Ind vs WI: ರಿಷಬ್ ಪಂತ್ ಬ್ಯಾಟ್‌ ಬಳಸಿ ಅರ್ಧಶತಕ ಚಚ್ಚಿದ ಇಶಾನ್ ಕಿಶನ್

ಭಾರತ ವೆಸ್ಟ್ ಇಂಡೀಸ್ ನಡುವಿನ ಟೆಸ್ಟ್ ಸರಣಿಯ ಅಂತಿಮ ಪಂದ್ಯದಲ್ಲಿ ಭಾರತ ಸ್ಪಷ್ಟ ಮೇಲುಗೈ ಸಾಧಿಸಿದೆ. ಮೊದಲನೇ ಇನ್ನಿಂಗ್ಸ್‌ನಲ್ಲಿ 438 ರನ್ ಗಳಿಸಿದ ಭಾರತ ನಂತರ ವೆಸ್ಟ್ ಇಂಡೀಸ್ ತಂಡವನ್ನು 255 ರನ್‌ಗಳಿಗೆ ಆಲೌಟ್ ಮಾಡಿತು. ಎರಡನೇ ಇನ್ನಿಂಗ್ಸ್ ಆರಂಭಿಸಿದ ಭಾರತ 2 ವಿಕೆಟ್ ಕಳೆದುಕೊಂಡು 181 ರನ್ ಗಳಿಸಿ ಡಿಕ್ಲೇರ್ ಮಾಡಿಕೊಂಡಿತು.

ಎರಡನೇ ಇನ್ನಿಂಗ್ಸ್‌ನಲ್ಲಿ ಭಾರತ ಅಮೋಘ ಬ್ಯಾಟಿಂಗ್ ಪ್ರದರ್ಶನ ನೀಡಿತು. ಯಶಸ್ವಿ ಜೈಸ್ವಾಲ್ 30 ಎಸೆತಗಳಲ್ಲಿ 38 ರನ್ ಗಳಿಸಿದರೆ, ನಾಯಕ ರೋಹಿತ್ ಶರ್ಮಾ 44 ಎಸೆತಗಳಲ್ಲಿ 57 ರನ್ ಗಳಿಸಿದರು, ಶುಭಮನ್ ಗಿಲ್ 37 ಎಸೆತಗಳಲ್ಲಿ 29 ರನ್ ಗಳಿಸಿದರು, ವಿಕೆಟ್ ಕೀಪರ್ ಬ್ಯಾಟರ್ ಇಶಾನ್ ಕಿಶನ್ 34 ಎಸೆತಗಳಲ್ಲಿ 4 ಬೌಂಡರಿ 2 ಸಿಕ್ಸರ್ ಸಹಿತ ಅಜೇಯ 52 ರನ್ ಗಳಿಸಿದರು.

 Ind vs WI : Ishan Kishan Scores Maiden Test Fifty Using Rishabh Pants Bat

ವಿರಾಟ್ ಕೊಹ್ಲಿ ಬದಲಾಗಿ ಬ್ಯಾಟಿಂಗ್‌ನಲ್ಲಿ ಬಡ್ತಿ ಪಡೆದ ವಿಕೆಟ್ ಕೀಪರ್ ಬ್ಯಾಟರ್ ಸ್ಫೋಟಕ ಬ್ಯಾಟಿಂಗ್ ಪ್ರದರ್ಶನ ನೀಡಿದರು. ಚೊಚ್ಚಲ ಅರ್ಧಶತಕ ಗಳಿಸಿದ ಅವರು, ಹಲವು ದಾಖಲೆಗಳನ್ನು ಬರೆದರು.

ರಿಷಬ್ ಪಂತ್ ಬ್ಯಾಟ್: ಇಶಾನ್ ಕಿಶನ್ ಅಬ್ಬರ

ಇಶಾನ್ ಕಿಶನ್ ತಮ್ಮ ಸ್ಫೋಟಕ ಇನ್ನಿಂಗ್ಸ್ ಮೂಲಕ ದಾಖಲೆ ಬರೆದರು. ಈ ದಾಖಲೆ ಬರೆಯಲು ಅವರು ಬಳಸಿದ್ದು ರಿಷಬ್ ಪಂತ್‌ ಅವರ ಬ್ಯಾಟ್. ಇಶಾನ್ ಕಿಶನ್ ತಮ್ಮ ಬ್ಯಾಟಿಂಗ್ ಸಮಯದಲ್ಲಿ ಪಂತ್ ಅವರನ್ನು ನೆನಪಿಸುವಂತೆ ಆಡಿದ್ದು ಕೂಡ ವಿಶೇಷ. ಹಲವು ಬಾರಿ ರಿಷಬ್ ಪಂತ್ ಒಂದು ಕೈನಲ್ಲಿ ಸಿಕ್ಸರ್ ಸಿಡಿಸಿದರಂತೆ ಇಶಾನ್ ಕಿಶನ್ ಕೂಡ ಒಂದು ಕೈನಲ್ಲಿ ಸಿಕ್ಸರ್ ಸಿಡಿಸಿ ಗಮನ ಸೆಳೆದರು.

