RCB: ಸ್ಫೋಟಕ ಆಲ್ರೌಂಡರ್ಗೆ ಗೇಟ್‌ಪಾಸ್ ಫಿಕ್ಸ್; ಇನ್‌ಸ್ಟಾಗ್ರಾಂನಲ್ಲಿ ಆರ್‌ಸಿಬಿ ಅನ್‌ಫಾಲೋ ಮಾಡಿದ್ಯಾಕೆ?
ಮೊದಲ ಕಪ್ ಗೆಲ್ಲುವ ಲೆಕ್ಕಾಚಾರದಲ್ಲಿರುವ ಆರ್ ಸಿಬಿ ತಂಡದಲ್ಲಿ 2025ರ ಮೆಗಾ ಹರಾಜಿಗೆ ಮೊದಲಿ ಭಾರಿ ಬದಲಾವಣೆಯಾಗುವ ಮುನ್ಸೂಚನೆ ಕೊಟ್ಟಿದೆ. ದಿನೇಶ್ ಕಾರ್ತಿಕ್ ಐಪಿಎಲ್ ಗೆ ವಿದಾಯ ಹೇಳಿದ ಬಳಿಕ, ಆರ್‌ಸಿಬಿ ತಂಡದ ಬ್ಯಾಟಿಂಗ್ ಕೋಚ್ ಮತ್ತು ಮೆಂಟರ್ ಆಗಿ ಜವಾಬ್ದಾರಿ ವಹಿಸಿಕೊಂಡಿದ್ದಾರೆ.
ತಂಡದಲ್ಲಿ ಸಾಕಷ್ಟು ಬದಲಾವಣೆ ಮಾಡಲು ಆಡಳಿತ ಮಂಡಳಿ ಮುಂದಾಗಿದ್ದು ಉತ್ತಮ ಪ್ರದರ್ಶನ ನೀಡದ ದುಬಾರಿ ಆಟಾಗರರನ್ನು ಕೈಬಿಡಲು ಮುಂದಾಗಿದೆ. ಸ್ಫೋಟಕ ಬ್ಯಾಟರ್ ಗ್ಲೆನ್ ಮ್ಯಾಕ್ಸ್‌ವೆಲ್‌ರನ್ನು ಆರ್ ಸಿಬಿ ಕೈಬಿಡುವುದು ಬಹುತೇಕ ಖಚಿತವಾಗಿದ್ದು, ಅದಕ್ಕೆ ಸಾಕ್ಷಿ ಎನ್ನುವಂತೆ ಗ್ಲೆನ್ ಮ್ಯಾಕ್ಸ್ ವೆಲ್ ಆರ್ ಸಿಬಿ ತಂಡದ ಇನ್‌ಸ್ಟಾಗ್ರಾಂ ಹ್ಯಾಂಡಲ್ ಅನ್ನು ಅನ್ ಫಾಲೋ ಮಾಡಿದ್ದಾರೆ.

2021ರ ಹರಾಜಿನಲ್ಲಿ ಗ್ಲೆನ್‌ಮ್ಯಾಕ್ಸ್‌ವೆಲ್‌ರನ್ನು 14.25 ಕೋಟಿ ರೂಪಾಯಿ ನೀಡಿ ಆರ್ ಸಿಬಿ ತಂಡಕ್ಕೆ ಖರೀದಿ ಮಾಡಲಾಗಿತ್ತು, 2023ರ ಐಪಿಎಲ್‌ನಲ್ಲಿ 14 ಇನ್ನಿಂಗ್ಸ್‌ಗಳಲ್ಲಿ 400 ರನ್ ಗಳಿಸಿದರು. ಆದರೆ 2024ರ ಐಪಿಎಲ್‌ನಲ್ಲಿ 10 ಪಂದ್ಯಗಳಲ್ಲಿ ಕೇವಲ 52 ರನ್ ಗಳಿಸಿದರು.
