ್ಯಾವಳಿಗೆ ಮುನ್ನ ಫೋಟೊ ಶೂಟ್‌ನಲ್ಲಿ ಭಾಗವಹಿಸುತ್ತಾರೆ.

ಆದರೆ ಈ ಬಾರಿ ಇದು ನಡೆಯುವ ಸಾಧ್ಯತೆ ಕಡಿಮೆ ಇದೆ. ಪಾಕಿಸ್ತಾನ 1996 ರ ನಂತರ ಮೊದಲ ಬಾರಿಗೆ ಐಸಿಸಿ ಪಂದ್ಯಾವಳಿಯನ್ನು ಆಯೋಜನೆ ಮಾಡುತ್ತಿದ್ದು, ಅದ್ದೂರಿಯಾಗಿ ಪಂದ್ಯಾವಳಿ ಆಯೋಜಿಸಬೇಕು ಎನ್ನುವ ಪಾಕಿಸ್ತಾನದ ಆಸೆಗೆ ಶಾಕ್ ಕೊಟ್ಟಿದೆ.

ಭದ್ರತಾ ಕಾರಣದಿಂದ ರೋಹಿತ್ ಗೈರು

ಭದ್ರತೆಯ ಕಾರಣದಿಂದಾಗಿ ಭಾರತ ತಂಡವು ಪಾಕಿಸ್ತಾನಕ್ಕೆ ಪ್ರಯಾಣಿಸುವುದಿಲ್ಲ. ಭಾರತದ ಪಂದ್ಯಗಳು ದುಬೈನಲ್ಲಿ ನಡೆಯಲಿವೆ. ಭಾರತ ಸೆಮಿಫೈನಲ್, ಫೈನಲ್‌ಗೆ ಪ್ರವೇಶಿಸಿದರೆ ಈ ಪಂದ್ಯಗಳು ಕೂಡ ದುಬೈನಲ್ಲೇ ನಡೆಯಲಿವೆ. ಈಗ ರೋಹಿತ್ ಶರ್ಮಾರನ್ನು ಫೋಟೊಶೂಟ್‌ಗಾಗಿ ಕೂಡ ಪಾಕಿಸ್ತಾನಕ್ಕೆ ಕಳಿಸದೇ ಇರಲು ಬಿಸಿಸಿಐ ನಿರ್ಧರಿಸಿದ್ದು, ಪಿಸಿಬಿ ನಾಯಕರ ಫೋಟೋಶೂಟ್ ಮತ್ತು ಪತ್ರಿಕಾಗೋಷ್ಠಿಯನ್ನು ಸಂಪೂರ್ಣವಾಗಿ ರದ್ದುಗೊಳಿಸಿದೆ.

ಎಂಟು ನಾಯಕರನ್ನು ಒಳಗೊಂಡ ಪತ್ರಿಕಾಗೋಷ್ಠಿ ಮತ್ತು ಕರಾಚಿಯಲ್ಲಿ ಚಾಂಪಿಯನ್ಸ್ ಟ್ರೋಫಿ ಜೊತೆಗೆ ಫೋಟೊ ಶೂಟ್ ನಡೆಸಬೇಕಾಗಿತ್ತು. ಆದರೆ ಪಾಕಿಸ್ತಾನ ಕ್ರಿಕೆಟ್ ಮಂಡಳಿ ಈಗ ಇದನ್ನು ರದ್ದು ಮಾಡಿದೆ.

ಫೆಬ್ರವರಿ 18 ರಂದು ಇಂಗ್ಲೆಂಡ್ ಮತ್ತು ಫೆಬ್ರವರಿ 19 ರಂದು ಆಸ್ಟ್ರೇಲಿಯಾ ಲಾಹೋರ್‌ಗೆ ಆಗಮಿಸಲಿವೆ. ಬಾಂಗ್ಲಾದೇಶ ಮತ್ತು ಭಾರತ ಫೆಬ್ರವರಿ 15 ರಂದು ದುಬೈಗೆ ಆಗಮಿಸಲಿದ್ದು, ಅಫ್ಘಾನಿಸ್ತಾನ ಫೆಬ್ರವರಿ 12 ರಂದು ಇಸ್ಲಾಮಾಬಾದ್ ತಲುಪಲಿದೆ. ನ್ಯೂಜಿಲೆಂಡ್ ಮತ್ತು ದಕ್ಷಿಣ ಆಫ್ರಿಕಾ ಫೆಬ್ರವರಿ 8 ರಿಂದ 14 ರವರೆಗೆ ಲಾಹೋರ್ ಮತ್ತು ಕರಾಚಿಯಲ್ಲಿ ನಡೆಯಲಿರುವ ತ್ರಿಕೋನ ಏಕದಿನ ಸರಣಿಯಯನ್ನು ಆಡಲು ಈಗಾಗಲೇ ಪಾಕಿಸ್ತಾನಕ್ಕೆ ಪ್ರಯಾಣಿಸಿವೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+