Paris Olympics 2024: ಮಂಗಳವಾರ ಪದಕದ ಆಸೆ ಹುಟ್ಟಿಸಿದ ಶೂಟರ್ಸ್: ಇಲ್ಲಿದೆ ವೇಳಾಪಟ್ಟಿ
ಸೋಮವಾರ ಪ್ಯಾರೀಸ್ ಒಲಿಂಪಿಕ್ಸ್‌ನಲ್ಲಿ ಸ್ಥಿರ ಪ್ರದರ್ಶನವನ್ನು ನೀಡಿದರು, ಭಾರತೀಯ ಕ್ರೀಡಾ ಪಟುಗಳು ಪದಕವನ್ನು ಪಡೆಯುವಲ್ಲಿ ವಿಫಲರಾದರು. ಪುರುಷರ 10 ಮೀಟರ್ ಏರ್ ರೈಫಲ್ ಈವೆಂಟ್‌ನಲ್ಲಿ ಭಾರತದ ಅರ್ಜುನ್ ಬಾಬುತಾ ಅವರು ಕೂದಲೆಳೆಯ ಅಂತರದಲ್ಲಿ ಕಂಚಿನ ಪದಕ ವಂಚಿತರಾದರು. ಆರ್ಚರಿ ಆಟಗಾರರ ನಿರಾಸೆ ನಿನ್ನೆಯೂ ಮುಂದುವರೆಯಿತು.
ಮಂಗಳವಾರ ಭಾರತ ಪದಕದ ಆಸೆಯನ್ನು ಕಾಣುತ್ತಿದೆ. ಈಗಾಗಲೇ 10 ಮೀಟರ್ ಶೂಟಿಂಗ್‌ನಲ್ಲಿ ಭಾರತಕ್ಕೆ ಕಂಚಿನ ಪದಕವನ್ನು ತೊಡಿಸಿರುವ ಶೂಟರ್ ಮನು ಬಾಕರಾ ಅವರು ಮತ್ತೊಮ್ಮೆ ಅಖಾಡ ಪ್ರವೇಶಿಸಲಿದ್ದಾರೆ. ಇವರು ಮಿಶ್ರ ಡಬಲ್ಸ್ ಸ್ಪರ್ಧೆಯಲ್ಲಿ ಇಂದು ಮನು, ಸರ್ಬಜೋತ್ ಸಿಂಗ್ ಜೊತೆ ಕಂಚಿನ ಪದಕಕ್ಕಾಗಿ ಹೋರಾಟವನ್ನು ನಡೆಸಲಿದ್ದಾರೆ.

ಮಂಗಳವಾರ ಭಾರತದ ಸಂಪೂರ್ಣ ವೇಳಾ ಪಟ್ಟಿ
ಮಧ್ಯಾಹ್ನ 12.30ಕ್ಕೆ ಶೂಟಿಂಗ್, ಮಹಿಳೆಯರ ಅರ್ಹತಾ ಸುತ್ತು (ಟ್ರ್ಯಾಪ್)
ಮಧ್ಯಾಹ್ನ 12.30ಕ್ಕೆ ಶೂಟಿಂಗ್, ಪುರುಷರ ಅರ್ಹತಾ ಸುತ್ತು
ಮಧ್ಯಾಹ್ನ 1 ಗಂಟೆಗೆ ರೋಯಿಂಗ್, ಪುರುಷರ ಸ್ಕಲ್ ಕ್ವಾರ್ಟರ್ ಫೈನಲ್
ಮಧ್ಯಾಹ್ನ1 ಗಂಟೆಗೆ ಕುದುರೆ ಸವಾರಿ (Equestrian)
ಸಂಜೆ 4ಕ್ಕೆ ಹಾಕಿ, ಭಾರತ ವಿರುದ್ಧ ಐರ್ಲೆಂಡ್
ಸಂಜೆ 5.15ಕ್ಕೆ, ಆರ್ಚರಿ, ಮಹಿಳೆಯರ ಸಿಂಗಲ್ಸ್ ರೌಂಡ್ 64
ಸಂಜೆ 5.30ಕ್ಕೆ ಬ್ಯಾಡ್ಮಿಂಟನ್, ಪುರುಷರ ಡಬಲ್ಸ್,
ಸಂಜೆ 6.20ಕ್ಕೆ, ಬ್ಯಾಂಡ್ಮಿಂಟನ್, ಮಹಿಳೆಯರ ಡಬಲ್ಸ್
ಸಂಜೆ 7.15ಕ್ಕೆ, ಬಾಕ್ಸಿಂಗ್, ಪುರುಷರ 50 ಕೆಜಿ
ರಾತ್ರಿ 9.30ಕ್ಕೆ ಬಾಕ್ಸಿಂಗ್, ಮಹಿಳೆಯರ 57ಕೆಜಿ
ರಾತ್ರಿ 10.46ಕ್ಕೆ, ಆರ್ಚರಿ, ಪುರುಷರ ಪಂದ್ಯ
ರಾತ್ರಿ 1.6ಕ್ಕೆ ಬಾಕ್ಸಿಂಗ್, ಮಹಿಳೆಯರ 54 ಕೆಜಿ
ಉಳಿದ ಇಂಪಾರ್ಟೆಂಟ್ ಪಂದ್ಯಗಳು
ರಾತ್ರಿ 9.45ಕ್ಕೆ ಮಹಿಳೆಯರ ಜಿಮ್ನಾಸ್ಟಿಕ್ ಫೈನಲ್
ರಾತ್ರಿ 12.30ಕ್ಕೆ ಮಹಿಳೆಯರ 100 ಮೀಟರ್ ಬ್ಯಾಕ್‌ಸ್ಟ್ರೊಕ್ ಈಜು ಫೈನಲ್
ರಾತ್ರಿ 12.30ಕ್ಕೆ ಮಹಿಳೆಯರ 800 ಮೀಟರ್ ಫ್ರೀಸ್ಟೈಲ್ ಈಜು ಫೈನಲ್
ರಾತ್ರಿ 1.30ಕ್ಕೆ ಪುರುಷರ 4x200 ಮೀಟರ್ ಫ್ರೀಸ್ಟೈಲ್ ಈಜು ರಿಲೇ ಫೈನಲ್












Click it and Unblock the Notifications