ICC T20 Womens World Cup: ಅಕ್ಟೋಬರ್ 6ರಂದು ಭಾರತ-ಪಾಕಿಸ್ತಾನ ಫೈಟ್
ಜೂನ್‌ನಲ್ಲಿ ವೆಸ್ಟ್ ಇಂಡೀಸ್ ಹಾಗೂ ಅಮೆರಿಕದ ಅತಿಥ್ಯದಲ್ಲಿ ಪುರುಷರ ಟಿ20 ವಿಶ್ವಕಪ್ ನಡೆಯುತ್ತಿದೆ. ಈ ಟೂರ್ನಿಯ ಮೇಲೆ ಎಲ್ಲರ ಚಿತ್ತ ನೆಟ್ಟಿದೆ. ಈಗ ಐಸಿಸಿ ಮಹಿಳಾ ಟಿ20 ವಿಶ್ವಕಪ್ ವೇಳಾ ಪಟ್ಟಿಯನ್ನು ಸಹ ಬಿಡುಗಡೆ ಮಾಡಿದೆ. ಈ ಟೂರ್ನಿಯಲ್ಲಿ ಎಷ್ಟು ತಂಡಗಳು ಭಾಗವಹಿಸುತ್ತಿವೆ. ಭಾರತ ಯಾವ ಗುಂಪಿನಲ್ಲಿ ಎಂಬ ಬಗ್ಗೆ ಕಂಪ್ಲೀಟ್ ರಿಪೋರ್ಟ್ ಇಲ್ಲಿದೆ.
ಮಹಿಳೆಯರ T20 ವಿಶ್ವಕಪ್ 2024 ಅಕ್ಟೋಬರ್ 3 ರಂದು ಆರಂಭವಾಗಲಿದೆ. ಮೊದಲ ಪಂದ್ಯ ಇಂಗ್ಲೆಂಡ್ ಮತ್ತು ದಕ್ಷಿಣ ಆಫ್ರಿಕಾ ನಡುವೆ ಢಾಕಾದಲ್ಲಿ ನಡೆಯಲಿದೆ. ಎಲ್ಲಾ ತಂಡಗಳು ತಮ್ಮ ತಮ್ಮ ಗುಂಪುಗಳಲ್ಲಿ ತಲಾ ನಾಲ್ಕು ಪಂದ್ಯಗಳನ್ನು ಆಡಲಿವೆ. ಈ ಟೂರ್ನಿಯ ಫೈನಲ್ ಪಂದ್ಯ ಅಕ್ಟೋಬರ್ 20 ರಂದು ನಡೆಯಲಿದೆ.

ಭಾರತ-ಪಾಕ್ ಫೈಟ್
ಭಾರತ ಮತ್ತು ಪಾಕಿಸ್ತಾನ ನಡುವಿನ ಪಂದ್ಯಕ್ಕಾಗಿ ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ. 2024 ರ ಮಹಿಳಾ ಟಿ20 ವಿಶ್ವಕಪ್‌ನಲ್ಲಿ ಭಾರತ ಮತ್ತು ಪಾಕಿಸ್ತಾನ ನಡುವಿನ ಪಂದ್ಯವು ಅಕ್ಟೋಬರ್ 6 ರಂದು ನಡೆಯಲಿದೆ. ಇದಾದ ಬಳಿಕ ಟೀಂ ಇಂಡಿಯಾ ಕ್ವಾಲಿಫೈಯರ್ 1ರ ತಂಡವನ್ನು ಎದುರಿಸಲಿದೆ.
ಭಾರತ ಮಹಿಳಾ ಕ್ರಿಕೆಟ್ ತಂಡವು ಅಕ್ಟೋಬರ್ 4 ರಂದು ಮಹಿಳಾ T20 ವಿಶ್ವಕಪ್ 2024 ರಲ್ಲಿ ತನ್ನ ಅಭಿಯಾನವನ್ನು ಪ್ರಾರಂಭಿಸಲಿದೆ. ಟೀಂ ಇಂಡಿಯಾದ ಮೊದಲ ಪಂದ್ಯ ನ್ಯೂಜಿಲೆಂಡ್ ವಿರುದ್ಧ ನಡೆಯಲಿದೆ. ಇದಾದ ನಂತರ ಭಾರತ ತಂಡ ಅಕ್ಟೋಬರ್ 9 ರಂದು ಕ್ವಾಲಿಫೈಯರ್ 1 ರೊಂದಿಗೆ ಸ್ಪರ್ಧಿಸಲಿದೆ.
