ಆರ್‌ಸಿಬಿ ಹುಡುಗಿಯರು ಕಪ್ ಗೆದ್ದ ಬಳಿಕ, ಹುಡುಗರಿಗೆ ಟ್ರೋಲರ್ಸ್ ಕಾಟ!

ಕನ್ನಡಿಗರಿಗೆ ಅತ್ಯದ್ಭುತ ಉಡುಗೊರೆ ನೀಡಿದ್ದಾರೆ ಆರ್‌ಸಿಬಿ (RCB) ತಂಡದ ಹುಡುಗಿಯರು. ಭಾನುವಾರ ನಡೆದ ಪಂದ್ಯದಲ್ಲಿ ದೆಹಲಿ ತಂಡವನ್ನು ಹೀನಾಯವಾಗಿ ಸೋಲಿಸಿದ ಆರ್‌ಸಿಬಿ ತಂಡದ ಹುಡುಗಿಯರು, ಮಹಿಳಾ ಪ್ರಿಮಿಯರ್ ಲೀಗ್‌ (WPL) ಕಪ್‌ಗೆ ಮುತ್ತಿಟ್ಟಿದ್ದಾರೆ. ಹೀಗೆ ಸುಮಾರು 16 ವರ್ಷಗಳ ನಮ್ಮ ಕನಸು ನನಸಾಗುವಂತೆ ಮಾಡಿದ್ದಾರೆ. ಆದರೆ ಈ ಹೊತ್ತಲ್ಲೇ ಆರ್‌ಸಿಬಿ ಹುಡುಗರ ತಂಡಕ್ಕೆ ಇದೀಗ ಸಿಕ್ಕಾಪಟ್ಟೆ ಟ್ರೋಲರ್ಸ್ ಹಾವಳಿ ಶುರುವಾಗಿದೆ!

ಹೌದು, 'ಹೆಣ್ ಮಕ್ಳೆ ಸ್ಟ್ರಾಂಗು ಗುರು' ಅಂತಾ ಅಪ್ಪು ಪುನೀತ್ ರಾಜ್‌ಕುಮಾರ್ ಅವರು ಹಾಡಿದಂತೆ ಇದೀಗ ನಮ್ಮ ಆರ್‌ಸಿಬಿ ತಂಡಕ್ಕೆ ಸ್ಟ್ರಾಂಗ್ ಆದ ಹೆಣ್ಣು ಮಕ್ಕಳಿಂದಲೇ ಕಪ್ ಬಂದಿದೆ. ಆದರೆ ಆರ್‌ಸಿಬಿ ಹುಡುಗರ ಟೀಂ ಮಾತ್ರ ಕಳೆದ 16 ವರ್ಷದಿಂದ ಕಪ್ ಗೆದ್ದಿಲ್ಲ. ಹೀಗಿದ್ದಾಗ ಈಗ ಆರ್‌ಸಿಬಿ ಹುಡುಗರ ತಂಡಕ್ಕೆ ಸಿಕ್ಕಾಪಟ್ಟೆ ಟ್ರೋಲರ್ಸ್ ಕಾಟ ಶುರುವಾಗಿದೆ. ಡಿಸೈನ್ ಡಿಸೈನ್ ಟ್ರೋಲ್ ಮಾಡುತ್ತಿರುವ ಟ್ರೋಲಿಗರು, ಹುಡುಗಿಯರೇ ಸ್ಟ್ರಾಂಗ್. ಆದ್ರೆ ಆರ್‌ಸಿಬಿ ಹುಡುಗರ ತಂಡ ವೀಕ್ ಅನ್ನೋ ರೀತಿಯಲ್ಲಿ ತೋರಿಸುತ್ತಿದ್ದಾರೆ. ಈ ಬಗ್ಗೆ ಈಗ, ಕನ್ನಡಿಗರು ಕೂಡ ಸರಿಯಾಗಿ ತಿರುಗೇಟು ನೀಡುತ್ತಿದ್ದಾರೆ.

Fans Are Waiting For RCB Mens Team To Be Won The IPL Trophy At Least For Once

ಈಗ ಕಪ್ ಗೆಲ್ಲುತ್ತಾರಾ ಹುಡುಗರು?

