Ind vs Eng: ಭಾರತಕ್ಕೆ 'ಹಾರ್ಟ್ಲಿ' ಆಘಾತ! ಇಂಗ್ಲೆಂಡ್ ವಿರುದ್ಧ ಸೋತು ಹಲವು ಕೆಟ್ಟ ದಾಖಲೆ ಬರೆದ ಭಾರತ

ಹೈದರಾಬಾದ್‌ನಲ್ಲಿ ನಡೆದ ಇಂಗ್ಲೆಂಡ್‌ ವಿರುದ್ಧದ ಟೆಸ್ಟ್ ಸರಣಿಯ ಮೊದಲ ಪಂದ್ಯದಲ್ಲಿ ಭಾರತ ಸೋಲಿನ ಆಘಾತ ಎದುರಾಗಿದೆ. ಗೆಲ್ಲುವ ಅವಕಾಶ ಇದ್ದರೂ, ರೋಹಿತ್ ಪಡೆ ತಾನೇ ಮಾಡಿದ ಹಲವು ತಪ್ಪುಗಳಿಗೆ ಬೆಲೆ ತೆತ್ತಿದೆ.

ಮೊದಲ ಇನ್ನಿಂಗ್ಸ್‌ನಲ್ಲಿ ಇಂಗ್ಲೆಂಡ್ ತಂಡವನ್ನು 246 ರನ್‌ಗಳಿಗೆ ಕಟ್ಟಿಹಾಕಿದ್ದ ಭಾರತ ಬಳಿಕ 436 ರನ್‌ಗಳನ್ನು ಗಳಿಸುವ ಮೂಲಕ 190 ರನ್‌ಗಳ ಇನ್ನಿಂಗ್ಸ್ ಮುನ್ನಡೆ ಪಡೆದುಕೊಂಡಿತ್ತು. ಆದರೆ ಎರಡನೇ ಇನ್ನಿಂಗ್ಸ್‌ನಲ್ಲಿ ತಿರುಗಿಬಿದ್ದ ಇಂಗ್ಲೆಂಡ್ 420 ರನ್ ಗಳಿಸಿ ಭಾರತಕ್ಕೆ ಸವಾಲೊಡ್ಡಿತ್ತು. ಎರಡನೇ ಇನ್ನಿಂಗ್ಸ್‌ನಲ್ಲಿ ಭಾರತ ತಂಡಕ್ಕೆ 234 ರನ್ ಬೇಕಿತ್ತಾದರೂ, ಟಾಮ್ ಹಾರ್ಟ್ಲಿ ಅವರ ಮಾರಕ ಬೌಲಿಂಗ್ ಎದುರು 206 ರನ್‌ಗಳಿಗೆ ಆಲೌಟ್ ಆಗುವ ಮೂಲಕ 28 ರನ್‌ಗಳ ಸೋಲನುಭವಿಸಿತು.

 Ind vs Eng: Ollie Pope and Hartley Star as England Takes 1-0 Lead, Defeating India by 28 Runs

ಎರಡನೇ ಇನ್ನಿಂಗ್ಸ್‌ನಲ್ಲಿ ಒಲೀ ಪೋಪ್ 196 ರನ್ ಗಳಿಸುವ ಮೂಲಕ ತಮ್ಮ ಜೀವನ ಶ್ರೇಷ್ಠ ಇನ್ನಿಂಗ್ಸ್ ಆಡಿದರು. ಭಾರತದ ಬೌಲಿಂಗ್ ದಾಳಿಯನ್ನು ಸಮರ್ಥವಾಗಿ ಎದುರಿಸಿದ ಅವರು, ಸ್ಪಿನ್, ವೇಗದ ದಾಳಿ ವಿರುದ್ಧ ಸುಲಭವಾಗಿ ರನ್ ಕಲೆಹಾಕಿದರು.

ಟಾಮ್‌ ಹಾರ್ಟ್ಲಿ 26.2 ಓವರ್ ಗಳಲ್ಲಿ 62 ರನ್ ಬಿಟ್ಟುಕೊಟ್ಟು 7 ವಿಕೆಟ್ ಪಡೆಯುವ ಮೂಲಕ ಭಾರತ ತಂಡದ ಗೆಲುವನ್ನು ಕಿತ್ತುಕೊಂಡರು. ಜಾಕ್‌ ಲೀಚ್ ಮತ್ತು ಜೋ ರೂಟ್‌ ತಲಾ ಒಂದು ವಿಕೆಟ್ ಪಡೆದರು.

ಹಲವು ಕೆಟ್ಟ ದಾಖಲೆ ಬರೆದ ಭಾರತ

ಮೊದಲ ಇನ್ನಿಂಗ್ಸ್‌ನಲ್ಲಿ 100ಕ್ಕೂ ಅಧಿಕ ರನ್ ಮುನ್ನಡೆ ಪಡೆದುಕೊಂಡ ಬಳಿಕ ಇದೇ ಮೊದಲ ಬಾರಿಗೆ ಭಾರತ ಟೆಸ್ಟ್ ಪಂದ್ಯವನ್ನು ಸೋತಿದೆ. 12 ವರ್ಷಗಳಲ್ಲಿ ಭಾರತ ಇದೇ ಮೊದಲ ಬಾರಿಗೆ ಮೂರು ಸತತ ಟೆಸ್ಟ್ ಪಂದ್ಯಗಳಲ್ಲಿ ಗೆಲುವು ಸಾಧಿಸುವಲ್ಲಿ ವಿಫಲವಾಗಿದೆ.

ಗೆಲುವಿನ ಬಳಿಕ ಮಾತನಾಡಿದ ಇಂಗ್ಲೆಂಡ್ ತಂಡದ ನಾಯಕ ಬೆನ್‌ ಸ್ಟೋಕ್ಸ್ "ನಾನು ಇಂಗ್ಲೆಂಡ್ ತಂಡದ ಟೆಸ್ಟ್ ತಂಡದ ನಾಯಕನಾದ ಬಳಿಕ ಪಡೆದ ಗೆಲುವುಗಳಲ್ಲಿ ಇದು ಶ್ರೇಷ್ಠ ಗೆಲುವು" ಎಂದು ಸಂತಸ ವ್ಯಕ್ತಪಡಿಸಿದ್ದಾರೆ.

ಈ ಗೆಲುವಿನ ಮೂಲಕ ಇಂಗ್ಲೆಂಡ್ 5 ಪಂದ್ಯಗಳ ಟೆಸ್ಟ್ ಸರಣಿಯಲ್ಲಿ 1-0 ಮುನ್ನಡೆ ಪಡೆದುಕೊಂಡಿದೆ. ಸರಣಿಯ ಎರಡನೇ ಪಂದ್ಯ ವಿಶಾಖಪಟ್ಟಣಂನ ಡಾ. ವೈ ಎಸ್ ರಾಜಶೇಖರ ರೆಡ್ಡಿ ಎಸಿಎ-ವಿಡಿಸಿಎ ಕ್ರಿಕೆಟ್ ಮೈದಾನದಲ್ಲಿ ನಡೆಯಲಿದೆ. ಫೆಬ್ರವರಿ 2ರಂದು ಎರಡನೇ ಟೆಸ್ಟ್ ಆರಂಭವಾಗಲಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+