ಪಾಕ್‌ ವಿರುದ್ಧದ ಪಂದ್ಯಕ್ಕೂ ಮುನ್ನ 'ಡ್ರಾಪ್‌ ಇನ್' ಪಿಚ್ ಬಗ್ಗೆ ರೋಹಿತ್ ಶರ್ಮಾ ಹೇಳಿದ್ದೇನು?

ಈಡೀ ವಿಶ್ವದ ಚಿತ್ತ ಕದ್ದಿರುವ ಭಾರತ ಹಾಗೂ ಪಾಕಿಸ್ತಾನ ಪಂದ್ಯಕ್ಕೆ ಕ್ಷಣಗಣನೆ ಆರಂಭವಾಗಿದೆ. ಈ ಪಂದ್ಯದಲ್ಲಿ ಗೆಲುವು ಸಾಧಿಸಿ ಮುಂದಿನ ಹಂತಕ್ಕೆ ಹತ್ತಿರವಾಗುವ ಕನಸು ಟೀಮ್ ಇಂಡಿಯಾದ್ದಾಗಿದೆ. ಈಗಾಗಲೇ ಮೊದಲ ಪಂದ್ಯದಲ್ಲಿ ಸೋಲು ಕಂಡಿರುವ ಪಾಕ್‌, ಈ ಪಂದ್ಯದಲ್ಲಿ ಗೆಲ್ಲುವ ಅನಿವಾರ್ಯತೆ ಇದೆ. ಈ ಬಾರಿ ವಿಶ್ವಕಪ್‌ನ್ನು ವೆಸ್ಟ್‌ ಇಂಡೀಸ್ ಹಾಗೂ ಅಮೆರಿಕದಲ್ಲಿ ಆಯೋಜಿಸಲಾಗುತ್ತಿದೆ.

ನ್ಯೂಯಾರ್ಕ್ ಪಿಚ್ ಸಾಕಷ್ಟು ಟೀಕೆಗಳನ್ನು ಎದುರಿಸಿತ್ತು. ಇಲ್ಲಿ ಬ್ಯಾಟ್ಸ್‌ಮನ್‌ಗಳಿಗೆ ರನ್ ಗಳಿಸುವುದು ತುಂಬಾ ಕಷ್ಟಕರವಾಗುತ್ತಿದೆ. ಈ ನಡುವೆ ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ ಕೂಡ ಪಿಚ್ ಬಗ್ಗೆ ದೊಡ್ಡ ಹೇಳಿಕೆ ನೀಡಿದ್ದಾರೆ.

IND vs PAK Rohit Sharma Criticizes New York s Drop-In Pitch Ahead of Marquee Clash

ಭಾನುವಾರ ಟೀಮ್ ಇಂಡಿಯಾ ಹಾಗೂ ಪಾಕಿಸ್ತಾನ ತಂಡಗಳು ಟಿ20 ವಿಶ್ವಕಪ್‌ನ ಲೀಗ್‌ ಹಂತದಲ್ಲಿ ಕಾದಾಟ ನಡೆಸಲಿವೆ. ಇದಕ್ಕೂ ಮೊದಲು ರೋಹಿತ್ ಶರ್ಮಾ ಪತ್ರಿಕಾಗೋಷ್ಠಿಯಲ್ಲಿ ಹಲವು ಪ್ರಶ್ನೆಗಳಿಗೆ ಉತ್ತರ ನೀಡಿದರು. ಅದರಲ್ಲೂ ಈ ಪಿಚ್‌ ಬಗ್ಗೆ ರೋಹಿತ್ ಹೇಳಿದನ್ನು ಕೇಳಿದರೆ ಭಯವಾಗುತ್ತದೆ.

ರೋಹಿತ್ ಶರ್ಮಾ ಅವರು ಪಿಚ್ ಕ್ಯುರೇಟರ್ ಜೊತೆ ಮಾತನಾಡಿದ್ದು, ಪಂದ್ಯದ ದಿನದಂದು ಡ್ರಾಪ್ ಇನ್ ಪಿಚ್ ಹೇಗೆ ವರ್ತಿಸುತ್ತದೆ ಎಂದು ಸ್ವತಃ ಅವರಿಗೆ ತಿಳಿದಿಲ್ಲ. ನಾವು ಕ್ಯುರೇಟರ್‌ಗಳೊಂದಿಗೆ ಮಾತನಾಡಿದ್ದೇವೆ ಮತ್ತು ಪಿಚ್ ಹೇಗಿರುತ್ತದೆ ಎಂದು ಅವರೇ ಗೊಂದಲಕ್ಕೊಳಗಾಗಿದ್ದಾರೆ. ಡ್ರಾಪ್-ಇನ್ ಪಿಚ್‌ಗಳ ಬಗ್ಗೆ ನಮಗೆ ಹೆಚ್ಚು ಪರಿಚಯವಿಲ್ಲದ ದೇಶದಿಂದ ನಾವು ಬಂದಿರುವುದರಿಂದ ನಮ್ಮ ಪರಿಸ್ಥಿತಿ ಹೇಗಿರುತ್ತದೆ ಎಂದು ಊಹಿಸಿ ಎಂದು ರೋಹಿತ್ ತಿಳಿಸಿದ್ದಾರೆ.

