ಮುಳ್ಳು ಮುಳ್ಳಿಂದಲೇ ತೆಗೆಯಬೇಕು... ಆಸ್ಟ್ರೇಲಿಯಾ ಆಲೌಟ್ & ವಿರಾಟ್ ಕೊಹ್ಲಿ ಪ್ಲಾನ್ ಸಕ್ಸಸ್! India VS Australia

ವಿರಾಟ್ ಕೊಹ್ಲಿ ವಿರುದ್ಧ ನಿಂತರೆ ಯಾರಿಗೇ ಆದರೂ ಶಾಕ್ ಸಿಗೋದು ಗ್ಯಾರಂಟಿ ಅನ್ನೋ ಮಾತು ಮತ್ತೆ ಪ್ರೂವ್ ಆಗಿದೆ. ಆಸ್ಟ್ರೇಲಿಯಾ ಆಟಗಾರರು ಕ್ರಿಕೆಟ್ ಆಡೋದು ಬಿಟ್ಟು ಮೈಂಡ್ ಗೇಮ್ ಆಡಲು ಶುರು ಮಾಡಿದ್ದರು. ಇದರ ಪರಿಣಾಮ ಭಾರತ & ಆಸ್ಟ್ರೇಲಿಯಾ ತಂಡದ ನಡುವೆ ನಡೆಯುತ್ತಿರುವ ಟೆಸ್ಟ್ ಸರಣಿ ಥೇಟ್ ಕುರುಕ್ಷೇತ್ರದ ರೀತಿ ಆಗಿತ್ತು. ಇದೀಗ ವಿರಾಟ್ ಕೊಹ್ಲಿ ಕೃಷ್ಣನ ಅವತಾರದಲ್ಲಿ ಆಸ್ಟ್ರೇಲಿಯಾ ಎಂಬ ಕೌರವರ ಸೇನೆ ಸರ್ವನಾಶ ಮಾಡಲು ಸಜ್ಜಾಗಿದ್ದಾರೆ!

ಬಾರ್ಡರ್ & ಗವಾಸ್ಕರ್ ಟ್ರೋಫಿಯ 5ನೇ ಟೆಸ್ಟ್ ಪಂದ್ಯದ 2ನೇ ದಿನದಾಟದಲ್ಲಿ ಆಸ್ಟ್ರೇಲಿಯಾ ತಂಡದ ದಾಂಡಿಗರು ತರಗೆಲೆ ರೀತಿ ಹಾರಿ ಹೋದರು. ಭಾರತದ ಬೌಲಿಂಗ್ ದಾಳಿ ಎದುರಿಸಲು ನಲುಗಿದ ಆಸಿಸ್ ದಾಂಡಿಗರು ಕಕ್ಕಾಬಿಕ್ಕಿ ಆಗೋಗಿದ್ದರು. ಮೊಹಮ್ಮದ್ ಸಿರಾಜ್, ಪ್ರಸಿದ್ ಕೃಷ್ಣ ತಲಾ 3 ವಿಕೆಟ್ ಪಡೆದು ಮಿಂಚಿದರು.

India And Australia 5th Test Match Creates Storm After Virat Kohli Plan Got Successed

ಜಸ್ಪ್ರಿತ್ ಬುಮ್ರಾ 2 ವಿಕೆಟ್ & ನಿತೀಶ್ ರೆಡ್ಡಿ 2 ವಿಕೆಟ್ ಉರುಳಿಸಿ ಭರ್ಜರಿಯಾಗಿ ಮಿಂಚಿದರು. ಈ ಮೂಲಕ ಭಾರತ ಕ್ರಿಕೆಟ್ ತಂಡ ಆಸ್ಟ್ರೇಲಿಯಾ ಪಡೆಯನ್ನು ಉರುಳಿಸಿ 181 ರನ್‌ಗೆ ಆಲೌಟ್ ಮಾಡಿ ಬಿಸಾಡಿದೆ. ಇದೆಲ್ಲದಕ್ಕಿಂತ ಮೇಲಾಗಿ ವಿರಾಟ್ ಕೊಹ್ಲಿ ಅವರ ಮಾಸ್ಟರ್ ಪ್ಲಾನ್ ಭರ್ಜರಿ ಸಕ್ಸಸ್ ಆಗಿದೆ!

