ICC World Cup 2023: ಇವರೇ ಟೀಮ್ ಇಂಡಿಯಾದ ಮೂವರು ಗೇಮ್‌ ಚೇಂಜರ್ ಬೌಲರ್ಸ್

2023ರ ವಿಶ್ವಕಪ್‌ಗೆ ಟೀಂ ಇಂಡಿಯಾ ಗೆಲ್ಲುವ ಕನಸು ಕಾಣುತ್ತಿದೆ. ಭಾರತ ತಂಡ ಇತ್ತೀಚೆಗಷ್ಟೇ ಏಕದಿನ ಸರಣಿಯಲ್ಲಿ ಆಸ್ಟ್ರೇಲಿಯಾವನ್ನು ಸೋಲಿಸಿ, ಐಸಿಸಿ ಶ್ರೇಯಾಂಕದಲ್ಲಿ ನಂಬರ್‌ ಸ್ಥಾನವನ್ನು ಪಡೆದಿದೆ. ಈ ಮೂಲಕ ಮೂರು ಮಾದರಿಯ ಕ್ರಿಕೆಟ್‌ ನಲ್ಲಿ ಬ್ಲ್ಯೂ ಬಾಯ್ಸ್‌ ತಮ್ಮ ಆರ್ಭಟವನ್ನು ಮುಂದುವರೆಸಿದ್ದಾರೆ.

ಪಾಕಿಸ್ತಾನ ಹಾಗೂ ಶ್ರೀಲಂಕಾ ಆಯೋಜಿಸಿದ್ದ ಏಷ್ಯಾ ಕಪ್‌ ಕ್ರಿಕೆಟ್‌ ಟ್ರೋಫಿಯನ್ನು ಭಾರತ ಗೆದ್ದು ಬೀಗಿದೆ. ಪ್ರಸಕ್ತ ವರ್ಷ ಸೀಮಿತ ಓವರ್‌ ಗಳ ಪಂದ್ಯಗಳಲ್ಲಿ ಮೊಹಮ್ಮದ್ ಸಿರಾಜ್‌ ಭರ್ಜರಿ ಪ್ರದರ್ಶನ ನೀಡಿ ಎಲ್ಲರ ಚಿತ್ತ ಕದ್ದಿದ್ದಾರೆ. ಅವರು ವಿಶ್ವಕಪ್‌ನಲ್ಲಿ ಟೀಮ್ ಇಂಡಿಯಾಗೆ ಗೇಮ್ ಚೇಂಜರ್ ಸ್ಥಾನವನ್ನು ತುಂಬುವ ಕ್ಷಮತೆ ಹೊಂದಿದ್ದಾರೆ. ಸಿರಾಜ್ ಜೊತೆಗೆ ರವಿಚಂದ್ರನ್ ಅಶ್ವಿನ್ ಮತ್ತು ಕುಲ್ದೀಪ್‌ ಯಾದವ್ ಕೂಡ ತಂಡಕ್ಕೆ ಪ್ರಮುಖ ಟ್ರಂಪ್ ಕಾರ್ಡ್‌ ಬೌಲರ್‌ ಎಂದು ಪರಿಗಣಿಸಲಾಗಿದೆ.

ICC World Cup 2023: Here Is The Three Game Changer Bowler Of Team India

ಮೊಹಮ್ಮದ್ ಸಿರಾಜ್

ಟೀಮ್ ಇಂಡಿಯಾ ಪರ ಇದುವರೆಗೆ 30 ಏಕದಿನ ಪಂದ್ಯಗಳನ್ನು ಆಡಿರುವ ಸಿರಾಜ್, 54 ವಿಕೆಟ್ ಪಡೆದಿದ್ದಾರೆ. ಏಷ್ಯಾಕಪ್ ಮತ್ತು ಆಸ್ಟ್ರೇಲಿಯಾ ವಿರುದ್ಧದ ಸರಣಿಯಲ್ಲಿ ಸಿರಾಜ್ ಉತ್ತಮ ಬೌಲಿಂಗ್ ಮಾಡಿದ್ದರು. ಏಷ್ಯಾ ಕಪ್‌ ಫೈನಲ್‌ ಪಂದ್ಯದಲ್ಲಿ ಹಲವು ದಾಖಲೆಗಳನ್ನು ಸಿರಾಜ್‌ ಬರೆದಿದ್ದರು.

ಅಲ್ಲದೆ ಶ್ರೀಲಂಕಾದ ಸ್ಟಾರ್‌ ಬ್ಯಾಟರ್‌ ಗಳಿಗೆ ಕಾಟ ನೀಡಿದ್ದರು. ಶ್ರೀಲಂಕಾ ವಿರುದ್ಧದ ಪಂದ್ಯದಲ್ಲಿ ಕೇವಲ 21 ರನ್ ನೀಡಿರುವ ಸಿರಾಜ್‌ 6 ವಿಕೆಟ್ ಕಬಳಿಸಿದ್ದರು. ಇದೀಗ ಮತ್ತೊಮ್ಮೆ ವಿಶ್ವಕಪ್‌ನಲ್ಲಿ ಅದ್ಭುತ ಪ್ರದರ್ಶನ ನೀಡಲು ಸಜ್ಜಾಗಿದ್ದಾರೆ. ಸಿರಾಜ್ ಟೀಮ್ ಇಂಡಿಯಾಗೆ ಗೇಮ್ ಚೇಂಜರ್ ರೀತಿ ಕಾಣಿಸಿ ಕೊಳ್ಳಬಹುದು.

