Ind vs Eng: ಡಕೌಟ್ ಆದ ಕೊಹ್ಲಿ ಬಗ್ಗೆ ಅಣಕ: ಇಂಗ್ಲೆಂಡ್‌ನ ಬಾರ್ಮಿ ಆರ್ಮಿಗೆ ಜಾಡಿಸಿದ ಅಭಿಮಾನಿಗಳು

ಏಕದಿನ ವಿಶ್ವಕಪ್‌ನಲ್ಲಿ ಭಾರತದ ಅಜೇಯ ಓಟ ಮುಂದುವರೆದಿದೆ, ಲಕ್ನೋದ ಏಕಾನ ಸ್ಟೇಡಿಯಂನಲ್ಲಿ ನಡೆದ ಪಂದ್ಯದಲ್ಲಿ ಭಾರತ ತಂಡ ಹಾಲಿ ಚಾಂಪಿಯನ್ ಇಂಗ್ಲೆಂಡ್ ತಂಡದ ವಿರುದ್ಧ 100 ರನ್‌ಗಳ ಭರ್ಜರಿ ಗೆಲುವು ಸಾಧಿಸಿದೆ.

ಟಾಸ್ ಗೆದ್ದ ಇಂಗ್ಲೆಂಡ್ ಮೊದಲು ಬೌಲಿಂಗ್ ಆಯ್ಕೆ ಮಾಡಿಕೊಂಡಿತು, ಅದಕ್ಕೆ ತಕ್ಕಂತೆ ಭಾರತದ ಬ್ಯಾಟಿಂಗ್ ಪಡೆಯನ್ನು ಕಟ್ಟಿ ಹಾಕಿತು. ಶುಭಮನ್ ಗಿಲ್ 9 ರನ್‌ಗೆ ಔಟಾದರೆ, ವಿರಾಟ್ ಕೊಹ್ಲಿ ಸೊನ್ನೆಗೆ ಔಟಾದರು, ಇದೇ ಮೊದಲ ಬಾರಿಗೆ ಕೊಹ್ಲಿ ವಿಶ್ವಕಪ್‌ನಲ್ಲಿ ರನ್ ಗಳಿಸದೆ ಔಟಾಗುವ ಮೂಲಕ ಕೆಟ್ಟ ದಾಖಲೆ ಬರೆದರು.

 Virat Kohli

ಶ್ರೇಯಸ್ ಅಯ್ಯರ್ 4 ರನ್ ಗಳಿಸಿದರೆ, ಕೆಎಲ್ ರಾಹುಲ್ 39, ಸೂರ್ಯಕುಮಾರ್ ಯಾದವ್ 49 ರನ್ ಗಳಿಸಿದರು, ನಾಯಕ ರೋಹಿತ್ ಶರ್ಮಾ ಅಮೋಘ 87 ರನ್ ಗಳಿಸುವ ಮೂಲಕ ಭಾರತ 50 ಓವರ್ ಗಳಲ್ಲಿ 9 ವಿಕೆಟ್ ಕಳೆದುಕೊಂಡು 229 ರನ್ ಗಳಿಸಿತು.

