ವೈಭವ್ ಸೂರ್ಯವಂಶಿ ವಿರುದ್ಧ ಸಮರಕ್ಕೆ ಸಿದ್ಧ: ಟೀಮ್ ಇಂಡಿಯಾಗೆ ಸವಾಲ್ ಹಾಕಿದ್ರಾ ಅಫ್ಘಾನಿಸ್ತಾನ ನಾಯಕ?

India Vs Afghanistan T20: ಭಾರತ ಮತ್ತು ಅಫ್ಘಾನಿಸ್ತಾನ ನಡುವಿನ ಮೂರು ಪಂದ್ಯಗಳ ಟಿ20 ಸರಣಿಯು ಭಾನುವಾರ (ಸೆಪ್ಟೆಂಬರ್ 13) ಶರುವಾಗಲಿದೆ. ಮೊದಲ ಮ್ಯಾಚ್ ಆರಂಭಕ್ಕೆ ಇನ್ನೂ ಕೆಲವೇ ಕ್ಷಣಗಣನೆ ಆರಂಭವಾಗಿದೆ. ಇದಕ್ಕೂ ಮುನ್ನ ಅಫ್ಘಾನ್ ನಾಯಕ ಟೀಮ್ ಇಂಡಿಯಾ ಕ್ರಿಕೆಟ್‌ನ ಯುವ ಪ್ರತಿಭೆ ವೈಭವ್ ಸೂರ್ಯವಂಶಿ ಕುರಿತು ಅಚ್ಚರಿ ಹೇಳಿಕೆ ನೀಡಿದ್ದಾರೆ. ಇದು ಸಾಮಾಜಿಕ ಜಾಲತಾಣದಲ್ಲಿ ದೊಡ್ಡ ಮಟ್ಟದಲ್ಲಿ ಸೌಂಡ್ ಮಾಡುತ್ತಿದೆ.

ಭಾರತ ಮತ್ತು ಅಫ್ಘಾನಿಸ್ತಾನ ನಡುವಿನ ಮೂರು ಪಂದ್ಯಗಳ ಟಿ20 ಸರಣಿಯು ಭಾನುವಾರ, ಸೆಪ್ಟೆಂಬರ್ 13ರಂದು ದೆಹಲಿಯ ಅರುಣ್ ಜೇಟ್ಲಿ ಕ್ರೀಡಾಂಗಣದಲ್ಲಿ ಪ್ರಾರಂಭವಾಗಲಿದೆ. ಈ ಸಮರಕ್ಕೂ ಮುನ್ನ ಅಫ್ಘಾನಿಸ್ತಾನ ತಂಡದ ನಾಯಕ ಇಬ್ರಾಹಿಂ ಝದ್ರಾನ್, ಭಾರತದ ಉದಯೋನ್ಮುಖ ತಾರೆ ವೈಭವ್ ಸೂರ್ಯವಂಶಿ ಕುರಿತು ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ.

Ibrahim Zadran on Team India Youngest cricketer Vaibhav Sooryavanshi Afghanistan Ready With Plan

ವೈಭವ್ ಸೂರ್ಯವಂಶಿ ಕುರಿತು ಅಚ್ಚರಿ ಹೇಳಿಕೆ

ಟೀಮ್ ಇಂಡಿಯಾ ಕ್ರಿಕೆಟ್‌ನ ಯುವ ಆಟಗಾರ ವೈಭವ್ ಸೂರ್ಯವಂಶಿ ಅವರ ಇತ್ತೀಚಿನ ಭರ್ಜರಿ ಪ್ರದರ್ಶನದಿಂದ ತಮ್ಮ ತಂಡ ಯಾವುದೇ ಒತ್ತಡಕ್ಕೆ ಒಳಗಾಗಿಲ್ಲ ಹಾಗೂ ಈ ಯುವ ಆರಂಭಿಕ ಬ್ಯಾಟರ್ ಅನ್ನು ಕಟ್ಟಿಹಾಕಲು ಸೂಕ್ತ ಯೋಜನೆಯನ್ನು ಸಿದ್ಧಪಡಿಸಿಕೊಂಡಿದ್ದೇವೆ ಎಂದು ಝದ್ರಾನ್ ತಿಳಿಸಿದ್ದಾರೆ. ಇದು ದೊಡ್ಡ ಮಟ್ಟದಲ್ಲಿ ವೈರಲ್‌ ಆಗುತ್ತಿದೆ.

