Year Ender 2025: ಐಪಿಎಲ್ 2025 ಟ್ರೋಫಿ ಗೆದ್ದ ಆರ್ಸಿಬಿಯನ್ನೇ ಹಿಂದಿಕ್ಕಿದ ಪಂಜಾಬ್ ಕಿಂಗ್ಸ್
Google's Year in Search 2025: ಕೆಲವೇ ದಿನಗಳಲ್ಲಿ 2026ನೇ ವರ್ಷ ಎಂಟ್ರಿ ಕೊಡಲಿದೆ. ಆದರೂ, ಇದಕ್ಕೂ ಮುನ್ನ 2025ರಲ್ಲಿ ನಡೆದ ಪ್ರಮುಖ ಘಟನೆಗಳನ್ನು ಮೆಲುಕು ಹಾಕಲೇಬೇಕಾಗುತ್ತದೆ. ಹಾಗೆಯೇ ಈ ಬಾರಿ ಗೂಗಲ್ನಲ್ಲಿ ಆರ್ಸಿಬಿಗಿಂತ ಅತೀ ಹೆಚ್ಚು ಸರ್ಚ್ ಆದ ಐಪಿಎಲ್ ತಂಡವೊಂದು ಮುನ್ನಲೆಗೆ ಬಂದಿದೆ. ಹಾಗಾದ್ರೆ ಆ ಟೀಂ ಯಾವುದು ಎನ್ನುವ ಸಂಪೂರ್ಣ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ ತಿಳಿಯಿರಿ.
ಐಪಿಎಲ್ ಅತ್ಯಂತ ದೊಡ್ಡ ಲೀಗ್ಗಳಲ್ಲಿ ಒಂದಾಗಿದೆ. ಮತ್ತೊಂದೆಡೆ ಇಂಡಿಯನ್ಸ್ ಪ್ರೀಮಿಯರ್ ಲೀಗ್ನಲ್ಲಿ ಅತೀ ಹೆಚ್ಚು ಅಭಿಮಾನಿಗಳನ್ನು ಹೊಂದಿರುವ ತಂಡ ಅಂತಾ ಇದ್ದರೆ ಅದು, ರಾಯಲ್ ಚಾಲೆಂಜರ್ಸ್ ಬೆಂಗಳೂರು ಮಾತ್ರ. ಅದರಲ್ಲೂ ಈ ಬಾರಿ ಟ್ರೋಫಿ ಗೆದ್ದು ಇತಿಹಾಸ ನಿರ್ಮಿಸಿದೆ. ಆದರೂ, ಗೂಗಲ್ನಲ್ಲಿ ಅತೀ ಹೆಚ್ಚು ಸರ್ಚ್ ಆಗಿರುವುದೇ ಬೇರೆ ತಂಡ.

ಆಡಿದ 17 ಆವೃತ್ತಿಗಳಲ್ಲೂ ಆರ್ಸಿಬಿ ಒಂದೇ ಒಂದು ಟ್ರೋಫಿ ಗೆದ್ದಿರಲಿಲ್ಲ. ಆದರೆ, 2025ರ ಫೈನಲ್ನಲ್ಲಿ ಪಂಜಾಬ್ ಕಿಂಗ್ಸ್ ಅನ್ನು ಮಣಿಸುವ ಮೂಲಕ ಚೊಚ್ಚಲ ಟ್ರೋಫಿಗೆ ಮುತ್ತಿಟ್ಟಿತು. ಇದೀಗ ಆರ್ಸಿಬಿ ವಿರುದ್ಧ ಸೋತ ಶ್ರೇಯಸ್ ಅಯ್ಯರ್ ನಾಯಕತ್ವದ ಪಂಜಾಬ್ ಕಿಂಗ್ಸ್ ಈ ವರ್ಷದಲ್ಲಿ ಗೂಗಲ್ನಲ್ಲಿ ಅತೀ ಹೆಚ್ಚು ಸರ್ಚ್ ಆಗದ ಐಪಿಎಲ್ ತಂಡವಾಗಿದೆ ಎನ್ನುವ ಮಾಹಿತಿ ಲಭ್ಯವಾಗಿದೆ.
ಆರ್ಸಿಬಿಯಲ್ಲಿ ವಿರಾಟ್ ಕೊಹ್ಲಿ ಇದ್ದರೂ ಸಹ ಸರ್ಜ್ ಇಂಜಿನ್ ಒಡೆಯ ಗೂಗಲ್ನಲ್ಲಿ ಅತೀ ಸರ್ಚ್ ಆದ ಐಪಿಎಲ್ ತಂಡ ಪಂಜಾಬ್ ಕಿಂಗ್ಸ್ ಆಗಿದೆ. ಇನ್ನೂ ಐದು ಬಾರಿ ಚಾಂಪಿಯನ್ ಆಗಿರುವ ಚೆನ್ನೈ ಸೂಪರ್ ಕಿಂಗ್ಸ್ ಹಾಗೂ ಮುಂಬೈ ಇಂಡಿಯನ್ಸ್ ಕೂಡ ಈ ಪಟ್ಟಿಯಲ್ಲಿ ಇಲ್ಲದಿರುವುದೇ ಆಶ್ಚರ್ಯಕರ ಸಂಗತಿಯಾಗಿದೆ.
