Women's T20 World Cup 2026: ಟೀಮ್ ಇಂಡಿಯಾ ವಿರುದ್ಧ ಪಾಕಿಸ್ತಾನ ಧೂಳೀಪಟವಾಗಿದ್ದು ಇವರಿಂದ
Women's T20 World Cup 2026: ಇಂಗ್ಲೆಂಡ್‌ನ ಬರ್ಮಿಂಗ್‌ಹ್ಯಾಮ್‌ನ ಎಡ್ಜ್‌ಬಾಸ್ಟನ್‌ನಲ್ಲಿ ಭಾನುವಾರ (ಜೂನ್ 14) ನಡೆದ ಮಹಿಳಾ ಟಿ20 ವಿಶ್ವಕಪ್‌ನ ತನ್ನ ಮೊದಲ ಪಂದ್ಯದಲ್ಲೇ ಆಲ್‌ರೌಂಡ್ ಪ್ರದರ್ಶನ ನೀಡಿದ ಭಾರತ ತಂಡ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನವನ್ನು 64 ರನ್‌ಗಳ ಅಂತರದಿಂದ ಧೂಳೀಪಟ ಮಾಡಿದೆ. ಇದಕ್ಕೆ ಪ್ರಮುಖ ಕಾರಣವಾದ ಆಟಗಾರ್ತಿ ಯಾರು ಎನ್ನುವ ಸಂಪೂರ್ಣ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ ತಿಳಿಯಿರಿ.
ಟಾಸ್ ಗೆದ್ದ ಹರ್ಮನ್‌ಪ್ರೀತ್ ಕೌರ್ ಟೀಮ್ ಇಂಡಿಯಾವು ಸ್ಮೃತಿ ಮಂದಾನ ಅವರ ಅಮೋಘ ಅರ್ಧಶತಕ, ನಾಯಕಿ ಹರ್ಮನ್‌ಪ್ರೀತ್ ಕೌರ್ ಹಾಗೂ ರಿಚಾ ಘೋಷ್ ಅವರ ಸ್ಫೋಟಕ ಬ್ಯಾಟಿಂಗ್ ನೆರವಿನಿಂದ ಪಾಕಿಸ್ತಾನದ ವಿರುದ್ಧ 20 ಓವರ್‌ಗಳಲ್ಲಿ 6 ವಿಕೆಟ್ ನಷ್ಟಕ್ಕೆ 170 ರನ್ ಗಳಿಸಿ 171 ರನ್‌ಗಳ ಬೃಹತ್ ಮೊತ್ತದ ಗುರಿ ನೀಡಿತು. ಆದರೆ ಪಾಕ್ ಈ ಗುರಿ ಮುಟ್ಟುವಲ್ಲಿ ವಿಫಲವಾಗುವ ಮೂಲಕ ಹೀನಾಯ ಸೋಲನುಭವಿಸಿತು.

ಪಾಕ್ ಬ್ಯಾಟರ್‌ಗಳಿಗೆ ಕಡಿವಾಣ ಹಾಕಿದ ದೀಪ್ತಿ
ಭಾರತ ನೀಡಿದ್ದ 171 ರನ್‌ಗಳ ಬೃಹತ್ ಗುರಿಯನ್ನು ಬೆನ್ನಟ್ಟಿದ ಪಾಕಿಸ್ತಾನ ತಂಡವನ್ನು ಟೀಂ ಇಂಡಿಯಾ ಸ್ಟಾರ್ ಸ್ಪಿನ್ನರ್ ದೀಪ್ತಿ ಶರ್ಮಾ ಮಾರಕ ಬೌಲಿಂಗ್ ದಾಳಿ ನಡೆಸಿ ಕಟ್ಟಿಹಾಕಿದರು. ದೀಪ್ತಿ ಅವರ ಅಮೋಘ 5 ವಿಕೆಟ್‌ಗಳ ನೆರವು ಹಾಗೂ ಉಳಿದ ಬೌಲರ್‌ಗಳ ಉತ್ತಮ ಪ್ರದರ್ಶನದಿಂದಾಗಿ ಭಾರತ ಸುಲಭವಾಗಿ ಗೆದ್ದು ಬೀಗಿತು.
ಮಂದಾನ, ರಿಚಾ ಘೋಷ್ ಸ್ಫೋಟಕ ಬ್ಯಾಟಿಂಗ್
ಮೊದಲು ಬ್ಯಾಟಿಂಗ್ ಆಯ್ದುಕೊಂಡ ಭಾರತ ತಂಡ ನಿಗದಿತ 20 ಓವರ್‌ಗಳಲ್ಲಿ 6 ವಿಕೆಟ್ ನಷ್ಟಕ್ಕೆ 170 ರನ್‌ಗಳ ಬೃಹತ್ ಮೊತ್ತ ಕಲೆಹಾಕಿತ್ತು. ಆರಂಭಿಕರಾಗಿ ಕಣಕ್ಕಿಳಿದ ಸ್ಮೃತಿ ಮಂಧಾನ 44 ಎಸೆತಗಳಲ್ಲಿ 9 ಬೌಂಡರಿ ಹಾಗೂ 2 ಸಿಕ್ಸರ್‌ಗಳ ನೆರವಿನಿಂದ 68 ರನ್‌ಗಳನ್ನು ಸಿಡಿಸಿದರು. ಇನಿಂಗ್ಸ್‌ನ ಆರಂಭದಲ್ಲಿ ಭಾರತ 3.2 ಓವರ್‌ಗಳಲ್ಲಿ ಕೇವಲ 18 ರನ್‌ಗಳಿಗೆ 2 ವಿಕೆಟ್ ಕಳೆದುಕೊಂಡು ತೀವ್ರ ಸಂಕಷ್ಟಕ್ಕೆ ಸಿಲುಕಿತ್ತು.