ಈ ಸಾಧಾರಣ ಮೊತ್ತವನ್ನು ಬೆನ್ನತ್ತಿದ ಇಂಗ್ಲೆಂಡ್ ಆರಂಭದಲ್ಲಿ ಉತ್ತಮವಾಗಿ ಆಡಿತು. 4ನೇ ಓವರ್ ವರೆಗೂ ಬೌಂಡರಿ, ಸಿಕ್ಸರ್ ಬಾರಿಸಿ ಸುಲಭವಾಗಿ ಈ ಮೊತ್ತವನ್ನು ಬೆನ್ನಟ್ಟುವ ಉತ್ಸಾಹ ತೋರಿಸಿತು. ಆದರೆ, ಬುಮ್ರಾ 5ನೇ ಓವರ್ ನಲ್ಲಿ ಡೇವಿಡ್ ಮಲಾನ್ ಮತ್ತು ಜೋ ರೂಟ್ ವಿಕೆಟ್ ಪಡೆಯುವ ಮೂಲಕ ಆಘಾತ ನೀಡಿದರು, ನಂತರ ಬಂದ ಮೊಹಮ್ಮದ್ ಶಮಿ ಜಾನಿ ಬೈರ್ ಸ್ಟೋ ಮತ್ತು ಬೆನ್ ಸ್ಟೋಕ್ಸ್ ವಿಕೆಟ್ ಪಡೆದು ಇಂಗ್ಲೆಂಡ್‌ ಚೇತರಿಸಿಕೊಳ್ಳದಂತೆ ಮಾಡಿದರು. ಅಂತಿಮವಾಗಿ ಇಂಗ್ಲೆಂಡ್ 119 ರನ್‌ಗಳಿಗೆ ಆಲೌಟ್ ಆಗುವ ಮೂಲಕ ಈ ವಿಶ್ವಕಪ್‌ನಿಂದಲೇ ಹೊರಬಿದ್ದಿದೆ.

ಕೆಣಕಿದ ಬಾರ್ಮಿ ಆರ್ಮಿ

ಇನ್ನು ವಿರಾಟ್ ಕೊಹ್ಲಿ ಅಪರೂಪ ಎನ್ನುವಂತೆ ಲಕ್ನೊದಲ್ಲಿ ಸೊನ್ನೆಗೆ ಔಟಾದರು, ಇಂಗ್ಲೆಂಡ್‌ನ ಅಭಿಮಾನಿಗಳ ಎಕ್ಸ್‌ (ಟ್ವಿಟರ್) ಖಾತೆ ಕೊಹ್ಲಿ ಅವರ ಬಗ್ಗೆ ವ್ಯಂಗ್ಯವಾಗಿ ಪೋಸ್ಟ್ ಮಾಡಿತು. ಬಾತುಕೋಳಿಗೆ ವಿರಾಟ್ ಕೊಹ್ಲಿ ಮುಖ ಅಂಟಿಸುವ ಮೂಲಕ ಬೆಳಗಿನ ನಡಿಗೆಗೆ ಹೊರಬಂದಾಗ ಎನ್ನುವ ಶೀರ್ಷಿಕೆ ನೀಡಿತ್ತು.

ಬಾರ್ಮಿ ಆರ್ಮಿಯ ಪೋಸ್ಟ್ ಭಾರತೀಯ ಅಭಿಮಾನಿಗಳನ್ನು ಕೆರಳಿಸಿತು, ಅದಕ್ಕೆ ತಕ್ಕಂತೆ ಇಂಗ್ಲೆಂಡ್‌ನ ಜೋ ರೂಟ್ ಮತ್ತು ಬೆನ್‌ ಸ್ಟೋಕ್ಸ್ ಕೂಡ ಡಕೌಟ್ ಆಗಿದ್ದು, ಅಭಿಮಾನಿಗಳಿಗೆ ಅಸ್ತ್ರ ಸಿಕ್ಕಂತಾಯಿತು, ಬಾತು ಕೋಳಿಗಳಿಗೆ ಸ್ಟೋಕ್ಸ್, ರೂಟ್ ಮುಖ ಅಂಟಿಸಿ 'ಸಂಜೆಯ ನಡಿಗೆಗೆ ಹೊರಬಂದಾಗ' ಎಂದು ಶಿರ್ಷಿಕೆ ನೀಡುವ ಮೂಲಕ ಬಾರ್ಮಿ ಆರ್ಮಿಗೆ ತಿರುಗೇಟು ಕೊಟ್ಟರು.

ಬಾರ್ಮಿ ಆರ್ಮಿಯನ್ನು ಭಾರತೀಯ ಕ್ರಿಕೆಟ್ ಅಭಿಮಾನಿಗಳು ಹೇಗೆಲ್ಲಾ ತರಾಟೆಗೆ ತೆಗೆದುಕೊಂಡರು ಎನ್ನುವ ಕೆಲವು ಟ್ವೀಟ್‌ಗಳು ಇಲ್ಲಿವೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+