ಇನ್ನೇನು ಕೆಲವೇ ದಿನದಲ್ಲಿ ಐಪಿಎಲ್ (IPL) ಕೂಡ ಶುರುವಾಗಲಿದೆ. ಆರ್‌ಸಿಬಿ ಹುಡುಗರ ತಂಡ ಕೂಡ ಐಪಿಎಲ್ ಟೂರ್ನಿಗೆ ಸಜ್ಜಾಗಿದೆ. ಆದ್ರೆ WPL ಟೂರ್ನಿಯಲ್ಲಿ ನಮ್ಮ ಆರ್‌ಸಿಬಿ ಹುಡುಗಿಯರು ಕಪ್ ಗೆದ್ದಂತೆ ಹುಡುಗರು ಕೂಡ ಕಪ್ ಗೆಲ್ಲುತ್ತಾರಾ? ಈ ಮೂಲಕ ಫ್ಯಾನ್ಸ್ ಕನಸು ನನಸು ಮಾಡುತ್ತಾರಾ? ಅನ್ನೋ ಪ್ರಶ್ನೆ ಕೂಡ ಕಾಡುತ್ತಿದೆ. ನಿನ್ನೆಯಷ್ಟೇ ಮಹಿಳಾ ಮಣಿಗಳು ತಮ್ಮ ಬಲ ಪ್ರದರ್ಶನ ಮಾಡಿ, ದೆಹಲಿ ಕ್ಯಾಪಿಟಲ್ಸ್ ತಂಡಕ್ಕೆ ಚಳಿ ಬಿಡಿಸಿದ್ದಾರೆ. ಇದೇ ರೀತಿ ಹುಡುಗರು ಕೂಡ ಅಬ್ಬರಿಸುತ್ತಾರಾ? ಅಂತಾ ಪ್ರಶ್ನೆ ಮೂಡಿದೆ.

ಚೆನ್ನೈ ಎದುರು ಮೊದಲ ಮ್ಯಾಚ್!

ಇನ್ನು ಬೆಂಗಳೂರು ತಂಡ ಆರ್‌ಸಿಬಿ ಹಾಗೂ ಚೆನ್ನೈ ತಂಡ ಸಿಎಸ್‌ಕೆ ನಡುವೆ ಈ ಸಾಲಿನಲ್ಲಿ ಐಪಿಎಲ್ ಟೂರ್ನಿಯ ಉದ್ಘಾಟನಾ ಪಂದ್ಯ ನಡೆಯಲಿದೆ. ಹೀಗಾಗಿಯೇ ಫ್ಯಾನ್ಸ್ ಈ ಮ್ಯಾಚ್ ನೋಡಲು ಕಾಯುತ್ತಿದ್ದಾರೆ. ಹಾಗೇ ಚೆನ್ನೈ ವಿರುದ್ಧ ಮೊದಲ ಪಂದ್ಯದಲ್ಲಿ ಭರ್ಜರಿಯಾದ ಪ್ರದರ್ಶನ ನೀಡಿ, ಆರ್‌ಸಿಬಿ ಹುಡುಗರ ಟೀಂ ಕೂಡ ಕಪ್ ಗೆಲ್ಲುತ್ತದೆ ಎಂಬ ವಿಶ್ವಾಸ ಈಗ ಆರ್‌ಸಿಬಿ ಅಭಿಮಾನಿಗಳಲ್ಲಿ ಮೂಡಿದೆ. ಅಲ್ಲದೆ ಈ ಕಾರಣಕ್ಕೆ ಮ್ಯಾಚ್ ನೋಡಲು, ಸಕಲ ಸಿದ್ಧತೆ ಕೈಗೊಂಡಿದ್ದಾರೆ ಅಭಿಮಾನಿಗಳು.

ಒಟ್ನಲ್ಲಿ ಇದೆಲ್ಲಾ ಏನೇ ಇರಲಿ, ಆರ್‌ಸಿಬಿ ಹುಡುಗಿಯರ ತಂಡದ ರೀತಿಯಲ್ಲೇ ಹುಡುಗರು ಕೂಡ ಕಪ್ ಗೆಲ್ಲಲಿ. ಈ ಮೂಲಕ ಕನ್ನಡಿಗರ 16 ವರ್ಷದ ಆಸೆಯನ್ನು ಆರ್‌ಸಿಬಿ ತಂಡವು ಪೂರೈಸಲಿ ಅನ್ನೋದೆ ಕೋಟಿ ಕೋಟಿ ಕ್ರಿಕೆಟ್ ಅಭಿಮಾನಿಗಳ ಆಸೆ. ಆದರೆ ಈ ಮಾತನ್ನು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಹುಡುಗರು ಪೂರೈಸುತ್ತಾರಾ? ಅನ್ನೋದನ್ನ ಇನ್ನೊಂದೆರಡು ತಿಂಗಳು ಕಾದು ನೋಡಬೇಕಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+