Champions Trophy: ಭಾರತದ ಪಂದ್ಯಗಳು ಯಾವಾಗ? ಸಂಪೂರ್ಣ ವೇಳಾಪಟ್ಟಿ
ಇನ್ನು ಮೂರು ತಿಂಗಳು ಕ್ರಿಕೆಟ್ ಪ್ರೇಮಿಗಳಿಗೆ ಭರ್ಜರಿ ಮನರಂಜನೆ ಸಿಗಲಿದೆ. ಈಗಾಗಲೇ ಮಹಿಳಾ ಪ್ರೀಮಿಯರ್ ಲೀಗ್ ಆರಂಭವಾಗಿದ್ದು, ಫೆಬ್ರವರಿ 19 (ಬುಧವಾರ) ರಿಂದ ಐಸಿಸಿ ಚಾಂಪಿಯನ್ಸ್ ಟ್ರೋಫಿ ಪಂದ್ಯಾವಳಿ ಆರಂಭವಾಗಲಿದೆ. ಮಾರ್ಚ್ 22ರಿಂದ ಇಂಡಿಯನ್ ಪ್ರೀಮಿಯರ್ ಲೀಗ್ ಆರಂಭವಾಗಲಿದೆ. ಬುಧವಾರ ಐಸಿಸಿ ಚಾಂಪಿಯನ್ಸ್ ಟ್ರೋಫಿಯ ಮೊದಲ ಪಂದ್ಯ ನಡೆಯಲಿದ್ದು, ಆತಿಥೇಯ ಪಾಕಿಸ್ತಾನ ಮತ್ತು ನ್ಯೂಜಿಲೆಂಡ್ ಮುಖಾಮುಖಿಯಾಗಲಿವೆ.
ಕರಾಚಿಯ ನ್ಯಾಷನಲ್ ಸ್ಟೇಡಿಯಂನಲ್ಲಿ ಉದ್ಘಾಟನಾ ಪಂದ್ಯ ನಡೆಯಲಿದ್ದು, ಫೆಬ್ರವರಿ 20 ರಂದು ಭಾರತ ಚಾಂಪಿಯನ್ಸ್ ಟ್ರೋಫಿಯ ಮೊದಲ ಪಂದ್ಯ ಆಡಲಿದೆ. 2017ರಲ್ಲಿ ಕೊನೆಯಬಾರಿಗೆ ಚಾಂಪಿಯನ್ಸ್ ಟ್ರೋಫಿ ಆಯೋಜನೆ ಮಾಡಲಾಗಿತ್ತು, 2017ರ ಚಾಂಪಿಯನ್ಸ್ ಟ್ರೋಫಿಯಲ್ಲಿ ಭಾರತ ಮತ್ತು ಪಾಕಿಸ್ತಾನ ಫೈನಲ್‌ನಲ್ಲಿ ಮುಖಾಮುಖಿಯಾಗಿದ್ದವು ಭಾರತವನ್ನು ಮಣಿಸಿದ್ದ ಪಾಕಿಸ್ತಾನ ಪ್ರಶಸ್ತಿ ಗೆದ್ದುಕೊಂಡಿತ್ತು. ಅದಾದ 8 ವರ್ಷಗಳ ಬಳಿಕ ಐಸಿಸಿ ಮತ್ತೆ ಚಾಂಪಿಯನ್ಸ್ ಟ್ರೋಫಿ ಆಯೋಜನೆ ಮಾಡಿದೆ.

ಫೆಬ್ರವರಿ 19 ರಿಂದ ಪಂದ್ಯಾವಳಿ ಆರಂಭವಾಗಲಿದ್ದು ಮಾರ್ಚ್ 9 ರಂದು ಫೈನಲ್ ಪಂದ್ಯ ನಡೆಯಲಿದೆ. ಭಾರತ ಪಾಕಿಸ್ತಾನಕ್ಕೆ ಹೋಗಲು ನಿರಾಕರಿಸಿದ್ದರಿಂದ ದುಬೈನಲ್ಲಿ ಭಾರತದ ಪಂದ್ಯಗಳು ನಡೆಯಲಿವೆ.
ಒಟ್ಟು ಎಂಟು ತಂಡಗಳು ಪ್ರಶಸ್ತಿಗಾಗಿ ಸೆಣೆಸುತ್ತಿದ್ದು ಎರಡು ಗುಂಪುಗಳಾಗಿ ವಿಂಗಡಿಸಲಾಗಿದೆ. ಎ ಗುಂಪಿನಲ್ಲಿ ಪಾಕಿಸ್ತಾನ, ಭಾರತ, ನ್ಯೂಜಿಲೆಂಡ್, ಬಾಂಗ್ಲಾದೇಶ ತಂಡಗಳಿದ್ದರೆ, ಬಿ ಗುಂಪಿನಲ್ಲಿ ದಕ್ಷಿಣ ಆಫ್ರಿಕಾ, ಆಸ್ಟ್ರೇಲಿಯಾ, ಅಫ್ಘಾನಿಸ್ತಾನ, ಇಂಗ್ಲೆಂಡ್ ಆಡಲಿವೆ.
