ಗಂಭೀರ್-ಕೊಹ್ಲಿ 8 ವರ್ಷದ ಬಳಿಕ ಒಂದೇ ಡ್ರೆಸ್ಸಿಂಗ್ ರೂಮ್‌ನಲ್ಲಿ: ಒಟ್ಟಾಗಿ ಕಾಣಿಸಿಕೊಳ್ಳುವುದು ಯಾವಾಗ?
ಟೀಮ್ ಇಂಡಿಯಾ ಟಿ20 ವಿಶ್ವಕಪ್ ಚಾಂಪಿಯನ್ ಪಟ್ಟವನ್ನು ಅಲಂಕರಿಸಿದೆ. ಎರಡನೇ ಬಾರಿಗೆ ಚುಟುಕು ಕ್ರಿಕೆಟ್‌ನ ಸಾಮ್ರಾಟ ಬಿರಿದು ಪಡೆದಿರುವ ಭಾರತ, ಸಂಭ್ರಮದಲ್ಲಿದೆ. ಈ ಮಧ್ಯೆ ತಂಡವನ್ನು ಚಾಂಪಿಯನ್ ಪಟ್ಟಕ್ಕೇರಿಸಿದ ಗುರು ರಾಹುಲ್ ದ್ರಾವಿಡ್ ಅವರ ಅಧಿಕಾರ ಮುಗಿದಿದೆ. ಈ ಸ್ಥಾನಕ್ಕೆ ನೂತನ ಕೋಚ್ ಆಗಿ ಗೌತಮ್ ಗಂಭೀರ್ ಕಾಣಿಸಿಕೊಳ್ಳಲಿದ್ದಾರೆ.
ಟೀಮ್ ಇಂಡಿಯಾ ಪರ ಆಡಿ ಸೈ ಎನಿಸಿಕೊಂಡ ಎಡಗೈ ಆಟಗಾರ ಗೌತಮ್ ಗಂಭೀರ್ ಕ್ಲಾಸಿಕ್ ಆಟಗಾರ. ತಮ್ಮ ನೈಜ ಆಟದಿಂದಲೇ ಎಲ್ಲರ ಮನ ಗೆದ್ದ ಪ್ಲೇಯರ್. ನಿವೃತ್ತಿಯ ಬಳಿಕ ಗೌತಮ್ ಐಪಿಎಲ್‌ನ ನೂತನ ತಂಡವಾಡ ಲಕ್ನೋ ಸೂಪರ್ ಜೇಂಟ್ಸ್ ತಂಡಕ್ಕೆ ಕೋಚಿಂಗ್ ಮಾಡಿದ್ದರು. ಈ ವೇಳೆ ಎಲ್‌ಎಸ್‌ಜಿ ಪ್ಲೇ ಆಫ್ ಪ್ರವೇಶಿಸಿತ್ತು. ನಂತರ ಇವರನ್ನು ಕೆಕೆಆರ್ ಸೆಳೆಯುವಲ್ಲಿ ಸಫಲವಾಗಿತ್ತು. 2024ರ ಐಪಿಎಲ್ ಚಾಂಪಿಯನ್ ಆಗಿರುವ ಕೋಲ್ಕತ್ತಾ ತಂಡದ ಹಿಂದೆ ಗೌತಿ ಬೆವರ ಹನಿಯನ್ನು ಕಾಣಬಹುದು.

