Finn Allen: ಕ್ರಿಸ್ ಗೇಲ್ ದಾಖಲೆ ಉಡೀಸ್: ಫಿನ್ ಅಲೇನ್ 51ಕ್ಕೆ 151
ಕ್ರಿಕೆಟ್ ಅಂಗಳದಲ್ಲಿ ದಿನವೂ ಒಂದು ಹೊಸ ದಾಖಲೆಗಳು ನಿರ್ಮಾಣವಾಗುತ್ತವೆ. ಈ ದಾಖಲೆಗಳನ್ನು ನಿರ್ಮಿಸುವ ಮೂಲಕ ಆಟಗಾರ ಖ್ಯಾತಿ ಪಡೆಯುತ್ತಾರೆ. ಚುಟುಕು ಕ್ರಿಕೆಟ್‌ನಲ್ಲೂ ಇಂತಹ ದಾಖಲೆಗಳೂ ಆಗುತ್ತವೆ. ಟಿ20 ಕ್ರಿಕೆಟ್‌ನಲ್ಲಿ ತನ್ನದೇ ಕ್ಲಾಸ್ ಆಟದ ಮೂಲಕ ಅಭಿಮಾನಿಗಳ ಮನ ಗೆದ್ದಿದ್ದ ಆಟಗಾರ ಕ್ರಿಸ್ ಗೇಲ್. ಇವರ ಒಂದು ದಾಖಲೆಯನ್ನು ಸ್ಪೋಟಕ ಆಟಗಾರ ಫಿನ್ ಅಲೆನ್ ಮುರಿದಿದ್ದಾರೆ.
ಸದ್ಯ ಅಮೆರಿಕದಲ್ಲಿ ಮೇಜರ್ ಲೀಗ್‌ಗಳು ಆರಂಭವಾಗಿವೆ. ಈ ಲೀಗ್‌ನ ಮೊದಲ ಪಂದ್ಯದಲ್ಲಿ ಸ್ಯಾನ್ ಫ್ರಾನ್ಸಿಸ್ಕೋ ಯೂನಿಕಾರ್ನ್ ಮತ್ತು ವಾಷಿಂಗ್ಟನ್ ಫ್ರೀಡಂ ತಂಡಗಳು ಕಾದಾಟ ನಡೆಸಿದವು. ಈ ಪಂದ್ಯದಲ್ಲಿ ಸ್ಯಾನ್ ಫ್ರಾನ್ಸಿಸ್ಕೋ ತಂಡದ ಆರಂಭಿಕ ಆಟಗಾರ ಫಿನ್ ಸ್ಪೋಟಕ ಇನಿಂಗ್ಸ್ ಆಡಿದರು. ಇವರ ಎದುರಾಳಿ ವಾಷಿಂಗ್ಟನ್ ತಂಡದ ಬೌಲರ್‌ಗಳನ್ನು ಮನಬದಂತೆ ಥಳಿಸಿದರು. ಇವರ ಬಿರುಸಿನ ಆಟದ ಪರಿಣಾಮವೇ ಸ್ಯಾನ್ ಫ್ರಾನ್ಸಿಸ್ಕೋ 269 ರನ್ ದೊಡ್ಡ ಗುರಿಯನ್ನು ಕಲೆ ಹಾಕಿತು.

ನ್ಯೂಜಿಲೆಂಡ್ ತಂಡದ ಆಟಗಾರ ಫಿನ್ ಅಲೆನ್ ಅವರನ್ನು ಕಟ್ಟಿಹಾಕುವಲ್ಲಿ ವಾಷಿಂಗ್ಟನ್ ಫ್ರೀಡಂ ತಂಡದ ಸ್ಟಾರ್ ಆಟಗಾರರು ವಿಫಲರಾದರು. ಫಿನ್ ಅಲೆನ್ ತಮ್ಮ ಅನುಭವ ಬಳಸಿಕೊಂಡು ಬ್ಯಾಟ್ ಮಾಡಿದರು. ಇವರು ಕೇವಲ 51 ಎಸೆತಗಳಲ್ಲಿ 5 ಬೌಂಡರಿ, 19 ಸಿಕ್ಸರ್ ಬಾರಿಸುವ ಮೂಲಕ ಇತಿಹಾಸ ಬರೆದರು. ಇವರ ಅಮೋಘ ಆಟದ ಪರಿಣಾಮವೇ ವಾಷಿಂಗ್ಟನ್ ಫ್ರೀಡಂ ವಿರುದ್ಧ ಸ್ಯಾನ್ ಫ್ರಾನ್ಸಿಸ್ಕೋ 123 ರನ್‌ಗಳ ಜಯ ದಾಖಲಿಸಿತು.
