T20 World Cup: ಬಹುಮಾನ ಮೊತ್ತ ಘೋಷಿಸಿದ ಐಸಿಸಿ: ವಿಜೇತರಿಗೆ ಭರ್ಜರಿ ಬಂಪರ್
ವೆಸ್ಟ್ ಇಂಡೀಸ್ ಹಾಗೂ ಅಮೆರಿಕದಲ್ಲಿ ಈಗಾಗಲೇ ಟಿ20 ವಿಶ್ವಕಪ್ ಆರಂಭವಾಗಿದೆ. ಇನ್ನು ಲೀಗ್ ಹಂತದ ಪಂದ್ಯಗಳು ನಡೆಯುವುದು ಬಾಕಿ ಇದೆ. ಅದಗಾಲೇ ಐಸಿಸಿ ಎಲ್ಲ ತಂಡಗಳ ಮುಖದಲ್ಲೂ ಮಂದಹಾಸ ಮೂಡಿಸುವ ಕೆಲಸವನ್ನು ಮಾಡಿದೆ. ವಿನ್ನರ್ ಹಾಗೂ ರನ್ನರ್ಸ್ ನೀಡುವ ಸಂಭವಾನೆಯನ್ನು ಐಸಿಸಿ ಘೋಷಿಸಿದೆ.
ಅಂತರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್ (ಐಸಿಸಿ) 2024 ರ ಟಿ20 ವಿಶ್ವಕಪ್‌ಗೆ ಬಹುಮಾನದ ಮೊತ್ತವನ್ನು ಪ್ರಕಟಿಸಿದೆ. ಮಂಗಳವಾರ ಐಸಿಸಿ 11.25 ಮಿಲಿಯನ್ ಯುಎಸ್ ಡಾಲರ್ (ಸುಮಾರು 93.52 ಕೋಟಿ ರೂ.) ದಾಖಲೆಯ ಬಹುಮಾನ ಮೊತ್ತವನ್ನು ಪ್ರಕಟಿಸಿದೆ.

ಲೀಗ್ ಹಂತದಲ್ಲಿ ಹೊರ ಬಿದ್ದರೆ ಸಿಗುವ ಹಣವೆಷ್ಟು?
ಟೂರ್ನಿಯಲ್ಲಿ ಈ ಬಾರಿ 20 ತಂಡಗಳು ಭಾಗವಹಿಸಲಿವೆ. 13ರಿಂದ 20ನೇ ಶ್ರೇಯಾಂಕದ ತಂಡಗಳೂ ಶ್ರೀಮಂತರಾಗಲಿವೆ. ಈ ಪ್ರತಿಯೊಂದು ತಂಡಕ್ಕೆ $225,000 (ರೂ. 1.87 ಕೋಟಿ) ಹಣ ಜೇಬಿಗೆ ಸೇರಲಿದೆ.
ಒಂಬತ್ತರಿಂದ 12ನೇ ಸ್ಥಾನ ಪಡೆಯುವ ಪ್ರತಿ ತಂಡವು $247,500 (ರೂ. 2.05 ಕೋಟಿ) ಬಹುಮಾನ ಮೊತ್ತ ಲಭಿಸಲಿದೆ. ಹೆಚ್ಚುವರಿಯಾಗಿ, ಪ್ರತಿ ತಂಡವು ಸೆಮಿ-ಫೈನಲ್ ಮತ್ತು ಫೈನಲ್‌ಗಳನ್ನು ಹೊರತುಪಡಿಸಿ ಪ್ರತಿ ಪಂದ್ಯವನ್ನು ಗೆಲ್ಲಲು ಹೆಚ್ಚುವರಿ $31,154 (25.89 ಲಕ್ಷ) ಪಡೆಯುತ್ತದೆ.
ಸೂಪರ್ 8ರಲ್ಲಿ ಸೋಲು ಕಂಡ ತಂಡಗಳು ಸಹ ಶ್ರೀಮಂತವಾಗಲಿವೆ. ಈ ತಂಡಗಳು ಸಹ 382,500 ಡಾಲರ್ (3.17 ಕೋಟಿ ರೂ.) ನೀಡಲು ನಿರ್ಧರಿಸಲಾಗಿದೆ. ಇನ್ನು ಸೆಮಿಫೈನಲ್ ನಲ್ಲಿ ಸೋಲು ಕಂಡ ತಂಡಕ್ಕೆ $787,500 (ರೂ. 6.54 ಕೋಟಿ) ಸಿಗಲಿದೆ.