ಗಂಭೀರ್ ಕೋಚ್
ಗೌತಮ್ ಗಂಭೀರ್ ಅವರ ಬಳಿಯೂ ಉತ್ತಮ ಕೋಚಿಂಗ್ ಸ್ಕಿಲ್‌ಗಳು ಇವೆ ಎಂದು ಜಗತ್ತಿಗೆ ತಿಳಿಯಿತು. ಆಗಲೇ ಬಿಸಿಸಿಐ ಇವರನ್ನು ಟೀಮ್ ಇಂಡಿಯಾದ ಮುಂದಿನ ಕೋಚ್ ಆಗಿ ನೇಮಿಸಲು ಮನಸ್ಸು ಮಾಡಿತ್ತು. ಆದರೆ ಬಿಸಿಸಿಐ ಮನಸ್ಸು ಮಾಡಿದರೆ ಕೋಚ್ ಸ್ಥಾನದ ಮೇಲೆ ತಂದು ಕೂರಿಸುವ ವ್ಯವಸ್ಥೆ ಇಲ್ಲ. ಕೋಚ್ ಸ್ಥಾನದ ಮೇಲೆ ಕಣ್ಣು ನೆಟ್ಟಿರುವ ಅಭ್ಯರ್ಥಿಗಳನ್ನು ಸಂದರ್ಶಿಸಲಾಗುತ್ತದೆ. ಆ ನಂತರವೇ ಕೋಚ್ ಆಯ್ಕೆ ನಡೆಯುತ್ತದೆ.
ಈಗ ಟೀಮ್ ಇಂಡಿಯಾದ ನೂತನ ಕೋಚ್ ಆಗಿ ಗೌತಮ್ ಗಂಭೀರ್ ಆಯ್ಕೆ ಆಗಿದೆ. ಅಭಿಮಾನಿಗಳ ಮುಂದಿರುವ ದೊಡ್ಡ ಪ್ರಶ್ನೆ ಎಂದರೆ, ವಿರಾಟ್ ಕೊಹ್ಲಿ ಹಾಗೂ ಗೌತಮ್ ಹೇಗೆ ನಡೆದುಕೊಳ್ಳುತ್ತಾರೆ ಎಂದು. ಇಬ್ಬರೂ ಅಗ್ರೇಸಿವ್ ಪ್ಲೇಯರ್‌ಗಳೆ. ಇಬ್ಬರದ್ದೂ ತಮ್ಮದೇ ಹಾವ ಭಾವ.. ಈ ಸ್ಟಾರ್‌ಗಳ ಹೇಗೆ ಟೀಮ್ ಇಂಡಿಯಾದ ಡ್ರೆಸ್ಸಿಂಗ್ ರೂಮ್‌ನಲ್ಲಿ ಇರುತ್ತಾರೆ ಎಂಬುದೇ ದೊಡ್ಡ ಪ್ರಶ್ನೆ ಆಗಿದೆ.

ವಿರಾಟ್, ಗೌತಮ್ ಒಂದೇ ಡ್ರೆಸ್ಸಿಂಗ್ ರೂಮ್‌ನಲ್ಲಿ
ಸುಮಾರು 8 ವರ್ಷಗಳ ಹಿಂದೆ ಇಬ್ಬರೂ ಒಂದೇ ಡ್ರೆಸ್ಸಿಂಗ್ ರೂಮ್ ಹಂಚಿಕೊಂಡಿದ್ದರು. ಆಗ ಇಬ್ಬರೂ ಟೀಮ್ ಇಂಡಿಯಾದ ಆಟಗಾರರೇ ಆಗಿದ್ದರು. ಆದರೆ ಈಗ ಕಾಲ ಬದಲಾಗಿದೆ. ಒಬ್ಬ ಟೀಮ್ ಇಂಡಿಯಾದ ಬ್ಯಾಟಿಂಗ್ ನೊಗವನ್ನು ತಮ್ಮ ಹೆಗಲ ಮೇಲೆ ಹೊತ್ತು ಕೊಂಡು ಮುನ್ನಡೆಸುತ್ತಿದ್ದರೆ, ಇನ್ನೋಬ್ಬ ಗುರುವಿನ ಸ್ಥಾನವನ್ನು ತುಂಬಲಿದ್ದಾರೆ. ವಿರಾಟ್ ಹಾಗೂ ಗಂಭೀರ್ ನಡುವೆ ವೈಮನಸ್ಸು ಮುಚ್ಚಿಡುವ ಅವಶ್ಯಕತೆ ಇಲ್ಲವೇ ಇಲ್ಲ.
