T20 World Cup: ಅಕ್ಟೋಬರ್ 6ರಂದು ಭಾರತ-ಪಾಕಿಸ್ತಾನ ಮುಖಾಮುಖಿ; ಟಿ20 ವಿಶ್ವಕಪ್ ವೇಳಾಪಟ್ಟಿ ಪ್ರಕಟ!
ಬಾಂಗ್ಲಾದೇಶದಲ್ಲಿ ದಂಗೆ ನಡೆಯುತ್ತಿರುವ ಕಾರಣ ಅಲ್ಲಿ ನಡೆಯಬೇಕಿದ್ದ ಮಹಿಳಾ ಟಿ20 ವಿಶ್ವಕಪ್ ಈಗ ಯುಎಇಗೆ ಸ್ಥಳಾಂತರಿಸಲಾಗಿದೆ. ಯುಎಇಗೆ ಟಿ20 ವಿಶ್ವಕಪ್ ಸ್ಥಳಾಂತರದ ಬಗ್ಗೆ ಐಸಿಸಿ ಖಚಿತಪಡಿಸಿದ ಬೆನ್ನಲ್ಲೇ ಇದೀಗ ಪರಿಷ್ಕೃತ ವೇಳಾಪಟ್ಟಿಯನ್ನು ಪ್ರಕಟಿಸಿದೆ. ಅಕ್ಟೋಬರ್ 3ರಂದು ಪಂದ್ಯಾವಳಿಗೆ ಚಾಲನೆ ಸಿಗಲಿದ್ದು, ಅಕ್ಟೋಬರ್ 20ರಂದು ಫೈನಲ್ ಪಂದ್ಯ ನಡೆಯಲಿದೆ. ದುಬೈ ಮತ್ತು ಶಾರ್ಜಾ ಕ್ರೀಡಾಂಗಣದಲ್ಲಿ ಎಲ್ಲಾ ಪಂದ್ಯಗಳು ನಡೆಯಲಿವೆ.
ಮಹಿಳಾ ವಿಶ್ವಕಪ್ ಪಂದ್ಯಾವಳಿಯಲ್ಲಿ ಒಟ್ಟು 24 ಪಂದ್ಯಗಳು ನಡೆಯಲಿದ್ದು, ಅಕ್ಟೋಬರ್ 20 ರಂದು ದುಬೈನಲ್ಲಿ ಫೈನಲ್ ಪಂದ್ಯ ನಡೆಯಲಿದೆ. ಒಟ್ಟು 10 ತಂಡಗಳು ಈ ವಿಶ್ವಕಪ್‌ನಲ್ಲಿ ಸ್ಪರ್ಧಿಸಲಿವೆ.

ಭಾರತ ತಂಡದ ಜೊತೆ ಆರು ಬಾರಿಯ ವಿಶ್ವ ಚಾಂಪಿಯನ್ ಆಸ್ಟ್ರೇಲಿಯಾ, ಸಾಂಪ್ರದಾಯಿಕ ಎದುರಾಳಿಗಳಾದ ಪಾಕಿಸ್ತಾನ, ನ್ಯೂಜಿಲೆಂಡ್ ಮತ್ತು ಏಷ್ಯಾಕಪ್ ವಿಜೇತ ಶ್ರೀಲಂಕಾ ತಂಡಗಳು ಎ ಗುಂಪಿನಲ್ಲಿ ಆಡಲಿವೆ. ಬಿ ಗುಂಪಿನಲ್ಲಿ ದಕ್ಷಿಣ ಆಫ್ರಿಕಾ, ವೆಸ್ಟ್ ಇಂಡೀಸ್, ಇಂಗ್ಲೆಂಡ್, ಆತಿಥೇಯ ಬಾಂಗ್ಲಾದೇಶ ಮತ್ತು ಸ್ಕಾಟ್ಲೆಂಡ್ ಸೇರಿವೆ.
