ಹಾರ್ದಿಕ್‌, ನತಾಶಾ ಡಿವೋರ್ಸ್‌ ಆದರೆ, ಕರಗಲಿದೆ ಪಾಂಡ್ಯ ಸಂಪತ್ತು

ಟೀಮ್ ಇಂಡಿಯಾದ ಸ್ಟಾರ್ ಆಲ್‌ರೌಂಡರ್‌ ಹಾರ್ದಿಕ್ ಪಾಂಡ್ಯ ಸದ್ಯ ತಮ್ಮ ವ್ಯಯಕ್ತಿಕ ಜೀವನದಿಂದ ಭಾರೀ ಸುದ್ದಿಯಲ್ಲಿದ್ದಾರೆ. ಹಾರ್ದಿಕ್ ಪಾಂಡ್ಯ ಹಾಗೂ ನತಾಶಾ ಅವರ ನಡುವಿನ ಸಂಬಂಧ ಸರಿಯಾಗಿಲ್ಲ ಎಂಬ ಊಹಾಪೋಹಗಳು ಸುದ್ದಿಯಾಗುತ್ತಿವೆ.

ಇಬ್ಬರ ನಡುವಿನ ಸಂಬಂಧ ವಿಚ್ಛೇದನಕ್ಕೆ ಬಂದು ನಿಂತಿದೆ ಎಂದು ಹೇಳಲಾಗುತ್ತಿದೆ. ಒಂದು ವೇಳೆ ಹಾರ್ದಿಕ್ ಹಾಗೂ ನತಾಶಾ ಮದುವೆ ಮುರಿದು ಬಿದ್ದಲ್ಲಿ ಟೀಮ್ ಇಂಡಿಯಾ ಆಟಗಾರನಿಗೆ ಆಗುವ ನಷ್ಟ ಎಷ್ಟು ಆಗಬಹುದು ಎಂಬ ಬಗ್ಗೆ ಚರ್ಚೆ ಆರಂಭವಾಗಿವೆ.

Hardik Pandya Net Worth Natasa Stankovic to Receive 70 of His Property

ಹಾರ್ದಿಕ್ ಪಾಂಡ್ಯ ಹಾಗೂ ಅವರ ಪತ್ನಿ ನತಾಶಾ ಅವರ ಮಧ್ಯೆ ದಾಂಪತ್ಯ ಜೀವನ ಸರಿಯಾಗಿಲ್ಲ ಎಂಬುದು ಮುಚ್ಚಿಡುವ ಸಂಗತಿಯೇನು ಅಲ್ಲ. ಒಂದು ವೇಳೆ ಎಲ್ಲರೂ ಅಂದುಕೊಂಡಂತೆ ಆದಲ್ಲಿ ನತಾಶಾ ಅವರಿಗೆ ಹಾರ್ದಿಕ್‌ ಎಷ್ಟು ಹಣವನ್ನು ನೀಡಬೇಕು? ಎಂಬ ಪ್ರಶ್ನೆ ಉದ್ಭವಿಸುತ್ತದೆ. ಅದಕ್ಕೆ ಸಂಬಂಧಿಸಿದಂತೆ ವರದಿ ಇಲ್ಲಿದೆ.

ಹಾರ್ದಿಕ್‌ ಹಾಗೂ ನತಾಶಾ ವಿಚ್ಛೇದನ ಪಡೆದಿದ್ದೇ ಆದಲ್ಲಿ ಹಾರ್ದಿಕ್ ಪಾಂಡ್ಯ ಅವರು, ನತಾಶಾ ಅವರಿಗೆ ಶೇಕಡಾ 70 ರಷ್ಟು ತಮ್ಮ ಪ್ರಾಪರ್ಟಿ ನೀಡಬೇಕಾಗುತ್ತದೆ. ಇದರಿಂದ ಹಾರ್ದಿಕ್‌ ಪಾಂಡ್ಯ ಅವರ ಸಂಪತ್ತು ಬಹಳ ಕಡಿಮೆ ಆಗಬಹುದು. ಹಾಗಿದ್ದರೆ ಮುಂಬೈ ಇಂಡಿಯನ್ಸ್‌ ತಂಡದ ನಾಯಕ ಹಾರ್ದಿಕ್‌ ಪಾಂಡ್ಯ ಅವರ ನೆಟ್‌ ವರ್ತ್‌ ಎಷ್ಟು ಎಂಬ ಪ್ರಶ್ನೆಗಳು ಏಳುವುದು ಸಹಜ.

Hardik Pandya Net Worth Natasa Stankovic to Receive 70 of His Property

ಹಾರ್ದಿಕ್ ಒಟ್ಟು ಆಸ್ತಿ ಎಷ್ಟು?