ಗೂಗಲ್ ಪ್ರಕಾರ, 2025ರಲ್ಲಿ ಅತಿ ಹೆಚ್ಚು ಹುಡುಕಲ್ಪಟ್ಟ ಐಪಿಎಲ್ ತಂಡ ಪಂಜಾಬ್ ಕಿಂಗ್ಸ್. ಇದು ಐಪಿಎಲ್ 2025ರಲ್ಲಿ ರನ್ನರ್-ಅಪ್ ಆಯಿತು. ಎರಡನೇ ಅತಿ ಹೆಚ್ಚು ಹುಡುಕಲ್ಪಟ್ಟ ಐಪಿಎಲ್ ತಂಡ ಡೆಲ್ಲಿ ಕ್ಯಾಪಿಟಲ್ಸ್, ನಂತರ ಗುಜರಾತ್ ಟೈಟಾನ್ಸ್ ಮತ್ತು ಲಕ್ನೋ ಸೂಪರ್ ಜೈಂಟ್ಸ್ ಆಗಿದೆ. ಈ ಮೂಲಕ ಪಂಜಾಬ್ ಕಿಂಗ್ಸ್ ಮತ್ತು ಡೆಲ್ಲಿ ಕ್ಯಾಪಿಟಲ್ಸ್ ಈ ವರ್ಷ ಎಲ್ಲಾ ಇತರ ಐಪಿಎಲ್ ತಂಡಗಳನ್ನು ಹಿಂದಿಕ್ಕಿ ಟಾಪ್ ಟ್ರೆಂಡಿಂಗ್ ಕ್ರೀಡಾ ತಂಡಗಳಾಗಿ ಹೊರಹೊಮ್ಮಿವೆ.
ಅಚ್ಚರಿ ಸಂಗತಿ ಎಂದರೆ, ಐಪಿಎಲ್ ಪ್ರಮುಖ ತಂಡಗಳಾದ ರೋಹಿತ್ ಶರ್ಮಾ ಇರುವ ಮುಂಬೈ ಇಂಡಿಯನ್ಸ್ (MI), ಎಂ.ಎಸ್.ಧೋನಿ ಇರುವ ಚೆನ್ನೈ ಸೂಪರ್ ಕಿಂಗ್ಸ್ (CSK) ಹಾಗೂ ವಿರಾಟ್ ಕೋಹ್ಲಿ ಇರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡಗಳು ಗೂಗಲ್ ಸರ್ಚ್ನಲ್ಲಿ ಟಾಪ್ ಸ್ಥಾನಗಳನ್ನು ಅಲಂಕರಿಸದಿರುವುದು.
ಟಾಪ್ ಟ್ರೆಂಡಿಂಗ್ ಕ್ರೀಡಾ ತಂಡಗಳು 2025
1. ಪ್ಯಾರಿಸ್ ಸೇಂಟ್-ಜರ್ಮೈನ್ FC (ಫುಟ್ಬಾಲ್ ಟೀಂ)
2. ಎಸ್ಎಲ್ ಬೆನ್ಫಿಕಾ (ಫುಟ್ಬಾಲ್ ಟೀಂ)
3. ಟೊರೊಂಟೊ ಬ್ಲೂ ಜೇಸ್ (ಬೇಸ್ಬಾಲ್ ತಂಡ)
4. ಪಂಜಾಬ್ ಕಿಂಗ್ಸ್ (ಐಪಿಎಲ್ ತಂಡ)
5. ಡೆಲ್ಲಿ ಕ್ಯಾಪಿಟಲ್ಸ್ (ಐಪಿಎಲ್ ತಂಡ)
6. ಗುಜರಾತ್ ಟೈಟಾನ್ಸ್ (ಐಪಿಎಲ್ ತಂಡ)
7. ಲಕ್ನೋ ಸೂಪರ್ ಜೈಂಟ್ಸ್ (ಐಪಿಎಲ್ ತಂಡ)
8. ಒಕ್ಲಹೋಮ ಸಿಟಿ ಥಂಡರ್ (ಬ್ಯಾಸ್ಕೆಟ್ಬಾಲ್ ತಂಡ)
9. ಇಂಡಿಯಾ ಪೇಸರ್ಸ್ (ಬ್ಯಾಸ್ಕೆಟ್ಬಾಲ್ ತಂಡ)
10. ಸಿಯಾಟಲ್ ಮ್ಯಾರಿನರ್ಸ್ (ಬೇಸ್ಬಾಲ್)
-
ಲೈವ್ ಕಾಮೆಂಟರಿಯಲ್ಲೇ ವೀರೇಂದರ್ ಸೆಹ್ವಾಗ್-ಆರ್.ಅಶ್ವಿನ್ ಕಿತ್ತಾಟ; ಹಿರಿಯ ಆಟಗಾರರ ವರ್ತನೆಗೆ ಕ್ರೀಡಾಭಿಮಾನಿಗಳ ಆಕ್ರೋಶ -