2024ರ ಐಪಿಎಲ್ ನಲ್ಲಿ ಮ್ಯಾಕ್ಸ್ ವೆಲ್ ತಂಡಕ್ಕೆದೊಡ್ಡ ತಲೆ ನೋವಾಗಿದ್ದರು. ಸತತವಾಗಿ ಬ್ಯಾಟಿಂಗ್ ವೈಫಲ್ಯ ಕಂಡಿದ್ದ ಅವರ ಬಗ್ಗೆ ಅಭಿಮಾನಿಗಳು ಆಕ್ರೋಶ ವ್ಯಕ್ತಪಡಿಸಿದ್ದರು. ಆಸ್ಟ್ರೇಲಿಯಾ ತಂಡಕ್ಕಾಗಿ ಆಡುವಾಗ ಅದ್ಭುತ ಪ್ರದರ್ಶನ ನೀಡುವ ಅವರು ಐಪಿಎಲ್ ನಲ್ಲಿ ಆಡುವಾಗ ನಿರ್ಲಕ್ಷ್ಯ ತೋರಿಸುತ್ತಾರೆ ಎಂದು ಅಭಿಮಾನಿಗಳು ಟೀಕಿಸಿದ್ದರು.
ದುಬಾರಿ ಆಟಗಾರರಿಗೆ ಗೇಟ್ ಪಾಸ್?
ತಂಡದಲ್ಲಿರುವ ದುಬಾರಿ ವಿದೇಶಿ ಆಟಗಾರರನ್ನು ಕೈಬಿಡಲು ಈಗಾಗಲೇ ನಿರ್ಧಾರ ಮಾಡಲಾಗಿದೆ ಎನ್ನಲಾಗಿದ್ದು, ಗ್ಲೆನ್ ಮ್ಯಾಕ್ಸ್‌ವೆಲ್ ಜೊತೆಗೆ ಕ್ಯಾಮೆರಾನ್ ಗ್ರೀನ್ ಮತ್ತು ನಾಯಕ ಫಾಫ್ ಡುಪ್ಲೆಸಿಸ್ ಅವರನ್ನು ಕೂಡ ಬಿಡುಗಡೆ ಮಾಡುವ ಸಾಧ್ಯತೆ ಇದೆ.
ಮೆಗಾ ಆಕ್ಷನ್ ಇರುವ ಕಾರಣ ಹರಾಜಿನಲ್ಲಿ ಫಾಫ್ ಮತ್ತು ಕ್ಯಾಮೆರಾನ್ ಗ್ರೀನ್ ಅವರನ್ನು ತಂಡಕ್ಕೆ ಕಡಿಮೆ ಮೊತ್ತಕ್ಕೆ ಖರೀದಿ ಮಾಡುವ ಲೆಕ್ಕಾಚಾರ ಕೂಡ ಇದೆ. ಆದರೆ ಮ್ಯಾಕ್ಸ್ ವೆಲ್ ಅವರನ್ನು ಮತ್ತೆ ತಂಡಕ್ಕೆ ಸೇರಿಸಿಕೊಳ್ಳುವುದು ಮಾತ್ರ ಅನುಮಾನ. ಮ್ಯಾಕ್ಸ್‌ವೆಲ್ ಸ್ಥಿರವಾದ ಪ್ರದರ್ಶನ ನೀಡುವಲ್ಲಿ ವಿಫಲವಾಗಿರುವುದು ಪ್ರಮುಖ ಕಾರಣ.
ಐಪಿಎಲ್ 2025ರ ಮೆಗಾ ಹರಾಜಿನಲ್ಲಿ ಆರ್‌ಸಿಬಿ ತಂಡದಲ್ಲಿ ಬಾರಿ ಬದಲಾವಣೆಯಾಗುವುದು ಖಚಿತವಾಗಿದೆ. ಬೌಲಿಂಗ್ ವಿಭಾಗವನ್ನು ಬಲಪಡಿಸಲು ದಿನೇಶ್ ಕಾರ್ತಿಕ್ ಯೋಜನೆ ರೂಪಿಸುತ್ತಿದ್ದಾರೆ. ಅನುಭವಿ ಆಟಗಾರರ ಜೊತೆಗೆ ಯುವ ಆಟಗಾರರು ಕೂಡ ಈ ಬಾರಿ ಆರ್ ಸಿಬಿ ಪಾಳಯವನ್ನು ಸೇರಿಕೊಳ್ಳಲಿದ್ದಾರೆ.












Click it and Unblock the Notifications