Ind vs Aus: ಮೂರನೇ ಟೆಸ್ಟ್‌ನಲ್ಲೂ ನಿಮ್ಮಿಬ್ಬರನ್ನು ನಂಬಕ್ಕಾಗಲ್ಲ ಎಂದ ಫ್ಯಾನ್ಸ್!

ಆಸ್ಟ್ರೇಲಿಯಾ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಮೊದಲ ಪಂದ್ಯ ಗೆದ್ದಿದ್ದ ಭಾರತ ತಂಡ, ಅಡಿಲೇಡ್‌ನಲ್ಲಿ ನಡೆದ ಎರಡನೇ ಟೆಸ್ಟ್‌ನಲ್ಲಿ ಸೋಲನುಭವಿಸಿದೆ. ಡಿಸೆಂಬರ್ 14ರಿಂದ ಬ್ರಿಸ್ಬೇನ್‌ನ ಗಬ್ಬಾದಲ್ಲಿ ಮೂರನೇ ಟೆಸ್ಟ್ ಆರಂಭವಾಗಲಿದ್ದು ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್‌ ದೃಷ್ಟಿಯಿಂದ ಭಾರತಕ್ಕೆ ಈ ಟೆಸ್ಟ್ ನಿರ್ಣಾಯಕವಾಗಲಿದೆ. ಇದೇ ಕಾರಣಕ್ಕೆ ಭಾರತ ಈಗಾಗಲೇ ಕಠಿಣ ಅಭ್ಯಾಸ ಮಾಡುತ್ತಿದೆ, ಆದರೆ ಅಭ್ಯಾಸದ ವೇಳೆಯೂ ರೋಹಿತ್, ವಿರಾಟ್‌ ಮಾಡುತ್ತಿರುವ ತಪ್ಪುಗಳು ಅಭಿಮಾನಿಗಳ ಬೇಸರಕ್ಕೆ ಕಾರಣವಾಗಿದೆ.

ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ ಫಾರ್ಮ್ ಕಂಡುಕೊಳ್ಳಲು ಹೆಣಗಾಡುತ್ತಿದ್ದಾರೆ. ಇವರಿಬ್ಬರ ಬ್ಯಾಟಿಂಗ್ ವೈಫಲ್ಯ ಭಾರತ ತಂಡದ ಮೇಲೆ ಪರಿಣಾಮ ಬೀರಿದೆ. ಪರ್ತ್‌ ಟೆಸ್ಟ್‌ನಲ್ಲಿ ವಿರಾಟ್ ಕೊಹ್ಲಿ ಶತಕ ಬಾರಿಸಿದರೂ ಅಡಿಲೇಡ್ ಟೆಸ್ಟ್‌ನಲ್ಲಿ ದೊಡ್ಡ ಮೊತ್ತ ಬರಲಿಲ್ಲ, ತಂಡ ಒತ್ತಡದಲ್ಲಿದ್ದಾಗ ಕೊಹ್ಲಿ ರನ್ ಗಳಿಸುತ್ತಿಲ್ಲ ಎನ್ನುವುದು ಅಭಿಮಾನಿಗಳ ದೂರು.

Fans disapointed with virat kohli rohit sharma practice video

ಸ್ಟಂಪ್‌ನಿಂದ ದೂರ ಹೋಗುತ್ತಿರುವ ಚೆಂಡುಗಳನ್ನು ಆಡಲು ಹೋಗಿ ಕೊಹ್ಲಿ ಸುಮಾರು ಬಾರಿ ಔಟಾಗುತ್ತಿದ್ದಾರೆ. ಈ ದೌರ್ಬಲ್ಯವನ್ನು ಬಿಟ್ಟರೆ ಕೊಹ್ಲಿ ಇನ್ನಷ್ಟು ರನ್ ಗಳಿಸಬಹುದು ಎಂದು ಮಾಜಿ ಕ್ರಿಕೆಟಿಗರು, ಕ್ರಿಕೆಟ್ ಅಭಿಮಾನಿಗಳು ಸಲಹೆ ಕೊಡುತ್ತಿದ್ದಾರೆ. ಆದರೆ ಅಭ್ಯಾಸದ ವೇಳೆಯಲ್ಲೂ ಕೊಹ್ಲಿ ಅದೇ ತಪ್ಪನ್ನು ಮಾಡುತ್ತಿರುವುದು ಅಭಿಮಾನಿಗಳಿಗೆ ಇನ್ನಷ್ಟು ಬೇಸರ ತರಿಸಿದೆ.