ಅಕ್ಟೋಬರ್ 3ರಂದು ಗುರುವಾರ ನಡೆಯುವ ಮೊದಲ ಪಂದ್ಯದಲ್ಲಿ ಬಾಂಗ್ಲಾದೇಶ ಮತ್ತು ಸ್ಕಾಟ್ಲೆಂಡ್ ತಂಡಗಳು ಮುಖಾಮುಖಿಯಾಗಲಿವೆ. ಅಕ್ಟೋಬರ್ 4ರಂದು ಭಾರತ ಟಿ20 ವಿಶ್ವಕಪ್‌ನ ತಮ್ಮ ಮೊದಲ ಪಂದ್ಯದಲ್ಲಿ ನ್ಯೂಜಿಲೆಂಡ್ ತಂಡವನ್ನು ಎದುರಿಸಲಿದ್ದು ದುಬೈನಲ್ಲಿ ಈ ಪಂದ್ಯ ನಡೆಯಲಿದೆ.
ಭಾರತ-ಪಾಕಿಸ್ತಾನ ಪಂದ್ಯ ಯಾವಾಗ?
ಇನ್ನು ಬಹುನಿರೀಕ್ಷಿತ ಭಾರತ ಮತ್ತು ಪಾಕಿಸ್ತಾನ ನಡುವಿನ ಪಂದ್ಯ ಅಕ್ಟೋಬರ್ 6ರಂದು ನಡೆಯಲಿದೆ. ದುಬೈನಲ್ಲಿ ಈ ಪಂದ್ಯ ನಡೆಯಲಿದ್ದು, ಸ್ಥಳೀಯ ಕಾಲಮಾನ 3.30ಕ್ಕೆ ಪಂದ್ಯ ಆರಂಭವಾಗಲಿದೆ.
| ದಿನಾಂಕ | ದಿನ | ತಂಡ 1 | ತಂಡ 2 | ಸ್ಥಳ | ಸಮಯ (IST) |
| ಅಕ್ಟೋಬರ್ 3 | ಗುರುವಾರ | ಬಾಂಗ್ಲಾದೇಶ | ಸ್ಕಾಟ್ಲೆಂಡ್ | ಶಾರ್ಜಾ | ಮಧ್ಯಾಹ್ನ 3.30 |
| ಅಕ್ಟೋಬರ್ 3 | ಗುರುವಾರ | ಪಾಕಿಸ್ತಾನ | ಶ್ರೀಲಂಕಾ | ಶಾರ್ಜಾ | ಸಂಜೆ 7.30 |
| ಅಕ್ಟೋಬರ್ 4 | ಶುಕ್ರವಾರ | ದಕ್ಷಿಣ ಆಫ್ರಿಕಾ | ವೆಸ್ಟ್ ಇಂಡೀಸ್ | ದುಬೈ | ಮಧ್ಯಾಹ್ನ 3.30 |
| ಅಕ್ಟೋಬರ್ 4 | ಶುಕ್ರವಾರ | ಭಾರತ | ನ್ಯೂಜಿಲೆಂಡ್ | ದುಬೈ | ಸಂಜೆ 7.30 |
| ಅಕ್ಟೋಬರ್ 5 | ಶನಿವಾರ | ಬಾಂಗ್ಲಾದೇಶ | ಇಂಗ್ಲೆಂಡ್ | ಶಾರ್ಜಾ | ಮಧ್ಯಾಹ್ನ 3.30 |
| ಅಕ್ಟೋಬರ್ 5 | ಶನಿವಾರ | ಆಸ್ಟ್ರೇಲಿಯಾ | ಶ್ರೀಲಂಕಾ | ಶಾರ್ಜಾ | ಸಂಜೆ 7.30 |
| ಅಕ್ಟೋಬರ್ 6 | ಭಾನುವಾರ | ಭಾರತ | ಪಾಕಿಸ್ತಾನ | ದುಬೈ | ಮಧ್ಯಾಹ್ನ 3.30 |
| ಅಕ್ಟೋಬರ್ 6 | ಭಾನುವಾರ | ವೆಸ್ಟ್ ಇಂಡೀಸ್ | ಸ್ಕಾಟ್ಲೆಂಡ್ | ದುಬೈ | ಸಂಜೆ 7.30 |
| ಅಕ್ಟೋಬರ್ 7 | ಸೋಮವಾರ | ಇಂಗ್ಲೆಂಡ್ | ದಕ್ಷಿಣ ಆಫ್ರಿಕಾ | ಶಾರ್ಜಾ | ಸಂಜೆ 7.30 |
