ಐಸಿಸಿ ವಿಶ್ವಕಪ್: ಅಬ್ಬಬ್ಬಾ.. ಲಾಟ್ರಿ.. ವಿಶ್ವಕಪ್ ಗೆಲ್ಲುವ ದೇಶಕ್ಕೆ ಸಿಗಲಿದೆ ಭರ್ಜರಿ ಹಣ! ಎಷ್ಟು ಕೋಟಿ ಗೊತ್ತಾ?

ಭಾರತದ ನೆಲದಲ್ಲಿ ನಡೆಯುತ್ತಿರುವ ಐಸಿಸಿ ಏಕದಿನ ಕ್ರಿಕೆಟ್ ವಿಶ್ವಕಪ್ 2023 ಈಗ ಕೊನೇ ಹಂತ ಪ್ರವೇಶ ಮಾಡಿದೆ. ಇನ್ನೇನು ಕೆಲವೇ ದಿನದಲ್ಲಿ ವಿಶ್ವಕಪ್-2023ರ ಫೈನಲ್ ಪಂದ್ಯ ಕೂಡ ಎದುರಾಗಲಿದೆ. ಭಾರತ ತಂಡ ಈ ಬಾರಿ ವಿಶ್ವಕಪ್ ಗೆಲ್ಲುವ ನೆಚ್ಚಿನ ತಂಡವಾಗಿದೆ. ಹಾಗಾದರೆ 'ಐಸಿಸಿ ಏಕದಿನ ವಿಶ್ವಕಪ್-2023' ಗೆದ್ದವರಿಗೆ ಸಿಗುವ ಹಣ ಎಷ್ಟು ಕೋಟಿಗಳು ಗೊತ್ತಾ? ಭಾರತ ತಂಡಕ್ಕೆ ಎಷ್ಟು ಕೋಟಿ ಸಿಗಬಹುದು?

ಭಾರತ ಏಕದಿನ ವಿಶ್ವಕಪ್ 2023ರ ಟೂರ್ನಿಯ ಲೀಗ್ ಹಂತದಲ್ಲಿ ಒಟ್ಟು 9 ಪಂದ್ಯ ಆಡಿ, 9ಕ್ಕೆ 9 ಪಂದ್ಯ ಗೆದ್ದು ಬೀಗಿದೆ. ಈ ಮೂಲಕ 9 ಪಂದ್ಯದಲ್ಲಿ ಗೆದ್ದು, ಒಟ್ಟಾರೆ 18 ಅಂಕ ಗಳಿಸಿದೆ. ಹಾಗೇ +2.570 ರನ್‌ರೇಟ್ ಮೂಲಕ ಮತ್ತೊಂದು ದಾಖಲೆ ಬರೆದಿದ್ದು, ಇದೀಗ ನವೆಂಬರ್ 15 ರಂದು ನಡೆಯಲಿರುವ ಮೊದಲ ಸೆಮಿಫೈನಲ್ ಸಮರದಲ್ಲಿ ನ್ಯೂಜಿಲೆಂಡ್ ತಂಡವನ್ನ ಎದುರಿಸಲಿದೆ. ಹಾಗಾದರೆ ಭಾರತ ತಂಡ ಸೆಮಿಫೈನಲ್ ಗೆದ್ದು ಫೈನಲ್ ಪಂದ್ಯದಲ್ಲಿಯೂ ಜಯಗಳಿಸಿದರೆ, ಭಾರತದ ಆಟಗಾರರಿಗೆ ಎಷ್ಟು ಕೋಟಿ ಸಿಗಲಿದೆ.

ICC World Cup 2023 And Explore How Much Money Will Get Winners

84 ಕೋಟಿ ರೂಪಾಯಿ ಬಹುಮಾನ!

ಹೌದು, 'ಐಸಿಸಿ ಏಕದಿನ ವಿಶ್ವಕಪ್-2023'ರ ಬಹುಮಾನ ಮೊತ್ತ ಒಟ್ಟು 10 ಮಿಲಿಯನ್. ಅಂದರೆ 84 ಕೋಟಿ ರೂಪಾಯಿ. ಅಂದರೆ ಇದು ಒಂದೇ ತಂಡಕ್ಕೆ ಸಿಗುವುದಿಲ್ಲ, ಬದಲಾಗಿ ಇಡೀ 'ಐಸಿಸಿ ಏಕದಿನ ವಿಶ್ವಕಪ್-2023' ಟೂರ್ನಿಯ ಬಹುಮಾನದ ಮೊತ್ತವು ಇದಾಗಿದೆ. ನವೆಂಬರ್ 19 ರಂದು ಅಹಮದಾಬಾದ್‌ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಫೈನಲ್ ಪಂದ್ಯ ನಡೆಯಲಿದ್ದು, ವಿಜೇತರು 4 ಮಿಲಿಯನ್ ಡಾಲರ್ ಅಂದರೆ 33 ಕೋಟಿ ರೂಪಾಯಿ ಪ್ರೈಜ್ ಪಡೆಯಲಿದ್ದಾರೆ. ಹಾಗಾದರೆ ಇನ್ನು ಮಿಕ್ಕವರಿಗೆ ಎಷ್ಟು ಕೋಟಿ ರೂಪಾಯಿ ಸಿಗುತ್ತೆ?

ಬಹುಮಾನ ಹಂಚುವುದು ಹೇಗೆ ಗೊತ್ತಾ?