ಈ ಹಂತದಲ್ಲಿ ಜೊತೆಯಾದ ಉಪನಾಯಕಿ ಮಂದಾನ ಮತ್ತು ನಾಯಕಿ ಹರ್ಮನ್‌ಪ್ರೀತ್ ಕೌರ್ ಜೋಡಿ 63 ಎಸೆತಗಳಲ್ಲಿ 91 ರನ್‌ಗಳ ಉತ್ತಮ ಜೊತೆಯಾಟವಾಡಿ ಭಾರತ ತಂಡವನ್ನು ಸಂಕಷ್ಟಟದ ಸುಳಿಯಿಂದ ಪಾರು ಮಾಡಿತು. ನಾಯಕಿ ಹರ್ಮನ್‌ಪ್ರೀತ್ 35 ಎಸೆತಗಳಲ್ಲಿ 36 ರನ್ ಗಳಿಸಿದರೆ, ಕೊನೆಯಲ್ಲಿ ಬಂದ ರಿಚಾ ಘೋಷ್ ಕೇವಲ 17 ಎಸೆತಗಳಲ್ಲಿ 34 ರನ್‌ಗಳ ಸ್ಫೋಟಕ ಇನಿಂಗ್ಸ್ ಆಡಿ ಭಾರತದ ಮೊತ್ತವನ್ನು 150ರ ಗಡಿ ದಾಟಿಸುವಲ್ಲಿ ಪ್ರಮುಖ ಪಾತ್ರ ವಹಿಸಿದರು.
ದೀಪ್ತಿ ಶರ್ಮಾ ಸ್ಪಿನ್ ಜಾಲಕ್ಕೆ ಸಿಲುಕಿದ ಪಾಕಿಸ್ತಾನ
ಬ್ಯಾಟಿಂಗ್‌ನಲ್ಲಿ ಬ್ಯಾಟರ್‌ಗಳು ಅಬ್ಬರಿಸಿದರೆ, ಬೌಲಿಂಗ್‌ನಲ್ಲಿ ದೀಪ್ತಿ ಶರ್ಮಾ ಪಾಕ್ ಬ್ಯಾಟಿಂಗ್ ಬೆನ್ನೆಲುಬು ಮುರಿದರು. ತಮ್ಮ ಆಫ್-ಸ್ಪಿನ್ ಮೋಡಿ ಮೂಲಕ 5 ಪ್ರಮುಖ ವಿಕೆಟ್‌ಗಳನ್ನು ಉರುಳಿಸಿದ ದೀಪ್ತಿ, ಪಾಕಿಸ್ತಾನ ತಂಡ ಚೇಸಿಂಗ್‌ನಲ್ಲಿ ಎಲ್ಲೂ ಚೇತರಿಸಿಕೊಳ್ಳದಂತೆ ಮಾಡಿದರು. ಪರಿಣಾಮ ಭಾರತ 64 ರನ್‌ಗಳ ಭರ್ಜರಿ ಜಯ ಸಾಧಿಸಿತು. ಉಳಿದಂತೆ ಭಾರತದ ಪರ ಶ್ರೀ ಚರಣಿ 3 ವಿಕೆಟ್ ಕಬಳಿಸಿದರೆ, ಶಫಾಲಿ ವರ್ಮಾ 1 ವಿಕೆಟ್ ಕಿತ್ತು ಮಿಂಚಿದರು.
ಪಾಕ್ ಬ್ಯಾಟಿಂಗ್ ವೈಫಲ್ಯ
ಪಾಕಿಸ್ತಾನದ ಪರ ಬ್ಯಾಟ್ ಬೀಸಿದ ಮುನೀಬಾ ಅಲಿ 41 ರನ್ ಸಿಡಿಸಿ ತಂಡದ ಪರವಾಗಿ ಅತೀ ಹೆಚ್ಚು ರನ್ ಗಳಿಸಿದ ಆಟಗಾರ್ತಿ ಎಸಿಕೊಂಡರು. ಆಲಿಯಾ ರಿಯಾಜ್ 18(17), ಗುಲ್ ಫಿರೋಜಾ 12(9) ರನ್‌ಗಳ ಕೊಡುಗೆ ನೀಡಿದರೆ, ಉಳಿದವರು ಒಂದಂಕಿ ದಾಟದೇ ವಿಕೆಟ್ ಒಪ್ಪಿಸಿದರು. ಪಾಕ್ 17 ಓವರ್‌ಗಳಿಗೆ ತನ್ನೆಲ್ಲಾ ವಿಕೆಟ್ ಕಳೆದುಕೊಂಡು ಕೇವಲ 106 ರನ್‌ಗಳನ್ನು ಗಳಿಸಲಷ್ಟೇ ಸಾಧ್ಯವಾಯಿತು.












Click it and Unblock the Notifications