| ಅಕ್ಟೋಬರ್ 8 | ಮಂಗಳವಾರ | ಆಸ್ಟ್ರೇಲಿಯಾ | ನ್ಯೂಜಿಲೆಂಡ್ | ಶಾರ್ಜಾ | ಸಂಜೆ 7.30 |
| ಅಕ್ಟೋಬರ್ 9 | ಬುಧವಾರ | ದಕ್ಷಿಣ ಆಫ್ರಿಕಾ | ಸ್ಕಾಟ್ಲೆಂಡ್ | ದುಬೈ | ಮಧ್ಯಾಹ್ನ 3.30 |
| ಅಕ್ಟೋಬರ್ 9 | ಬುಧವಾರ | ಭಾರತ | ಶ್ರೀಲಂಕಾ | ದುಬೈ | ಸಂಜೆ 7.30 |
| ಅಕ್ಟೋಬರ್ 10 | ಗುರುವಾರ | ಬಾಂಗ್ಲಾದೇಶ | ದಕ್ಷಿಣ ಆಫ್ರಿಕಾ | ಶಾರ್ಜಾ | ಸಂಜೆ 7.30 |
| ಅಕ್ಟೋಬರ್ 11 | ಶುಕ್ರವಾರ | ಆಸ್ಟ್ರೇಲಿಯಾ | ಪಾಕಿಸ್ತಾನ | ದುಬೈ | ಸಂಜೆ 7.30 |
| ಅಕ್ಟೋಬರ್ 12 | ಶನಿವಾರ | ನ್ಯೂಜಿಲೆಂಡ್ | ಶ್ರೀಲಂಕಾ | ಶಾರ್ಜಾ | ಮಧ್ಯಾಹ್ನ 3.30 |
| ಅಕ್ಟೋಬರ್ 12 | ಶನಿವಾರ | ಬಾಂಗ್ಲಾದೇಶ | ದಕ್ಷಿಣ ಆಫ್ರಿಕಾ | ದುಬೈ | ಸಂಜೆ 7.30 |
| ಅಕ್ಟೋಬರ್ 13 | ಭಾನುವಾರ | ಇಂಗ್ಲೆಂಡ್ | ಸ್ಕಾಟ್ಲೆಂಡ್ | ಶಾರ್ಜಾ | ಮಧ್ಯಾಹ್ನ 3.30 |
| ಅಕ್ಟೋಬರ್ 13 | ಭಾನುವಾರ | ಭಾರತ | ಆಸ್ಟ್ರೇಲಿಯಾ | ಶಾರ್ಜಾ | ಸಂಜೆ 7.30 |
| ಅಕ್ಟೋಬರ್ 14 | ಸೋಮವಾರ | ಪಾಕಿಸ್ತಾನ | ನ್ಯೂಜಿಲೆಂಡ್ | ದುಬೈ | ಸಂಜೆ 7.30 |
| ಅಕ್ಟೋಬರ್ 15 | ಮಂಗಳವಾರ | ಇಂಗ್ಲೆಂಡ್ | ವೆಸ್ಟ್ ಇಂಡೀಸ್ | ದುಬೈ | ಸಂಜೆ 7.30 |
| ಅಕ್ಟೋಬರ್ 17 | ಗುರುವಾರ | ಸೆಮಿಫೈನಲ್ | ದುಬೈ | ಸಂಜೆ 7.30 | |
| ಅಕ್ಟೋಬರ್ 18 | ಶುಕ್ರವಾರ | ಸೆಮಿಫೈನಲ್ | ಶಾರ್ಜಾ | ಸಂಜೆ 7.30 | |
| ಅಕ್ಟೋಬರ್ 20 | ಭಾನುವಾರ | ಫೈನಲ್ | ದುಬೈ | ಸಂಜೆ 7.30 | |
-
RCB ಮಾರಾಟದ ಬಗ್ಗೆ ವಿಜಯ್ ಮಲ್ಯ ಭಾವುಕ ಪೋಸ್ಟ್ ; ವಿರಾಟ್ ಕೊಹ್ಲಿ ಬಗ್ಗೆ ಅವರು ಹೇಳಿದ್ದೇನು? ಇಲ್ಲಿದೆ ಮಾಹಿತಿ -