ಇಶಾನ್ ಕಿಶನ್‌ ಬಳಸಿದ ಬ್ಯಾಟ್‌ನ ಚಿತ್ರದಲ್ಲಿ ಲಾಂಛನದ ಕೆಳಗೆ ಅವರ ಬ್ಯಾಟ್‌ನಲ್ಲಿ ಬರೆಯಲಾದ ಆರ್ ಪಿ 17 ಎನ್ನುವ ಬರಹವಿತ್ತು. ಪಂತ್ ಮತ್ತು ಕಿಶನ್ ಬಹಳ ಆಪ್ತ ಸ್ನೇಹಿತರಾಗಿದ್ದಾರೆ. ಅಂಡರ್ 19 ದಿನಗಳಿಂದ ಇಬ್ಬರೂ ತಂಡಕ್ಕಾಗಿ ಒಟ್ಟಿಗೆ ಆಡಿದ್ದಾರೆ. ಭಾರತ ವೆಸ್ಟ್ ಇಂಡೀಸ್ ಟೆಸ್ಟ್ ಸರಣಿಗೆ ಮುನ್ನ ಕಿಶನ್ ಪಂತ್ ಅವರಿಂದ ಸಲಹೆ ಕೂಡ ಪಡೆದುಕೊಂಡಿದ್ದರು.

"ಈ ಮೊದಲು ನಾನು ಎನ್‌ಸಿಎಯಲ್ಲಿದ್ದೆ. ಪಂತ್ ಕೂಡ ಇದ್ದರು. ನಾನು ಹೇಗೆ ಆಡುತ್ತೇನೆ ಎಂದು ಅವನಿಗೆ ತಿಳಿದಿದೆ. ನಾವು ಅಂಡರ್ 19 ಆಡುವಾಗಿನಿಂದ ಪರಸ್ಪರ ಪರಿಚಿತರು. ರಿಷಬ್ ಪಂತ್ ನನಗೆ ಅಮೂಲ್ಯ ಸಲಹೆ ನೀಡಿದರು" ಎಂದು ದಿನದಾಟ ಮುಗಿದ ನಂತರ ಹೇಳಿದರು.

ಗೆಲುವಿನ ಸನಿಹದಲ್ಲಿ ಭಾರತ

ಎರಡನೇ ಇನ್ನಿಂಗ್ಸ್‌ನಲ್ಲಿ 181 ರನ್ ಗಳಿಸಿದ ಭಾರತ ಇನ್ನಿಂಗ್ಸ್ ಡಿಕ್ಲೇರ್ ಮಾಡಿಕೊಂಡು 365 ರನ್‌ಗಳ ಮುನ್ನಡೆ ಪಡೆದುಕೊಂಡಿತು. ನಂತರ ಎರಡನೇ ಇನ್ನಿಂಗ್ಸ್ ಆರಂಭಿಸಿದ ವೆಸ್ಟ್ ಇಂಡೀಸ್ 4ನೇ ದಿನದಾಟದ ಅಂತ್ಯಕ್ಕೆ 76 ರನ್ ಗಳಿಸಿ ಎರಡು ವಿಕೆಟ್ ಕಳೆದುಕೊಂಡಿದೆ. ಕೊನೆಯ ದಿನದಲ್ಲಿ ವೆಸ್ಟ್ ಇಂಡೀಸ್ ಗೆಲುವು 289 ರನ್ ಬೇಕಾಗಿದೆ. ಈಗಾಗಲೇ ಮೊದಲ ಟೆಸ್ಟ್ ಗೆದ್ದಿರುವ ಭಾರತ, ಎರಡನೇ ಪಂದ್ಯವನ್ನು ಗೆದ್ದು ಸರಣಿ ವೈಟ್‌ವಾಶ್ ಮಾಡುವ ಉತ್ಸಾಹದಲ್ಲಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+