ಪಾಕಿಸ್ತಾನ ವಿರುದ್ಧ ಭಾರತದ ಹೀನಾಯ ಪ್ರದರ್ಶನ: ಇವರು ಐಪಿಎಲ್ ಆಡೋದಕ್ಕೆ ಮಾತ್ರ ಲಾಯಕ್ಕು?
ಭಾರತ ಕ್ರಿಕೆಟ್ ತಂಡ ಟಿ20 ವಿಶ್ವಕಪ್ ಅಖಾಡದಲ್ಲಿ ಹೀನಾಯ ಪ್ರದರ್ಶನ ತೋರಿಸಿದೆ. ಪಾಕ್ ಅಂದ್ರೆ ಭಾರತದ ಶತ್ರು ಪಾಕಿಸ್ತಾನ ತಂಡದ ಎದುರು ಹೀನಾಯ ಪ್ರದರ್ಶನ ತೋರಿಸುತ್ತಿದೆ ಭಾರತ ತಂಡ. ಮೊದಲ ಪಂದ್ಯವನ್ನು ಐರ್ಲ್ಯಾಂಡ್ ವಿರುದ್ಧ ಭರ್ಜರಿಯಾಗಿ ಗೆದ್ದ ಭಾರತ ತಂಡ ಇದೀಗ ಹೀನಾಯ ಪ್ರದರ್ಶನ ತೋರಿಸುತ್ತಿದೆ. ಇದೇ ಕಾರಣಕ್ಕೆ ಕ್ರಿಕೆಟ್ ಅಭಿಮಾನಿಗಳು ರೊಚ್ಚಿಗೆದ್ದು ಏನ್ ಹೇಳ್ತಿದ್ದಾರೆ ಗೊತ್ತಾ? ಮುಂದೆ ಓದಿ.
ಅಂದಹಾಗೆ ಇಂದು ಅಮೆರಿಕದಲ್ಲಿ ನಡೆಯುತ್ತಿರುವ ಭಾರತ & ಪಾಕಿಸ್ತಾನ ನಡುವಿನ ಪಂದ್ಯ ಭಾರಿ ಸಂಚಲನ ಸೃಷ್ಟಿ ಮಾಡಿದೆ. ಭಾರತ ಕ್ರಿಕೆಟ್ ತಂಡ ಟಿ20 ವಿಶ್ವಕಪ್ 2024 ರಲ್ಲಿ ಪಾಕ್ ತಂಡದ ವಿರುದ್ಧ ಗೆಲ್ಲಲಿದೆ, ಈ ಮೂಲಕ ಪಾಕಿಸ್ತಾನ ತಂಡಕ್ಕೆ ಮಣ್ಣು ಮುಕ್ಕಿಸಲಿದೆ ಎಂದು ಇಡೀ ಜಗತ್ತು ಕಾಯುತ್ತಿತ್ತು. ಆದರೆ ಇದೀಗ ಪರಿಸ್ಥಿತಿ ಬೇರೆಯೇ ಆಗಿದ್ದು, ಭಾರತ ತಂಡದ ಆಟಗಾರರು ಹೀನಾಯ ಪ್ರದರ್ಶನ ನೀಡುತ್ತಿದ್ದಾರೆ. ಈ ಮೂಲಕ ಭಾರತ ಕ್ರಿಕೆಟ್ ತಂಡವು ತನ್ನ ಮೊದಲ ಇನ್ನಿಂಗ್ಸ್‌ನಲ್ಲೇ ಸೋಲಿನ ಮುಖ ತೋರಿಸುತ್ತಿದೆ. ಹಾಗಾದ್ರೆ ಈ ಬಗ್ಗೆ ಫ್ಯಾನ್ಸ್ ಹೇಳೋದು ಏನು? ಮುಂದೆ ಓದಿ.

ಭಾರತ ತಂಡದ ಹೀನಾಯ ಪ್ರದರ್ಶನ
ಜಾಗತಿಕ ಕ್ರಿಕೆಟ್ ಲೋಕವನ್ನು ಭಾರತ ಕ್ರಿಕೆಟ್ ತಂಡದ ಆಟಗಾರರು ಅಕ್ಷರಶಃ ಆಳುತ್ತಿದ್ದಾರೆ. ಆದರೆ ಅಂತಾರಾಷ್ಟ್ರೀಯ ಟೂರ್ನಿಗಳು ಬಂದಾಗ ಮಾತ್ರ ಭಾರತ ಕ್ರಿಕೆಟ್ ತಂಡ ಸೋಲುತ್ತಿದೆ. ಈಗ ನ್ಯೂಯಾರ್ಕ್ ನಸ್ಸೌ ಕೌಂಟಿ ಅಂತಾರಾಷ್ಟ್ರೀಯ ಕ್ರಿಕೆಟ್ ಮೈದಾನದಲ್ಲಿ ನಡೆಯುತ್ತಿರುವ, ಟಿ20 ವಿಶ್ವಕಪ್ ಪಂದ್ಯದಲ್ಲಿ ಟಾಸ್ ಗೆದ್ದ ಪಾಕಿಸ್ತಾನ ಬೌಲಿಂಗ್ ಆಯ್ಕೆ ಮಾಡಿಕೊಂಡಿದೆ. ಆದ್ರೆ ಇದೇ ಸಮಯದಲ್ಲಿ ಭಾರಿ ಮಳೆಯ ಕಾರಣ ಮೈದಾನದ ಹೊರಾಂಗಣ ಭಾರಿ ತೇವವಾಗಿತ್ತು.