ಕುಲ್ದೀಪ್‌ ಯಾದವ್

ಟೀಮ್ ಇಂಡಿಯಾ ಈ ಬಾರಿ ಹಲವು ವಿಶಿಷ್ಠ ಬೌಲರ್‌ ಗಳನ್ನು ತಂಡದಲ್ಲಿ ಸೇರಿಸಿಕೊಂಡಿದೆ. ಇದರಲ್ಲಿ ಎದ್ದು ಕಾಣುವ ಹೆಸರು ಕುಲ್ದೀಪ್‌ ಯಾದವ್‌. ಹಲವು ತಿಂಗಳುಗಳ ಕಾಲ ಏಕದಿನ ಪಂದ್ಯಗಳಿಂದ ದೂರ ಉಳಿದಿದ್ದ ಕುಲ್ದೀಪ್‌ ಭರ್ಜರಿಯಾಗಿ ಕಮ್‌ ಬ್ಯಾಕ್‌ ಮಾಡಿದ್ದಾರೆ.

ಸಿಕ್ಕ ಅವಕಾಶವನ್ನು ಎರಡೂ ಕೈಗಳಿಂದ ಬಳಸಿಕೊಂಡಿರುವ ಯಾದವ್‌ ಅಬ್ಬರಿಸಿದ್ದಾರೆ. ವಿಶಿಷ್ಠ ಬೌಲಿಂಗ್‌ ಶೈಲಿಯನ್ನು ಹೊಂದಿರುವ ಕುಲ್ದೀಪ್‌, ವಿಶ್ವಕಪ್‌ ನಲ್ಲಿ ಎದುರಾಳಿಗಳಿಗೆ ಕಟ್ಟಿ ಹಾಕುವ ರಣ ತಂತ್ರಗಳನ್ನು ಹೆಣೆದುಕೊಂಡಿದ್ದಾರೆ.

ಟೀಮ್ ಇಂಡಿಯಾದ ಸ್ಪಿನ್ನರ್ ಕುಲ್ದೀಪ್‌ ಅನೇಕ ಸಂದರ್ಭಗಳಲ್ಲಿ ಉತ್ತಮ ಬೌಲಿಂಗ್ ಮಾಡಿದ್ದಾರೆ. ದೊಡ್ಡ ಪಂದ್ಯಗಳಲ್ಲೂ ಕುಲ್ದೀಪ್‌ ಉತ್ತಮ ಪ್ರದರ್ಶನ ನೀಡಿ ಸೈ ಎನಿಸಿಕೊಂಡಿದ್ದಾರೆ. ಅವರು 90 ಏಕದಿನ ಪಂದ್ಯಗಳಲ್ಲಿ 152 ವಿಕೆಟ್ ಕಬಳಿಸಿದ್ದಾರೆ.

ವಿಶ್ವಕಪ್‌ನಲ್ಲಿ ಕುಲ್ದೀಪ್ ಅಪಾಯಕಾರಿ ಬೌಲಿಂಗ್ ಮಾಡಬಲ್ಲರು. ಅವರು ಭಾರತದ ಬಹುತೇಕ ಮೈದಾನಗಳಲ್ಲಿ ಆಡಿದ್ದಾರೆ. ಆದ್ದರಿಂದ ಇದು ಅವರಿಗೆ ತುಂಬಾ ಸಹಾಯ ಆಗುತ್ತದೆ. ವಿಶ್ವಕಪ್‌ ನಲ್ಲಿ ಕುಲ್ದೀಪ್‌ ಚೈನ್‌ ಮ್ಯಾನ್‌ ಶೈಲಿ ಅರಿಯಲು ಹಲವು ಬ್ಯಾಟರ್‌ ಗಳು ಹೆಣಗಾಡುವುದು ಖಚಿತ.

ರವಿಚಂದ್ರನ್ ಅಶ್ವಿನ್

ಗಾಯದ ಕಾರಣದಿಂದ ಯುವ ಆಲ್‌ ರೌಂಡರ್‌ ಅಕ್ಷರ್‌ ಪಟೇಲ್‌ ತಂಡದಿಂದ ಹೊರ ನಡೆಯುತ್ತಿದ್ದಂತೆ, ಅಶ್ವಿನ್‌ ವಿಶ್ವಕಪ್‌ ತಂಡದಲ್ಲಿ ಸ್ಥಾನ ಪಡೆಯುವ ಆಸೆ ಚಿಗುರಿತು. 2023ರ ವಿಶ್ವಕಪ್‌ಗೆ ಭಾರತ ತಂಡದಲ್ಲಿ ಅಶ್ವಿನ್ ಸೇರ್ಪಡೆಗೊಂಡಿದ್ದಾರೆ. ಏಕದಿನ ಪಂದ್ಯಗಳಲ್ಲಿ 155 ವಿಕೆಟ್ ಪಡೆದಿದ್ದಾರೆ.

ಅಂತರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಅಶ್ವಿನ್ ಹಲವು ಬಾರಿ ಅಮೋಘ ಪ್ರದರ್ಶನ ನೀಡಿದ್ದಾರೆ. ಆಸ್ಟ್ರೇಲಿಯಾ, ಇಂಗ್ಲೆಂಡ್, ನ್ಯೂಜಿಲೆಂಡ್ ಸೇರಿದಂತೆ ಎಲ್ಲಾ ತಂಡಗಳಿಗೂ ಅಶ್ವಿನ್ ಎಸೆತಗಳನ್ನು ಆಡುವುದು ಸವಾಲಾಗಿದೆ. ಅಶ್ವಿನ್ ಟೆಸ್ಟ್ ಪಂದ್ಯಗಳಲ್ಲಿ 489 ವಿಕೆಟ್ ಪಡೆದಿದ್ದಾರೆ. ಅವರು ತವರು ನೆಲದಲ್ಲಿ ಚಾಂಪಿಯನ್ ಬೌಲರ್‌. ಹೀಗಾಗಿ ಇವರಿಗೆ ಸ್ಥಾನ ಲಭಿಸಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+