ಫೈನಲ್ ಗೆದ್ದರೆ ಸಿಗುವ ಹಣವೆಷ್ಟು?
ಫೈನಲ್ ಪಂದ್ಯದಲ್ಲಿ ಸೋಲು ಕಂಡ ತಂಡಕ್ಕೆ 10.50 ಕೋಟಿ ಬಹುಮಾನ ಮೊತ್ತ ಲಭಿಸಲಿದೆ. ರನ್ನರ್ ಅಪ್ ತಂಡಕ್ಕೆ ಕನಿಷ್ಠ $ 1.28 ಮಿಲಿಯನ್ (10.64 ಕೋಟಿ ರೂ.) ನೀಡಲಾಗುತ್ತದೆ. ವಿಜೇತರಿಗೆ ಕನಿಷ್ಠ 2.45 ಮಿಲಿಯನ್ ಡಾಲರ್ (ಸುಮಾರು 20.36 ಕೋಟಿ ರೂ.) ಸಿಗಲಿದೆ. ಈ ಬಾರಿಯ ವಿಶ್ವಕಪ್ ವಿಜೇತರು ಟೂರ್ನಿಯ ಇತಿಹಾಸದಲ್ಲೇ ಅತ್ಯಧಿಕ ಮೊತ್ತ ಪಡೆಯಲಿದ್ದಾರೆ ಎಂದು ಐಸಿಸಿ ಹೇಳಿದೆ.
ಮೊದಲ ಬಾರಿಗೆ 20 ತಂಡಗಳು ಭಾಗವಹಿಸುತ್ತಿವೆ
ಟಿ-20 ವಿಶ್ವಕಪ್ ಇತಿಹಾಸದಲ್ಲಿ ಮೊದಲ ಬಾರಿಗೆ 20 ತಂಡಗಳು ಭಾಗವಹಿಸುತ್ತಿವೆ. ಒಂಬತ್ತನೇ ಆವೃತ್ತಿಯನ್ನು ವೆಸ್ಟ್ ಇಂಡೀಸ್ ಮತ್ತು ಯುಎಸ್ಎಯಲ್ಲಿ ಆಯೋಜಿಸಲಾಗಿದೆ. ಇದಕ್ಕಾಗಿ ಒಂಬತ್ತು ಸ್ಥಳಗಳನ್ನು ನಿಗದಿಪಡಿಸಲಾಗಿದೆ. ಅಲ್ಲಿ ತಂಡಗಳು 28 ದಿನಗಳ ಕಾಲ ವಿಶ್ವಕಪ್ ಆಡಲಿವೆ. ಮೊದಲ ಸುತ್ತಿನಲ್ಲಿ ನಾಲ್ಕು ಗುಂಪುಗಳಿಂದ 20 ತಂಡಗಳು 40 ಪಂದ್ಯಗಳನ್ನು ಆಡಲಿವೆ. ಎಂಟು ತಂಡಗಳು ಸೂಪರ್ -8 ಗೆ ಹೋಗುತ್ತವೆ. ಈ ಪೈಕಿ 4 ತಂಡಗಳು ಸೆಮಿಫೈನಲ್‌ಗೆ ಅರ್ಹತೆ ಪಡೆಯಲಿವೆ.
ಸೆಮಿಫೈನಲ್ ಪಂದ್ಯಗಳು ಟ್ರಿನಿಡಾಡ್-ಟೊಬಾಗೊ ಮತ್ತು ಗಯಾನಾದಲ್ಲಿ ನಡೆಯಲಿವೆ. ಫೈನಲ್‌ವರೆಗೆ ಒಟ್ಟು 55 ಪಂದ್ಯಗಳು ನಡೆಯಲಿವೆ. ವಿಶ್ವಕಪ್‌ನ ಅಂತಿಮ ಪಂದ್ಯ ಜೂನ್ 29 ರಂದು ಬಾರ್ಬಡೋಸ್‌ನ ಕೆನ್ಸಿಂಗ್ಟನ್ ಓವಲ್‌ನಲ್ಲಿ ನಡೆಯಲಿದೆ.












Click it and Unblock the Notifications