Hardik Pandya: ಪತ್ನಿ ದೂರವಾದ ಸುದ್ದಿ ಬೆನ್ನಲ್ಲೇ ನಾಪತ್ತೆಯಾದ ಹಾರ್ದಿಕ್ ಪಾಂಡ್ಯ

ಐಪಿಎಲ್ ಪಂದ್ಯಾವಳಿ ಪ್ಲೇಆಫ್‌ ಪಂದ್ಯಗಳು ಮುಕ್ತಾಯವಾದ ಬೆನ್ನಲ್ಲೇ ಭಾರತ ತಂಡ ಟಿ20 ವಿಶ್ವಕಪ್‌ಗೆ ಸಿದ್ಧತೆಯನ್ನು ಆರಂಭಿಸಿದೆ. ರೋಹಿತ್ ಶರ್ಮಾ ಸೇರಿದಂತೆ ಹಲವು ಆಟಗಾರರು ಶನಿವಾರ ಮುಂಬೈ ವಿಮಾನ ನಿಲ್ದಾಣದಿಂದ ಯುಎಸ್‌ಎಗೆ ಪ್ರಯಾಣಿಸಿದ್ದಾರೆ.

ತಂಡದ ಉಪನಾಯಕ, ಆಲ್‌ರೌಂಡರ್ ಹಾರ್ದಿಕ್ ಪಾಂಡ್ಯ ಸದ್ಯ ಎಲ್ಲಿಯೂ ಕಾಣಿಸಿಕೊಳ್ಳದೇ ಇರುವುದು ಅನುಮಾನಕ್ಕೆ ಕಾರಣವಾಗಿದೆ. ಪತ್ನಿ ಜೊತೆ ವಿಚ್ಛೇದನ ಪಡೆಯಲಿದ್ದಾರೆ ಎನ್ನುವ ವದಂತಿಗಳ ಬೆನ್ನಲ್ಲೇ ಪಾಂಡ್ಯ ಯುಎಸ್‌ಎಗೆ ತೆರಳದೇ ಇರುವುದು ಊಹಾಪೋಹಗಳಿಗೆ ಪುಷ್ಠಿ ನೀಡಿದಂತಾಗಿದೆ.

Hardik Pandya Absent Amid Natasa Stankovic Divorce Rumors as Team India Departs for T20 World Cup

ಮುಂಬೈ ಇಂಡಿಯನ್ಸ್ ತಂಡವು ಪ್ಲೇಆಫ್‌ಗೆ ಮೊದಲೇ ಟೂರ್ನಿಯಿಂದ ಹೊರಬಿದ್ದಿತ್ತು. ಶನಿವಾರ ನಾಯಕ ರೋಹಿತ್ ಶರ್ಮಾ ಜೊತೆ ಮುಂಬೈ ಇಂಡಿಯನ್ಸ್ ತಂಡದ ಇತರೆ ಆಟಗಾರರಾದ ಸೂರ್ಯಕುಮಾರ್ ಯಾದವ್ ಮತ್ತು ಜಸ್ಪ್ರೀತ್ ಬುಮ್ರಾ ಕೂಡ ಯುಎಸ್‌ಎಗೆ ತೆರಳಿದ್ದು, ಪಾಂಡ್ಯ ಮಾತ್ರ ಗೈರಾಗಿದ್ದರು.

ಕೊಹ್ಲಿ ಕೂಡ ಮಿಸ್‌

ವಿರಾಟ್ ಕೊಹ್ಲಿ ರೋಹಿತ್ ಶರ್ಮಾ ಅವರ ಜೊತೆ ಯುಎಸ್‌ಎಗೆ ತೆರಳುತ್ತಾರೆ ಎನ್ನಲಾಗಿತ್ತು, ಆದರೆ ಶನಿವಾರ ವಿರಾಟ್ ಕೊಹ್ಲಿ ಕೂಡ ಗೈರಾಗಿದ್ದರು. ಕೊಹ್ಲಿ ಎರಡನೇ ಬ್ಯಾಚ್‌ನಲ್ಲಿ ಯುಎಸ್‌ಎಗೆ ತೆರಳುವ ಸಾಧ್ಯತೆ ಇದೆ. ಅವರು ಅಭ್ಯಾಸ ಪಂದ್ಯವನ್ನು ಕಳೆದುಕೊಳ್ಳುವ ಸಾಧ್ಯತೆ ಕೂಡ ಇದೆ ಎಂದು ವರದಿಯಾಗಿದೆ.

