ಮಳೆ.. ಮಳೆ.. ಭಾರತ & ಪಾಕಿಸ್ತಾನ ಟಿ20 ಪಂದ್ಯ ರದ್ದು?

ಭಾರತ & ಪಾಕಿಸ್ತಾನ ನಡುವೆ ನಡೆಯುತ್ತಿರುವ 2024ರ ಟಿ20 ವಿಶ್ವಕಪ್ ಪಂದ್ಯ ನೋಡಲು ಇಡೀ ಜಗತ್ತು ಕಾದು ಕುಳಿತಿದೆ. ಆದರೆ ಇದೇ ಸಮಯದಲ್ಲಿ ಆಘಾತಕಾರಿ ಸುದ್ದಿಯೊಂದು, ಇದೀಗ ಹೊರಬಿದ್ದಿದ್ದು ಭಾರತ & ಪಾಕಿಸ್ತಾನ ಪಂದ್ಯಕ್ಕೆ ಮಳೆ ಕಾಟ ಎದುರಾಗಿದೆ. ಟಾಸ್ ಬಳಿಕ ಮೈದಾನದ ಹೊರಗೆ ಭಾರಿ ತೇವ ಇದ್ದ ಕಾರಣ ಪಂದ್ಯ ಆರಂಭ ಆಗುವುದು ಕೂಡ ವಿಳಂಬ ಆಗಿತ್ತು.

ಈಗ ನ್ಯೂಯಾರ್ಕ್‌ ನಸ್ಸೌ ಕೌಂಟಿ ಅಂತಾರಾಷ್ಟ್ರೀಯ ಕ್ರಿಕೆಟ್ ಮೈದಾನದಲ್ಲಿ ನಡೆಯುತ್ತಿರುವ, ಟಿ20 ವಿಶ್ವಕಪ್ ಪಂದ್ಯದಲ್ಲಿ ಟಾಸ್ ಗೆದ್ದ ಪಾಕಿಸ್ತಾನ ಬೌಲಿಂಗ್ ಆಯ್ಕೆ ಮಾಡಿಕೊಂಡಿದೆ. ಆದ್ರೆ ಇದೇ ಸಮಯದಲ್ಲಿ ಭಾರಿ ಮಳೆಯ ಕಾರಣ ಮೈದಾನದ ಹೊರಾಂಗಣ ಭಾರಿ ತೇವವಾಗಿತ್ತು. ಈ ಕಾರಣಕ್ಕೆ ಸುಮಾರು ಹೊತ್ತು ಪಂದ್ಯವನ್ನ ಸ್ತಗಿತಗೊಳಿಸಿ, ಕ್ರೀಡಾಂಗಣದ ತೇವವಾಗಿದ್ದ ಪ್ರದೇಶ ಒಣಗಿಸುವ ಕಾರ್ಯ ನಡೆಯಿತು. ಹಾಗಾದ್ರೆ ಭಾರತ & ಪಾಕಿಸ್ತಾನ ಪಂದ್ಯ ಕ್ಯಾನ್ಸಲ್ ಆಗುತ್ತಾ? ಮುಂದೆ ಓದಿ.

Heavy Rain Is Disturbing India VS Pakistan T20 World Cup Match On June 9 Of 2024

ಕೊನೆಗೂ ಶುರುವಾಯ್ತು ಪಂದ್ಯ!

ಭಾರತ & ಪಾಕಿಸ್ತಾನ ಕ್ರಿಕೆಟ್ ಮ್ಯಾಚ್ ಅಂದ್ರೆ ಇಡೀ ಜಗತ್ತು ಕಾದು ಕುಳಿತುಕೊಂಡು ನೋಡುತ್ತೆ ಅದ್ರಲ್ಲೂ ಸೂಪರ್ 8 ಹಂತ ಪ್ರವೇಶಿಸಲು ಇದು ಎರಡು ತಂಡಕ್ಕೂ ಮಹತ್ವದ ಪಂದ್ಯವಾಗಿದೆ. ಯುಎಸ್‌ಎ ಅಂದ್ರೆ ಅಮೆರಿಕ ವಿರುದ್ಧ ಸೋತ ಬಳಿಕ, ಪಾಕಿಸ್ತಾನಕ್ಕೆ ಈ ಪಂದ್ಯವು ಗೆಲ್ಲಬೇಕಾದ ಮ್ಯಾಚ್ ಆಗಿದೆ. ಹೀಗಿದ್ದಾಗ, ಪಾಕಿಸ್ತಾನ ತಂಡ ಗೆದ್ದರೆ ಮಾತ್ರ ಸೂಪರ್ 8 ಹಂತ ಪ್ರವೇಶಿಸಲು ಸಾಧ್ಯ. ಹೀಗಿದ್ದರೂ ಮಳೆರಾಯ ಕಾಟ ಕೊಟ್ಟು ಪಂದ್ಯ ನಿಲ್ಲುವಂತೆ ಮಾಡಿದ್ದ. ಆದರೆ ಇದೀಗ ಸುಮಾರು ಹೊತ್ತಿನ ಬಳಿಕ ಮ್ಯಾಚ್ ಶುರುವಾಗಿದೆ.

