119 ರನ್‌ಗೆ ಪಾಕಿಸ್ತಾನದ ಎದುರು ಭಾರತ ಆಲೌಟ್: ರೊಚ್ಚಿಗೆದ್ದ ಅಭಿಮಾನಿಗಳು!
ಭಾರತ ಕ್ರಿಕೆಟ್ ತಂಡ ಇಂದು ಪಾಕಿಸ್ತಾನದ ವಿರುದ್ಧ ಹೀನಾಯ ಬ್ಯಾಟಿಂಗ್ ಪ್ರದರ್ಶನವನ್ನ ನೀಡಿದ ನಂತರ ದೊಡ್ಡ ಚರ್ಚೆ ಶುರುವಾಗಿದೆ. ಯಾಕಂದ್ರೆ ಭಾರತದ ಆಟಗಾರರು ಕೇವಲ 119 ರನ್‌ಗೆ ಪಾಕಿಸ್ತಾನದ ಎದುರು ಆಲೌಟ್ ಆಗಿದ್ದಾರೆ. ಈ ವಿಚಾರ ಈಗ ಬೆಂಕಿ ಹೊತ್ತಿಸಿ, ದೊಡ್ಡ ಮಟ್ಟದಲ್ಲಿ ಚರ್ಚೆಗೆ ಕೂಡ ಕಾರಣವಾಗಿದೆ. ಅದರಲ್ಲೂ ಭಾರತದ ಶತ್ರು ದೇಶವಾದ ಪಾಕಿಸ್ತಾನ ವಿರುದ್ಧ ಭಾರತ ಈ ರೀತಿ ಆಟ ಆಡಿರುವುದು ಅಭಿಮಾನಿಗಳನ್ನ ರೊಚ್ಚಿಗೆಬ್ಬಿಸಿದೆ.
ಜಗತ್ತಿನ ದೊಡ್ಡಣ್ಣ ಎಂದು ಕರೆಯಲ್ಪಡುವ ಅಮೆರಿಕದಲ್ಲಿ ಟಿ20 ವಿಶ್ವಕಪ್ ನಡೆಯುತ್ತಿದೆ. ಈಗ ನ್ಯೂಯಾರ್ಕ್ ನಸ್ಸೌ ಕೌಂಟಿ ಅಂತಾರಾಷ್ಟ್ರೀಯ ಕ್ರಿಕೆಟ್ ಮೈದಾನದಲ್ಲಿ ನಡೆಯುತ್ತಿರುವ, ಟಿ20 ವಿಶ್ವಕಪ್ ಪಂದ್ಯದಲ್ಲಿ ಟಾಸ್ ಗೆದ್ದ ಪಾಕಿಸ್ತಾನ ಬೌಲಿಂಗ್ ಆಯ್ಕೆ ಮಾಡಿಕೊಂಡಿತ್ತು. ಆದ್ರೆ ಇದೇ ಸಮಯದಲ್ಲಿ ಭಾರಿ ಮಳೆಯ ಕಾರಣ ಮೈದಾನದ ಹೊರಾಂಗಣ ಭಾರಿ ತೇವವಾಗಿತ್ತು. ಈ ಕಾರಣಕ್ಕೆ ಸುಮಾರು ಹೊತ್ತು ಪಂದ್ಯವನ್ನ ಸ್ತಗಿತಗೊಳಿಸಿ, ಕ್ರೀಡಾಂಗಣದ ತೇವವಾಗಿದ್ದ ಪ್ರದೇಶ ಒಣಗಿಸುವ ಕಾರ್ಯ ನಡೆಯಿತು. ಆ ನಂತರ ಪಂದ್ಯ ಆರಂಭವಾದರೂ ಭಾರತ ತಂಡ ಕೇವಲ 119 ರನ್‌ಗೆ ಆಲೌಟ್ ಆಗಿದೆ.

ಏನಿದು ಭಾರತದ ಹೀನಾಯ ಪ್ರದರ್ಶನ?
ಭಾರತ ಕ್ರಿಕೆಟ್ ತಂಡ ಈ ಬಾರಿ T20 ವಿಶ್ವಕಪ್ ಗೆಲ್ಲುವ ನೆಚ್ಚಿನ ತಂಡ ಎನಿಸಿಕೊಂಡಿತ್ತು. ಆದರೆ ಈಗ ನೋಡಿದರೆ ಭಾರತ ತಂಡ ತನ್ನ 2ನೇ ಪಂದ್ಯದಲ್ಲೇ ಹೀನಾಯವಾಗಿ ಆಡುತ್ತಿದೆ. ಅದರಲ್ಲೂ ಪಾಕಿಸ್ತಾನ ತಂಡಕ್ಕೆ ಕೇವಲ 120 ರನ್‌ಗಳ ಗುರಿ ನೀಡಿರುವುದು ಭಾರಿ ಆಕ್ರೋಶ ಮೊಳಗುವಂತೆ ಮಾಡಿದೆ. ಏನ್ ಮಾಡೋದು ಗುರೂ? ಅಂತಾ ಅಭಿಮಾನಿಗಳು ಕೂಡ ಈ ಮ್ಯಾಚ್ ನೋಡುತ್ತಾ ಚಿಂತೆಯಲ್ಲಿ ಮುಳುಗಿದ್ದಾರೆ.
