IPL 2025: ಇಂಗ್ಲೆಂಡ್ ಸ್ಟಾರ್ ಆಟಗಾರನನ್ನು ಎರಡು ವರ್ಷ ಐಪಿಎಲ್‌ನಿಂದ ಬ್ಯಾನ್ ಮಾಡಿದ ಬಿಸಿಸಿಐ

ಐಪಿಎಲ್‌ನಲ್ಲಿ ವಿದೇಶಿ ಆಟಗಾರರು ವಿವಿಧ ಕಾರಣ ನೀಡಿ ದಿಢೀರ್ ಹಿಂದೆ ಸರಿಯುವ ವರ್ತನೆಗೆ ಕಡಿವಾಣ ಹಾಕಲು ಬಿಸಿಸಿಐ ಕಠಿಣ ನಿಯಮ ಜಾರಿ ಮಾಡಿದೆ. ಐಪಿಎಲ್‌ನಲ್ಲಿ ಹರಾಜಾದ ಬಳಿಕ ಗಾಯದ ಕಾರಣ ಹೊರತುಪಡಿಸಿ ಬೇರೆ ಕಾರಣದಿಂದ ಐಪಿಎಲ್‌ನಿಂದ ಹಿಂದೆ ಸರಿದರೆ ಎರಡು ವರ್ಷ ಬ್ಯಾನ್ ಮಾಡಲಿದೆ. ಇದೀಗ ಇಂಗ್ಲೆಂಡ್ ಸ್ಟಾರ್ ಆಟಗಾರ ಈ ನಿಯಮದಡಿ ಎರಡು ವರ್ಷ ಬ್ಯಾನ್ ಆಗಿದ್ದಾರೆ.

ಇಂಗ್ಲೆಂಡ್ ತಂಡದ ಸ್ಫೋಟಕ ಬ್ಯಾಟರ್ ಹ್ಯಾರಿ ಬ್ರೂಕ್‌ ಐಪಿಎಲ್‌ನಿಂದ ಎರಡು ವರ್ಷ ಬ್ಯಾನ್ ಆದ ಮೊದಲ ಆಟಗಾರ ಎನಿಸಿಕೊಂಡಿದ್ದಾರೆ. 2025ರ ಐಪಿಎಲ್ ಮೆಗಾ ಹರಾಜಿನಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡಕ್ಕೆ ಹರಾಜಾಗಿದ್ದ ಅವರು, ಬಳಿಕ ವೈಯಕ್ತಿಕ ಕಾರಣ ನೀಡಿ ಐಪಿಎಲ್‌ನಿಂದ ಹಿಂದೆ ಸರಿದಿದ್ದರು.

Harry brook banned two years ipl new rule

ಇದನ್ನು ಗಂಭೀರವಾಗಿ ಪರಿಗಣಿಸಿದ ಬಿಸಿಸಿಐ ಹ್ಯಾರಿ ಬ್ರೂಕ್‌ರನ್ನು ಎರಡು ವರ್ಷ ಐಪಿಎಲ್‌ನಿಂದ ಬ್ಯಾನ್ ಮಾಡಿದೆ. ಬಿಸಿಸಿಐ ಈಗಾಗಲೇ ಇಂಗ್ಲೆಂಡ್ ಮತ್ತು ವೇಲ್ಸ್ ಕ್ರಿಕೆಟ್ ಮಂಡಳಿಗೆ (ಇಸಿಬಿ) ಅಮಾನತು ಬಗ್ಗೆ ತಿಳಿಸಿದೆ.

ಇಂಗ್ಲೆಂಡ್ ಮತ್ತು ಬಾಂಗ್ಲಾದೇಶದ ಆಟಗಾರರು ಐಪಿಎಲ್‌ನಲ್ಲಿ ಹರಾಜಾದ ಬಳಿಕ ಕೊನೆಯ ಕ್ಷಣದಲ್ಲಿ ಐಪಿಎಲ್‌ನಿಂದ ಹಿಂದೆ ಸರಿಯುತ್ತಿದ್ದದು ಫ್ರಾಂಚೈಸಿಗಳ ಅಸಮಾಧಾನಕ್ಕೆ ಕಾರಣವಾಗಿತ್ತು. ಫ್ರಾಂಚೈಸಿಗಳು ಬಿಸಿಸಿಐಗೆ ದೂರು ನೀಡಿದ್ದವು, ಬಿಸಿಸಿಐ ಮಧ್ಯಪ್ರವೇಶ ಮಾಡದಿದ್ದ ಈ ಎರಡೂ ದೇಶಗಳ ಆಟಗಾರರನ್ನು ಖರೀದಿ ಮಾಡದಿರಲು ನಿರ್ಧರಿಸಿದ್ದವು.

