RCBಗೆ ಇವರು ಬಂದ್ರೆ ʼಈ ಸಲ ಕಪ್ ನಮ್ದೇʼ; ಎಲ್ಲರ ಬಾಯಲ್ಲೂ ಈ ಆಟಗಾರನದ್ದೇ ಹೆಸರು
ಆರ್‌ಸಿಬಿ ಅಂದ್ರೆನೆ ಕನ್ನಡಿಗರಿಗೆ ಒಂಥರಾ ಎಮೋಷನ್ ಕಣ್ರೀ.. ಸೀಸನ್ ಹೆಚ್ಚಾದಂತೆ ನಮ್ಮ ಕ್ರೇಜ್ ಏನೂ ಕಮ್ಮಿ ಆಗಿಲ್ಲ. ಈವರೆಗೆ ಕಪ್ ನಮ್ ಕೈಸೇರದಿದ್ರೂ, ಈ ಸಲ ಕಮ್ ನಮ್ದೇ ಅನ್ನೋದು ನಮ್ಮಿಂದ ದೂರ ಮಾಡೋಕೆ ಯಾರಿಂದಲೂ ಸಾಧ್ಯ ಇಲ್ಲ.
ಆರ್‌ಸಿಬಿ ಟೀಂಗೆ ಇರೋ ಕ್ರೇಜ್ ಮುಂದೆ ಸರಿಸಾಟಿ ಅಂತೂ ಇಲ್ಲವೇ ಇಲ್ಲ. ಅಷ್ಟರಮಟ್ಟಿಗೆ ತಮ್ಮ ಮನೆಮನಗಳಲ್ಲಿ ಉಳಿದುಬಿಟ್ಟಿದೆ ಆರ್‌ಸಿಬಿ. ಈಗಾಗಲೇ ಕಿಂಗ್ ವಿರಾಟ್ ಕೊಹ್ಲಿ, ಡುಪ್ಲೆಸಿಸ್, ದಿನೇಶ್ ಕಾರ್ತಿಕ್ ಸೇರಿದಂತೆ ಅನೇಕರು ಆರ್‌ಸಿಬಿ ಬಾವುಟಕ್ಕೆ ಹೆಮ್ಮೆ ತಂದುಕೊಟ್ಟಿದ್ದಾರೆ.

ಇನ್ನು ಪ್ರತಿ ಐಪಿಎಲ್ ಸೀಸನ್ ಶುರುವಾದಾಗಲೂ ಆರ್‌ಸಿಬಿ ಫ್ಯಾನ್ಸ್ ಒಂದು ಕೊರತೆ ಬಗ್ಗೆ ಹೇಳ್ತಾನೇ ಇರ್ತಿದ್ರು. ಅದೇನಪ್ಪ ಅಂದ್ರೆ, ಆರ್‌ಸಿಬಿ ಯಾವತ್ತಿದ್ರೂ ನಮ್ದೇನೇ. ಆದರೆ, ಟೀಂನಲ್ಲಿ ನಮ್ಮ ಕನ್ನಡಿಗರೂ ಇದ್ರೆ ಇನ್ನೂ ಚೆನ್ನ ಅಂತ ಕೇಳಿಕೊಳ್ತಾನೇ ಬಂದಿದ್ದಾರೆ. ಆದರೆ ಈ ಕೋರಿಕೆ ಅಷ್ಟರಮಟ್ಟಿಗೆ ಈಡೇರಿರಲಿಲ್ಲ.
ಅದೇ ರೀತಿ ಈ ಸೀಸನ್ ಶುರುವಾಗುವುದಕ್ಕೂ ಮುಂಚೆಯೇ ಆರ್‌ಸಿಬಿ ಬಗ್ಗೆ ಅಭಿಮಾನಿಗಳು ಜೋರಾದ ಧ್ವನಿ ಎತ್ತಿದ್ದಾರೆ. ಈ ಸೀಸನ್‌ಗಾದರೂ ನಮ್ಮ ಕನ್ನಡದ ಹುಡುಗರನ್ನು ಟೀಂಗೆ ಹಾಕಿಕೊಳ್ಳಪ್ಪಾ? ಎಂದು ಬೇಡಿಕೊಳ್ಳುತ್ತಿದ್ದಾರೆ.