'ಐಸಿಸಿ ಏಕದಿನ ವಿಶ್ವಕಪ್-2023'ರ ಟೂರ್ನಿಯಲ್ಲಿ ಭಾಗವಹಿಸುವ ಪ್ರತಿ ತಂಡ ಅಂದರೆ, ಒಟ್ಟು 10 ತಂಡಗಳು ಹಣ ಹಂಚಿಕೊಳ್ಳಲಿವೆ. ಗ್ರೂಪ್ ಸ್ಟೇಜ್ ಅಂದ್ರೆ ಲೀಗ್ ಪಂದ್ಯಗಳಲ್ಲು ಪ್ರತಿ ಪಂದ್ಯದ ಗೆಲುವಿಗೆ ಇಷ್ಟು ಎಂದು ಹಣ ಹಂಚಲಾಗುತ್ತದೆ. ಪ್ರತಿ ಗೆಲುವಿಗೆ 40,000 ಡಾಲರ್ ಅಥವಾ ಅಂದಾಜು 33 ಲಕ್ಷ ರೂಪಾಯಿ ನೀಡಲಾಗುತ್ತಿದೆ. ಹಾಗೇ ಸೆಮಿಫೈನಲ್‌ಗೆ ಆಯ್ಕೆ ಆಗಲು ವಿಫಲವಾದ್ರೂ ತಂಡ 100,000 ಡಾಲರ್ ಪಡೆಯುತ್ತದೆ. ಒಟ್ಟು 6,00,000 ಡಾಲರ್ ಬಹುಮಾನದ ಮೊತ್ತ ಇಲ್ಲಿ ವಿವಿಧ ತಂಡಗಳಿಗೆ ಹಂಚಿಕೆಯಾಗುತ್ತದೆ.

ಎಲ್ಲರಿಗೂ ಸಿಗುತ್ತೆ ಕೈತುಂಬಾ ಕಾಸು!

ಸೆಮಿಫೈನಲ್ ಸೋಲುವ ಪ್ರತಿ ತಂಡಕ್ಕೆ 8,00,000 ಡಾಲರ್ ನೀಡಲಾಗುತ್ತದೆ, ಅಂದ್ರೆ ಈ ಮೊತ್ತ ಭಾರತದ ರೂಪಾಯಿ ಲೆಕ್ಕದಲ್ಲಿ ಅಂದಾಜು 6 ಕೋಟಿ 66 ಲಕ್ಷ. ಈ ರೀತಿ ಒಟ್ಟು, 2 ಸಮಿಫೈನಲ್ ಸೋಲುವ ತಂಡಗಳಿಗೆ 13 ಕೋಟಿ ರೂಪಾಯಿ ಹಂಚಿಕೆ ಮಾಡಲಾಗುತ್ತೆ. ಕೊನೆಯದಾಗಿ ಫೈನಲ್ ಗೆದ್ದು ಬೀಗುವ ಅಂದ್ರೆ ವಿಶ್ವಕಪ್ ಗೆಲ್ಲುವ ತಂಡಕ್ಕೆ 4 ಮಿಲಿಯನ್ ಡಾಲರ್ ಅಂದ್ರೆ 33 ಕೋಟಿ ರೂಪಾಯಿ ಬಹುಮಾನ ಹಣ ಸಿಗಲಿದೆ. ಹಾಗೂ ರನ್ನರ್ ಅಪ್ ತಂಡ 2 ಮಿಲಿಯನ್ ಡಾಲರ್ ಅಥವಾ 16.5 ಕೋಟಿ ರೂಪಾಯಿ ಬಹುಮಾನ ಪಡೆಯುತ್ತೆ.

ICC World Cup 2023 And Explore How Much Money Will Get Winners

ಒಟ್ನಲ್ಲಿ ಐಸಿಸಿ ವಿಶ್ವಕಪ್ ಗೆಲ್ಲುವ ತಂಡಕ್ಕೆ ಲಾಟರಿ ಗ್ಯಾರಂಟಿ. ಹೀಗಾಗಿ ಫೈನಲ್ ಪಂದ್ಯ ಭಾರಿ ಕುತೂಹಲ ಕೆರಳಿಸಿದೆ. ಈಗಿನ ಲೆಕ್ಕಾಚಾರದ ಪ್ರಕಾರ ಭಾರತ ಕ್ರಿಕೆಟ್ ತಂಡ ಗೆದ್ದು, 33 ಕೋಟಿ ರೂಪಾಯಿ ಬಹುಮಾನದ ಹಣ ಗೆಲ್ಲುವ ನೆಚ್ಚಿನ ತಂಡವಾಗಿದೆ. ಆದರೆ ಇದೀಗ ಸೆಮಿಫೈನಲ್ ಅಖಾಡದಲ್ಲಿ ನ್ಯೂಜಿಲೆಂಡ್ ತಂಡದ ವಿರುದ್ಧ ಭರ್ಜರಿ ಗೆಲುವು ಸಾಧಿಸಲು ಭಾರತ ಸಜ್ಜಾಗಬೇಕಿದ್ದು, ಬುಧವಾರ ಈ ಸೆಮಿಫೈನಲ್ ಪಂದ್ಯವು ನಡೆಯಲಿದೆ. ಹೀಗಾಗಿ ಶತಕೋಟಿ ಭಾರತೀಯರು ಉಸಿರು ಬಿಗಿಹಿಡಿದು ಮ್ಯಾಚ್‌ಗಾಗಿ ಕಾಯುತ್ತಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+