Sarfaraz Khan: ಸರ್ಫರಾಜ್ ರನೌಟ್‌ ಆಗುತ್ತಿದ್ದಂತೆ ಉಗ್ರರೂಪ ತಾಳಿದ ರೋಹಿತ್ ಶರ್ಮಾ ಮಾಡಿದ್ದೇನು?

ರಾಜ್‌ಕೋಟ್‌ನಲ್ಲಿ ನಡೆಯುತ್ತಿರುವ ಇಂಗ್ಲೆಂಡ್ ವಿರುದ್ಧದ ಟೆಸ್ಟ್‌ ಪಂದ್ಯದಲ್ಲಿ ಮೊದಲ ದಿನ ಭಾರತ ತಂಡ ಮೇಲುಗೈ ಸಾಧಿಸಿದೆ. ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಭಾರತ ಆರಂಭದಲ್ಲೇ ಆಘಾತ ಅನುಭವಿಸಿತು. 33 ರನ್‌ ಗಳಿಸುವಷ್ಟರಲ್ಲಿ 3 ವಿಕೆಟ್ ಕಳೆದುಕೊಂಡ ಭಾರತ ಕಡಿಮೆ ಮೊತ್ತಕ್ಕೆ ಆಲೌಟ್ ಆಗುವ ಭೀತಿಯಲ್ಲಿತ್ತು.

ನಾಯಕ ರೋಹಿತ್ ಶರ್ಮಾ ಮತ್ತು ಬ್ಯಾಟಿಂಗ್‌ನಲ್ಲಿ ಬಡ್ತಿ ಪಡೆದ ರವೀಂದ್ರ ಜಡೇಜಾ ಭಾರತಕ್ಕೆ ಆಸರೆಯಾದರು. ಈ ಜೋಡಿ 204 ರನ್‌ಗಳ ಜೊತೆಯಾಟದ ಮೂಲಕ ನೆರವಾದರು. ರೋಹಿತ್ ಶರ್ಮಾ 196 ಎಸೆತಗಳಲ್ಲಿ 14 ಬೌಂಡರಿ 3 ಸಿಕ್ಸರ್ ಸಹಿತ 131 ರನ್ ಗಳಿಸಿ ಮಿಂಚಿದರು.

 Ind vs Eng: Rohit Sharma Expresses Frustration by Throwing Cap as Sarfaraz Khan Faces Run Out

ಮತ್ತೊಂದು ಕಡೆ ರವೀಂದ್ರ ಜಡೇಜಾ ಕೂಡ ಅತ್ಯುತ್ತಮ ಬ್ಯಾಟಿಂಗ್ ನಡೆಸಿದರು. ರೋಹಿತ್ ಶರ್ಮಾ ಔಟಾದ ಬಳಿಕ ಕ್ರೀಸ್‌ಗೆ ಬಂದ ಸರ್ಫರಾಜ್‌ ಖಾನ್ ಮೊದಲ ಪಂದ್ಯದಲ್ಲೇ ಅತ್ಯುತ್ತಮ ಬ್ಯಾಟಿಂಗ್ ಪ್ರದರ್ಶನ ನೀಡಿದರು.

ದಾಖಲೆಯ ಅರ್ಧಶತಕ ಸಿಡಿಸಿದ ಸರ್ಫರಾಜ್

ಸಾಕಷ್ಟು ವರ್ಷಗಳ ಕಾಯುವಿಕೆ ನಂತರ ಭಾರತ ತಂಡದಲ್ಲಿ ಆಡುವ ಅವಕಾಶ ಪಡೆದ ಸರ್ಫರಾಜ್ ಖಾನ್ ಮೊದಲ ಅಂತಾರಾಷ್ಟ್ರೀಯ ಪಂದ್ಯದಲ್ಲೇ ತಾನೆಂತಹ ಪ್ರತಿಭೆ ಎನ್ನುವುದನ್ನು ಸಾಬೀತುಪಡಿಸಿದರು.

ಇಂಗ್ಲೆಂಡ್‌ನ ಬೌಲಿಂಗ್ ಪಡೆಯನ್ನು ನಿರ್ಭಯವಾಗಿ ಎದುರಿಸಿದ ಸರ್ಫರಾಜ್ ಖಾನ್, ಬಾಜ್‌ಬಾಲ್‌ ಬ್ಯಾಟಿಂಗ್ ಮೂಲಕ ಉತ್ತರ ನೀಡಿದರು. ಕೇವಲ 48 ಎಸೆತಗಳಲ್ಲಿ ತಮ್ಮ ಅರ್ಧಶತಕ ಪೂರೈಸುವ ಮೂಲಕ ಪದಾರ್ಪಣ ಪಂದ್ಯದಲ್ಲಿ ವೇಗದ ಅರ್ಧಶತಕ ಸಿಡಿಸಿದ ಭಾರತೀಯ ಬ್ಯಾಟರ್ ಎನ್ನುವ ದಾಖಲೆ ಬರೆದರು.

