Glenn Maxwell: ಏಕಾಗ್ರತೆ ಇಲ್ಲದೇ ನಾಶವಾಗ್ತಿರೋ ಮ್ಯಾಕ್ಸ್‌ವೆಲ್ ಆರ್‌ಸಿಬಿ ತಂಡದಿಂದಲೇ ಔಟ್? ಇಲ್ಲಿದೆ ಇನ್‌ಸೈಡ್ ಸ್ಟೋರಿ!
ಆರ್‌ಸಿಬಿ ಅಭಿಮಾನಿಗಳು ಈಗ ರೊಚ್ಚಿಗೆದ್ದಿದ್ದು, ಸಿಕ್ಕಾಪಟ್ಟೆ ಕೋಪ ಹೊರಹಾಕುತ್ತಿದ್ದಾರೆ. ಈ ಬೆನ್ನಲ್ಲೇ ಗ್ಲೆನ್ ಮ್ಯಾಕ್ಸ್‌ವೆಲ್ ವಿರುದ್ಧ ತೀವ್ರ ಆಕ್ರೋಶ ಹೊರಹಾಕುತ್ತಿರುವ ಅಭಿಮಾನಿ ಬಳಗ, ಗ್ಲೆನ್ ಮ್ಯಾಕ್ಸ್‌ವೆಲ್ ಅವರನ್ನ ಹೊರಹಾಕಿ ಅಂತಾ ಆಗ್ರಹಿಸುತ್ತಿದ್ದಾರೆ. ಆದ್ರೆ ಇದೇ ವೇಳೆ ಮತ್ತೊಂದು ಮಹತ್ವದ ಘಟನೆ ಸಂಭವಿಸಿದ್ದು, ಗ್ಲೆನ್ ಮ್ಯಾಕ್ಸ್‌ವೆಲ್ ಮುಂದಿನ RCB ಮ್ಯಾಚ್‌ನಲ್ಲಿ ಆಡಲ್ಲ ಅವರನ್ನ ಕೂರಿಸುವುದು ಗ್ಯಾರಂಟಿ ಅಂತಿದ್ದಾರೆ ಇಲ್ಲೊಬ್ಬರು! ಅಂದ್ರೆ ಗ್ಲೆನ್ ಮ್ಯಾಕ್ಸ್‌ವೆಲ್ ಕ್ರಿಕೆಟ್ ಜೀವನ ಮುಗಿದು ಹೋಯ್ತಾ?
ಹೌದು, 2024 ರಲ್ಲಿ ಆರ್‌ಸಿಬಿ ಹೊಸ ಅಧ್ಯಾಯವು ಶುರುವಾಗಿದೆ ಅಂತಾ ವಿರಾಟ್ ಕೊಹ್ಲಿ ಹೇಳಿದ್ದರು. ಅದರಂತೆ ಅಭಿಮಾನಿಗಳು ಕೂಡ ಈ ಸಾರಿ ಆರ್‌ಸಿಬಿ ಕಪ್ ಗೆದ್ದೇ ಗೆಲ್ಲುತ್ತದೆ, ಅನ್ನೋ ಖುಷಿಯಲ್ಲೇ ಇದ್ದರು. ಆದರೂ ಮ್ಯಾಚ್ ಗೆಲ್ಲೋದು ಬಿಡಿ, ಆರ್‌ಸಿಬಿ ಹ್ಯಾಟ್ರಿಕ್ ಸೋಲು ಕಂಡು ಬೆಚ್ಚಿ ಬಿದ್ದಿದೆ. ಇದೇ ಸಮಯದಲ್ಲಿ ಅಭಿಮಾನಿಗಳು ಕೂಡ ರೊಚ್ಚಿಗೆದ್ದು ಆಕ್ರೋಶ ಹೊರ ಹಾಕುತ್ತಿದ್ದಾರೆ. ಅಷ್ಟೇ ಅಲ್ಲದೆ ಗ್ಲೆನ್ ಮ್ಯಾಕ್ಸ್‌ವೆಲ್ ಆಡಿಸೋದು ಬೇಡ, ಬೇಡ ಅಂತಿದ್ದಾರೆ. ಈ ಸಮಯದಲ್ಲೇ ಸ್ಫೋಟಕ ಹೇಳಿಕೆ ಹೊರಬಿದ್ದಿದೆ.

ಆರ್‌ಸಿಬಿ ಕಠಿಣ ನಿರ್ಧಾರ ಇದು?