'ವೈಭವ್ ಎದುರಿಸಲು ತಂಡ ಸಂಪೂರ್ಣ ಸಜ್ಜಾಗಿದೆ'

ಪಂದ್ಯಕ್ಕೂ ಮುನ್ನ ಶನಿವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅಫ್ಘಾನಿಸ್ತಾನ ನಾಯಕ ಇಬ್ರಾಹಿಂ ಝದ್ರಾನ್ ಅವರು, ವೈಭವ್ ಸೂರ್ಯವಂಶಿ ಅವರ ಅತ್ಯದ್ಭುತ ಪ್ರತಿಭೆ ಎಂಬುದನ್ನು ಒಪ್ಪಿಕೊಂಡರು. ಆದರೂ ಅವರನ್ನು ಎದುರಿಸಲು ತಮ್ಮ ತಂಡ ಸಂಪೂರ್ಣ ಸಜ್ಜಾಗಿದೆ ಅಂತಲೂ ಹೇಳುವ ಮೂಲಕ ಗಮನ ಸೆಳೆದಿದ್ದಾರೆ.

'ವೈಭವ್ ಸೂರ್ಯವಂಶಿ ಒಬ್ಬ ಅದ್ಭುತ ಪ್ರತಿಭೆ'

ಮಾಧ್ಯಮಗಳೊಂದಿಗೆ ಮಾತನಾಡಿದ ಇಬ್ರಾಹಿಂ ಝದ್ರಾನ್ ಅವರು, 'ವೈಭವ್ ಸೂರ್ಯವಂಶಿ ಒಬ್ಬ ಅದ್ಭುತ ಪ್ರತಿಭೆ. ಅವರು ಐಪಿಎಲ್‌ನಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿದ್ದಾರೆ ಮತ್ತು ವಿವಿಧ ಹಂತದ ಸರಣಿಗಳಲ್ಲಿ ತಮ್ಮ ಪ್ರದರ್ಶನವನ್ನು ಸಾಬೀತುಪಡಿಸಿದ್ದಾರೆ. ನಾವು ತಂಡದ ಸಭೆಗಳಲ್ಲಿ ಅವರ ಬಗ್ಗೆ ಚರ್ಚಿಸಿದ್ದೇವೆ. ಐಪಿಎಲ್‌ನಲ್ಲಿ ಅವರ ವಿರುದ್ಧ ಆಡಿದ ನಮ್ಮ ತಂಡದ ಆಟಗಾರರು ನಮಗೆ ಅಗತ್ಯವಾದ ಮಾಹಿತಿಗಳನ್ನು ನೀಡಿದ್ದಾರೆ,' ಎಂದರು.

ಮುಂದುವರೆದು ಮಾತನಾಡಿದ ಅವರು, 'ಈಗಾಗಲೇ ವೈಭವ್ ಸೂರ್ಯವಂಶಿ ಅವರ ಬ್ಯಾಟಿಂಗ್ ವೀಡಿಯೊಗಳನ್ನು ಸಹ ವೀಕ್ಷಿಸಿದ್ದೇವೆ. ನಾವು ಯೋಜನೆಯನ್ನು ಸರಳವಾಗಿಟ್ಟುಕೊಳ್ಳಲಿದ್ದು, ಮೈದಾನದಲ್ಲಿ ನಮ್ಮ ತಂತ್ರಗಳನ್ನು ಸರಿಯಾಗಿ ಕಾರ್ಯಗತಗೊಳಿಸಲು ಪ್ರಯತ್ನಿಸುತ್ತೇವೆ,' ಎಂದು ಹೇಳಿದರು.

ಸ್ಪೋಟಕ ಇನ್ನಿಂಗ್ಸ್ ಆಡಿದ್ದ 'ವಂಡರ್ ಕಿಡ್'

ವೈಭವ್ ಸೂರ್ಯವಂಶಿ 2026ರ ಐಪಿಎಲ್‌ನಲ್ಲಿ ರಾಜಸ್ಥಾನ್ ರಾಯಲ್ಸ್ ಪರ 776 ರನ್ ಗಳಿಸಿ ದಿಗ್ಗಜರ ಗಮನ ಸೆಳೆದಿದ್ದರು. ಆದರೂ ಅವರ ಅಂತಾರಾಷ್ಟ್ರೀಯ ಟಿ20 ಪದಾರ್ಪಣೆ ಅಷ್ಟಾಗಿ ಉತ್ತಮವಾಗಿರಲಿಲ್ಲ ಮತ್ತು ಆರಂಭಿಕ ಮೂರು ಕಳಪೆ ಪ್ರದರ್ಶನಗಳ ನಂತರ ಅವರನ್ನು ತಂಡದಿಂದ ಹೊರಗಿಡಲಾಗಿತ್ತು. ಆದರೆ ಇತ್ತೀಚೆಗೆ ಝಿಂಬಾಬ್ವೆ ವಿರುದ್ಧದ 3 ಪಂದ್ಯಗಳ ಸರಣಿಯಲ್ಲಿ ಅವರು ಅಭಿಷೇಕ್ ಶರ್ಮಾ ಅವರೊಂದಿಗೆ ಓಪನಿಂಗ್ ಮಾಡಿ 50, 20 ಮತ್ತು 81 ರನ್‌ಗಳ ಸ್ಪೋಟಕ ಇನ್ನಿಂಗ್ಸ್ ಆಡಿ 'ಪ್ಲೇಯರ್ ಆಫ್ ದಿ ಸರಣಿ' ಪ್ರಶಸ್ತಿ ಪಡೆದರು.