ಚಾಂಪಿಯನ್ಸ್ ಟ್ರೋಫಿ ವೇಳಾಪಟ್ಟಿ ಇಲ್ಲಿದೆ
ಫೆಬ್ರವರಿ 19, ಪಾಕಿಸ್ತಾನ v ನ್ಯೂಜಿಲೆಂಡ್, ಕರಾಚಿ, ಪಾಕಿಸ್ತಾನ
ಫೆಬ್ರವರಿ 20, ಬಾಂಗ್ಲಾದೇಶ v ಭಾರತ, ದುಬೈ
ಫೆಬ್ರವರಿ 21, ಅಫ್ಘಾನಿಸ್ತಾನ v ದಕ್ಷಿಣ ಆಫ್ರಿಕಾ, ಕರಾಚಿ, ಪಾಕಿಸ್ತಾನ
ಫೆಬ್ರವರಿ 22, ಆಸ್ಟ್ರೇಲಿಯಾ v ಇಂಗ್ಲೆಂಡ್, ಲಾಹೋರ್, ಪಾಕಿಸ್ತಾನ
ಫೆಬ್ರವರಿ 23, ಪಾಕಿಸ್ತಾನ v ಭಾರತ, ದುಬೈ
ಫೆಬ್ರವರಿ 24, ಬಾಂಗ್ಲಾದೇಶ v ನ್ಯೂಜಿಲೆಂಡ್, ರಾವಲ್ಪಿಂಡಿ, ಪಾಕಿಸ್ತಾನ
ಫೆಬ್ರವರಿ 25, ಆಸ್ಟ್ರೇಲಿಯಾ v ದಕ್ಷಿಣ ಆಫ್ರಿಕಾ, ರಾವಲ್ಪಿಂಡಿ, ಪಾಕಿಸ್ತಾನ
ಫೆಬ್ರವರಿ 26, ಅಫ್ಘಾನಿಸ್ತಾನ v ಇಂಗ್ಲೆಂಡ್, ಲಾಹೋರ್, ಪಾಕಿಸ್ತಾನ
ಫೆಬ್ರವರಿ 27, ಪಾಕಿಸ್ತಾನ v ಬಾಂಗ್ಲಾದೇಶ, ರಾವಲ್ಪಿಂಡಿ, ಪಾಕಿಸ್ತಾನ
ಫೆಬ್ರವರಿ 28, ಅಫ್ಘಾನಿಸ್ತಾನ v ಆಸ್ಟ್ರೇಲಿಯಾ, ಲಾಹೋರ್, ಪಾಕಿಸ್ತಾನ
ಮಾರ್ಚ್ 1, ದಕ್ಷಿಣ ಆಫ್ರಿಕಾ v ಇಂಗ್ಲೆಂಡ್, ಕರಾಚಿ, ಪಾಕಿಸ್ತಾನ
ಮಾರ್ಚ್ 2, ನ್ಯೂಜಿಲೆಂಡ್ v ಭಾರತ, ದುಬೈ
ಮಾರ್ಚ್ 4, ಸೆಮಿಫೈನಲ್ 1, ದುಬೈ
ಮಾರ್ಚ್ 5, ಸೆಮಿಫೈನಲ್ 2, ಲಾಹೋರ್, ಪಾಕಿಸ್ತಾನ
ಮಾರ್ಚ್ 9, ಫೈನಲ್, ಲಾಹೋರ್ (ಭಾರತ ಫೈನಲ್ ಪ್ರವೇಶಿಸಿದರೆ ಈ ಪಂದ್ಯವನ್ನು ದುಬೈನಲ್ಲಿ ಆಡಲಾಗುತ್ತದೆ)
ಮಾರ್ಚ್ 10, ಮೀಸಲು ದಿನ
ಎಲ್ಲಾ ಪಂದ್ಯಗಳು ಭಾರತೀಯ ಕಾಲಮಾನ ಮಧ್ಯಾಹ್ನ 2.30 ಗಂಟೆಗೆ ಆರಂಭವಾಗಲಿವೆ.
ನೇರಪ್ರಸಾರ ವೀಕ್ಷಣೆ ಎಲ್ಲಿ
ಚಾಂಪಿಯನ್ಸ್ ಟ್ರೋಫಿ 2025 ಪಂದ್ಯಗಳನ್ನು ಸ್ಟಾರ್ ಸ್ಪೋರ್ಟ್ಸ್ ನೆಟ್‌ವರ್ಕ್‌ನಲ್ಲಿ ನೇರ ಪ್ರಸಾರ ಮಾಡಲಾಗುತ್ತದೆ. ಜಿಯೋ ಹಾಟ್‌ಸ್ಟಾರ್ ಒಟಿಟಿ ವೇದಿಕೆಯಲ್ಲಿ ಕೂಡ ಪಂದ್ಯಗಳನ್ನು ವೀಕ್ಷಿಸಬಹುದು.












Click it and Unblock the Notifications