ಮುಂಬೈ ಇಂಡಿಯನ್ಸ್ ತಂಡದ ವಿರುದ್ಧ ಆರ್‌ಸಿಬಿ ಯಾವಾಗ ಹೀನಾಯ ಸೋಲು ಕಂಡು ಅಭಿಮಾನಿಗಳ ಭಾವನೆ ಕೆರಳಿಸಿತ್ತೊ, ಅಲ್ಲಿಂದಲೇ ಶುರುವಾಗಿತ್ತು ಆಕ್ರೋಶ. ಹೀಗಾಗಿಯೇ ಇದೀಗ ಗ್ಲೆನ್ ಮ್ಯಾಕ್ಸ್‌ವೆಲ್ ಅವರನ್ನು ಮುಂದಿನ ಮ್ಯಾಚ್‌ನಲ್ಲಿ ಆಟ ಆಡಿಸಲ್ಲ. ಬದಲಾಗಿ ಅವರನ್ನು ಕೂರಿಸುತ್ತಾರೆ ಅಂತಿದ್ದಾರೆ ಅಕಾಶ್ ಚೋಪ್ರಾ. ಸಾಲು ಸಾಲು ಸೋಲುಗಳಿಂದ, ಆರ್‌ಸಿಬಿ ತಂಡ ಈಗ ಕಂಗೆಟ್ಟು ಹೋಗಿದೆ. ಇಂತಹ ಪರಿಸ್ಥಿತಿಯಲ್ಲಿ ಆರ್‌ಸಿಬಿ ತಂಡದಲ್ಲಿ, ಬಹುಮುಖ್ಯ ಬದಲಾವಣೆ ಗ್ಯಾರಂಟಿ ಎನ್ನಲಾಗುತ್ತಿದೆ. ಅದರಲ್ಲೂ ಪ್ರಮುಖವಾಗಿ, ಗ್ಲೆನ್ ಮ್ಯಾಕ್ಸ್‌ವೆಲ್‌ಗೆ ಮನೆ ದಾರಿ ತೋರಿಸುವುದು ಗ್ಯಾರಂಟಿ ಆಗುತ್ತಿದೆ.
201 ರನ್ ಬಾರಿಸಿದ್ದ ಮ್ಯಾಕ್ಸಿಗೆ ಏನಾಯ್ತು?
ಗ್ಲೆನ್ ಮ್ಯಾಕ್ಸ್‌ವೆಲ್ 2023 ವಿಶ್ವಕಪ್ ಟೂರ್ನಿಯಲ್ಲಿ 128 ಬಾಲ್‌ನ ಆಡಿ ಅಫ್ಘಾನ್ ವಿರುದ್ಧ 201 ರನ್ ಗಳಿಸಿದ್ದರು. 21 ಬೌಂಡರಿ ಹಾಗೂ 10 ಸಿಕ್ಸರ್ ಚಚ್ಚಿದ್ದ ಇದೇ ಗ್ಲೆನ್ ಮ್ಯಾಕ್ಸ್‌ವೆಲ್ ಈಗ, ಆರ್‌ಸಿಬಿ ತಂಡಕ್ಕೆ ವಿಲನ್ ಆಗುತ್ತಿದ್ದಾರೆ ಅಂತಿದ್ದಾರೆ ಫ್ಯಾನ್ಸ್. ಈ ಆರೋಪಗಳ ನಡುವೆ, ಗ್ಲೆನ್ ಮ್ಯಾಕ್ಸ್‌ವೆಲ್ ಕುಡಿತಕ್ಕೆ ದಾಸರಾಗಿದ್ದಾರೆ. ವಿಪರೀತ ಕುಡಿತದ ಕಾರಣಕ್ಕೆ, ಗ್ಲೆನ್ ಮ್ಯಾಕ್ಸ್‌ವೆಲ್ ಏಕಾಗ್ರತೆ ಕಳೆದುಕೊಂಡಿದ್ದಾರೆ ಎನ್ನುವ ಆರೋಪ ಕೂಡ ಕೇಳಿಬರುತ್ತಿದೆ. ಇದು ಒಂದು ಕಡೆ ಆದರೆ, ಮತ್ತೊಂದು ಕಡೆಗೆ ಗ್ಲೆನ್ ಮ್ಯಾಕ್ಸಿ ಅವರನ್ನು ಆರ್‌ಸಿಬಿ ತಂಡದಿಂದ ಕೈಬಿಡಲಿದೆ ಎಂಬ ಮಾಹಿತಿ ಓಡಾಡುತ್ತಿದೆ. ಆದರೆ ಇದು ಇನ್ನೂ ಅಧಿಕೃತವಾಗಿಲ್ಲ, ಹೀಗಾಗಿ ಕುತೂಹಲ ಡಬಲ್ ಆಗಿದೆ.
'ಎಣ್ಣೆ' ಕಾರಣಕ್ಕೆ ಆಟ ಆಡ್ತಿಲ್ವಾ?
