India vs England: ಸೆಮಿಫೈನಲ್‌ನಲ್ಲಿ ಭಾರತಕ್ಕಿದ್ದ ದೊಡ್ಡ ಆತಂಕ ದೂರ ಮಾಡಿದ ಐಸಿಸಿ

ಟಿ20 ವಿಶ್ವಕಪ್ ಸೂಪರ್ 8 ಹಂತದ ಪಂದ್ಯಗಳು ಮುಕ್ತಾಯವಾಗಿದ್ದು, ಸೆಮಿಫೈನಲ್‌ ಪಂದ್ಯಗಳು ಜೂನ್ 27ರಂದು ನಡೆಯಲಿವೆ. ಭಾರತ, ಅಫ್ಘಾನಿಸ್ತಾನ, ಇಂಗ್ಲೆಂಡ್, ದಕ್ಷಿಣ ಆಫ್ರಿಕಾ ಸೆಮಿಫೈನಲ್‌ ತಲುಪಿದ ನಾಲ್ಕು ತಂಡಗಳಾಗಿವೆ.

ಭಾರತ vs ಇಂಗ್ಲೆಂಡ್ ಸೆಮಿಫೈನಲ್‌ನಲ್ಲಿ ಮುಖಾಮುಖಿಯಾಗಲಿವೆ. ಈ ಪಂದ್ಯಕ್ಕಾಗಿ ಐಸಿಸಿ ಅಂಪೈರ್ ಗಳನ್ನು ಘೋಷಿಸಿದೆ. ಕ್ರಿಸ್ ಗಫಾನಿ ಮತ್ತು ರಾಡ್ ಟಕರ್ ಮಹತ್ವದ ಪಂದ್ಯಕ್ಕೆ ಆನ್‌ಫೀಲ್ಡ್ ಅಂಪೈರ್‍‌ಗಳಾಗಲಿದ್ದಾರೆ. ಈ ಸುದ್ದಿ ಕೇಳಿದ ಭಾರತ ತಂಡದ ಅಭಿಮಾನಿಗಳು ನಿಟ್ಟುಸಿರು ಬಿಟ್ಟಿದ್ದಾರೆ.

Icc announces umpires india vs england semifinal

ಮುಖ್ಯವಾಗಿ ರಿಚರ್ಡ್ ಕೆಟಲ್‌ಬರೋ ಅವರು ಈ ಪಂದ್ಯದಕ್ಕೆ ಅಂಪೈರ್ ಆಗಿ ಘೋಷಣೆ ಮಾಡದೇ ಇರುವುದು ಅಭಿಮಾನಿಗಳ ಖುಷಿ ಹೆಚ್ಚಲು ಕಾರಣವಾಗಿದೆ!

ಕೆಟಲ್‌ಬರೋ ಭಾರತಕ್ಕೆ ದುರಾದೃಷ್ಟ!

ಕೆಟಲ್‌ಬರೋ ಉತ್ತಮ ಅಂಪೈರ್ ಎನ್ನುವುದರಲ್ಲಿ ಅನುಮಾನವಿಲ್ಲ. ಆದರೆ ಅವರು ಟೀಂ ಇಂಡಿಯಾ ಪಂದ್ಯಕ್ಕೆ ಅಂಪೈರ್ ಆದರೆ ಅಭಿಮಾನಿಗಳ ಹೃದಯ ಬಡಿತ ಹೆಚ್ಚಾಗುತ್ತದೆ. ಐಸಿಸಿ ಪಂದ್ಯಾವಳಿಯ ಮಹತ್ವದ ಪಂದ್ಯಗಳಲ್ಲಿ ಭಾರತ ತಂಡಕ್ಕೆ ದುರಾದೃಷ್ಟವಾಗಿದ್ದಾರೆ.

