Ind vs Aus WC 2023 Final: ಭಾರತ ಸೋಲಿನ ನಂತರ ಅಭಿಮಾನಿಗಳು ಪ್ರತಿಕ್ರಿಯಿಸಿದ್ದು ಹೀಗೆ....
ಕಳೆದ ದಿನ ಸೂರ್ಯ ನೆತ್ತಿ ಮೇಲೆ ಬರುತ್ತಿದ್ದಂತೆ ಭಾರತದ ಬೀದಿಗಳು ಖಾಲಿ ಖಾಲಿ. ಮಾರುಕಟ್ಟೆಗಳಲ್ಲಿ ಮೌನ. ಎಲ್ಲಿ ನೋಡಿದರೂ ಜನರ ಸಂಖ್ಯೆ ಅಷ್ಟಕಷ್ಟೇ. ಕೊರೊನಾ ಬಳಿಕ ಹೀಗೆ ಭಾರತ ಕಂಡಿದ್ದು ಇದೇ ಮೊದಲು. ಯಾಕೆಂದರೆ ಭಾರತ ಹಾಗೂ ಆಸ್ಟ್ರೇಲಿಯಾ ನಡುವಿನ ವಿಶ್ವಕಪ್ ಫೈನಲ್ ಪಂದ್ಯದ ಜ್ವರ ಎಲ್ಲೆಡೆ ಹರಡಿತ್ತು.
ನವೆಂಬರ್ 19 ಬಹುತೇಕ ಭಾರತೀಯರ ಪಾಲಿಗೆ ಒಂದು ಮಹತ್ವದ ದಿನ. ಭಾರತ ಕ್ರಿಕೆಟ್ ತಂಡ ಫೈನಲ್ ತಲುಪಿತ್ತು. ಟ್ರೋಫಿ ಪಡೆಯಲು ಆಸ್ಟ್ರೇಲಿಯಾ ಜೊತೆಗೆ ಆಡಿ ಗೆಲ್ಲಬೇಕಿತ್ತು. ಇದನ್ನು ಕಣ್ತುಂಬಿಕೊಳ್ಳಲು ಜನ ಕಾತುರದಿಂದ ಕಾಯುತ್ತಿದ್ದರು. ಅಹಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಕ್ರಿಕೆಟ್ ಅಭಿಮಾನಿಗಳ ದಂಡೆ ನೆರೆದಿತ್ತು. ಈ ಎಲ್ಲಾ ಕೂತೂಹಲದ ನಡುವೆ ಭಾರತ ಮತ್ತು ಆಸ್ಟ್ರೇಲಿಯಾ ನಡುವೆ ಏಕದಿನ ವಿಶ್ವಕಪ್‌ನ ಅಂತಿಮ ಪಂದ್ಯವೂ ನಡೆಯಿತು.

ಆದರೆ ಫಲಿತಾಂಶ ಮಾತ್ರ ಯಾರೂ ಕೂಡ ನಿರೀಕ್ಷೆ ಮಾಡಿರಲಿಲ್ಲ. ಪಂದ್ಯದಲ್ಲಿ ಆಸ್ಟ್ರೇಲಿಯಾ ವಿರುದ್ಧ ಭಾರತ ತಂಡ ಸೋಲನ್ನು ಅನುಭವಿಸಿತು. ಭಾರತ ತಂಡ ಸೋಲಿನೊಂದಿಗೆ ಕೋಟ್ಯಂತರ ದೇಶವಾಸಿಗಳಲ್ಲಿ ದುಃಖ ಮತ್ತು ನಿರಾಶೆಯ ವಾತಾವರಣ ಹರಡಿತು. ಪಂದ್ಯ ಮುಗಿದ ತಕ್ಷಣ ನಾಯಕ ರೋಹಿತ್ ಶರ್ಮಾ ಅವರ ನಿರಾಸೆಯನ್ನು ಕಂಡು ಕ್ರೀಡಾಂಗಣದಲ್ಲಿದ್ದ ಪ್ರೇಕ್ಷಕರು ಹಾಗೂ ಮನೆಯಲ್ಲಿ ಕುಳಿತಿದ್ದ ಅಭಿಮಾನಿಗಳ ಕಣ್ಣುಗಳು ತೇವಗೊಂಡವು.
ಮೊದಲು ಬ್ಯಾಟ್ ಮಾಡಿದ ಭಾರತ ಕೇವಲ 240 ರನ್ ಗಳಿಸಲಷ್ಟೇ ಶಕ್ತವಾಯಿತು. ಆಸ್ಟ್ರೇಲಿಯದ ಬಿಗಿ ಫೀಲ್ಡಿಂಗ್ ಮುಂದೆ ಭಾರತದ ಬ್ಯಾಟ್ಸ್‌ಮನ್‌ಗಳು ತಲಾ ಒಂದು ರನ್ ಪಡೆಯಲು ಹೆಣಗಾಡತೊಡಗಿದರು. ಆದರೆ ಟ್ರಾವಿಸ್ ಹೆಡ್ ಅವರ ಶತಕದ ನೆರವಿನಿಂದ ಆಸ್ಟ್ರೇಲಿಯಾ ಕೇವಲ 43 ಓವರ್ ಗಳಲ್ಲಿ 4 ವಿಕೆಟ್ ಕಳೆದುಕೊಂಡು ವಿಶ್ವ ಚಾಂಪಿಯನ್ ಪಟ್ಟ ಅಲಂಕರಿಸಿತು.

ಸೋಲಿನ ನಿರಾಸೆಯನ್ನು ಹಂಚಿಕೊಳ್ಳಲು ಮತ್ತು ಮನಸ್ಥಿತಿಯನ್ನು ಹಗುರಗೊಳಿಸಲು, ಭಾರತೀಯ ಅಭಿಮಾನಿಗಳು ಸಾಮಾಜಿಕ ಜಾಲತಾಣಗಳಲ್ಲಿ ವಿವಿಧ ರೀತಿಯ ಮೀಮ್‌ಗಳನ್ನು ಹಂಚಿಕೊಳ್ಳುತ್ತಿದ್ದಾರೆ. ಅವುಗಳನ್ನು ನೋಡೋಣ ಬನ್ನಿ....

















Click it and Unblock the Notifications