2024 ಐಪಿಎಲ್ ಮುಗಿದು ಕೆಲವೇ ಕೆಲವು ದಿನಗಳ ನಂತರ ಭಾರತ ಮತ್ತು ಪಾಕಿಸ್ತಾನ ಪಂದ್ಯ ನಡೆಯುತ್ತಿದೆ. ಇದೇ ಸಮದಯಲ್ಲಿ ಈ ರೀತಿ ಭಾರತ ತಂಡದ ಆಟಗಾರರು ಹೀನಾಯವಾಗಿ ಪ್ರದರ್ಶನ ನೀಡುತ್ತಿದ್ದಾರೆ. ಇದು ಅಭಿಮಾನಿಗಳ ಕೋಪ ನೆತ್ತಿಗೇರುವಂತೆ ಮಾಡಿದೆ. ಅಲ್ಲದೆ ಇವರೆಲ್ಲಾ ಅಂತಾರಾಷ್ಟ್ರೀಯ ಪಂದ್ಯಗಳನ್ನ ಸರಿಯಾಗಿ ಆಡೋದಿಲ್ವಾ? ಅಂತಾ ಪ್ರಶ್ನೆಯು ಕೂಡ ಮೂಡಿದೆ. ಆದರೆ ಈ ಪ್ರಶ್ನೆಗೆ ಉತ್ತರ ಮಾತ್ರ ಸಿಗುತ್ತಿಲ್ಲ.
ಅಭಿಮಾನಿಗಳ ಆಕ್ರೋಶ ಡಬಲ್!
ಭಾರತ & ಪಾಕಿಸ್ತಾನ ಕ್ರಿಕೆಟ್ ಮ್ಯಾಚ್ ಅಂದ್ರೆ ಇಡೀ ಜಗತ್ತು ಕಾದು ಕುಳಿತುಕೊಂಡು ನೋಡುತ್ತೆ ಅದ್ರಲ್ಲೂ ಸೂಪರ್ 8 ಹಂತ ಪ್ರವೇಶಿಸಲು ಇದು ಎರಡು ತಂಡಕ್ಕೂ ಮಹತ್ವದ ಪಂದ್ಯವಾಗಿದೆ. ಯುಎಸ್‌ಎ ಅಂದ್ರೆ ಅಮೆರಿಕ ವಿರುದ್ಧ ಸೋತ ಬಳಿಕ, ಪಾಕಿಸ್ತಾನಕ್ಕೆ ಈ ಪಂದ್ಯವು ಗೆಲ್ಲಬೇಕಾದ ಮ್ಯಾಚ್ ಆಗಿದೆ. ಹೀಗಿದ್ದಾಗ, ಪಾಕಿಸ್ತಾನ ತಂಡ ಗೆದ್ದರೆ ಮಾತ್ರ ಸೂಪರ್ 8 ಹಂತ ಪ್ರವೇಶಿಸಲು ಸಾಧ್ಯ. ಹೀಗಿದ್ದರೂ ಮಳೆರಾಯ ಕಾಟ ಕೊಟ್ಟು ಪಂದ್ಯ ನಿಲ್ಲುವಂತೆ ಮಾಡಿದ್ದ. ಆದ್ರೆ ಮ್ಯಾಚ್ ಶುರುವಾಗಿದ್ದರೂ ಭಾರತ ಕ್ರಿಕೆಟ್ ತಂಡದ ಹೀನಾಯ ಪ್ರದರ್ಶನ ಅಭಿಮಾನಿಗಳ ಎದೆಯಲ್ಲಿ ಆಕ್ರೋಶ ಮೊಳಗುವಂತೆ ಮಾಡಿದೆ.
ರೋಚಕ ಗೆಲುವು ಸಾಧಿಸಿದ ಭಾರತ!
ಭಾರತ ಕ್ರಿಕೆಟ್ ತಂಡ ಹೀಗೆ ಕೇವಲ 119 ರನ್ ಗಳಿಸಿ ಪಾಕಿಸ್ತಾನ ತಂಡಕ್ಕೆ 120 ರನ್‌ಗಳನ್ನ ಗುರಿಯಾಗಿ ನೀಡಿದ್ದರೂ, ಅಂತಿಮವಾಗಿ 6 ರನ್‌ಗಳ ರೋಚಕ ಗೆಲುವು ಸಾಧಿಸಿತು. ಪಾಕ್ ಆಟಗಾರರನ್ನ ಪ್ರತಿ ಹಂತದಲ್ಲಿಯೂ ಕಟ್ಟಿಹಾಕಿದ ಭಾರತೀಯ ಬೌಲಿಂಗ್ ಪಡೆ, ಕೊನೆಗೂ ಶತ್ರು ಪಡೆಗೆ ಸೋಲುಣಿಸಿದೆ. ಈ ಮೂಲಕ ಭಾರತ ತಂಡ, ಕ್ರಿಕೆಟ್ ಇತಿಹಾಸದಲ್ಲಿ ಹೊಸ ದಾಖಲೆ ಬರೆದಿದೆ. ಪಾಕಿಸ್ತಾನ ತಂಡ ಈ ಸೋಲಿನ ಮೂಲಕ ಟಿ20 ವಿಶ್ವಕಪ್ ಟೂರ್ನಿಯಿಂದ ಬಹುತೇಕ ಹೊರ ಬಿದ್ದಂತೆ ಆಗಿದ್ದು ಪಾಕಿಸ್ತಾನದ ಕ್ರಿಕೆಟ್ ಅಭಿಮಾನಿಗಳು ತಮ್ಮ ತಂಡದ ಆಟ ನೋಡಿ ರೊಚ್ಚಿಗೆದ್ದಿದ್ದಾರೆ.












Click it and Unblock the Notifications