ಹಾರ್ದಿಕ್‌ ತಮ್ಮ ರಾಯಲ್‌ ಲೈಫ್‌ ಸ್ಟೈಲ್‌ನಿಂದ ಬಹಳ ಸುದ್ದಿಯಲ್ಲಿದ್ದಾರೆ. ಮಾಹಿತಿಯ ಪ್ರಕಾರ ಹಾರ್ದಿಕ್ ಪಾಂಡ್ಯ ಒಟ್ಟು ಆಸ್ತಿ 95 ಕೋಟಿ ಎಂದು ಹೇಳಲಾಗುತ್ತಿದೆ. ಹಾರ್ದಿಕ್ ಪಾಂಡ್ಯ ಕ್ರಿಕೆಟ್‌ ಪಂದ್ಯಗಳನ್ನು ಹೊರತು ಪಡಿಸಿ ಹಲವು ಕಂಪನಿಗಳಿಗೆ ಪ್ರಚಾರ ರಾಯಭಾರಿ ಆಗಿದ್ದಾರೆ.

ಹಾರ್ದಿಕ್ ಒಂದು ಪಂದ್ಯಕ್ಕೆ ಪಡೆಯುವ ಸಂಭಾವನೆ ಎಷ್ಟು?

2016ರಲ್ಲಿ ಟಿ20 ಕ್ರಿಕೆಟ್‌ಗೆ ಪದಾರ್ಪಣೆ ಮಾಡಿರುವ ಹಾರ್ದಿಕ್‌ ಪಾಂಡ್ಯ, ಕಡಿಮೆ ಅವಧಿಯಲ್ಲಿ ದೊಡ್ಡ ಎತ್ತರಕ್ಕೆ ಏರಿದ ಆಟಗಾರ. ಇನ್ನು ಬಿಸಿಸಿಐ ಕೇಂದ್ರ ಒಪ್ಪಂದದಲ್ಲಿ ಹಾರ್ದಿಕ್ ಪಾಂಡ್ಯ ಗ್ರೇಡ್ ಎ ಆಟಗಾರನಾಗಿದ್ದು, ಇದರಿಂದ ಸುಮಾರು 5 ಕೋಟಿ ಸಂಭಾವನೆ ಪಡೆಯುತ್ತಾರೆ.

Hardik Pandya Net Worth Natasa Stankovic to Receive 70 of His Property

ಅಲ್ಲದೆ ಐಪಿಎಲ್‌ನಲ್ಲಿ ಆಡುವ ಸಂಭವಾವನೆ ಬೇರೆಯದ್ದಾಗಿದೆ. ಹಾರ್ದಿಕ್ ಪಾಂಡ್ಯ ಅವರಿಗೆ ಪ್ರತಿ ಏಕದಿನ ಪಂದ್ಯಕ್ಕೆ 20 ಲಕ್ಷ ಸಂಭಾವನೆ ಲಭ್ಯವಾಗುತ್ತದೆ. ಅಲ್ಲದೆ ಟಿ20 ಪಂದ್ಯಗಳಲ್ಲಿ 15 ಲಕ್ಷ ಸಂಭಾವನೆ ಪಡೆಯಲಿದ್ದಾರೆ. ಐಪಿಎಲ್‌ನಲ್ಲಿ ಇವರಿಗೆ 15 ಕೋಟಿ ಸಂಭಾವನೆ ನೀಡಲಾಗುತ್ತಿದೆ. ಮುಂಬೈ ಇಂಡಿಯನ್ಸ್‌ ನಾಯಕರಾಗಿರುವ ಇವರಿಗೆ ಈ ಅಂದಾಜು ಸ್ಯಾಲರಿಯ ಆಸುಪಾಸಿನಲ್ಲಿ ಸಂಭಾವನೆ ಸಿಗುತ್ತದೆ.

ಯಾವ ಯಾವ ಕಂಪನಿಗೆ ರಾಯಭಾರಿ?

ಹಾರ್ದಿಕ್ ಪಾಂಡ್ಯ BoAt, sin denim, Gulf Oil India, Villain, Dream qq, Xlerate, Souled Store, amazon alexa, Reliance retil, star sports monster energy, SG Cricket ಕಂಪನಿಗಳ ರಾಯಭಾರಿ ಆಗಿದ್ದಾರೆ.

ಹಾರ್ದಿಕ್‌ ಪಾಂಡ್ಯ ಗುಜರಾತ್‌ನ ವಡೋದಾರದಲ್ಲಿ 6000 ಸ್ಕ್ವೇರ್‌ ಫೂಟ್‌ನಲ್ಲಿ ಭವ್ಯ ಬಂಗಲೇಯನ್ನು ಹೊಂದಿದ್ದಾರೆ. ಅಲ್ಲದೆ ಮುಂಬೈನ ಬಾಂದ್ರಾದಲ್ಲೂ ಫ್ಲಾಟ್‌ ಹೊಂದಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+