ಲಂಡನ್‌ನಲ್ಲಿದ್ದಾರಾ ಪಾಂಡ್ಯ?

ಆಲ್‌ರೌಂಡರ್ ಹಾರ್ದಿಕ್ ಪಾಂಡ್ಯ ಪತ್ನಿ ನತಾಶಾ ಸ್ಟಾಂಕೋವಿಕ್ ಅವರ ಜೊತೆ ವೈವಾಹಿಕ ಬಂಧನ ಮುರಿದುಕೊಳ್ಳಲು ಸಜ್ಜಾಗಿದ್ದಾರೆ ಎನ್ನುವ ವದಂತಿಗಳೀವೆ. ಆದರೆ ಇಬ್ಬರಲ್ಲಿ ಯಾರೂ ಕೂಡ ಈ ಬಗ್ಗೆ ಪ್ರತಿಕ್ರಿಯೆ ನೀಡಿಲ್ಲ. ಹಾರ್ದಿಕ್ ಪಾಂಡ್ಯ ಪ್ರಸ್ತುತ ಲಂಡನ್‌ನಲ್ಲಿದ್ದಾರೆ ಎಂದು ವರದಿಗಳು ಸೂಚಿಸಿವೆ, ಮತ್ತು ಅಲ್ಲಿಂದ ನೇರವಾಗಿ ಯುಎಸ್‌ಎಗೆ ಪ್ರಯಾಣ ಮಾಡಿ ತಂಡವನ್ನು ಸೇರಿಕೊಳ್ಳುವ ಸಾಧ್ಯತೆ ಇದೆ.

ಐಪಿಎಲ್‌ನಲ್ಲಿ ಸಾಕಷ್ಟು ಟೀಕೆಗಳನ್ನು ಎದುರಿಸಿರುವ ಹಾರ್ದಿಕ್ ಪಾಂಡ್ಯ ಭಾರತಕ್ಕಾಗಿ ಶ್ರೇಷ್ಠ ಪ್ರದರ್ಶನ ನೀಡಿ ತಂಡವನ್ನು ಚಾಂಪಿಯನ್ ಮಾಡಿದರೆ, ಅಭಿಮಾನಿಗಳ ಪ್ರೀತಿಯನ್ನು ಮತ್ತೆ ಗಳಿಸಬಹುದು. ಕಳಪೆ ಪ್ರದರ್ಶನದ ನಡುವೆಯೂ ಅವರು ತಂಡಕ್ಕೆ ಆಯ್ಕೆಯಾಗಿದ್ದು ಉತ್ತಮ ಪ್ರದರ್ಶನ ನೀಡಲೇಬೇಕಾದ ಒತ್ತಡದಲ್ಲಿ ಇದ್ದಾರೆ.

ಸಂಜು ಸ್ಯಾಮ್ಸನ್, ಯುಜ್ವೆಂದ್ರ ಚಹಲ್, ಅವೇಶ್ ಖಾನ್, ಮತ್ತು ಯಶಸ್ವಿ ಜೈಸ್ವಾಲ್ ಅವರು ಎರಡನೇ ಬ್ಯಾಚ್ ಭಾರತೀಯ ಆಟಗಾರರೊಂದಿಗೆ ಹೊರಡಲಿದ್ದಾರೆ.

ಟಿ20 ವಿಶ್ವಕಪ್‌ಗೆ ಭಾರತ ತಂಡ

ರೋಹಿತ್ ಶರ್ಮಾ (ನಾಯಕ), ಯಶಸ್ವಿ ಜೈಸ್ವಾಲ್, ವಿರಾಟ್ ಕೊಹ್ಲಿ, ಹಾರ್ದಿಕ್ ಪಾಂಡ್ಯ (ಉಪನಾಯಕ), ಸೂರ್ಯಕುಮಾರ್ ಯಾದವ್, ರಿಷಬ್ ಪಂತ್, ಸಂಜು ಸ್ಯಾಮ್ಸನ್, ಶಿವಂ ದುಬೆ, ಅಕ್ಷರ್ ಪಟೇಲ್, ರವೀಂದ್ರ ಜಡೇಜಾ, ಯುಜ್ವೇಂದ್ರ ಚಹಾಲ್, ಮೊಹಮ್ಮದ್ ಸಿರಾಜ್, ಜಸ್ಪ್ರೀತ್ ಬುಮ್ರಾ, ಅರ್ಷದೀಪ್ ಸಿಂಗ್, ಕುಲದೀಪ್ ಯಾದವ್.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+