ಈ ಕಾರಣಕ್ಕೆ ಸುಮಾರು ಹೊತ್ತು ಪಂದ್ಯವನ್ನ ಸ್ತಗಿತಗೊಳಿಸಿ, ಕ್ರೀಡಾಂಗಣದ ತೇವವಾಗಿದ್ದ ಪ್ರದೇಶ ಒಣಗಿಸುವ ಕಾರ್ಯ ನಡೆಯಿತು. ಆ ನಂತರ ಮ್ಯಾಚ್ ಆರಂಭವಾದರೂ ಭಾರತೀಯ ಕ್ರಿಕೆಟ್ ತಂಡದ ಆಟಗಾರರು ಕೇವಲ 119 ರನ್‌ಗೆ ಆಲೌಟ್ ಆಗಿದ್ದಾರೆ. ಇದು ಅಭಿಮಾನಿಗಳ ಆಕ್ರೋಶ ಹೆಚ್ಚಾಗುವಂತೆ ಮಾಡಿದೆ. ಇದೇ ವೇಳೆ ಕ್ರಿಕೆಟ್ ಅಭಿಮಾನಿಗಳು, 'ಇವರು ಐಪಿಎಲ್ ಆಡೋದಕ್ಕೆ ಮಾತ್ರ ಲಾಯಕ್ಕು' ಅಂತಿದ್ದಾರೆ.
ಅಭಿಮಾನಿಗಳ ಆಕ್ರೋಶ ಡಬಲ್!
ಭಾರತ & ಪಾಕಿಸ್ತಾನ ಕ್ರಿಕೆಟ್ ಮ್ಯಾಚ್ ಅಂದ್ರೆ ಇಡೀ ಜಗತ್ತು ಕಾದು ಕುಳಿತುಕೊಂಡು ನೋಡುತ್ತೆ ಅದ್ರಲ್ಲೂ ಸೂಪರ್ 8 ಹಂತ ಪ್ರವೇಶಿಸಲು ಇದು ಎರಡು ತಂಡಕ್ಕೂ ಮಹತ್ವದ ಪಂದ್ಯವಾಗಿದೆ. ಯುಎಸ್‌ಎ ಅಂದ್ರೆ ಅಮೆರಿಕ ವಿರುದ್ಧ ಸೋತ ಬಳಿಕ, ಪಾಕಿಸ್ತಾನಕ್ಕೆ ಈ ಪಂದ್ಯವು ಗೆಲ್ಲಬೇಕಾದ ಮ್ಯಾಚ್ ಆಗಿದೆ. ಹೀಗಿದ್ದಾಗ, ಪಾಕಿಸ್ತಾನ ತಂಡ ಗೆದ್ದರೆ ಮಾತ್ರ ಸೂಪರ್ 8 ಹಂತ ಪ್ರವೇಶಿಸಲು ಸಾಧ್ಯ. ಹೀಗಿದ್ದರೂ ಮಳೆರಾಯ ಕಾಟ ಕೊಟ್ಟು ಪಂದ್ಯ ನಿಲ್ಲುವಂತೆ ಮಾಡಿದ್ದ. ಆದ್ರೆ ಮ್ಯಾಚ್ ಶುರುವಾಗಿದ್ದರೂ ಭಾರತ ಕ್ರಿಕೆಟ್ ತಂಡದ ಹೀನಾಯ ಪ್ರದರ್ಶನ ಅಭಿಮಾನಿಗಳ ಎದೆಯಲ್ಲಿ ಆಕ್ರೋಶ ಮೊಳಗುವಂತೆ ಮಾಡಿದೆ.
ರೋಚಕ ಗೆಲುವು ಸಾಧಿಸಿದ ಭಾರತ!
ಭಾರತ ಕ್ರಿಕೆಟ್ ತಂಡ ಹೀಗೆ ಕೇವಲ 119 ರನ್ ಗಳಿಸಿ ಪಾಕಿಸ್ತಾನ ತಂಡಕ್ಕೆ 120 ರನ್‌ಗಳನ್ನ ಗುರಿಯಾಗಿ ನೀಡಿದ್ದರೂ, ಅಂತಿಮವಾಗಿ 6 ರನ್‌ಗಳ ರೋಚಕ ಗೆಲುವು ಸಾಧಿಸಿತು. ಪಾಕ್ ಆಟಗಾರರನ್ನ ಪ್ರತಿ ಹಂತದಲ್ಲಿಯೂ ಕಟ್ಟಿಹಾಕಿದ ಭಾರತೀಯ ಬೌಲಿಂಗ್ ಪಡೆ, ಕೊನೆಗೂ ಶತ್ರು ಪಡೆಗೆ ಸೋಲುಣಿಸಿದೆ. ಈ ಮೂಲಕ ಭಾರತ ತಂಡ, ಕ್ರಿಕೆಟ್ ಇತಿಹಾಸದಲ್ಲಿ ಹೊಸ ದಾಖಲೆ ಬರೆದಿದೆ. ಪಾಕಿಸ್ತಾನ ತಂಡ ಈ ಸೋಲಿನ ಮೂಲಕ ಟಿ20 ವಿಶ್ವಕಪ್ ಟೂರ್ನಿಯಿಂದ ಬಹುತೇಕ ಹೊರ ಬಿದ್ದಂತೆ ಆಗಿದ್ದು ಪಾಕಿಸ್ತಾನದ ಕ್ರಿಕೆಟ್ ಅಭಿಮಾನಿಗಳು ತಮ್ಮ ತಂಡದ ಆಟ ನೋಡಿ ರೊಚ್ಚಿಗೆದ್ದಿದ್ದಾರೆ.












Click it and Unblock the Notifications