ಸೆಮಿಫೈನಲ್, ಫೈನಲ್ ಯಾವಾಗ?
ಅಕ್ಟೋಬರ್ 13 ರಂದು ಭಾರತ ಮತ್ತು ಆಸ್ಟ್ರೇಲಿಯಾ ನಡುವೆ ಪಂದ್ಯ ನಡೆಯಲಿದೆ. ಅಕ್ಟೋಬರ್ 17 ರಂದು ಮೊದಲ ಸೆಮಿಫೈನಲ್ ಮತ್ತು ಎರಡನೇ ಸೆಮಿಫೈನಲ್ ಅಕ್ಟೋಬರ್ 18 ರಂದು ನಡೆಯಲಿದೆ. ಅಕ್ಟೋಬರ್ 20 ರಂದು ಫೈನಲ್ ಪಂದ್ಯ ನಡೆಯಲಿದೆ.
ಪ್ರಶಸ್ತಿಯ ಬರ
ಟಿ20 ವಿಶ್ವಕಪ್‌ನಲ್ಲಿ ಭಾರತ ಇನ್ನೂ ಒಂದೇ ಒಂದು ಪ್ರಶಸ್ತಿಯನ್ನು ಗೆಲ್ಲಲು ಸಾಧ್ಯವಾಗಿಲ್ಲ. ಇದರಲ್ಲಿ ಆಸ್ಟ್ರೇಲಿಯಾ ಅತಿ ಹೆಚ್ಚು ಪ್ರಶಸ್ತಿಗಳನ್ನು ಗೆದ್ದುಕೊಂಡಿದೆ. ಆಸ್ಟ್ರೇಲಿಯಾ 6 ಬಾರಿ ಪ್ರಶಸ್ತಿ ಜಯಿಸಿದೆ. ಇಂಗ್ಲೆಂಡ್ ಮತ್ತು ವೆಸ್ಟ್ ಇಂಡೀಸ್ ತಲಾ 1 ಬಾರಿ ಪ್ರಶಸ್ತಿ ಗೆದ್ದಿವೆ. T20 ವಿಶ್ವಕಪ್ 2016 ಅನ್ನು ಭಾರತದಲ್ಲಿ ಮಾತ್ರ ಆಯೋಜಿಸಲಾಗಿತ್ತು. ಇದರ ಅಂತಿಮ ಪಂದ್ಯ ಈಡನ್ ಗಾರ್ಡನ್ಸ್ ನಲ್ಲಿ ನಡೆಯಿತು. ಟೀಂ ಇಂಡಿಯಾ ಒಮ್ಮೆ ಫೈನಲ್ ತಲುಪಿದೆ. ಇದನ್ನು 2020 ರಲ್ಲಿ ಆಸ್ಟ್ರೇಲಿಯಾ ಸೋಲಿಸಿತು.
ಮಹಿಳೆಯರ T20 ವಿಶ್ವಕಪ್ 2024 ಗುಂಪುಗಳು
ಗುಂಪು ಎ: ಭಾರತ, ಆಸ್ಟ್ರೇಲಿಯಾ, ಪಾಕಿಸ್ತಾನ, ನ್ಯೂಜಿಲೆಂಡ್, ಕ್ವಾಲಿಫೈಯರ್ 1.
ಗುಂಪು ಬಿ: ಬಾಂಗ್ಲಾದೇಶ, ಇಂಗ್ಲೆಂಡ್, ದಕ್ಷಿಣ ಆಫ್ರಿಕಾ, ವೆಸ್ಟ್ ಇಂಡೀಸ್, ಕ್ವಾಲಿಫೈಯರ್ 2.
ಭಾರತದ ವೇಳಾಪಟ್ಟಿ
| ವಿರುದ್ಧ | ದಿನಾಂಕ | ಸಮಯ |
| ನ್ಯೂಜಿಲೆಂಡ್ | ಅಕ್ಟೋಬರ್ 4 | ರಾತ್ರಿ 7ಕ್ಕೆ |
| ಪಾಕಿಸ್ತಾನ | ಅಕ್ಟೋಬರ್ 6 | ರಾತ್ರಿ 7ಕ್ಕೆ |
| ಕ್ವಾಲಿಫೈಯರ್ 1 | ಅಕ್ಟೋಬರ್ 9 | ರಾತ್ರಿ 7ಕ್ಕೆ |
| ಆಸ್ಟ್ರೇಲಿಯಾ | ಅಕ್ಟೋಬರ್ 13 | ರಾತ್ರಿ 7ಕ್ಕೆ |












Click it and Unblock the Notifications