ಡ್ರಾಪ್‌ ಇನ್ ಪಿಚ್‌ ಎಂದರೆನು?

ಇದರ ಹೆಸರೆ ಸೂಚಿಸುವಂತೆ ಈ ಪಿಚ್‌ನ್ನು ಒಂದು ಸ್ಥಳದಲ್ಲಿ ನಿರ್ಮಿಸಿ, ಇನ್ನೊಂದು ಸ್ಥಳಕ್ಕೆ ಎತ್ತಿ ತಂದು ಇಡಲಾಗಿದೆ. ಟಿ20 ವಿಶ್ವಕಪ್‌ ಅಂತ್ಯದ ಬಳಿಕ ಈ ಪಿಚ್‌ನ್ನು ಮತ್ತೊಂದು ಸ್ಥಳಕ್ಕೆ ಸ್ಥಳಾಂತರಿಸಬಹುದು. ನ್ಯೂಯಾರ್ಕ್ ನ ನಸ್ಸೌ ಸ್ಟೇಡಿಯಂ ಬಗ್ಗೆ ಹೇಳುವುದಾದರೆ ಈ ಮೈದಾನದ ಪಿಚ್ ಅನ್ನು ಆಸ್ಟ್ರೇಲಿಯಾದ ಅಡಿಲೇಡ್ ನಲ್ಲಿ ಸಿದ್ಧಪಡಿಸಲಾಗಿತ್ತು. ಈ ಪಿಚ್‌ಗಳನ್ನು ತಯಾರಿಸಲು ಯಾವುದೇ ಕೃತಕ ವಸ್ತುಗಳನ್ನು ಬಳಸಿಲ್ಲ.

ವಿವಾದ ಏಕೆ?

USA ನಲ್ಲಿ ನಡೆದ T20 ವಿಶ್ವಕಪ್ 2024 ಪಂದ್ಯಗಳು ವಿವಾದಗಳಿಂದ ಸುತ್ತುವರಿದಿವೆ. ನ್ಯೂಯಾರ್ಕ್ ನ ನಸ್ಸೌ ಸ್ಟೇಡಿಯಂ ಅಭಿಮಾನಿಗಳಿಗೆ ಮಾತ್ರವಲ್ಲದೆ ಪರಿಣತರಿಗೂ ನಿರಾಸೆ ಮೂಡಿಸಿದೆ. ನಸ್ಸೌ ಕ್ರೀಡಾಂಗಣದಲ್ಲಿ ಚೆಂಡು ಮೂಮೆಂಟ್‌ನಿಂದ ಕೂಡಿದೆ. ಆದ್ದರಿಂದ ಇಲ್ಲಿಯವರೆಗೆ ಮೊದಲು ಆಡುವ ತಂಡವು ಈ ಮೈದಾನದಲ್ಲಿ 100 ರನ್‌ಗಳ ಗಡಿಯನ್ನು ಮುಟ್ಟಿಲ್ಲ. ಹೊಡಿ ಬಡಿ ಆಟದಲ್ಲಿ ನೂರು ರನ್‌ಗಳ ಬಾರದೇ ಇದ್ದಾಗ ಸಾಮಾನ್ಯವಾಗಿ ಟೀಕೆಗಳು ಕೇಳಿ ಬರುತ್ತವೆ.

ಐಸಿಸಿ ಸ್ಪಷ್ಟನೆ

ರೋಹಿತ್ ಶರ್ಮಾ ಹೇಳಿಕೆಗೂ ಮುನ್ನ ಐಸಿಸಿ ಕೂಡ ಪಿಚ್ ಬಗ್ಗೆ ಸ್ಪಷ್ಟನೆ ನೀಡಿತ್ತು. ಈ ದೊಡ್ಡ ಪಂದ್ಯಕ್ಕೂ ಮುನ್ನ ಐಸಿಸಿ ಹೇಳಿಕೆ ನೀಡಿದ್ದು, ಈ ಕ್ರೀಡಾಂಗಣದ ಪಿಚ್ ನಾವೆಲ್ಲರೂ ಬಯಸಿದ ರೀತಿಯಲ್ಲಿ ವರ್ತಿಸುತ್ತಿಲ್ಲ ಎಂದು ನಾವು ನಂಬುತ್ತೇವೆ ಎಂದು ಹೇಳಿದೆ. ಭಾರತ-ಪಾಕಿಸ್ತಾನ ಪಂದ್ಯದ ವೇಳೆ ಪಿಚ್ ನಲ್ಲಿ ಬದಲಾವಣೆ ಆಗಬಹುದು ಎಂದು ಭಾವಿಸಬಹುದು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+