4ನೇ ಟೆಸ್ಟ್ ಸೋಲಿನ ಸೇಡು ಕ್ಲಿಯರ್?

ಹೌದು, ಆಸ್ಟ್ರೇಲಿಯಾ ವಿರುದ್ಧ 4ನೇ ಟೆಸ್ಟ್ ಸೋಲಿನ ಸೇಡು ತೀರಿಸಿಕೊಳ್ಳಲು ಭಾರತ ತಂಡದ ಆಟಗಾರರು ಕಾದು ಕೂತಿದ್ದರು. ಆದರೆ ಅವರನ್ನು ಸರಿಯಾದ ದಾರಿಯಲ್ಲಿ ಕರೆದುಕೊಂಡು ಹೋಗಲು ಒಬ್ಬ ನಾಯಕ ಬೇಕಿತ್ತು. ಅದು ಈಗ ವಿರಾಟ್ ಕೊಹ್ಲಿ ಮೂಲಕ ಸಂಪೂರ್ಣವಾಗಿದೆ ಎನ್ನಬಹುದು.

ಹೀಗಾಗಿ ಭಾರತ ತನ್ನ 1ನೇ ಇನ್ನಿಂಗ್ಸ್‌ನಲ್ಲಿ ಕೇವಲ 185 ರನ್ ಗಳಿಸಿದ್ದರೂ, ಆಸ್ಟ್ರೇಲಿಯಾ ತಂಡವನ್ನು 181 ರನ್‌ಗೆ ಆಲೌಟ್ ಮಾಡಿದೆ. ಈ ಮೂಲಕ ಆಸ್ಟ್ರೇಲಿಯಾಗೆ ಭೀಕರ ಆಘಾತ ಎದುರಾಗಿದ್ದು, ಕೊಹ್ಲಿ ಬಾಯ್ಸ್ ಮಿಂಚಿದ್ದಾರೆ. ಈ ಪಂದ್ಯವನ್ನು ಆಸಿಸ್ ಪಡೆ ಸೋಲುವ ಭೀತಿಯಲ್ಲಿ ಮುಳುಗಿದೆ.

ಅಹಂಕಾರಿ ಆಸಿಸ್ ಪಡೆಗೆ ಪಾಠ!

ಒಟ್ನಲ್ಲಿ ವಿರಾಟ್ ಕೊಹ್ಲಿ ಅಬ್ಬರ ಕಂಡು ಆಸ್ಟ್ರೆಲಿಯಾ ತಂಡ ಸೈಲೆಂಟ್ ಆಗಿದೆ. ಭಾರತದ ಬೌಲಿಂಗ್ ಪಡೆ ತನ್ನ ಶಕ್ತಿ ಏನು ಅನ್ನೋದನ್ನ ಅಹಂಕಾರಿ ಆಸಿಸ್ ಪಡೆಗೆ ತೋರಿಸಿದ್ದು, ಆ ಮೂಲಕ ಮತ್ತೊಮ್ಮೆ ಭಾರತ ತಂಡದ ಸೌಂಡ್ ಇನ್ನಷ್ಟು ಹೆಚ್ಚಾಗಿದೆ. ಈ ಮ್ಯಾಚ್ ಗೆದ್ದು ಹೊಸ ಇತಿಹಾಸ ನಿರ್ಮಿಸಲು ಭಾರತೀಯರು ಸಿದ್ಧರಾಗಿದ್ದಾರೆ. ಹಾಗೇ ಆಸ್ಟ್ರೇಲಿಯಾ ಟೀಂ ನಡೆದುಕೊಂಡ ರೀತಿಗೆ ತಕ್ಕ ಪಾಠ ಕಲಿಸಿದಂತೆ ಆಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+