‘ಕುಡುಕ ಮ್ಯಾಕ್ಸ್‌ವೆಲ್ ಐಪಿಎಲ್ ಟೂರ್ನಿಯಿಂದ ಉಚ್ಛಾಟನೆಗೆ...’ Glenn Maxwell

ಗ್ಲೆನ್ ಮ್ಯಾಕ್ಸ್‌ವೆಲ್ ಎಂಬ ಆಸ್ಟ್ರೇಲಿಯಾ ಆಟಗಾರನ ವಿರುದ್ಧ ಭಾರಿ ಆಕ್ರೋಶ ಮೊಳಗಿದೆ, ಭಾರತೀಯ ಕ್ರಿಕೆಟ್ ಅಭಿಮಾನಿಗಳು ಗ್ಲೆನ್ ಮ್ಯಾಕ್ಸ್‌ವೆಲ್ ವಿರುದ್ಧ ರೊಚ್ಚಿಗೆದ್ದಿದ್ದಾರೆ. ಪದೇ ಪದೇ ಈತ ಅಂದ್ರೆ ಗ್ಲೆನ್ ಮ್ಯಾಕ್ಸ್‌ವೆಲ್ ಕಳಪೆ ಪ್ರದರ್ಶನ ನೀಡುವ ಜೊತೆಗೆ, ಮೈದಾನದಲ್ಲಿ ನಿಯಮ ಉಲ್ಲಂಘನೆ ಮಾಡುತ್ತಿರುವ ಆರೋಪ ಕೇಳಿ ಬರುತ್ತಿದೆ. ಆಸ್ಟ್ರೇಲಿಯಾ ಆಟಗಾರ, ಸ್ಟಾರ್ ಆಲ್‌ರೌಂಡರ್ ಆಗಿದ್ದ ಗ್ಲೆನ್ ಮ್ಯಾಕ್ಸ್‌ವೆಲ್ ಈ ರೀತಿಯ ವರ್ತನೆಗೆ ಕುಡಿತದ ಚಟವೇ ಕಾರಣ ಎಂಬ ಆರೋಪ ಕೂಡ ಇದೆ.

ಆರ್‌ಸಿಬಿ ಅಂದ್ರೆ ನಮ್ಮ ಬೆಂಗಳೂರು ತಂಡದ ಪರವಾಗಿ ಆಡುತ್ತಿದ್ದ ಗ್ಲೆನ್ ಮ್ಯಾಕ್ಸ್‌ವೆಲ್‌ನ ಹೊರಗೆ ಹಾಕಲಾಗಿತ್ತು, ಆ ನಂತರ ಪಂಜಾಬ್ ತಂಡಕ್ಕೆ ಆಡುತ್ತಿರುವ ಮ್ಯಾಕ್ಸಿ ಪದೇ ಪದೇ ಭಾರತೀಯ ಕ್ರಿಕೆಟ್ ಅಭಿಮಾನಿಗಳ ಆಕ್ರೋಶಕ್ಕೆ ತುತ್ತಾಗುತ್ತಿದ್ದಾರೆ. ಐಸಿಸಿ ಟೂರ್ನಿಗಳಲ್ಲಿ & ಆಸ್ಟ್ರೇಲಿಯಾ ತಂಡದ ಪರವಾಗಿ ಆಡುವಾಗ ಚನ್ನಾಗಿಯೇ ಆಡುವ ಗ್ಲೆನ್ ಮ್ಯಾಕ್ಸ್‌ವೆಲ್, ಈಗ ಐಪಿಎಲ್ ಟೂರ್ನಿಯಲ್ಲಿ ಮಾತ್ರ ಕೆಟ್ಟದಾಗಿ ಪ್ರದರ್ಶನ ತೋರುತ್ತಿದ್ದಾರೆ. ಇದು ಬೇಕು ಬೇಕು ಅಂತಲೇ ಮಾಡುತ್ತಿರುವುದು. ಹೀಗಾಗಿ, 'ಕುಡುಕ ಮ್ಯಾಕ್ಸ್‌ವೆಲ್ ಐಪಿಎಲ್ ಟೂರ್ನಿಯಿಂದ ಉಚ್ಛಾಟನೆಗೆ...'