ಗ್ಲೆನ್ ಮ್ಯಾಕ್ಸ್‌ವೆಲ್ ಅವರ ಕುಡಿತದ ಸ್ಟೋರಿ ಇಂದು ನಿನ್ನೆಯದಲ್ಲ ಹಿಂದೆ ಕೂಡ ಈ ರೀತಿ ಗ್ಲೆನ್ ಮ್ಯಾಕ್ಸ್‌ವೆಲ್ ವಿರುದ್ಧ ಎಣ್ಣೆ ಹೊಡೆದು ತೂರಾಡಿ ಆಸ್ಪತ್ರೆ ಸೇರಿದ ಆರೋಪವು ಕೇಳಿಬಂದಿತ್ತು. ಇದೀಗ ಮತ್ತೊಂದು ಆರೋಪ ಚರ್ಚೆಗೆ ಬಂದಿದೆ. 2024 ರಲ್ಲಿ ಅಂದರೆ, ಇದೇ ವರ್ಷ ಜನವರಿ ತಿಂಗಳಲ್ಲಿ ಗ್ಲೆನ್ ಮ್ಯಾಕ್ಸ್‌ವೆಲ್ ಅತಿಯಾಗಿ ಕುಡಿತದ ಚಟಕ್ಕೆ ಬಿದ್ದ ಕಾರಣ ಆಸ್ಪತ್ರೆಗೆ ಸೇರಿದ್ದರು ಎಂಬ ಆರೋಪ ಕೇಳಿಬಂದಿತ್ತು. ಈ ವಿಚಾರಕ್ಕೆ ಜಗತ್ತಿನಾದ್ಯಂತ ಸಂಚಲನವೂ ಸೃಷ್ಟಿ ಆಗಿತ್ತು. ಇದೀಗ ಆರ್‌ಸಿಬಿ ತಂಡಕ್ಕೆ ಆಡುವಾಗ ಕೂಡ ಗ್ಲೆನ್ ಮ್ಯಾಕ್ಸ್‌ವೆಲ್ ಎಣ್ಣೆ ಕಾರಣಕ್ಕೆ ಏಕಾಗ್ರತೆಯ ಕಳೆದುಕೊಂಡಿದ್ದಾರಾ? ಎಂಬ ಪ್ರಶ್ನೆ ಮೂಡಿದ್ದು, ಅಭಿಮಾನಿಗಳು ಚರ್ಚೆ ಮಾಡುತ್ತಿದ್ದಾರೆ.
ಮುಂದೆ ಏನಾಗುತ್ತೆ ಮ್ಯಾಕ್ಸ್ ಭವಿಷ್ಯ?
ಒಟ್ನಲ್ಲಿ ಆರ್‌ಸಿಬಿ ಕಪ್ ಗೆಲ್ಲದೇ ಇದ್ದರೂ ಪರವಾಗಿಲ್ಲ ಆದ್ರೆ ಈ ರೀತಿಯ ಹೀನಾಯದ ಪ್ರದರ್ಶನ ಕೊಡುವುದು ಬೇಡ. ಆ ಮೂಲಕ ಬೆಂಗಳೂರು ತಂಡದ ಮಾನ ಕ್ರಿಕೆಟ್‌ನ ಅಂಗಳದಲ್ಲಿ ಹರಾಜು ಹಾಕುವುದು ಬೇಡ ಅನ್ನೋದು ಅಭಿಮಾನಿಗಳ ಆಗ್ರಹ. ಯಾಕೆ ಅಂದ್ರೆ ಸಾಲು ಸಾಲು ಹೀನಾಯ ಸೋಲು ಕಾಣುತ್ತಿರುವ ಆರ್‌ಸಿಬಿ ಬೆಂಗಳೂರು ತಂಡವು ಈಗಲಾದ್ರು, ಮೈಕೊಡವಿ ಧೂಳಿನಿಂದ ಎದ್ದು ಬರಲಿ ಅಂತಾ ಫ್ಯಾನ್ಸ್ ಕಾಯುತ್ತಿದ್ದಾರೆ. ಅದ್ರಲ್ಲೂ ಗ್ಲೆನ್ ಮ್ಯಾಕ್ಸ್‌ವೆಲ್ ವಿಚಾರವೇ ಭಾರಿ ಚರ್ಚೆಗೆ ದಾರಿ ಮಾಡಿಕೊಟ್ಟಿದ್ದು, ಮುಂದಿನ ಪಂದ್ಯದಲ್ಲಿ ಮ್ಯಾಕ್ಸ್‌ವೆಲ್ ಆರ್‌ಸಿಬಿ ಪರವಾಗಿ ಆಡುವುದು ಬಹುತೇಕ ಅನುಮಾನ ಎನ್ನಲಾಗುತ್ತಿದೆ.












Click it and Unblock the Notifications