IND Vs AUS 3rd ODI: ಟಿಕೆಟ್ ಪಡೆಯಲು ಶುಕ್ರವಾರ ಮಧ್ಯರಾತ್ರಿಯಿಂದಲೇ ಕಾದ ಅಭಿಮಾನಿಗಳು

IND Vs AUS 3rd ODI: Fans Are Waiting To Buy Tickets For The 3rd Odi Match In Chennai From Midnight

ಭಾರತ ಆಸ್ಟ್ರೇಲಿಯಾ ನಡುವಿನ ಏಕದಿನ ಸರಣಿಯ ಕೊನೆಯ ಪಂದ್ಯ ಮಾರ್ಚ್ 22ರಂದು ನಡೆಯಲಿದೆ. ಹಲವು ವರ್ಷಗಳ ಬಳಿಕ ನಡೆಯುತ್ತಿರುವ ಪಂದ್ಯವನ್ನು ವೀಕ್ಷಿಸಲು ಅಭಿಮಾನಿಗಳು ಕಾಯುತ್ತಿದ್ದಾರೆ. ಶನಿವಾರ ಬೆಳಿಗ್ಗೆ 11 ಗಂಟೆಗೆ ಟಿಕೆಟ್ ಮಾರಾಟ ಆರಂಭಿಸಲಾಗಿದೆ.

ಹಲವು ವರ್ಷಗಳ ಬಳಿಕ ಕ್ರಿಕೆಟ್ ಪಂದ್ಯವನ್ನು ಕಣ್ತುಂಬಿಕೊಳ್ಳಲು ಕಾಯುತ್ತಿದ್ದ ಅಭಿಮಾನಿಗಳು ಟಿಕೆಟ್‌ ಪಡೆಯಲು ಮುಗಿಬಿದ್ದರು. ಶುಕ್ರವಾರ ಮಧ್ಯರಾತ್ರಿ 1.30 ರಿಂದಲೇ ಸಾಲುಗಟ್ಟಿ ನಿಂತರು. ಗಂಟೆಗಟ್ಟಲೆ ಕ್ಯೂನಲ್ಲಿ ನಿಂತು ಕಾದ ಬಳಿಕ ಟಿಕೆಟ್ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ.

ಚೆಪಾಕ್‌ನ ಎಂಎ ಚಿದಂಬರಂ ಸ್ಟೇಡಿಯಂನಲ್ಲಿ ನಡೆಯಲಿರುವ ಪಂದ್ಯಕ್ಕೆ ಅಭಿಮಾನಿಗಳು ಕಾಯುತ್ತಿದ್ದಾರೆ. ಸ್ಟೇಡಿಯಂನ ಸಿ, ಡಿ ಮತ್ತು ಇ ಸ್ಟ್ಯಾಂಡ್‌ಗಳ ಟಿಕೆಟ್‌ಗಳನ್ನು ಮಾರಾಟ ಮಾಡಲಾಗಿದೆ. ಈ ಪಂದ್ಯಕ್ಕಾಗಿ ಆರಂಭಿಕ ಟಿಕೆಟ್‌ ಬೆಲೆಯನ್ನು 1200 ರುಪಾಯಿಗಳಿಗೆ ನಿಗದಿ ಮಾಡಲಾಗಿತ್ತು. ಎಲ್ಲಾ ಟಿಕೆಟ್‌ಗಳು ಮಾರಾಟವಾಗಿವೆ.

2019ರ ಡಿಸೆಂಬರ್ 15 ರಂದು ವೆಸ್ಟ್ ಇಂಡೀಸ್ ವಿರುದ್ಧ ಇಲ್ಲಿ ಭಾರತ ಕೊನೆಯ ಏಕದಿನ ಪಂದ್ಯವನ್ನಾಡಿತ್ತು. ಈ ಪಂದ್ಯದಲ್ಲಿ ವೆಸ್ಟ್ ಇಂಡೀಸ್ 8 ವಿಕೆಟ್‌ಗಳ ಭರ್ಜರಿ ಜಯ ಸಾಧಿಸಿತ್ತು. ಮೂರುವರೆ ವರ್ಷಗಳ ನಂತರ ನಡೆಯುತ್ತಿರುವ ಪಂದ್ಯವನ್ನು ನೇರವಾಗಿ ವೀಕ್ಷಿಸಲು, ಭಾರತ ತಂಡಕ್ಕೆ ಬೆಂಬಲ ನೀಡಲು ಅಭಿಮಾನಿಗಳು ಕಾಯುತ್ತಿದ್ದಾರೆ.