ಗೇಲ್ ದಾಖಲೆ ಉಡೀಸ್
ಟಿ20 ಕ್ರಿಕೆಟ್ ಪಂದ್ಯದಲ್ಲಿ ಕ್ರಿಸ್ ಗೇಲ್ ಅತಿ ಹೆಚ್ಚು ಸಿಕ್ಸರ್ ಬಾರಿಸಿದ ದಾಖಲೆಯನ್ನು ಹೊಂದಿದ್ದರು. ಈಗ ಈ ದಾಖಲೆ ಫಿನ್ ಅಲೆನ್ ಪಾಲಾಗಿದೆ. ಫಿನ್ ಅಲೆನ್ ಚುಟುಕು ಕ್ರಿಕೆಟ್‌ನಲ್ಲಿ 19 ಸಿಕ್ಸರ್ ಸಿಡಿಸಿದ ಹಿರಿಮೆ ತಮ್ಮದಾಗಿಸಿಕೊಂಡಿದ್ದಾರೆ. ಗೇಲ್ 2017 ರಲ್ಲಿ ಬಾಂಗ್ಲಾದೇಶ ಪ್ರೀಮಿಯರ್ ಲೀಗ್ ಪಂದ್ಯದಲ್ಲಿ ರಂಗ್‌ಪುರ್ ರೈಡರ್ಸ್ ಪರ ಆಡುವಾಗ ಗೇಲ್ ಢಾಕಾ ಡೈನಮೈಟ್ಸ್ ವಿರುದ್ಧ 18 ಸಿಕ್ಸರ್‌ಗಳನ್ನು ಬಾರಿಸಿದ್ದರು. ಈ ಮೂಲಕ ಟಿ20 ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ಸಿಕ್ಸರ್ ಬಾರಿಸಿದ ಬ್ಯಾಟರ್‌ಗಳ ಪಟ್ಟಿಯಲ್ಲಿ ಫಿನ್ ಅಲೆನ್ ಮೊದಲ ಸ್ಥಾನ ಪಡೆದಿದ್ದಾರೆ.
ಟಿ20 ಕ್ರಿಕೆಟ್‌ನಲ್ಲಿ ಅತಿ ದೊಡ್ಡ ಇನಿಂಗ್ಸ್ ಕಟ್ಟಿದ್ದ ಹೆಗ್ಗಳಿಕೆ ಕ್ರಿಸ್ ಗೇಲ್ ಹೆಸರಿನಲ್ಲಿ ಇದೆ. ಇವರು 2013ರ ಐಪಿಎಲ್‌ನಲ್ಲಿ ಪುಣೇ ವಾರಿಯರ್ಸ್ ವಿರುದ್ಧ ಆರ್‌ಸಿಬಿ ಪರ ಆಡುವಾಗ 175 ರನ್‌ಗಳನ್ನು ಕಲೆ ಹಾಕಿದ್ದರು. ಈ ದಾಖಲೆ ಇನ್ನು ಇವರ ಹೆಸರಿನಲ್ಲಿದೆ.
ಪಂದ್ಯದ ಫಲಿತಾಂಶ
ಟಾಸ್ ಸೋತರೂ ಮೊದಲು ಬ್ಯಾಟ್ ಮಾಡಿದ ಸ್ಯಾನ್ ಫ್ರಾನ್ಸಿಸ್ಕೋ ಯೂನಿಕಾರ್ನ್ 20 ಓವರ್‌ಗಳಲ್ಲಿ 5 ವಿಕೆಟ್‌ಗೆ 269 ರನ್ ಸೇರಿಸಿತು. ಇದಕ್ಕುತ್ತರವಾಗಿ ಬ್ಯಾಟ್ ಮಾಡಿದ ವಾಷಿಂಗ್ಟನ್ ಫ್ರೀಡಂ 13.1 ಓವರ್‌ಗಳಲ್ಲಿ 146 ರನ್‌ಗಳಿಗೆ ಆಲೌಟ್ ಆಯಿತು. ಸ್ಯಾನ್ ಫ್ರಾನ್ಸಿಸ್ಕೋ ಟೂರ್ನಿಯಲ್ಲಿ ಜಯದ ಆರಂಭವನ್ನು ಮಾಡಿದೆ.












Click it and Unblock the Notifications