Glenn Maxwell Facing Opposition From Indian Cricket Fans In The IPL Journey

'ಕುಡುಕ ಮ್ಯಾಕ್ಸ್‌ವೆಲ್ ಉಚ್ಛಾಟನೆಗೆ...'

ಕ್ರಿಕೆಟ್ ಅಂದ್ರೆ ವಿರಾಟ್ ಕೊಹ್ಲಿ, ವಿರಾಟ್ ಕೊಹ್ಲಿ ಇದ್ದರೇ ಕ್ರಿಕೆಟ್‌ಗೆ ಮಜಾ ಎನ್ನುವಂತಹ ಪರಿಸ್ಥಿತಿ ಇದೆ. ಇದೇ ವಿರಾಟ್ ಕೊಹ್ಲಿ ಅವರ ಆಪ್ತ ಗೆಳೆಯನಾಗಿ ಆರ್‌ಸಿಬಿ ಪರ ಆಡುತ್ತಿದ್ದ ಗ್ಲೆನ್ ಮ್ಯಾಕ್ಸ್‌ವೆಲ್ ಅನಾಥನಂತೆ ಇದೀಗ ಪಂಜಾಬ್ ತಂಡ ಸೇರಿದ್ದಾರೆ. ಹೀಗಿದ್ದಾಗ ಸರಿಯಾಗಿ ಆಡುತ್ತಿಲ್ಲ ಎಂಬ ಆರೋಪ ಕ್ರಿಕೆಟ್ ಅಭಿಮಾನಿಗಳಿಂದ ಕೇಳಿ ಬರುತ್ತಿದೆ.

ಐಪಿಎಲ್ ಭಾರತೀಯ ಕ್ರಿಕೆಟ್ ಲೋಕವನ್ನು ಮತ್ತೊಂದು ಹಂತಕ್ಕೆ ಕರೆದುಕೊಂಡು ಹೋಗಿದೆ. ಹೀಗಿದ್ದಾಗಲೇ, ನಮ್ಮ ಭಾರತದಲ್ಲಿ ಐಪಿಎಲ್ ಟೋರ್ನಿಗೆ ಸಾಕಷ್ಟು ಮಹತ್ವ ಇದೆ. ಆದರೆ ಗ್ಲೆನ್ ಮ್ಯಾಕ್ಸ್‌ವೆಲ್ ಇದೇ ಐಪಿಎಲ್ ಟೂರ್ನಿಯಲ್ಲಿ ಹೀನಾಯ ಪ್ರದರ್ಶನ ನೀಡುತ್ತಿದ್ದಾರೆ. ಹೀಗಿದ್ದಾಗಲೇ, 'ಕುಡುಕ ಮ್ಯಾಕ್ಸ್‌ವೆಲ್ ಐಪಿಎಲ್ ಟೂರ್ನಿಯಿಂದ ಉಚ್ಛಾಟನೆಗೆ...'

ಮ್ಯಾಕ್ಸ್‌ವೆಲ್ ಮನೆಗೆ ಹೋಗೋದು ಗ್ಯಾರಂಟಿ?

