Ind vs Ban: ಬಾಂಗ್ಲಾ ಆಟಗಾರರಿಗೆ ಆಫರ್ ನೀಡಿದ್ದ ಪಾಕಿಸ್ತಾನ ನಟಿ ಭಾರತದ ಗೆಲುವಿನ ನಂತರ ಹೇಳಿದ್ದೇನು?
ಅಕ್ಟೋಬರ್ 19ರಂದು ಪುಣೆಯ ಎಂಸಿಎ ಮೈದಾನದಲ್ಲಿ ನಡೆದ ಏಕದಿನ ವಿಶ್ವಕಪ್ ಪಂದ್ಯದಲ್ಲಿ ಭಾರತ ತಂಡ ಬಾಂಗ್ಲಾದೇಶದ ವಿರುದ್ಧ ಏಳು ವಿಕೆಟ್‌ಗಳ ಭರ್ಜರಿ ಗೆಲುವು ಸಾಧಿಸಿದೆ. ಮೊದಲು ಬ್ಯಾಟಿಂಗ್ ಮಾಡಿದ ಬಾಂಗ್ಲಾದೇಶ 50 ಓವರ್ ಗಳಲ್ಲಿ 256 ರನ್ ಗಳಿಸಿದರೆ, ಭಾರತ ತಂಡ ಕೇವಲ 41.3 ಓವರ್‌ಗಳಲ್ಲಿ 257 ರನ್‌ಗಳನ್ನು ಬೆನ್ನಟ್ಟಿತು.
ಪುಣೆಯ ಅಂಗಳದಲ್ಲಿ ವಿರಾಟ್ ಕೊಹ್ಲಿ ಅಮೋಘ ಬ್ಯಾಟಿಂಗ್ ಪ್ರದರ್ಶನ ನೀಡಿದರು. ಏಕದಿನ ಮಾದರಿಯಲ್ಲಿ 48ನೇ ಶತಕ ಸಿಡಿಸುವ ಮೂಲಕ ಭಾರತ ತಂಡದ ಗೆಲುವಿನಲ್ಲಿ ಮಹತ್ವದ ಕೊಡುಗೆ ನೀಡಿದರು. ಏಕದಿನ ವಿಶ್ವಕಪ್‌ನಲ್ಲಿ ಈ ವರೆಗೂ ನಾಲ್ಕು ಪಂದ್ಯಗಳನ್ನು ಆಡಿರುವ ಭಾರತ ಎಲ್ಲಾ ಪಂದ್ಯಗಳನ್ನು ಗೆಲ್ಲುವ ಮೂಲಕ ಅಂಕಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿದೆ.

ಭಾರತ ತಂಡ ಗೆಲುವನ್ನು ಭಾರತದ ಕ್ರಿಕೆಟ್ ಅಭಿಮಾನಿಗಳು ಸಂಭ್ರಮಿಸುತ್ತಿದ್ದರೆ, ಒಬ್ಬ ನಟಿ ಮಾತ್ರ ಭಾರತದ ಗೆಲುವಿನಿಂದ ಸಂತೋಷ ಕಳೆದುಕೊಂಡಿದ್ದಾರೆ. ಹೌದು, ಪಾಕಿಸ್ತಾನ ನಟಿ ಸೆಹರ್ ಶಿನ್ವಾರಿ ಭಾರತದ ಗೆಲುವು ಕಂಡು ಬೇಸರಗೊಂಡಿದ್ದಾರೆ!
ಡಿನ್ನರ್ ಆಫರ್ ನೀಡಿದ್ದ ನಟಿ
ಭಾರತ - ಬಾಂಗ್ಲಾದೇಶ ನಡುವಿನ ಪಂದ್ಯಕ್ಕೆ ಮುನ್ನ ಟ್ವೀಟ್ ಮಾಡಿದ್ದ ಪಾಕಿಸ್ತಾನ ನಟಿ ಸೆಹರ್ ಶಿನ್ವಾರಿ, ಭಾರತದ ವಿರುದ್ಧ ಬಾಂಗ್ಲಾದೇಶ ಗೆಲುವು ಸಾಧಿಸಿದರೆ, ಢಾಕಾಗೆ ತೆರಳಿ ಬಾಂಗ್ಲಾದೇಶ ಆಟಗಾರನ ಜೊತೆ ಡಿನ್ನರ್ ಡೇಟ್ ಮಾಡುವುದಾಗಿ ಆಫರ್ ನೀಡಿದ್ದರು. ಭಾರತದ ವಿರುದ್ಧ ಪಾಕಿಸ್ತಾನದ ಸೋಲಿಗೆ ಬಾಂಗ್ಲಾದೇಶ ಸೇಡು ತೀರಿಸಿಕೊಳ್ಳಲಿದೆ ಎಂದು ಅವರು ನಿರೀಕ್ಷೆ ಮಾಡಿದ್ದರು.
ಟ್ವೀಟ್ ಮಾಡಿದ್ದ ಅವರು, "ಇನ್ಶಾ ಅಲ್ಲಾಹ್ ನನ್ನ ಬಂಗಾಲಿ ಹುಡುಗರು ಮುಂದಿನ ಪಂದ್ಯದಲ್ಲಿ ಸೇಡು ತೀರಿಸಿಕೊಳ್ಳುತ್ತಾರೆ. ಬಾಂಗ್ಲಾದೇಶ ತಂಡವು ಭಾರತವನ್ನು ಸೋಲಿಸುವಲ್ಲಿ ಯಶಸ್ವಿಯಾದರೆ ನಾನು ಢಾಕಾಗೆ ಹೋಗಿ ಬಂಗಾಲಿ ಹುಡುಗನೊಂದಿಗೆ ಮೀನು ಭೋಜನವನ್ನು ಮಾಡುತ್ತೇನೆ" ಎಂದು ಹೇಳಿದ್ದರು.
ಬಾಂಗ್ಲಾದೇಶ ತಂಡಕ್ಕೆ ಶ್ಲಾಘನೆ
ಆದರೆ, ಸೆಹರ್ ಶಿನ್ವಾರಿ ಅವರ ಆಸೆ ಈಡೇರಲಿಲ್ಲ ಭಾರತ ಈ ಪಂದ್ಯದಲ್ಲಿ ಸುಲಭವಾಗಿ ಗೆಲುವು ಸಾಧಿಸಿತು. ಪಂದ್ಯದ ನಂತರ ಪಾಕ್ ನಟಿ ಬಾಂಗ್ಲಾದೇಶಕ್ಕೆ ಹೊಸ ಸಂದೇಶ ಕಳುಹಿಸಿದ್ದಾರೆ. ಸೋತರೂ ಬಾಂಗ್ಲಾದೇಶ ಆಟಗಾರರನ್ನು ಹೊಗಳಿದರು.
ಟ್ವೀಟ್ ಮಾಡಿದ ಅವರು, "ಬೆಂಗಾಲಿ ಟೈಗರ್ಸ್ ಚೆನ್ನಾಗಿ ಆಟವಾಡಿದಿರಿ, ಕನಿಷ್ಠ ಪಕ್ಷ ನೀವು ಭಾರತೀಯ ತಂಡಕ್ಕೆ ಅವರ ತವರು ನೆಲದಲ್ಲಿ ಸವಾಲು ಹಾಕಿದ್ದೀರಿ." ಎಂದು ಬಾಂಗ್ಲಾ ಆಟಗಾರರ ಆಟವನ್ನು ಶ್ಲಾಘಿಸಿದ್ದಾರೆ.












Click it and Unblock the Notifications