RCB vs KKR: ಬೇಬಿ ಮಾಲಿಂಗಗೆ ಅವಕಾಶ ನೀಡುವಂತೆ ಆರ್‌ಸಿಬಿಗೆ ಅಭಿಮಾನಿಗಳ ಒತ್ತಾಯ

ಭಾರತ ಪಾಕಿಸ್ತಾನದ ನಡುವೆ ಉದ್ವಿಗ್ನ ಪರಿಸ್ಥಿತಿಯಿಂದಾಗಿ ಒಂದು ವಾರ ಸ್ಥಗಿತಗೊಂಡಿದ್ದ ಐಪಿಎಲ್ 2025ರ ಪಂದ್ಯಾವಳಿ ಮತ್ತೆ ಆರಂಭವಾಗಲು ಸಜ್ಜಾಗಿದೆ. ಶನಿವಾರ ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯಲಿರುವ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್ ಸಿಬಿ) ಕೋಲ್ಕತಾ ನೈಟ್ ರೈಡರ್ಸ್ ತಂಡವನ್ನು ಎದುರಿಸಲಿದೆ.

ಐಪಿಎಲ್ ಒಂದು ವಾರ ಸ್ಥಗಿತಗೊಂಡ ಬೆನ್ನಲ್ಲೇ ಹಲವು ವಿದೇಶಿ ಆಟಗಾರರ ಅಲಭ್ಯತೆ ಹಲವು ತಂಡಗಳನ್ನು ಕಾಡುತ್ತಿದೆ. ಮಿಚೆಲ್ ಸ್ಟಾರ್ಕ್, ಫಾಫ್ ಡುಪ್ಲೆಸಿಸ್, ಜೇಕ್ ಫ್ರೇಸರ್ ಮೆಕ್‌ಗುರ್ಕ್, ರಿಯಾನ್ ರಿಕಲ್ಟನ್ ಸೇರಿದಂತೆ ಹಲವು ಪ್ರಮುಖ ಆಟಗಾರರು ಅಲಭ್ಯರಾಗಿದ್ದಾರೆ.

fans urges rcb give chance to baby malinga nuwan thushara ipl 2025

ಆರ್ ಸಿಬಿ ತಂಡದ ಪ್ರಮುಖ ವೇಗಿಗಳಾದ ಜೋಶ್ ಹೇಜಲ್‌ವುಡ್ ಮತ್ತು ಲುಂಗಿ ಎಂಗಿಡಿ ಕೂಡ ಪ್ಲೇಆಫ್‌ನಲ್ಲಿ ಲಭ್ಯವಿರುವ ಬಗ್ಗೆ ಇನ್ನೂ ಪ್ರಶ್ನೆಗಳಿದೆ. ಲುಂಗಿ ಎಂಗಿಡಿ ಕೆಕೆಆರ್ ವಿರುದ್ಧದ ಪಂದ್ಯದಲ್ಲಿ ಆಡುವುದು ಖಚಿತವಾಗಿದೆ. ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ ಫೈನಲ್ ಪಂದ್ಯಕ್ಕೆ ಆಯ್ಕೆಯಾಗಿರುವ ಎಂಗಿಡಿಗೆ ಮೇ 29ರಂದು ವಾಪಸ್ ಬರುವಂತೆ ಕ್ರಿಕೆಟ್ ಸೌಥ್ ಆಫ್ರಿಕಾ ಸೂಚನೆ ಕೊಟ್ಟಿದೆ.