ಕಳೆದ ವರ್ಷ ಐಪಿಎಲ್ ಹರಾಜಿನಲ್ಲಿ ತಮ್ಮ ಹೆಸರನ್ನು ನೋಂದಾಯಿಸುವ ಮೊದಲು ಪ್ರತಿಯೊಬ್ಬ ಆಟಗಾರನಿಗೆ ಬಿಸಿಸಿಐ ಹೊರ ನಿಯಮದ ಬಗ್ಗೆ ಹೇಳಿತ್ತು, ನೀತಿಯ ಪ್ರಕಾರ ಬಿಸಿಸಿಐ ಅವರನ್ನು ಎರಡು ವರ್ಷಗಳ ಕಾಲ ನಿಷೇಧಿಸುವ ಬಗ್ಗೆ ಇಸಿಬಿ ಮತ್ತು ಬ್ರೂಕ್‌ಗೆ ಮಾಹಿತಿ ನೀಡಲಾಗಿದೆ. ಇದು ಬಿಸಿಸಿಐ ನಿಯಮವಾಗಿದ್ದು ಅದಕ್ಕೆ ಎಲ್ಲಾ ಆಟಗಾರರು ಬದ್ದವಾಗಿರಬೇಕು ಎಂದು ಹೇಳಿರುವುದಾಗಿ ಇಂಡಿಯನ್ ಎಕ್ಸ್‌ಪ್ರೆಸ್ ವರದಿ ಮಾಡಿದೆ.

ಏನಿದು ಹೊಸ ಐಪಿಎಲ್ ನಿಯಮ?

ಫ್ರಾಂಚೈಸಿಗಳು ದೂರು ನೀಡಿದ ಬಳಿಕ, ಬಿಸಿಸಿಐ ಮಧ್ಯಪ್ರವೇಶಿಸಿ 2025 ರ ಐಪಿಎಲ್ ಮೆಗಾ ಹರಾಜಿಗೆ ಮುನ್ನ ಹೊಸ ನಿಯಮವನ್ನು ರೂಪಿಸಿತು. ಹೊಸ ನಿಯಮದ ಪ್ರಕಾರ, ಹರಾಜಿನಲ್ಲಿ ನೋಂದಾಯಿಸಿಕೊಂಡ ನಂತರ ಆಯ್ಕೆಯಾದ ಯಾವುದೇ ಆಟಗಾರನು ಋತುವಿನ ಆರಂಭದ ಮೊದಲು ಐಪಿಎಲ್‌ನಿಂದ ಹಿಂದೆ ಸರಿದರೆ, ಮುಂದಿನ ಎರಡು ಆವೃತ್ತಿಗಳಿಗೆ ಪಂದ್ಯಾವಳಿ ಮತ್ತು ಹರಾಜಿನಲ್ಲಿ ಭಾಗವಹಿಸುವುದನ್ನು ನಿಷೇಧಿಸಲಾಗುತ್ತದೆ.

ಜೇಸನ್ ರಾಯ್, ಅಲೆಕ್ಸ್ ಹೇಲ್ಸ್ ಮತ್ತು ಹ್ಯಾರಿ ಬ್ರೂಕ್ ವೈಯಕ್ತಿಕ ಕಾರಣಗಳಿಗಾಗಿ ಕೊನೆಯ ಕ್ಷಣದಲ್ಲಿ ಹಿಂದೆ ಸರಿದಿದ್ದಾರೆ. ಆಸ್ಟ್ರೇಲಿಯಾದ ಆಡಮ್ ಜಂಪಾ ಕೂಡ ಹಿಂದೆ ಸರಿದಿದ್ದಾರೆ. ಐಪಿಎಲ್ ಹರಾಜಿನಲ್ಲಿ ಕಡಿಮೆ ಬೆಲೆಗೆ ಮಾರಾಟವಾದ ಆಟಗಾರರು ಹಿಂದೆ ಸರಿದಿದ್ದಾರೆ ಎಂದು ಫ್ರಾಂಚೈಸಿಯ ಕೆಲವು ಅಧಿಕಾರಿಗಳು ದೂರು ಕೊಟ್ಟಿದ್ದರು. ಬಳಿಕ ಈ ಆಟಗಾರರು ಮಿನಿ-ಹರಾಜಿನ ಸಮಯದಲ್ಲಿ ಹಿಂತಿರುಗುತ್ತಾರೆ, ಅಲ್ಲಿ ದೊಡ್ಡ ಮೊತ್ತವನ್ನು ಪಡೆಯುತ್ತಾರೆ ಎನ್ನುವ ಕೇಳಿಬಂದಿತ್ತು.

ಹ್ಯಾರಿ ಬ್ರೂಕ್ 2026 ರವರೆಗೆ ಐಪಿಎಲ್‌ನಲ್ಲಿ ಆಡಲು ಸಾಧ್ಯವಿಲ್ಲ. ಅವರು ಐಪಿಎಲ್ 2027 ರ ಮೆಗಾ ಹರಾಜಿಗೆ ನೋಂದಾಯಿಸಿಕೊಳ್ಳಬಹುದು. ಕಳೆದ ಐಪಿಎಲ್‌ನಲ್ಲಿ, ಹ್ಯಾರಿ ಬ್ರೂಕ್ ಅವರ ಅಜ್ಜಿ ಮೃತಪಟ್ಟ ನಂತರ ಅವರು ಹಿಂದೆ ಸರಿದಿದ್ದರು. ಹ್ಯಾರಿ ಬ್ರೂಕ್‌ರನ್ನು 6.25 ಕೋಟಿ ರೂ.ಗೆ ಪಡೆದುಕೊಂಡ ದೆಹಲಿ ಕ್ಯಾಪಿಟಲ್ಸ್ ಅನ್ನು ಸಂಕಷ್ಟಕ್ಕೆ ಸಿಲುಕಿಸಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+