ಗ್ಲೆನ್ ಮ್ಯಾಕ್ಸ್‌ವೆಲ್ ಕುಡಿತದ ಕಥೆಗಳು ಇಂದು ನಿನ್ನೆಯದಲ್ಲ, ಈ ಹಿಂದೆ ಕೂಡ ಮ್ಯಾಕ್ಸ್‌ವೆಲ್ ವಿರುದ್ಧ ಎಣ್ಣೆ ಹೊಡೆದು ತೂರಾಡಿ ಆಸ್ಪತ್ರೆ ಸೇರಿದ್ದ ಆರೋಪ ಕೇಳಿ ಬಂದಿತ್ತು. ಆದರೆ ಇದೀಗ ಮತ್ತೊಂದು ಗಂಭೀರ ಆರೋಪ ಕೇಳಿ ಬರುತ್ತಿದೆ. 2024ರ ಜನವರಿ ತಿಂಗಳಲ್ಲಿ ಮ್ಯಾಕ್ಸ್‌ವೆಲ್ ಅತಿಯಾಗಿ ಕುಡಿತದ ಚಟಕ್ಕೆ ಬಿದ್ದ ಕಾರಣ ಆಸ್ಪತ್ರೆಗೆ ಸೇರಿದ್ದರು ಎಂಬ ಆರೋಪ ನಂತರದಲ್ಲಿ, ಈಗಲೂ ಕುಡಿತದ ಕಾರಣಕ್ಕೆ ಗ್ಲೆನ್ ಮ್ಯಾಕ್ಸ್‌ವೆಲ್ 2025ರ ಐಪಿಎಲ್ ಟೂರ್ನಿಯಲ್ಲಿ ಸರಿಯಾಗಿ ಆಡುತ್ತಿಲ್ಲ ಎಂಬ ಆಕ್ರೋಶ & ಆರೋಪ ಕೇಳಿ ಬಂದಿದೆ. ಇದೇ ಕಾರಣಕ್ಕೆ ಈಗ 'ಕುಡುಕ ಮ್ಯಾಕ್ಸ್‌ವೆಲ್ ಐಪಿಎಲ್ ಟೂರ್ನಿಯಿಂದ ಉಚ್ಛಾಟನೆ ಮಾಡಿ, ಕಠಿಣ ಕ್ರಮ ಕೈಗೊಳ್ಳಿ...' ಅಂತಾ ಐಪಿಎಲ್ ಅಭಿಮಾನಿಗಳು ಒತ್ತಾಯ ಮಾಡುತ್ತಿದ್ದಾರೆ.

ಮನೆಹಾಳು ಮಾಡಿದ ಮ್ಯಾಕ್ಸ್?

ಕ್ರಿಕೆಟ್ ಲೋಕದಲ್ಲಿ ಐಪಿಎಲ್ ಅನ್ನೋದೆ ಒಂದು ಹಬ್ಬವಾಗಿದ್ದು, ಪ್ರತಿವರ್ಷ ಐಪಿಎಲ್ ಹಬ್ಬ ಸಂಭ್ರಮದಿಂದ ನಡೆದುಕೊಂಡು ಹೋಗುತ್ತಿದೆ. ಆದ್ರೆ ಐಪಿಎಲ್ ಅಖಾಡದಲ್ಲಿ ಕೆಲ ಆಟಗಾರರು ತುಂಬಾ ಕೆಟ್ಟ ಹೆಸರು ಪಡೆದು ಟ್ರೋಲ್ ಆಗುತ್ತಿದ್ದು, ಐಪಿಎಲ್-2025 ಆಡಲು ಬಂದಿರುವ ಗ್ಲೆನ್ ಮ್ಯಾಕ್ಸ್‌ವೆಲ್ ವಿರುದ್ಧ ಭಾರಿ ಆಕ್ರೋಶ ವ್ಯಕ್ತವಾಗುತ್ತಿದೆ. ಇದರ ಜೊತೆಗೇ, 'ಕುಡುಕ ಮ್ಯಾಕ್ಸ್‌ವೆಲ್ ಮನೆಗೆ ಹೋಗಪ್ಪಾ ಸಾಕು.. ಸಾಕು..' ಅಂತಿದ್ದಾರೆ ಕ್ರಿಕೆಟ್ ಫ್ಯಾನ್ಸ್. ಯಾಕೆ ಅಂದ್ರೆ ಚೆನ್ನೈ ವಿರುದ್ಧದ ಪಂದ್ಯದಲ್ಲಿ ಕೇವಲ 1 ರನ್‌ಗೆ ಔಟ್ ಆಗಿರುವ ಮ್ಯಾಕ್ಸ್ ಮತ್ತೊಮ್ಮೆ ಮನೆಹಾಳು ಕೆಲಸ ಮಾಡಿದ್ದಾರೆ ಅನ್ನೋದು ಅಭಿಮಾನಿಗಳ ಆಕ್ರೋಶ. ಹಾಗೇ ಇನ್ನೊಂದು ಕಡೆ ಸಿಕ್ಕಾಪಟ್ಟೆ ಕುಡಿಯುತ್ತಿರುವ ಮ್ಯಾಕ್ಸ್‌ವೆಲ್ ಹಲವು ರೀತಿಯ ಆರೋಗ್ಯ ಸಮಸ್ಯೆಗಳನ್ನು ಎದುರಿಸುತ್ತಾ ಇದ್ದಾರೆ ಎಂಬ ಆರೋಪ ಕೂಡ ಇದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+