IND Vs AUS 3rd ODI: Fans Are Waiting To Buy Tickets For The 3rd Odi Match In Chennai From Midnight

ಬ್ಲ್ಯಾಕ್‌ ಟಿಕೆಟ್ ಖರೀದಿ ಮಾಡದಂತೆ ಸೂಚನೆ

ತಮಿಳುನಾಡು ಕ್ರಿಕೆಟ್ ಅಸೋಸಿಯೇಷನ್ ಪ್ರತಿ ವ್ಯಕ್ತಿಗೆ ಎರಡು ಟಿಕೆಟ್‌ಗಳನ್ನು ಮಾತ್ರ ಕೌಂಟರ್ ನಲ್ಲಿ ಮಾರಾಟ ಮಾಡಿದೆ. ಸಾರ್ವಜನಿಕರು ಬ್ಲ್ಯಾಕ್‌ ಟಿಕೆಟ್ ಖರೀದಿ ಮಾಡದಂತೆ ಎಚ್ಚರಿಕೆ ನೀಡಲಾಗಿದೆ. ಬೆಳಿಗ್ಗೆ 11 ಗಂಟೆಗೆ ಆರಂಭವಾದ ಟಿಕೆಟ್ ಮಾರಾಟ ರಾತ್ರಿ 8.30ಕ್ಕೆ ಕೊನೆಯಾಗಿದೆ. ಮಾರ್ಚ್ 13ರಂದು ಭಾರತ-ಆಸ್ಟ್ರೇಲಿಯಾ ನಡುವಿನ ಮೂರನೇ ಏಕದಿನ ಪಂದ್ಯಕ್ಕೆ ಆನ್‌ಲೈನ್ ಟಿಕೆಟ್ ಮಾರಾಟವನ್ನು ಆರಂಭಿಸಲಾಗಿತ್ತು.

ಎಂಎ ಚಿದಂಬರ್ ಸ್ಟೇಡಿಯಂ 50000 ಆಸನ ಸಾಮರ್ಥ್ಯವನ್ನು ಹೊಂದಿದೆ. ಹೊಸದಾಗಿ ಕರುಣಾನಿಧಿ ಹೆಸರಿನ ಸ್ಟ್ಯಾಂಡ್ ಕೂಡ ಉದ್ಘಾಟನೆ ಮಾಡಲಾಗಿದೆ. ಭಾರತ ಈ ಅಂಗಳದಲ್ಲಿ 2019ರಲ್ಲಿ ಕೊನೆಯ ಏಕದಿನ ಪಂದ್ಯವನ್ನಾಡಿತ್ತು.

ಭಾರತ ಆಸ್ಟ್ರೇಲಿಯಾ ವಿರುದ್ಧ 3 ಪಂದ್ಯಗಳ ಏಕದಿನ ಸರಣಿಯನ್ನು ಆಡುತ್ತಿದೆ. ವಾಂಖೆಡೆಯಲ್ಲಿ ನಡೆದ ಸರಣಿಯ ಮೊದಲನೇ ಪಂದ್ಯದಲ್ಲಿ ಭಾರತ 5 ವಿಕೆಟ್‌ಗಳ ಜಯ ಸಾಧಿಸುವ ಮೂಲಕ ಸರಣಿಯಲ್ಲಿ 1-0 ಮುನ್ನಡೆ ಸಾಧಿಸಿದೆ. ಎರಡನೇ ಪಂದ್ಯ ಭಾನುವಾರ (ಮಾರ್ಚ್ 18) ವೈಜಾಗ್‌ನಲ್ಲಿ ನಡೆಯಲಿದೆ. ಒಟ್ಟು 31 ಏಕದಿನ ಪಂದ್ಯಗಳು ನಡೆದಿದ್ದು, 15 ಪಂದ್ಯಗಳಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ತಂಡ ಗೆಲುವು ಸಾಧಿಸಿದದ್ದು, 15 ಪಂದ್ಯಗಳಲ್ಲಿ ಚೇಸಿಂಗ್ ಮಾಡಿದ ತಂಡ ಗೆಲುವು ಸಾಧಿಸಿದೆ.

ಐಪಿಎಲ್ ಪಂದ್ಯಗಳು ಕೂಡ ಆಯೋಜನೆ

2019ರಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡ ಇಲ್ಲಿ ಕೊನೆಯ ಐಪಿಎಲ್ ಪಂದ್ಯವನ್ನಾಡಿತ್ತು. 4 ವರ್ಷಗಳ ನಂತರ ಮೊದಲ ಬಾರಿಗೆ ಸಿಎಸ್‌ಕೆ ತವರಿನ ಅಂಗಳದಲ್ಲಿ ಐಪಿಎಲ್ ಪಂದ್ಯಗಳನ್ನಾಡಲು ಸಜ್ಜಾಗಿದೆ. ಎಂಎಸ್ ಧೋನಿ ಐಪಿಎಲ್‌ನ ಕೊನೆಯ ಆವೃತ್ತಿ ಆಡುತ್ತಿದ್ದು, ತಮ್ಮ ನೆಚ್ಚಿನ ನಾಯಕನ ನೋಡಲು ಅಭಿಮಾನಿಗಳು ಕಾಯುತ್ತಿದ್ದಾರೆ. ಐಪಿಎಲ್‌ನ ಟಿಕೆಟ್‌ಗಳ ಮಾರಾಟ ಕೂಡ ಆರಂಭ ಮಾಡಲಾಗಿದ್ದು, ಬಹುತೇಕ ಟಿಕೆಟ್‌ಗಳು ಮಾರಾಟವಾಗಿವೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+