ಐಪಿಎಲ್‌ನಲ್ಲಿ ಆರ್‌ಸಿಬಿ ಹಾಗೂ ಎಲ್‌ಸಿಜಿ ನಡುವಿನ ಪಂದ್ಯದ ವೇಳೆ ನಡೆದ ಘಟನೆ ಎಲ್ಲರ ನೆನಪಿನಲ್ಲಿರುತ್ತದೆ. ಸ್ಟಾರ್ ಆಟಗಾರರು ಇಬ್ಬರೂ ಮೈದಾನದಲ್ಲಿ ಮಾತಿನ ಚಕಮಕಿ ನಡೆಸಿದ್ದರು. ಈ ಸುದ್ದಿ ವ್ಯಾಪಕವಾಗಿ ಚರ್ಚೆಗೆ ಗ್ರಾಸವಾಗಿತ್ತು. ಆದರೆ 2024ರಲ್ಲಿ ಇಬ್ಬರೂ ಮುಖಾಮುಖಿ ಆದಾಗ ಇಬ್ಬರ ನಡುವಿನ ಸಿಟ್ಟು ಹಿಮಾಲಯದಂತೆ ಕರಗಿ ಹೋಗಿತ್ತು. ಒಳ್ಳೆಯ ಸ್ನೇಹಿತರಂತೆ ಮಾತನಾಡಿದರು.

ಇಬ್ಬರೂ ಒಟ್ಟಾಗಿ ಕಾಣಿಸಿಕೊಳ್ಳುವುದು ಯಾವಾಗ
ಅಂದಹಾಗೆ ಈ ಸ್ಟಾರ್ ಆಟಗಾರರು ಇಬ್ಬರೂ ಒಟ್ಟಾಗಿ ಯಾವಾಗ ಕಾಣಿಸಿಕೊಳ್ಳಲಿದ್ದಾರೆ ಎಂಬ ಪ್ರಶ್ನೆ ಎಲ್ಲರಲ್ಲೂ ಇರುವುದು ಸಹಜ. ಟೀಮ್ ಇಂಡಿಯಾ ಇನ್ನೇನು ಕೆಲವೇ ದಿನಗಳಲ್ಲಿ ಭಾರತ, ಶ್ರೀಲಂಕಾ ಪ್ರವಾಸ ಬೆಳೆಸಲಿದೆ. ಈ ಸರಣಿಗೆ ಹಿರಿಯ ಆಟಗಾರರಿಗೆ ವಿಶ್ರಾಂತಿ ನೀಡಲಾಗಿದೆ. ಹೀಗಾಗಿ ಈ ಸರಣಿಯಲ್ಲಿ ವಿರಾಟ್ ಕೊಹ್ಲಿ ಹಾಗೂ ಗೌತಮ್ ಗಂಭೀರ್ ಕಾಣಿಸಿಕೊಳ್ಳುವುದಿಲ್ಲ.
ವಿರಾಟ್ ಕೊಹ್ಲಿ ಹಾಗೂ ಗೌತಮ್ ಗಂಭೀರ್ ಒಂದೇ ಸೂರಿನಲ್ಲಿ ತವರಿನಲ್ಲಿ ಬಾಂಗ್ಲಾದೇಶದ ವಿರುದ್ಧದ ಸರಣಿಯಿಂದ ಕಾಣಿಸಿಕೊಳ್ಳಲಿದ್ದಾರೆ. ಈ ಸರಣಿ ಸೆಪ್ಟಂಬರ್ 19 ರಿಂದ ಆರಂಭವಾಗಿದೆ. ಆ ಕ್ಷಣವನ್ನು ನೋಡಲು ಅಭಿಮಾನಿಗಳು ಕಾತುರದಿಂದ ಕಾಯುತ್ತಿದ್ದಾರೆ.












Click it and Unblock the Notifications