ಭಾರತ ತಂಡದ ಹೀನಾಯ ಪ್ರದರ್ಶನ

ಜಾಗತಿಕ ಕ್ರಿಕೆಟ್ ಲೋಕವನ್ನು ಭಾರತ ಕ್ರಿಕೆಟ್ ತಂಡದ ಆಟಗಾರರು ಅಕ್ಷರಶಃ ಆಳುತ್ತಿದ್ದಾರೆ. ಆದರೆ ಅಂತಾರಾಷ್ಟ್ರೀಯ ಟೂರ್ನಿಗಳು ಬಂದಾಗ ಮಾತ್ರ ಭಾರತ ಕ್ರಿಕೆಟ್ ತಂಡ ಸೋಲುತ್ತಿದೆ. ಈಗ ನ್ಯೂಯಾರ್ಕ್‌ ನಸ್ಸೌ ಕೌಂಟಿ ಅಂತಾರಾಷ್ಟ್ರೀಯ ಕ್ರಿಕೆಟ್ ಮೈದಾನದಲ್ಲಿ ನಡೆಯುತ್ತಿರುವ, ಟಿ20 ವಿಶ್ವಕಪ್ ಪಂದ್ಯದಲ್ಲಿ ಟಾಸ್ ಗೆದ್ದ ಪಾಕಿಸ್ತಾನ ಬೌಲಿಂಗ್ ಆಯ್ಕೆ ಮಾಡಿಕೊಂಡಿದೆ. ಆದ್ರೆ ಇದೇ ಸಮಯದಲ್ಲಿ ಭಾರಿ ಮಳೆಯ ಕಾರಣ ಮೈದಾನದ ಹೊರಾಂಗಣ ಭಾರಿ ತೇವವಾಗಿತ್ತು.

ಈ ಕಾರಣಕ್ಕೆ ಸುಮಾರು ಹೊತ್ತು ಪಂದ್ಯವನ್ನ ಸ್ತಗಿತಗೊಳಿಸಿ, ಕ್ರೀಡಾಂಗಣದ ತೇವವಾಗಿದ್ದ ಪ್ರದೇಶ ಒಣಗಿಸುವ ಕಾರ್ಯ ನಡೆಯಿತು. ಆ ನಂತರ ಮ್ಯಾಚ್ ಆರಂಭವಾದರೂ ಭಾರತೀಯ ಕ್ರಿಕೆಟ್ ತಂಡದ ಆಟಗಾರರು ಕೇವಲ 119 ರನ್‌ಗೆ ಆಲೌಟ್ ಆಗಿದ್ದಾರೆ. ಇದು ಅಭಿಮಾನಿಗಳ ಆಕ್ರೋಶ ಹೆಚ್ಚಾಗುವಂತೆ ಮಾಡಿದೆ. ಇದೇ ವೇಳೆ ಕ್ರಿಕೆಟ್ ಅಭಿಮಾನಿಗಳು, 'ಇವರು ಐಪಿಎಲ್ ಆಡೋದಕ್ಕೆ ಮಾತ್ರ ಲಾಯಕ್ಕು' ಅಂತಿದ್ದಾರೆ.

ರೋಚಕ ಗೆಲುವು ಸಾಧಿಸಿದ ಭಾರತ!

ಭಾರತ ಕ್ರಿಕೆಟ್ ತಂಡ ಹೀಗೆ ಕೇವಲ 119 ರನ್ ಗಳಿಸಿ ಪಾಕಿಸ್ತಾನ ತಂಡಕ್ಕೆ 120 ರನ್‌ಗಳನ್ನ ಗುರಿಯಾಗಿ ನೀಡಿದ್ದರೂ, ಅಂತಿಮವಾಗಿ 6 ರನ್‌ಗಳ ರೋಚಕ ಗೆಲುವು ಸಾಧಿಸಿತು. ಪಾಕ್ ಆಟಗಾರರನ್ನ ಪ್ರತಿ ಹಂತದಲ್ಲಿಯೂ ಕಟ್ಟಿಹಾಕಿದ ಭಾರತೀಯ ಬೌಲಿಂಗ್ ಪಡೆ, ಕೊನೆಗೂ ಶತ್ರು ಪಡೆಗೆ ಸೋಲುಣಿಸಿದೆ. ಈ ಮೂಲಕ ಭಾರತ ತಂಡ, ಕ್ರಿಕೆಟ್ ಇತಿಹಾಸದಲ್ಲಿ ಹೊಸ ದಾಖಲೆ ಬರೆದಿದೆ. ಪಾಕಿಸ್ತಾನ ತಂಡ ಈ ಸೋಲಿನ ಮೂಲಕ ಟಿ20 ವಿಶ್ವಕಪ್ ಟೂರ್ನಿಯಿಂದ ಬಹುತೇಕ ಹೊರ ಬಿದ್ದಂತೆ ಆಗಿದ್ದು ಪಾಕಿಸ್ತಾನದ ಕ್ರಿಕೆಟ್ ಅಭಿಮಾನಿಗಳು ತಮ್ಮ ತಂಡದ ಆಟ ನೋಡಿ ರೊಚ್ಚಿಗೆದ್ದಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+