Champions Trophy: ಭಾರತ ಪಾಕಿಸ್ತಾನಕ್ಕೆ ಹೋಗದಿದ್ದರೆ ಐಸಿಸಿ ಬಳಿ ಇದೆ ಪ್ಲಾನ್‌ 'ಬಿ'!

ಐಸಿಸಿ ಚಾಂಪಿಯನ್ಸ್ ಟ್ರೋಫಿ ಆಯೋಜನೆಗಾಗಿ ಒಂದು ಕಡೆ ಪಾಕಿಸ್ತಾನದ ಭರದಿಂದ ಸಿದ್ಧತೆ ಮಾಡಿಕೊಳ್ಳುತ್ತಿದೆ. ಈ ಬಾರಿ ಕೂಡ ಭಾರತ ತಂಡವನ್ನು ಪಾಕಿಸ್ತಾನಕ್ಕೆ ಕಳಿಸಲ್ಲ ಎಂದು ಬಿಸಿಸಿಐ ಹೇಳಿದೆ. ಭಾರತ ತಂಡ ಪಾಕಿಸ್ತಾನಕ್ಕೆ ಬರಬೇಕು, ಭದ್ರತೆಯ ಬಗ್ಗೆ ಯಾವುದೇ ಸಮಸ್ಯೆ ಇಲ್ಲ ಎಂದು ಪಾಕಿಸ್ತಾನ ಕ್ರಿಕೆಟ್ ಮಂಡಳಿ ಹೇಳಿದೆ. ಪಾಕಿಸ್ತಾನ ಮಾಜಿ ಕ್ರಿಕೆಟಿಗರು ಬಿಸಿಸಿಐ ಈ ವಿಚಾರದಲ್ಲಿ ರಾಜಕೀಯ ಮಾಡಬಾರದು, ಭಾರತ ತಂಡ ಪಾಕಿಸ್ತಾನಕ್ಕೆ ಬರಬೇಕು ಎಂದು ಒತ್ತಾಯಿಸುತ್ತಿದ್ದಾರೆ. ಬಿಸಿಸಿಐ ಮತ್ತು ಪಿಸಿಬಿ ನಡುವಿನ ಈ ತಿಕ್ಕಾಟ ಐಸಿಸಿಗೆ ತಲೆನೋವಾಗಿದೆ.

ಒಂದು ಕಡೆ ಪಾಕಿಸ್ತಾನ ಕ್ರಿಕೆಟ್ ಮಂಡಳಿ (ಪಿಸಿಬಿ) ಚಾಂಪಿಯನ್ಸ್ ಟ್ರೋಫಿ ಎಲ್ಲಾ ಪಂದ್ಯಗಳು ಪಾಕಿಸ್ತಾನದಲ್ಲೇ ನಡೆಯಬೇಕು ಎಂದು ಹಠ ಹಿಡಿದಿದೆ. ಆದರೆ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಮಾತ್ರ ಯಾವುದೇ ಕಾರಣಕ್ಕೂ ಪಾಕಿಸ್ತಾನಕ್ಕೆ ತಂಡವನ್ನು ಕಳಿಸಲ್ಲ, ಹೈಬ್ರಿಡ್ ಮಾದರಿಯಲ್ಲಿ ಪಂದ್ಯಗಳನ್ನು ಆಯೋಜಿಸಿ ಎಂದು ಕೇಳಿದೆ. ಯುಎಇ ಅಥವಾ ಶ್ರೀಲಂಕಾದಲ್ಲಿ ಭಾರತದ ಪಂದ್ಯಗಳನ್ನು ಆಯೋಜಿಸುವಂತೆ ಕೇಳಿಕೊಂಡಿದೆ. ಆದರೆ ಪಾಕಿಸ್ತಾನ ಮಾತ್ರ ಭಾರತದ ಪಂದ್ಯಗಳನ್ನು ಲಾಹೋರ್ ನಲ್ಲಿ ಆಯೋಜಿಸುವುದಾಗಿ ಹೇಳಿದೆ. ಈ ಬಗ್ಗೆ ಇನ್ನೂ ಯಾವುದೂ ಅಂತಿಮವಾಗಿಲ್ಲ.

ICC s Alternative for Champions Trophy If India Refuses Pakistan Visit

ಇತ್ತೀಚೆಗೆ ನಡೆದ ಸಭೆಗಳಲ್ಲಿ ಐಸಿಸಿ ಇತರ ಕ್ರಿಕೆಟ್ ಮಂಡಳಿಗಳ ಜೊತೆ ಈ ವಿಚಾರವನ್ನು ಬಹಿರಂಗವಾಗಿ ಚರ್ಚೆ ಮಾಡದೇ ಇದ್ದರೂ, ಭಾರತ ಏನಾದರೂ ಪಾಕಿಸ್ತಾನಕ್ಕೆ ಹೋಗದಿರುವ ಸಂದರ್ಭಕ್ಕಾಗಿ ಪ್ಲಾನ್ 'ಬಿ' ಸಿದ್ದಪಡಿಸಿಕೊಂಡಿದೆ.