ಜೋಶ್ ಹೇಜಲ್‌ವುಡ್ ಇನ್ನೂ ಆರ್ ಸಿಬಿ ತಂಡವನ್ನು ಸೇರಿಕೊಂಡಿಲ್ಲ. ಅವರು ಪ್ಲೇಆಫ್ ಪಂದ್ಯ ಆಡುತ್ತಾರೆ ಎಂದು ಹಲವು ವರದಿಗಳು ತಿಳಿಸಿದ್ದರೂ ಆರ್ ಸಿಬಿ ಈ ಬಗ್ಗೆ ಇನ್ನೂ ಯಾವುದೇ ಸ್ಪಷ್ಟನೆ ನೀಡಿಲ್ಲ. ಜೋಶ್ ಹೇಜಲ್‌ವುಡ್ ಅಲಭ್ಯರಾದರೆ ನ್ಯೂಜಿಲೆಂಡ್‌ನ ವೇಗಿ ಮ್ಯಾಟ್ ಹೆನ್ರಿಯನ್ನು ತಂಡಕ್ಕೆ ಸೇರ್ಪಡೆ ಮಾಡಿಕೊಳ್ಳಿ ಎಂದು ಅಭಿಮಾನಿಗಳು ಆಗ್ರಹಿಸಿದ್ದಾರೆ.

ಬೇಬಿ ಮಾಲಿಂಗಗೆ ಅವಕಾಶ ನೀಡಿ

ಇನ್ನು ಆರ್ ಸಿಬಿ ತಂಡದಲ್ಲಿರುವ ಶ್ರೀಲಂಕಾದ ವೇಗಿ ಬೇಬಿ ಮಾಲಿಂಗ ಎಂದೇ ಕರೆಯುವ ನುವಾನ್ ತುಷಾರ ಅವರಿಗೆ ಅವಕಾಶ ಕೊಡುವಂತೆ ಅಭಿಮಾನಿಗಳು ಒತ್ತಾಯಿಸಿದ್ದಾರೆ. ನುವಾನ್ ತುಷಾರ ಐಪಿಎಲ್ ಕೊನೆಯವರೆಗೂ ಲಭ್ಯವಿರುವುದು ಖಚಿತವಾಗಿರುವ ಕಾರಣ ಅವರಿಗೆ ಲೀಗ್ ಹಂತದಲ್ಲೇ ಒಂದೆರಡು ಪಂದ್ಯಗಳಲ್ಲಿ ಅವಕಾಶ ಕೊಟ್ಟು ಅವರು ಉತ್ತಮ ಪ್ರದರ್ಶನ ನೀಡಿದರೆ ಪ್ಲೇಆಫ್‌ನಲ್ಲಿ ತಂಡದ ಬೌಲಿಂಗ್ ಸಮಸ್ಯೆಗೆ ಪರಿಹಾರ ಸಿಗಲಿದೆ ಎನ್ನುವುದು ಅಭಿಮಾನಿಗಳ ಲೆಕ್ಕಾಚಾರ.

ನುವಾನ್ ತುಷಾರ ಶ್ರೀಲಂಕಾದ ಲೆಜೆಂಡ್ ಕ್ರಿಕೆಟಿಗ, ವೇಗದ ಬೌಲರ್ ಲಸಿತ್ ಮಾಲಿಂಗ ತರ ವಿಚಿತ್ರ ಬೌಲಿಂಗ್ ಆಕ್ಷನ್ ಹೊಂದಿದ್ದಾರೆ. ಮತೀಶ ಪತಿರಾನ ಮತ್ತು ನುವಾನ್ ತುಷಾರ ಅವರನ್ನು ಬೇಬಿ ಮಾಲಿಂಗ ಎಂದೇ ಕರೆಯಲಾಗುತ್ತದೆ. ಯಾರ್ಕರ್ ಎಸೆತಗಳನ್ನು ಮಾಡುವಲ್ಲಿ ನುವಾನ್ ತುಷಾರ ಪಳಗಿದ್ದು ಆರ್ ಸಿಬಿ ಡೆತ್ ಬೌಲಿಂಗ್‌ಗೆ ಬಲ ತರುವ ಕ್ಷಮತೆ ಹೊಂದಿದ್ದಾರೆ. ಆದ್ದರಿಂದ ಅವರಿಗೆ ಅವಕಾಶ ಕೊಡಬೇಕು ಎನ್ನುವುದು ಅಭಿಮಾನಿಗಳ ಒತ್ತಾಯ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+