Petrol Diesel Shortage: ಪೆಟ್ರೋಲ್, ಡೀಸೆಲ್ ಖಾಲಿಯಾಗುತ್ತೆ ಅನ್ನೋ ಸುಳ್ಳು ವದಂತಿಗಳಿಗೆ ಕಿವಿಕೊಡಬೇಡಿ; ಇಂಡಿಯನ್ ಆಯಿಲ್ -
ಶುಭ್ಮನ್ ಗಿಲ್ ಭೇಟಿಯಾದ ಅನನ್ಯಾ ಬಿರ್ಲಾ; ಆರ್ಸಿಬಿ ಹೊಸ ಮಾಲೀಕನ ಸಹೋದರಿಗೆ ಗುಜರಾತ್ ಜೆರ್ಸಿನಾ ಎಂದ ನೆಟ್ಟಿಗರು -
Gold Rate: ಸತತ ಕುಸಿತ ಕಾಣುತ್ತಿರುವ ಬಂಗಾರದ ಬೆಲೆ; ಬೆಂಗಳೂರಿನಲ್ಲಿ ಇಂದಿನ ಚಿನ್ನ, ಬೆಳ್ಳಿ ದರ ಎಷ್ಟು ಗೊತ್ತಾ? -
Gold Price: ಏಪ್ರಿಲ್ನಲ್ಲಿ ಚಿನ್ನದ ದರ ಭವಿಷ್ಯ: ಹೇಗಿರುತ್ತದೆ ಮುಂದಿನ ತಿಂಗಳು ಚಿನ್ನದ ಬೆಲೆ? ವಿಶ್ಲೇಷಣೆ -
ತಿಂಗಳಿಗೆ 10 ಸಾವಿರ ರೂ. ಥೆರಪಿಗೆ, 3 ಸಾವಿರ ನೇಲ್ ಆರ್ಟ್ಗೆ! ಬೆಂಗಳೂರು ಯುವತಿಯ 'Gen Z’' ಖರ್ಚಿನ ಪಟ್ಟಿ Viral -
Ananya Birla: ಆರ್ಸಿಬಿ ಅಭಿಮಾನಿಗಳು ಹಾಗೂ ಸಹೋದರನಿಗೆ ಅನನ್ಯಾ ಬಿರ್ಲಾ ವಿಶೇಷ ಸಂದೇಶ -
Karnataka Weather: ಬಿಸಿಲಿನಿಂದ ಕಂಗೆಟ್ಟಿದ್ದ ಕರುನಾಡಿಗೆ ತಂಪೆರೆಯಲಿದ್ದಾನೆ ವರುಣ; ಎಲ್ಲೆಲ್ಲಿ ಮಳೆ? ಇಲ್ಲಿದೆ ಮಾಹಿತಿ -
March 25 Horoscope: ಈ 3 ರಾಶಿಗಳಿಗೆ ಅದೃಷ್ಟದ ಬಾಗಿಲು ತೆರೆದುಕೊಳ್ಳಲಿದೆ -
SSLC ಇಂಗ್ಲೀಷ್ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು, ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Karnataka Rains: ಧಾರಾಕಾರ ಮಳೆ! 7 ಜಿಲ್ಲೆಗಳಿಗೆ 'ಆರೆಂಜ್', 15ಕ್ಕೂ ಹೆಚ್ಚು ಜಿಲ್ಲೆಗಳಿಗೆ 'ಯೆಲ್ಲೋ' ಅಲರ್ಟ್ -
Gold: ಚಿನ್ನ ಖರೀದಿ ಮತ್ತು ಮಾರಾಟಕ್ಕೆ ಇದು ಒಳ್ಳೆಯ ಸಮಯವಲ್ಲ ಎಂದ ಅರ್ಥಶಾಸ್ತ್ರಜ್ಞೆ ಮೇರಿ ಜಾರ್ಜ್












Click it and Unblock the Notifications