IND vs PAK: ಜಸ್ಪ್ರಿತ್ ಬುಮ್ರಾ, ಕುಲ್‌ದೀಪ್ ಯಾದವ್ ಅಲ್ಲ, ಪಾಕ್‌ಗೆ ಈ ಪ್ಲೇಯರ್ ಅಂದರೆ ಗಡಗಡ
ಭಾನುವಾರ ಟಿ20 ವಿಶ್ವಕಪ್‌ನ ಹೈವೋಲ್ಟೇಜ್ ಪಂದ್ಯ ನಡೆಯಲಿದೆ. ಈ ಪಂದ್ಯದಲ್ಲಿ ಭಾರತ ಹಾಗೂ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನ ಮುಖಾಮುಖಿ ಆಗಲಿವೆ. ವಿಶ್ವದ ಚಿತ್ತವನ್ನು ಕದ್ದಿರುವ ಈ ಪಂದ್ಯವನ್ನು ಗೆಲ್ಲಲು ಟೀಮ್ ಇಂಡಿಯಾ ಪ್ಲ್ಯಾನ್ ಮಾಡಿಕೊಂಡಿದೆ. ಪಾಕಿಸ್ತಾನ ವಿರುದ್ಧ ಪಂದ್ಯ ಅಂದರೆ ಈ ಪ್ಲೇಯರ್ ಮೇಲೆ ಎಲ್ಲರ ಕಣ್ಣು ನೆಟ್ಟಿರುತ್ತದೆ.
ವಿಶ್ವ ಕ್ರಿಕೆಟ್‌ನಲ್ಲಿ ಅದೆಷ್ಟೋ ಸ್ಟಾರ್ ಆಟಗಾರರು ಇದ್ದಾರೆ. ಅದರ ಒಂದು ಗುಂಪು ಟೀಮ್ ಇಂಡಿಯಾದಲ್ಲೂ ಇದೆ. ರೋಹಿತ್ ಶರ್ಮಾ ಬಳಗದಲ್ಲಿ ಸ್ಟಾರ್ ಬ್ಯಾಟರ್, ಬೌಲರ್ಸ್ ಹಾಗೂ ಆಲ್‌ರೌಂಡರ್‌ಗಳ ಗುಂಪೇ ಇದೆ. ಈ ಆಟಗಾರರು ಪಂದ್ಯದ ಗತಿಯನ್ನೇ ಬುಡಮೇಲು ಮಾಡುವ ತಾಕತ್ತು ಹೊಂದಿದ್ದಾರೆ. ಭಾರತ ಹಾಗೂ ಪಾಕಿಸ್ತಾನ ನಡುವ ಪಂದ್ಯ ಎಂದರೆ ಗೆಲುವೊಂದೆ ಟಾರ್ಗೆಟ್ ಆಗಿರುತ್ತದೆ.

ಈ ಪಂದ್ಯದಲ್ಲಿ ಆಡಲು ಪಾಕ್ ಮೈದಾನಕ್ಕೆ ಇಳಿಯುವ ಮುನ್ನವೇ ಈ ಒಬ್ಬ ಸ್ಟಾರ್ ಪ್ಲೇಯರ್‌ನ ಬಗ್ಗೆ ಹೆಚ್ಚು ತಲೆ ಕೆಡಿಸಿಕೊಂಡಿದೆ. ಈ ಪ್ಲೇಯರ್ ಆಟಕ್ಕೆ ಬ್ರೇಕ್ ಹಾಕುವುದು ಹೇಗೆ ಎಂಬ ಚಿಂತೆ ಪಾಕ್ ಮ್ಯಾನೇಜ್ಮೆಂಟ್‌ಗೆ ಕಾಡ್ತಾ ಇದೆ. ಪಾಕ್ ಯಾರ್ಕರ್ ಸ್ಪೇಷಲಿಸ್ಟ್ ಜಸ್ಪ್ರಿತ್ ಬುಮ್ರಾ ಆಗಲಿ, ಚೈನ್ ಮೆನ್ ಬೌಲರ್ ಕುಲ್‌ದೀಪ್ ಯಾದವ್ ಆಗಲಿ ಇವರ ಬಗ್ಗೆ ತಲೆ ಕೆಡಿಸಿಕೊಂಡಿಲ್ಲ. ಆದರೆ ಟೀಮ್ ಇಂಡಿಯಾದ ಈ ಆಲ್‌ರೌಂಡರ್ ಬಗ್ಗೆ ಪಾಕ್ ಭಾರೀ ತಲೆ ಕೆಡಿಸಿಕೊಂಡಿದೆ.
ಪಾಕ್‌ಗೆ ಕಾಡುವ ಬೌಲರ್ ಯಾರು?
ಟೀಮ್ ಇಂಡಿಯಾದ ಈ ಆಲ್‌ರೌಂಡರ್ ಪ್ರದರ್ಶನ ಪಾಕ್ ವಿರುದ್ಧ ಯಾವುದೇ ಟೂರ್ನಿ ಆದರೂ ಬೆಸ್ಟ್. ಈ ಪ್ಲೇಯರ್ ಪಾಕ್ ಮುಂದೆ ಫಾರ್ಮ್‌ಗೆ ಮರಳುತ್ತಾರೆ ಎಂದರೂ ತಪ್ಪಾಗಲಾರದು. ಅವರೇ ಟೀಮ್ ಇಂಡಿಯಾದ ಉಪನಾಯಕ ಹಾರ್ದಿಕ್ ಪಾಂಡ್ಯ. ಗಾಯದಿಂದ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಕಮ್‌ಬ್ಯಾಕ್ ಮಾಡಿರುವ ಹಾರ್ದಿಕ್ ಅಭ್ಯಾಸ ಪಂದ್ಯ ಹಾಗೂ ಐರ್ಲೆಂಡ್ ವಿರುದ್ಧದ ಪಂದ್ಯದಲ್ಲಿ ಅಮೋಘ ಪ್ರದರ್ಶನ ನೀಡಿದ್ದಾರೆ.
ಐರ್ಲೆಂಡ್ ವಿರುದ್ಧದ ಪಂದ್ಯದಲ್ಲಿ ಹಾರ್ದಿಕ್ ಪಾಂಡ್ಯ ಬೌಲಿಂಗ್‌ನಲ್ಲಿ ಕಮಾಲ್ ಮಾಡಿದರು. ಇವರು 4 ಓವರ್ ಬೌಲ್ ಮಾಡಿ 27 ರನ್ ನೀಡಿ ಮೂರು ವಿಕೆಟ್ ಕಬಳಿಸಿದ್ದಾರೆ.