Virat Kohli: ಅನುಷ್ಕಾ ಶರ್ಮಾಗೆ ಫ್ಲೈಯಿಂಗ್ ಕಿಸ್ ಕೊಟ್ಟ ಬಳಿಕ ತನ್ನ ಆಟದ ಯಶಸ್ಸಿನ ರಹಸ್ಯ ಬಿಚ್ಚಿಟ್ಟ ವಿರಾಟ್ ಕೊಹ್ಲಿ -
ಕನ್ನಡತಿ ಶ್ರೇಯಾಂಕಾ ಪಾಟೀಲ್, ಮಂಧಾನ ಜೊತೆ ಆರ್ಸಿಬಿ ಪಂದ್ಯ ವೀಕ್ಷಣೆ: ಕ್ರೀಡಾ ಸ್ಪೂರ್ತಿ ಮೆರೆದ ಜೆಮಿಮಾ ರೊಡ್ರಿಗಸ್ -
ಚಿನ್ನಸ್ವಾಮಿಯಲ್ಲಿ ಕನ್ನಡಿಗ ಅನಿಲ್ ಕುಂಬ್ಳೆ ಹೆಸರಿಗೆ ಅವಮಾನ: ಅಭಿಮಾನಿಗಳ ಆಕ್ರೋಶಕ್ಕೆ ಕಾರಣವಾದ 'ತುದಿ' ಪದ -
ಕೊಹ್ಲಿ ಭಾಯ್ಗೆ ಮೈದಾನದಲ್ಲಿ ಕೆಣಕ್ಬೇಡಿ, ತುಂಬಾ ಸಮಯ ನಿಲ್ಲಲು ಬಿಡಬೇಡಿ; ಎಸ್ಆರ್ಎಚ್ ಸಹ ಆಟಗಾರರಿಗೆ ಇಶಾನ್ ಎಚ್ಚರಿಕೆ ಸಂದೇಶ -
ಸಿಎಸ್ಕೆ ಕಪ್ 5 ರೂಪಾಯಿ, ಆರ್ಸಿಬಿ ಟ್ರೋಫಿ ಬೆಲೆ 5 ಕೋಟಿ ರೂಪಾಯಿ: ಪುಟ್ಟ ಬಾಲಕನ ಹೇಳಿಕೆ ಭಾರೀ ವೈರಲ್ -
Who is Jacob Duffy?: ಐಪಿಎಲ್ 2026 ಉದ್ಘಾಟನಾ ಪಂದ್ಯದಲ್ಲಿ ಆರ್ಸಿಬಿ ಪರ ಮಿಂಚಿದ ಜೇಕಬ್ ಡಫಿ ಯಾರು? -
Khushbu Sundar: ಲವ್ ಜಿಹಾದ್ ಆರೋಪ ಹೊತ್ತಿದ್ದ ನಟಿ ಖುಷ್ಬೂ ಪತಿ ಸುಂದರ್ ರಾಜಕೀಯಕ್ಕೆ ಎಂಟ್ರಿ: ಮಧುರೈ ಸೆಂಟ್ರಲ್ನಿಂದ ಸ್ಪರ್ಧೆ -
ಕನ್ನಡತಿ ಶ್ರೇಯಾಂಕಾ ಪಾಟೀಲ್, ಮಂಧಾನ ಜೊತೆ ಆರ್ಸಿಬಿ ಪಂದ್ಯ ವೀಕ್ಷಣೆ: ಕ್ರೀಡಾ ಸ್ಪೂರ್ತಿ ಮೆರೆದ ಜೆಮಿಮಾ ರೊಡ್ರಿಗಸ್ -
Venkatesh Daggubati: ಬೆಂಗಳೂರಿನ ಐಕಾನಿಕ್ ವಿದ್ಯಾರ್ಥಿ ಭವನದಲ್ಲಿ ದೋಸೆ ಸವಿದ ಟಾಲಿವುಡ್ ನಟ ವೆಂಕಟೇಶ್ ದಗ್ಗುಬಾಟಿ -
EPFO 3.0: ಇನ್ಮುಂದೆ UPI, ATM ಮೂಲಕವೇ ಪಿಎಫ್ ಹಣ ಪಡೆಯಬಹುದು; ಏಪ್ರಿಲ್ 1 ರಿಂದಲೇ ಹೊಸ ನಿಯಮ ಜಾರಿ -
Gold Rate : ಮಾರ್ಚ್ 29ರ ಚಿನ್ನ ಮತ್ತು ಬೆಳ್ಳಿ ಬೆಲೆ: ಪ್ರಮುಖ ನಗರಗಳ ಇಂದಿನ ದರ ಪಟ್ಟಿ ಹೀಗಿದೆ












Click it and Unblock the Notifications