ರೋಹಿತ್ ಶರ್ಮಾದು ಇದೇ ಕಥೆ

ಮತ್ತೊಂದು ಕಡೆ ನಾಯಕ ರೋಹಿತ್ ಶರ್ಮಾರದ್ದು ಕೂಡ ಇದೇ ಕಥೆ. ಮೊದಲ ಟೆಸ್ಟ್‌ಗೆ ಅಲಭ್ಯರಾಗಿದ್ದ ರೋಹಿತ್ ಶರ್ಮಾ ಅಡಿಲೇಡ್ ಟೆಸ್ಟ್‌ನಲ್ಲಿ ಕಣಕ್ಕಿಳಿದರೂ ರನ್ ಗಳಿಸಲು ವಿಫಲವಾದರು. ಎರಡೂ ಇನ್ನಿಂಗ್ಸ್‌ಗಳಿಂದ ಕೇವಲ 9 ರನ್ ಮಾತ್ರ ಗಳಿಸಿದರು.

ಗಬ್ಬಾದಲ್ಲಿ ನಡೆಯಲಿರುವ ಮೂರನೇ ಟೆಸ್ಟ್‌ನಲ್ಲಿ ಇವರಿಬ್ಬರೂ ಆಡಿದರೆ ಮಾತ್ರ ಭಾರತಕ್ಕೆ ಗೆಲುವು ಸುಲಭವಾಗಲಿದೆ. ಆದರೆ ಇಬ್ಬರು ಅಭ್ಯಾಸ ಮಾಡಿದ್ದನ್ನು ನೋಡಿದ ಅಭಿಮಾನಿಗಳು ಮಾತ್ರ ನಿಮ್ಮಿಬ್ಬರನ್ನು ಮೂರನೇ ಟೆಸ್ಟ್‌ನಲ್ಲಿ ನಂಬಿಕೊಳ್ಳಲು ಆಗಲ್ಲ ಎನ್ನುತ್ತಿದ್ದಾರೆ. ಯಶಸ್ವಿ ಜೈಸ್ವಾಲ್, ಕೆ ಎಲ್ ರಾಹುಲ್, ರಿಷಬ್ ಪಂತ್ ಕೂಡ ಜವಾಬ್ದಾರಿ ತೆಗೆದುಕೊಂಡು ಆಡಬೇಕು ಎಂದು ಸಲಹೆ ನೀಡಿದ್ದಾರೆ.

ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್‌ನಲ್ಲಿ ಭಾರತ ಆಡಬೇಕು ಎಂದರೆ ಉಳಿದ ಮೂರು ಟೆಸ್ಟ್ ಪಂದ್ಯಗಳನ್ನು ಗೆಲ್ಲಬೇಕಿದೆ. ಆಸ್ಟ್ರೇಲಿಯಾಗೂ ಕೂಡ ಫೈನಲ್ ತಲುಪಲು ಇನ್ನು ಮೂರು ಪಂದ್ಯಗಳನ್ನು ಗೆಲ್ಲಬೇಕಿದ್ದು ಎರಡೂ ತಂಡಗಳಿಗೂ ಮುಂದಿನ ಒಂದೊಂದು ಪಂದ್ಯವೂ ಮಹತ್ವದ್ದಾಗಿದೆ. ಗಬ್ಬಾ ಟೆಸ್ಟ್‌ನಲ್ಲಿ ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ ಫಾರ್ಮ್‌ಗೆ ಮರಳಲಿ, ಇಬ್ಬರೂ ಹೆಚ್ಚಿನ ರನ್ ಗಳಿಸಲಿ ಎಂದು ಅಭಿಮಾನಿಗಳು ಹಾರೈಸುತ್ತಿದ್ದಾರೆ.

ಮೂರನೇ ಟೆಸ್ಟ್‌ನಲ್ಲಿ ಭಾರತ ತಂಡದಲ್ಲಿ ಒಂದು ಬದಲಾವಣೆ ಮಾಡುವ ಸಾಧ್ಯತೆ ಕೂಡ ಇದೆ. ರವಿಚಂದ್ರನ್ ಅಶ್ವಿನ್ ಬದಲಾಗಿ ವಾಷಿಂಗ್ಟನ್ ಸುಂದರ್ ಕಣಕ್ಕಿಳಿಯಬಹುದು ಎಂದು ನಿರೀಕ್ಷೆ ಮಾಡಲಾಗಿದೆ. ಉಳಿದಂತೆ ಅಡಿಲೇಡ್‌ನಲ್ಲಿ ಆಡಿದ ತಂಡವನ್ನೇ ಕಣಕ್ಕಿಳಿಬಹುದು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+