ಟೀಮ್ ಇಂಡಿಯಾ ಕಳೆದ ವರ್ಷ ಏಕದಿನ ವಿಶ್ವಕಪ್ ಫೈನಲ್ ಸೇರಿದಂತೆ ಕಳೆದ ದಶಕದಲ್ಲಿ ಅನೇಕ ಐಸಿಸಿ ನಾಕೌಟ್ ಪಂದ್ಯಗಳಲ್ಲಿ ಭಾರತ ಸೋಲೊಪ್ಪಿಕೊಂಡಿದೆ. ಅದಕ್ಕೆ ಅವರನ್ನು ಅಭಿಮಾನಿಗಳು ತಂಡದ ದುರಾದೃಷ್ಟ ಎಂದು ಕರೆದಿದ್ದಾರೆ.

ಭಾರತ vs ಇಂಗ್ಲೆಂಡ್ ಸೆಮಿಫೈನಲ್‌ಗೆ ಅಂಪೈರ್‌ಗಳು

ರೆಫರಿ: ಜೆಫ್ರಿ ಕ್ರೋವ್
ಆನ್-ಫೀಲ್ಡ್ ಅಂಪೈರ್‌ಗಳು: ಕ್ರಿಸ್ ಗಫಾನಿ ಮತ್ತು ರಾಡ್ ಟಕರ್
ಮೂರನೇ/ ಟಿವಿ ಅಂಪೈರ್: ಜೋಯಲ್ ವಿಲ್ಸನ್
ನಾಲ್ಕನೇ ಅಂಪೈರ್: ಪಾಲ್ ರೀಫೆಲ್

ಕೆಟಲ್‌ಬರೋ ದಕ್ಷಿಣ ಆಫ್ರಿಕಾ vs ಅಫ್ಘಾನಿಸ್ತಾನ ಟಿ20 ವಿಶ್ವಕಪ್ ಸೆಮಿಫೈನಲ್‌ನಲ್ಲಿ ಮೂರನೇ ಅಂಪೈರ್ ಆಗಿ ಕೆಲಸ ಮಾಡಲಿದ್ದಾರೆ. ರಿಚರ್ಡ್ ಇಲ್ಲಿಂಗ್‌ವರ್ತ್ ಮತ್ತು ನಿತಿನ್ ಮೆನನ್ ಆನ್-ಫೀಲ್ಡ್ ಅಂಪೈರ್‌ಗಳಾಗಿ, ರಿಚಿ ರಿಚರ್ಡ್‌ಸನ್ ರೆಫರಿಯಾಗಿ ಮತ್ತು ಅಹ್ಸಾನ್ ರಜಾ ನಾಲ್ಕನೇ ಅಂಪೈರ್ ಆಗಿರುತ್ತಾರೆ.

ಕೆಟಲ್‌ಬರೋ ಅಂಪೈರ್ ಆಗಿದ್ದಾಗ ಐಸಿಸಿ ಪಂದ್ಯಾವಳಿಗಳಲ್ಲಿ ಭಾರತ ತಂಡದ ದಾಖಲೆ

2014 ಟಿ20 ವಿಶ್ವಕಪ್ ಫೈನಲ್ (ಶ್ರೀಲಂಕಾ ವಿರುದ್ಧ ಸೋಲು)
2015 ಏಕದಿನ ವಿಶ್ವಕಪ್ ಸೆಮಿಫೈನಲ್ (ಆಸ್ಟ್ರೇಲಿಯಾ ವಿರುದ್ಧ ಸೋಲು)
2016 ಟಿ20 ವಿಶ್ವಕಪ್ ಸೆಮಿಫೈನಲ್ (ವೆಸ್ಟ್ ಇಂಡೀಸ್‌ ವಿರುದ್ಧ ಸೋಲು)
2017ರ ಚಾಂಪಿಯನ್ಸ್ ಟ್ರೋಫಿ ಫೈನಲ್ (ಪಾಕಿಸ್ತಾನ ವಿರುದ್ಧ ಸೋಲು)
2019 ಏಕದಿನ ವಿಶ್ವಕಪ್ ಸೆಮಿಫೈನಲ್ (ನ್ಯೂಜಿಲೆಂಡ್‌ ವಿರುದ್ಧ ಸೋಲು)
2023 ಏಕದಿನ ವಿಶ್ವಕಪ್ ಫೈನಲ್ (ಆಸ್ಟ್ರೇಲಿಯಾ ವಿರುದ್ಧ ಸೋಲು)

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+