66 ಎಸೆತಗಳಲ್ಲಿ 62 ರನ್ ಗಳಿಸಿ ಮೊದಲ ಶತಕ ಗಳಿಸುವ ವಿಶ್ವಾಸದಲ್ಲಿದ್ದ ಸರ್ಫರಾಜ್ ಖಾನ್ ದುರದೃಷ್ಟವಶಾತ್‌ ರನೌಟ್‌ಗೆ ಬಲಿಯಾದರು. ದಿನದ 82ನೇ ಓವರ್‌ನಲ್ಲಿ 99 ರನ್ ಗಳಿಸಿ ಬ್ಯಾಟಿಂಗ್ ಮಾಡುತ್ತಿದ್ದ ಜಡೇಜಾ ಜೇಮ್ಸ್ ಆಂಡರ್ಸನ್ ಎಸೆತದಲ್ಲಿ ಒಂದು ರನ್ ಕದಿಯಲು ಪ್ರಯತ್ನಿಸುತ್ತಿದ್ದಾಗ ಈ ಘಟನೆ ನಡೆಯಿತು.

ಜಡೇಜಾ ಚೆಂಡನ್ನು ಮಿಡ್-ಆನ್‌ಗೆ ತಳ್ಳಿದ ಕೂಡಲೇ, ಸರ್ಫರಾಜ್ ಜಡೇಜಾ ಅವರ ಕರೆಗೆ ತಕ್ಷಣ ಪ್ರತಿಕ್ರಿಯಿಸಿದರು ಮತ್ತು ಜಡೇಜಾಗೆ ಶತಕ ಗಳಿಸಲು ಸಹಾಯ ಮಾಡಲು ಹೊರಟರು. ರವೀಂದ್ರ ಜಡೇಜಾ ರನ್ ಓಡಲು ಆರಂಭಿಸಿ ಅರ್ಧಕ್ಕೆ ನಿಲ್ಲಿಸಿದರು, ಮತ್ತೊಂದು ತುದಿಯಲ್ಲಿ ರನ್ ಓಡಲು ಯತ್ನಿಸಿದ ಸರ್ಫರಾಜ್ ಖಾನ್‌ರನ್ನು ಮಾರ್ಕ್ ವುಡ್ ಅದ್ಭುತ ಥ್ರೋ ಮೂಲಕ ರನೌಟ್ ಮಾಡಿದರು.

ರೋಹಿತ್ ಶರ್ಮಾ ಕೋಪ

ಸರ್ಫರಾಜ್ ಖಾನ್ ರನೌಟ್ ಆಗುತ್ತಿದ್ದಂತೆ ನಾಯಕ ರೋಹಿತ್ ಶರ್ಮಾ ಕೋಪಗೊಂಡರು. ಸರ್ಫರಾಜ್ ರನೌಟ್ ಆದ ಬಳಿಕ ಸಿಟ್ಟಾಗಿ ತಮ್ಮ ಕ್ಯಾಪ್‌ ಅನ್ನು ಎಸೆದು ಹತಾಶೆ ವ್ಯಕ್ತಪಡಿಸಿದರು.

ನಿರಾಶೆಗೊಂಡ ನಾಯಕ ರೋಹಿತ್ ಶರ್ಮಾ ಡ್ರೆಸ್ಸಿಂಗ್ ಕೋಣೆಯಲ್ಲಿ ಕೋಪದಿಂದ ತಮ್ಮ ಕ್ಯಾಪ್ ಅನ್ನು ನೆಲದ ಮೇಲೆ ಎಸೆದ ವಿಡಿಯೋ ವ್ಯಾಪಕ ವೈರಲ್ ಆಗಿದೆ. ಮುಂದಿನ ಎಸೆತದಲ್ಲಿ, ಜಡೇಜಾ ಸುಲಭವಾದ ಸಿಂಗಲ್ ಅನ್ನು ತೆಗೆದುಕೊಂಡರು ಮತ್ತು ಅವರ ನಾಲ್ಕನೇ ಟೆಸ್ಟ್ ಶತಕ ಪೂರೈಸಿದರು. ಶತಕ ಗಳಿಸಿದರೂ ಅವರು ಹೆಚ್ಚಿನ ಸಂಭ್ರಮಾಚರಣೆಗೆ ಮುಂದಾಗಲಿಲ್ಲ.

ಸರ್ಫರಾಜ್ ಡ್ರೆಸ್ಸಿಂಗ್ ರೂಮ್‌ನಲ್ಲಿ ರನ್ ಔಟ್ ಬಗ್ಗೆ ಅಸಮಾಧಾನಗೊಂಡಿರುವುದು ಕಂಡುಬಂದಿತು. ಸರ್ಫರಾಜ್ ರನೌಟ್ ಆಗಿದ್ದರ ಬಗ್ಗೆ ಭಾರತೀಯ ಕ್ರಿಕೆಟ್ ಅಭಿಮಾನಿಗಳು ಕೂಡ ಬೇಸರಗೊಂಡರು. ಆದರೂ ಅವರ ಮೊದಲ ಪಂದ್ಯದಲ್ಲೇ ಅತ್ಯುತ್ತಮ ಪ್ರದರ್ಶನ ನೀಡಿರುವುದು ಕ್ರಿಕೆಟ್ ಪ್ರೇಮಿಗಳ ಮನಗೆದ್ದಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+