ಐಸಿಸಿ ಮಾಡಿರುವ ಯೋಜನೆ ಏನು

ಕ್ರಿಕ್‌ಬಝ್ ಮಾಡಿರುವ ವರದಿಯ ಪ್ರಕಾರ, ಮುಖ್ಯ ಕಾರ್ಯನಿರ್ವಾಹಕ ಸಮಿತಿ (CEC) ಅನುಮೋದನೆ ನೀಡಿರುವ ಟಿಪ್ಪಣಿಯಲ್ಲಿ, ಪಾಕಿಸ್ತಾನ ಕ್ರಿಕೆಟ್ ಮಂಡಳಿ (ಪಿಸಿಬಿ) ಹೋಸ್ಟ್ ಒಪ್ಪಂದಕ್ಕೆ ಸಹಿ ಹಾಕಿದೆ ಮತ್ತು ಪಂದ್ಯಾವಳಿಯ ಬಜೆಟ್ ಅನ್ನು ಕರಡು ಮಾಡಲು ಮ್ಯಾನೇಜ್‌ಮೆಂಟ್‌ನೊಂದಿಗೆ ಕೆಲಸ ಮಾಡಿದೆ, ಇದನ್ನು ಅನುಮೋದನೆಗಾಗಿ ಎಫ್‌ & ಸಿಎ ಅನ್ನು ಸಲ್ಲಿಸಲಾಗಿದೆ. ಪಾಕಿಸ್ತಾನದ ಹೊರಗೆ ಕೆಲವು ಪಂದ್ಯಗಳನ್ನು ಆಡುವ ಅಗತ್ಯವನ್ನು ಪರಿಗಣಿಸಿ, ಹೆಚ್ಚುವರಿ ಬಜೆಟ್‌ಗೆ ಅನುಮೋದನೆ ಕೊಡಲಾಗಿದೆ. ಕೊನೆ ಕ್ಷಣದಲ್ಲಿ ಪಾಕಿಸ್ತಾನದಿಂದ ಹೊರಗೆ ಪಂದ್ಯಗಳ ಆಯೋಜನೆಗಾಗಿ ಹಣ ಮೀಸಲಿಡುವ ಮೂಲಕ ಐಸಿಸಿ ಸಿದ್ಧತೆ ಮಾಡಿಕೊಂಡಿದೆ.

ಮಾರ್ಚ್ 2024 ರಲ್ಲಿ ಪಾಕಿಸ್ತಾನದಲ್ಲಿ ಯೋಜನಾ ಸಭೆ ಮತ್ತು ಉದ್ದೇಶಿತ ಪಂದ್ಯದ ಸ್ಥಳಗಳ ಪರಿಶೀಲನೆ ನಡೆಸಲಾಗಿದೆ. ಮೂರು ಕ್ರೀಡಾಂಗಣಗಳನ್ನು ನವೀಕರಣ ಮಾಡಲಾಗುತ್ತಿದ್ದು, ಈಗಾಗಲೇ ಕಾಮಗಾರಿ ಭರದಿಂದ ಸಾಗುತ್ತಿದೆ. ಚಾಂಪಿಯನ್ಸ್ ಟ್ರೋಫಿ ಆಯೋಜನೆಗಾಗಿ $ 35 ಮಿಲಿಯನ್ ಅನ್ನು ನಿಗದಿ ಮಾಡಲಾಗಿದೆ. ತಂಡಗಳ ಭಾಗವಹಿಸುವಿಕೆ ಮತ್ತು ಪ್ರಶಸ್ತಿ ಹಣ ವಿತರಣೆಗೆ $ 20 ಮಿಲಿಯನ್ ಮೀಸಲಿಟ್ಟಿದೆ. ಇನ್ನುಳಿದ ವೆಚ್ಚಕ್ಕಾಗಿ $10 ಮಿಲಿಯನ್ ಅನ್ನು ಮೀಸಲಿಟ್ಟಿದೆ.

ಮಾರ್ಚ್ 1 ರಂದು ಭಾರತ-ಪಾಕಿಸ್ತಾನ ಪಂದ್ಯ

ಐಸಿಸಿ ಈಗಾಗಲೇ ಚಾಂಪಿಯನ್ಸ್ ಟ್ರೋಫಿ ಪಂದ್ಯಾವಳಿಯ ಕರಡು ವೇಳಾಪಟ್ಟಿಯನ್ನು ಹಂಚಿಕೊಂಡಿದೆ. ಇದರ ಪ್ರಕಾರ ಭಾರತದ ಎಲ್ಲಾ ಪಂದ್ಯಗಳು ಲಾಹೋರ್ ನಲ್ಲಿ ನಡೆಸಲು ನಿರ್ಧರಿಸಲಾಗಿದೆ. ಮಾರ್ಚ್ 1ರಂದು ಭಾರತ-ಪಾಕಿಸ್ತಾನ ಪಂದ್ಯವನ್ನು ನಿಗದಿಪಡಿಸಲಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+