ಪಾಕ್ ವಿರುದ್ಧ ಹೇಗಿದೆ ಅಂಕಿ ಅಂಶ
ಟೀಂ ಇಂಡಿಯಾದ ಸ್ಟಾರ್ ಆಲ್‌ರೌಂಡರ್ ಹಾರ್ದಿಕ್ ಪಾಂಡ್ಯ ಟಿ20 ಮಾದರಿಯಲ್ಲಿ ಪಾಕಿಸ್ತಾನ ವಿರುದ್ಧ ಅತ್ಯುತ್ತಮ ಅಂಕಿಅಂಶಗಳನ್ನು ಹೊಂದಿದ್ದಾರೆ. ಪ್ರಸ್ತುತ ಭಾರತ ತಂಡದಲ್ಲಿ, ಪಾಕಿಸ್ತಾನದ ವಿರುದ್ಧ ಅತಿ ಹೆಚ್ಚು ವಿಕೆಟ್ ಪಡೆದ ಬೌಲರ್ ಎಂಬ ಕೀರ್ತಿ ಇವರದ್ದಾಗಿದೆ. ಇವರು ಟಿ20 ಮಾದರಿಯ 6 ಪಂದ್ಯಗಳಲ್ಲಿ 11 ವಿಕೆಟ್ ಕಿತ್ತು ಸಾಧನೆ ಮಾಡಿದ್ದಾರೆ. ಕಳೆದ ಬಾರಿ 2022ರ ಟಿ20 ವಿಶ್ವಕಪ್‌ನಲ್ಲಿ ಹಾರ್ದಿಕ್ ಪಾಕಿಸ್ತಾನದ ವಿರುದ್ಧ ಬೌಲಿಂಗ್ ಮಾಡುವಾಗ 3 ವಿಕೆಟ್ ಕಬಳಿಸಿದ್ದರು. ಈ ಬಾರಿಯೂ ಅಮೋಘ ಪ್ರದರ್ಶನ ನೀಡಿ ಪಾಕ್‌ಗೆ ಕಾಟ ನೀಡಬಲ್ಲರು.
ಹೆಡ್ ಟು ಹೆಡ್
ಭಾರತ ಮತ್ತು ಪಾಕಿಸ್ತಾನ ತಂಡಗಳು ಟಿ20 ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ 12 ಬಾರಿ ಮುಖಾಮುಖಿಯಾಗಿದ್ದು, ಇದರಲ್ಲಿ ಟೀಂ ಇಂಡಿಯಾ ಹೆಚ್ಚು ಮೇಲುಗೈ ಸಾಧಿಸಿದೆ. ಭಾರತ 8 ಪಂದ್ಯಗಳನ್ನು ಗೆದ್ದಿದ್ದರೆ, ಪಾಕಿಸ್ತಾನ ಕೇವಲ 3 ಪಂದ್ಯಗಳನ್ನು ಗೆದ್ದಿದೆ. ಒಂದು ಪಂದ್ಯದ ಫಲಿತಾಂಶ ಹೊರಬಿದ್ದಿಲ್ಲ. ಭಾರತ ಹಾಗೂ ಪಾಕ್ ಟಿ20 ವಿಶ್ವಕಪ್‌ನಲ್ಲಿ 8 ಬಾರಿ ಮುಖಾಮುಖಿಯಾಗಿದ್ದು, ಆ ಪೈಕಿ ಭಾರತ 6ರಲ್ಲಿ ಗೆದ್ದಿದೆ. ಪಾಕಿಸ್ತಾನ ಕೇವಲ 1 ಪಂದ್ಯವನ್ನು ಗೆದ್ದಿದೆ.












Click it and Unblock the Notifications