ಅಷ್ಟಕ್ಕೂ ಈ ಸಲ ಒಬ್ಬ ಆಟಗಾರನ ಹೆಸರನ್ನೇ ಬಹುತೇಕ ಆರ್‌ಸಿಬಿ ಫ್ಯಾನ್ಸ್ ಹೇಳುತ್ತಿದ್ದು, ಈ ಒಬ್ಬ ನಮ್ಮ ಆರ್‌ಸಿಬಿ ಸೇರಿದ್ರೆ ʼಈ ಸಲ ಕಪ್ ನಮ್ದೇʼ ಎಂದೆಲ್ಲ ಗ್ಯಾರಂಟಿ ನೀಡ್ತಿದ್ದಾರೆ. ಇವರೆಲ್ಲರ ಬಾಯಲ್ಲಿ ಬರ್ತಿರೋ ಆ ಆಟಗಾರ ಬೇರ್ಯಾರು ಅಲ್ಲ..ಅವರೇ ನಮ್ಮ ಕನ್ನಡಿಗ ಕೆ.ಎಲ್.ರಾಹುಲ್.
ಆರ್‌ಸಿಬಿಗೆ ಸಣ್ಣ ಮಕ್ಕಳಿಂದ ಹಿಡಿದು ವಯಸ್ಸಾದ ಫ್ಯಾನ್ಸ್ ಕೂಡ ಇದ್ದಾರೆ. ಈಗ ಎಲ್ಲರೂ ಕೂಡ ನಮ್ಮನೆ ಹುಡ್ಗ ಕೆ.ಎಲ್.ರಾಹುಲ್ ಅವರನ್ನು ಆರ್‌ಸಿಬಿಗೆ ಸೇರಿಸಿಕೊಳ್ಳಿ. ಆ ಮೇಲೆ ನೋಡಿ..ನಾವೆಲ್ಲ ಹಬ್ಬ ಮಾಡೋದು ಗ್ಯಾರಂಟಿ ಎಂದು ಕೇಳಿಕೊಳ್ಳುತ್ತಿದ್ದಾರೆ.
Bengaluru fans want KL Rahul in RCB. 🌟 pic.twitter.com/6EjZD9MnRT
— Mufaddal Vohra (@mufaddal_vohra) September 7, 2024
ಇನ್ನು ಸೋಶಿಯಲ್ ಮೀಡಿಯಾಗಳಲ್ಲಿ ಕೆ.ಎಲ್.ರಾಹುಲ್ ಅವರನ್ನು ಆರ್‌ಸಿಬಿ ಸೇರಿಸಿಕೊಳ್ಳಬೇಕು ಎಂದು ಒಂದು ಅಭಿಯಾನವೇ ಶುರುವಾಗಿದ್ದು, ಇದಕ್ಕೆ ಸಂಬಂಧಿಸಿದ ವಿಡಿಯೋಗಳು ಕೂಡ ವೈರಲ್ ಆಗಿವೆ. ಇನ್ನೂ ಕೆಲವರು ರಾಹುಲ್ ನಮ್ಮ ಆರ್‌ಸಿಬಿ ಜೆರ್ಸಿ ಹಾಕಿ ಗ್ರೌಂಡಿಗಿಳಿದ್ರೆ, ಅದರ ಕಥೇನೇ ಬೇರೆ ಅಂತ ಕನಸನ್ನು ಬಿಚ್ಚಿಟ್ಟಿದ್ದಾರೆ. ಇನ್ನೂ ಕೆಲವರು ರಾಹುಲ್ ಹಾಗೂ ವಿರಾಟ್ ಕೊಹ್ಲಿ ಒಟ್ಟಿಗೆ ಬ್ಯಾಟಿಂಗ್ ಮಾಡೋದನ್ನ ನೋಡಿದ್ರೆ ಈ ಕಣ್ಣುಗಳು ಸಾರ್ಥಕ ಎಂದೆಲ್ಲ ಬರೆದುಕೊಳ್ಳುತ್ತಿದ್ದಾರೆ.
ಈ ಪೈಕಿ ಹಲವು ಆರ್‌ಸಿಬಿ ಫ್ಯಾನ್ಸ್ ಕೆಎಲ್ ರಾಹುಲ್ ಅವರನ್ನೇ ಆರ್‌ಸಿಬಿಗೆ ಕ್ಯಾಪ್ಟನ್ ಮಾಡಿ. ಕನ್ನಡದ ಹುಡ್ಗ, ಕನ್ನಡಿಗರ ಟೀಮು, ಅದನ್ನ ನೋಡೋ ಮಜಾನೇ ಬೇರೆʼ ಎಂದು ಬೇಡಿಕೆ ಮುಂದಿಟ್ಟಿದ್ದಾರೆ. ಇಷ್ಟೆಲ್ಲ ಡಿಮ್ಯಾಂಡ್ ಹುಟ್ಟಿಸಿರೋ ಆರ್‌ಸಿಬಿ ಫ್ಯಾನ್ಸ್‌ಗಳ ಕನಸು ಈಡೇರುತ್ತಾ? ಅನ್ನೋದು ಈ ಸೀಸನ್ ಶುರುವಾಗುವ ವೇಳೆ ತಿಳಿಯಲಿದೆ. ಒಟ್ಟಿನಲ್ಲಿ ಕೆ.ಎಲ್.ರಾಹುಲ್ ಆರ್‌ಸಿಬಿ ಸೇರಿದ್ರಂತೂ ಅಭಿಮಾನಿಗಳು ಫುಲ್ ಖುಷ್ ಆಗೋದಂತೂ ಗ್ಯಾರಂಟಿ ಎನ್ನಲಾಗಿದೆ.












Click it and Unblock the Notifications