Olympics 2024: ಬುಧವಾರ ಎಲ್ಲ ಕಣ್ಣು ಸಿಂಧು ಮೇಲೆ, ಭಾರತದ ವೇಳಾ ಪಟ್ಟಿಯ ವಿವರ
ಭಾರತದ ಕ್ರೀಡಾ ಪಟುಗಳು ಮಂಗಳವಾರ ಅಮೋಘ ಪ್ರದರ್ಶನ ನೀಡಿದ್ದಾರೆ. 10 ಮೀಟರ್ ಏರ್ ರೈಫಲ್ ಪಿಸ್ತೂಲ್ ವಿಭಾಗದಲ್ಲಿ ಮನು ಬಾಕರ್ ಹಾಗೂ ಸರಬ್‌ಜೋತ್ ಸಿಂಗ್ ಮಿಶ್ರ ತಂಡ ವಿಭಾಗದಲ್ಲಿ ಕಂಚಿನ ಪದಕ ಗೆದ್ದಿದ್ದಾರೆ. ಈ ಮೂಲಕ ಭಾರತದ ಪದಕ ಬೇಟೆ ಮುಂದುವರೆದಿದೆ.
ಬುಧವಾರವು ಭಾರತದ ಸ್ಟಾರ್ ಆಟಗಾರರು ಅಂಗಳ ಪ್ರವೇಶಿಸಲಿದ್ದು, ಭರವಸೆ ಮೂಡಿಸಿದ್ದಾರೆ. ಬ್ಯಾಡ್ಮಿಂಟನ್ ವಿಭಾಗದಲ್ಲಿ ಎರಡು ಬಾರಿ ಒಲಿಂಪಿಕ್ಸ್ ಪದಕ ವಿಜೇತೆ ಪಿವಿ ಸಿಂಧು ಇಂದು, ಮಹಿಳೆಯರ ಸಿಂಗಲ್ಸ್ ವಿಭಾಗದಲ್ಲಿ ಅದೃಷ್ಟ ಪರೀಕ್ಷೆಯನ್ನು ನಡೆಸಿದರೆ, ಪುರುಷರ ವಿಭಾಗದಲ್ಲಿ ಲಕ್ಷ್ಯ ಸೇನ್ ಅಖಾಡ ಪ್ರವೇಶಿಸಲಿದ್ದಾರೆ. ಭಾರತದ ಸ್ಟಾರ್ ಬಿಲ್ಲುಗಾರ್ತಿ ದೀಪಿಕಾ ಕುಮಾರಿ ಸಹ ಇಂದು ಅಖಾಡದಲ್ಲಿ ಕಾಣಿಸಿಕೊಳ್ಳಲಿದ್ದಾರೆ.

ಬುಧವಾರ ಭಾರತದ ಕ್ರೀಡಾಪಟುಗಳ ಪಂದ್ಯಗಳ ಸಮಯ
12.30 PM ಶೂಟಿಂಗ್ ಪುರುಷರ 50 ಮೀಟರ್ ರೈಫಲ್ ಅರ್ಹತಾ ಸುತ್ತು
12.30 PM ಶೂಟಿಂಗ್ ಮಹಿಳಯೆರ ಟ್ರ್ಯಾಪ್ ವಿಭಾಗದ ಅರ್ಹತೆ
12.50 PM ಬ್ಯಾಡ್ಮಿಂಟನ್, ಮಹಿಳೆಯರ ಸಿಂಗಲ್ಸ್
1.25 PM ರೋಯಿಂಗ್, ಪುರುಷರ ಸಿಂಗಲ್ಸ್,
1.40 PM ಬ್ಯಾಡ್ಮಿಂಟನ್, ಪುರುಷರ ಸಿಂಗಲ್ಸ್,
2.00 PM ಕುದುರೆ ಸವಾರಿ (Equestrian)
2.30 PM ಟೆಬಲ್ ಟೆನಿಸ್, ಮಹಿಳೆಯರ ಸಿಂಗಲ್ಸ್
3.50 PM ಬಾಕ್ಸಿಂಗ್, ಮಹಿಳೆಯರ 75 ಕೆ.ಜಿ
3.55 PM ಆರ್ಚರಿ ಮಹಿಳೆಯರ ಸಿಂಗಲ್ಸ್
7.00 PM ಶೂಟಿಂಗ್ ಮೆಡ್ಲಿ ಈವೆಂಟ್
8.30 PM ಟೆಬಲ್ ಟೆನಿಸ್, ಮಹಿಳೆಯರ ಸಿಂಗಲ್ಸ್
9.30 PM ಆರ್ಚರಿ, ಪುರುಷರ ಸಿಂಗಲ್ಸ್
11.00 PM ಬ್ಯಾಡ್ಮಿಂಟನ್, ಪುರುಷರ ಸಿಂಗಲ್ಸ್
12.45 AM ಬಾಕ್ಸಿಂಗ್, ಪುರುಷರ 71ಕೆಜಿ












Click it and Unblock the Notifications