ಅಷ್ಟೇ ಅಲ್ಲದೆ ಇತ್ತೀಚೆಗಷ್ಟೇ ಈಸ್ಟ್ ಝೋನ್ ತಂಡಕ್ಕೆ ದುಲೀಪ್ ಟ್ರೋಫಿ ಗೆಲ್ಲಿಸಿಕೊಡುವಲ್ಲಿಯೂ ಅವರು ಪ್ರಮುಖ ಪಾತ್ರ ವಹಿಸಿದ್ದರು. ಆದರೆ, ಮೊದಲ ಟಿ20 ಪಂದ್ಯದಲ್ಲಿ ಇಶಾನ್ ಕಿಶನ್ ಮತ್ತು ಸಂಜು ಸ್ಯಾಮ್ಸನ್ ಉಪಸ್ಥಿತಿ ಇರುವುದರಿಂದ ವೈಭವ್ ಪ್ಲೇಯಿಂಗ್ 11ನಲ್ಲಿ ಸ್ಥಾನ ಪಡೆಯುತ್ತಾರೋ ಇಲ್ಲವೋ ಎಂಬ ಕುತೂಹಲ ಮೂಡಿದೆ.

ನಾಯಕತ್ವದ ಬಗ್ಗೆ ಇಬ್ರಾಹಿಂ ಝದ್ರಾನ್ ಹೇಳಿದ್ದೇನು?

ಇದೇ ವರ್ಷ ರಶೀದ್ ಖಾನ್ ಅವರ ಬದಲಿಗೆ ಅಫ್ಘಾನಿಸ್ತಾನ ತಂಡದ ನಾಯಕತ್ವ ವಹಿಸಿಕೊಂಡ ಬಗ್ಗೆ ಇಬ್ರಾಹಿಂ ಝದ್ರಾನ್ ಮಾತನಾಡಿದ್ದಾರೆ. 'ಇದು ನನಗೆ ತುಂಬಾ ದೊಡ್ಡ ಜವಾಬ್ದಾರಿಯಾಗಿದೆ. ಒಬ್ಬ ಆಟಗಾರನಾಗಿ ಮತ್ತು ನಾಯಕನಾಗಿ ನಾನು ಇದನ್ನು ಆನಂದಿಸುತ್ತಿದ್ದೇನೆ. ಒತ್ತಡದ ಪರಿಸ್ಥಿತಿಗಳಲ್ಲಿ ಸರಿಯಾದ ನಿರ್ಧಾರಗಳನ್ನು ತೆಗೆದುಕೊಳ್ಳಲು ಪ್ರಯತ್ನಿಸುತ್ತೇನೆ ಎಮದು ಹೇಳಿದ್ದಾರೆ.

'ನಮ್ಮ ಆಟಗಾರರಿಗೆ ಭಾರತೀಯ ಪರಿಸ್ಥಿತಿಗಳ ಬಗ್ಗೆ ತುಂಬಾ ಚೆನ್ನಾಗಿ ತಿಳಿದಿದೆ. ರಶೀದ್ ಖಾನ್ ಅವರೊಂದಿಗೆ ನನ್ನ ಒಡನಾಟ ಬಹಳ ಉತ್ತಮವಾಗಿದೆ ಮತ್ತು ನಾವು ಪ್ರಕ್ರಿಯೆಯ ಮೇಲೆ ಗಮನ ಹರಿಸಿ ಈ ಸರಣಿಯಲ್ಲಿ ನಮ್ಮ 100% ಶ್ರಮವನ್ನು ನೀಡಲು ಪ್ರಯತ್ನಿಸುತ್ತೇವೆ,' ಎಂದು ಇಬ್ರಾಹಿಂ ಝದ್ರಾನ್ ಅವರು ತಿಳಿಸಿದರು. ಒಟ್ಟಿನಲ್ಲಿ ಅವರು ವೈಭವ್ ಸೂರ್ಯವಂಶಿ ಅವರ ಬಗ್ಗೆ ನೀಡಿದ ಹೇಳಿಕೆ ಮಾತ್ರ ಇದೀಗ ಗಮನ ಸೆಳೆದಿದೆ. ಅಲ್ಲದೆ, ಟೀಮ್ ಇಂಡಿಯಾಗೆ 'ವಂಡರ್ ಕಿಡ್‌' ಆಡಿಸುವಂತೆ ಸವಾಲು ಎಸೆದಂತಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+